Homeಅಂಕಣಗಳುಬಿಜೆಪಿ ಯಂಗೆ ಚೊಕ್ಕ ಮಾಡಿವಿ ನೋಡಿ!

ಬಿಜೆಪಿ ಯಂಗೆ ಚೊಕ್ಕ ಮಾಡಿವಿ ನೋಡಿ!

- Advertisement -
- Advertisement -

ಅದೊಂದು ಕಾಲವಿತ್ತು; ಚುನಾವಣೆ ಬಂತೆಂದರೆ ಲೀಡರ್‌ಗಳು ತಮ್ಮ ನಾಲಗೆಯನ್ನು ಮಸೆದುಕೊಂಡು, ಪರಿಣಾಮಕಾರಿ ಸುಭಾಷಿತಗಳನ್ನು ಬಾಯಿಪಾಠ ಮಾಡಿಕೊಂಡು, ಉಪಕತೆಗಳನ್ನು ಹೊಸೆದುಕೊಂಡು ಬಹಿರಂಗ ಸಭೆಗಳಲ್ಲಿ ಭಾಷಣ ಬಿಗಿದು ಓಟು ಕೇಳುತ್ತಿದ್ದರು. ಶಾಂತವೇರಿ ಗೋಪಾಲಗೌಡರಂತೂ ಗಂಟೆಗಟ್ಟಲೆ ಮಾತನಾಡಿ ರಾಜ್ಯ, ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದ ರಾಜಕಾರಣ ಮಾತನಾಡಿ ಓಟನ್ನೇ ಕೇಳುತ್ತಿರಲಿಲ್ಲ. “ಓಟು ಕೇಳಿ ಸಾರ್” ಎಂದರೆ “ಜನಗಳಿಗೆ ಗೊತ್ತಿಲ್ಲವೆ” ಎಂದುಬಿಡುತ್ತಿದ್ದರು. ಅಂದಿನ ಸಮಾಜವಾದಿಗಳೆಲ್ಲ ಭಯಂಕರ ಭಾಷಣಕಾರರಾಗಿದ್ದರು. ಭಾಷಣದಿಂದಲೇ ಮತ ಪಡೆಯುತ್ತಿದ್ದರು. ಈಗ ಹಠಾತ್ ಎಲ್ಲವೂ ಬದಲುಗೊಂಡಿದೆ. ಮತದಾರರ ಪಟ್ಟಿ ಹಿಡಿದು, ಹಂಚಬಹುದಾದ ಸಾಮಗ್ರಿಯ ದಾಸ್ತಾನಿನ ಮೇಲೆ ಮತಗಳ ಎಣಿಕೆ ನಡೆಯುತ್ತಿದೆ. ಜನರಿಗೆ ಮಾಂಸ, ಮದ್ಯ ಮತ್ತು ಕಾಸುಕೊಟ್ಟ ಮೇಲೆ ಅವರೊಡನೆ ಮಾತನಾಡುವ ಅಗತ್ಯವಿಲ್ಲ, ಭಾಷಣದ ಅಗತ್ಯವಿಲ್ಲ, ಭಾವನಿಕೆ ಮಾತಿಲ್ಲ; ಮೌನದಲ್ಲಿಯೇ ಮತದ ವ್ಯವಹಾರ ಮುಗಿದ ಮೇಲೆ ಪ್ರಜಾಪ್ರಭುತ್ವವೂ ಕೂಡ ಯಕ್ಕುಟ್ಟಿ ಹೋಗಿದೆಯಂತಲ್ಲಾ, ಥೂತ್ತೇರಿ.

******

ತೊಂಭತ್ತೆರಡು ವರ್ಷದ ದೇವೇಗೌಡರು ಸ್ವತಂತ್ರವಾಗಿ ನಡೆಯಲಾರರು, ವಯೋಸಹಜವಾಗಿ ಮಾತನಾಡುವುದು ತ್ರಾಸವಾದರೂ ಅವರನ್ನು ಕರೆಸಿ ಒಂದೆರಡು ತೊಟ್ಟು ಕಣ್ಣೀರು ಹಾಕಿಸಿಬಿಟ್ಟರೆ ನನ್ನ ಗೆಲುವು ಗ್ಯಾರಂಟಿ ಎಂದು ಭಾವಿಸಿದ ನಾಗಮಂಗಲ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಗೌಡರ ಮನೆಗೆ ಹೋಗಿ ಕೈ ಮುಗಿದಾಗ, ಇಲ್ಲ ಗೌಡರನ್ನು ಕಳುಹಿಸಲು ವೈದ್ಯರ ಒಪ್ಪಿಗೆ ಕಡ್ಡಾಯ ಎಂದರಂತಲ್ಲಾ. ಆಗ ದಿಕ್ಕು ಕಾಣದಂತಾದ ಜೆಡಿಎಸ್ ಅಭ್ಯರ್ಥಿ ದೇವೇಗೌಡರ ಎದುರು ನಿಂತು “ಅಪ್ಪಾ ನಿಮ್ಮ ವೈರಿಯಾದ ಚಲುವರಾಯಸ್ವಾಮಿ ಗೆಲ್ಲುವಂತೆ ಕಾಣುತ್ತಿದ್ದಾನೆ, ನನಗೆ ದಿಕ್ಕೇತೋಚದಂತಾಗಿದೆ” ಎಂದ ಕೂಡಲೇ ಗೌಡರು ಮೈಮೇಲೆ ದೆವ್ವ ಬಂದಂತೆ ಎದ್ದು ನಿಂತು, ಅಲ್ಲೇ ಇದ್ದ ಅಪ್ಪಾಜಿ ಹೆಗಲ ಮೇಲೆ ಬಲಗೈ ಊರಿ ಎಡಗೈಯ್ಯನ್ನು ಸುರೇಶಗೌಡನ ಭುಜಕ್ಕೆ ಹಾಕಿಕೊಂಡು ನಾಗಮಂಗಲದ ಕಡೆ ನಡೆದೇಬಿಟ್ಟರಂತಲ್ಲಾ. ನಾಗಮಂಗಲದಲ್ಲಿ ಗೌಡರನ್ನು ನೋಡಿದ ಗತಕಾಲದ ಜನ “ಅಬ್ಬಾಬ್ಬಾ ಸೇಡು ಅಂದರೆ ಇದು, ತೊಂಭತ್ತೆರಡು ವರ್ಷವಾಗಿದ್ದರೂ ಐವತ್ತು ವರ್ಷದ ವೈರಿಯನ್ನು ಹೊಡೆದುರುಳಿಸಲು ಬಂದು ನಿಂತಿರುವ ಗೌಡರ ಛಲ ಸಾಮಾನ್ಯವೇ ಅಂದರಂತಲ್ಲಾ. ಮನುಷ್ಯನಿಗೆ ವಯಸ್ಸಾದಂತೆ ದ್ವೇಷ ಅಸೂಯೆಗಳು ಕಡಿಮೆಯಾಗುತ್ತದಂತೆ, ಆದರೆ ನಮ್ಮ ಗೌಡರನ್ನ ನೋಡಿದರೆ ಆ ಮಾತು ಸುಳ್ಳಾಗಿ ಕಾಣುತ್ತಿದೆಯಲ್ಲಾ ಎಂದು ಉದ್ಘಾರ ತೆಗೆದರಂತಲ್ಲಾ, ಥೂತ್ತೇರಿ.

ಇದನ್ನೂ ಓದಿ: ಎಲೆಕ್ಷನ್ ಬಂದಾಕ್ಷಣ ಪಾರ್ಟಿನೇ ತಾಯಿ ಅಂತಾರೆ; ದೇಶನೇ ಮರ್ತೋಗ್ತಾರಲ್ಲಾ!

ನಾಗಮಂಗಲದಲ್ಲಿ ಕಾಣಿಸಿಕೊಂಡ ಗೌಡರು, “ಬರಗಾಲವೆಂಬ ಭೀಕರತೆಗೆ ಸಿಕ್ಕಿ ಗುಳೆ ಹೋಗುತ್ತಿದ್ದ ನಾಗಮಂಗಲದ ಜನ ನೋಡಲಾಗದೆ ನಾನು ಈ ತಾಲೂಕಿಗೆ ಹೇಮಾವತಿ ಹರಿಸಿದೆ; ಅಂದಿನಿಂದ ಜನ ಅನ್ನ ಉಣ್ಣುತ್ತಿದ್ದಾರೆ” ಎಂದು ಹಸಿಸುಳ್ಳು ಹೇಳಿ ಜನರನ್ನು ದಂಗು ಬಡಿಸಿದರಲ್ಲಾ. ನಾಗಮಂಗಲದ ಜನರ ಅಭಿಪ್ರಾಯದಂತೆ ಅಂದು ಸಂಸ್ಥಾ ಕಾಂಗ್ರೆಸ್ಸಿನ ಶಾಸಕರಾಗಿದ್ದ ಎಚ್.ಟಿ.ಕೃಷ್ಣಪ್ಪನವರನ್ನ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಪಾರ್ಟಿಗೆ ಕರೆದಾಗ, ಅವರು “ನನ್ನ ನಾಗಮಂಗಲ ತಾಲೂಕಿಗೆ ಹೇಮಾವತಿ ನೀರು ಕೊಡುವುದಾದರೆ ನಿಮ್ಮ ಪಾರ್ಟಿಗೆ ಬರುತ್ತೇನೆ” ಎಂದರು. ಕೂಡಲೇ ಇಂಜಿನಿಯರ್ ಕರೆದ ಅರಸು ನಾಗಮಂಗಲಕ್ಕೆ ಸಾಧ್ಯವಾದಷ್ಟು ಹೇಮಾವತಿ ನೀರು ಹರಿಸಿ ಎಂದು ಹೇಳಿ ಕೃಷ್ಣಪ್ಪನವರನ್ನು ತಮ್ಮ ಪಾರ್ಟಿಗೆ ಸೇರಿಸಿಕೊಂಡರು. ಇದು ಇತಿಹಾಸದಲ್ಲಿ ದಾಖಲಾಗಿರುವ ಸತ್ಯ. ಆದರೆ ದೇವೇಗೌಡರು ತುಮಕೂರಿಗಾಗಲಿ, ನಾಗಮಂಗಲಕ್ಕಾಗಲಿ ಹೇಮಾವತಿ ಹರಿಸಲಿಲ್ಲ. ಅವರು ಮುಖ್ಯಮಂತ್ರಿಯಾಗಿದದ್ದು ಕೇವಲ ಹದಿನೆಂಟು ತಿಂಗಳು. ಸೇಡಿಗಾಗಿ ಸುಳ್ಳು ಹೇಳಬಾರದು. ಸತ್ಯ ಸಂಗತಿಯ ಅರಿವಿರುವ ಜನರು ನಗಾಡಬಹುದೆಂಬ ಎಚ್ಚರ ಗೌಡರಲ್ಲಿ ಕಾಣಲಿಲ್ಲವಂತಲ್ಲಾ, ಥೂತ್ತೇರಿ.

******

ಇತ್ತ ಬಿಜೆಪಿ ಅಜೆಂಡಾಗಳು ಒಂದೊಂದೇ ಅನಾವರಣಗೊಂಡು ಜನತೆ ಬೆಚ್ಚಿ ಬೀಳುವಂತಾಗಿದೆಯಲ್ಲಾ. ಎರಡು ದಶಕದ ಹಿಂದೆ ತಯಾರಾದ ಬಿಜೆಪಿ ಅಜೆಂಡಾದ ಮುಖ್ಯಾಂಶಗಳ ಸಂಖ್ಯೆ 25. ಅವುಗಳಲ್ಲಿ ಈಗಾಗಲೇ ಕೆಲವು ಜಾರಿಯಾಗಿವೆ. ಒಂದೆರಡನ್ನು ಮಾತ್ರ ಉಲ್ಲೇಖಿಸುವುದಾದರೆ, ಮಸೀದಿ ಕೆಡವಿ ಈ ದೇಶದಲ್ಲಿ ಕೋಮು ಸಾಮರಸ್ಯ ಕದಡಲಾಗಿದೆ. ರಾಮಮಂದಿರ ಕಟ್ಟಲಾಗಿದೆ. ಹಾಗೆಯೇ ರಾಮಮಂದಿರಗಳನ್ನ ದೇಶದ ಎಲ್ಲಾ ರಾಜ್ಯಗಳಲ್ಲಿ ನಿರ್ಮಿಸಲಾಗುತ್ತದೆ. ನಂತರ ಜಿಲ್ಲೆಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ. ಇದರ ಸೂಚನೆ ಅಶ್ವತ್ಥನಾರಾಯಣ ಎಂಬುವವರ ಬಾಯಿಂದ ಬಂದಿದೆ. ಆ ಪ್ರಕಾರ ರಾಮನಗರಕ್ಕೂ ರಾಮಮಂದಿರ ಬರಲಿದೆ. ಹೀಗೆ ವ್ಯಾಪಕವಾಗಿ ಹರಡುವ ರಾಮಮಂದಿರಗಳ ಮುಖಾಂತರ ಆಡಳಿತ ನಡೆಯಲಿದೆ. ಪೂಜಾರಿಗಳು ಎರಡೆರೆಡು ಶಿಫ್ಟ್‌ನಂತೆ ಕೆಲಸ ನಿರ್ವಹಿಸಲಿದ್ದಾರೆ. ಪ್ರಧಾನ ಅರ್ಚಕರ ಕೆಳಗೆ ಸರಕಾರದ ಕರ್ಮಚಾರಿಗಳು ಬರುತ್ತಾರೆ, ಸರಕಾರಿ ಯಂತ್ರದಲ್ಲಿ ಯಾವ ಶೂದ್ರನು ಇರುವುದಿಲ್ಲ. ಬ್ರಾಹ್ಮಣರೇ ತುಂಬಿಕೊಂಡ ರಾಮಮಂದಿರದ ಆಡಳಿತದ ದೆಸೆಯಿಂದ ರಾಮರಾಜ್ಯ ಸ್ಥಾಪನೆಯಾಗಲಿದೆಯಂತಲ್ಲಾ, ಥೂತ್ತೇರಿ.

******

ಬಿಜೆಪಿಗಳ ಅಧಿಕೃತ ಘೋಷಣೆಯಂತಲೇ, “ನೀವು ಬಂದರೆ ಜೊತೆಯಾಗಿ, ಬಾರದಿದ್ದರೆ ನಿಮ್ಮನ್ನ ಬಿಟ್ಟು, ಅಡ್ಡಿಪಡಿಸಿದರೆ ಹತ್ತಿಕ್ಕಿ ನಾವು ರಾಮರಾಜ್ಯ ಸ್ಥಾಪನೆ ಮಾಡಿಯೇ ಮಾಡುತ್ತೇವೆ” ಎಂಬುದು ಈಗಾಗಲೇ ಜಾರಿಯಾಗಿದೆಯಂತಲ್ಲಾ. “ನೀವು ಬಾರದಿದ್ದರೆ, ನಿಮ್ಮನ್ನ ಬಿಟ್ಟೇ ನಾವು ರಾಮರಾಜ್ಯ ಕಟ್ಟುತ್ತೇವೆ” ಎಂಬುದು ಎಡೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ವಿಷಯದಲ್ಲಿ ನಿಜವಾಗಿದೆಯಲ್ಲಾ. ಈ ಬಗ್ಗೆ ಬಿಜೆಪಿ ಬುದ್ದಿಜೀವಿ ಮಂಜನನ್ನ ಕೇಳಿದರೆ ನೋಡಿ ಅದ್ವಾನಿಗಿಂತ ಇವರಾರೂ ದೊಡ್ಡವರಲ್ಲಾ, ಅದ್ವಾನಿ ಬಾಬ್ರಿ ಮಸೀದಿ ಕೆಡವಿಸಿದ ಲೀಡ್ರು, ಅದಕ್ಕೂ ಮೊದಲು ರಾಮನನ್ನ ರಸ್ತೆಗೆ ತಂದು ಮೆರವಣಿಗೆ ಮಾಡಿದರು. ನಂತರ ಇಟ್ಟಿಗೆ ಮೆರವಣಿಗೆ ಮಾಡಿದರು, ರಾಮ ಪಾದುಕ ಮೆರವಣಿಗೆ ಮಾಡಿದರು, ಜ್ಯೋತಿ ಮೆರವಣಿಗೆ ಮಾಡಿದರು, ಈ ದೇಶದಲ್ಲಿ ಬಿಜೆಪಿ ಆವರಿಸಿಕೊಳ್ಳುವಂತೆ ಮಾಡಿದರು. ಆದರೆ ಜಿನ್ನಾ ಸೆಕ್ಯುಲರಾಗಿದ್ದ ಅನ್ನ ಮಾತಿಗೆ ಅದ್ವಾನಿಯನ್ನೇ ಆಚೆಗೆ ಎಸೆದ ಬಿಜೆಪಿಗೆ ಈಶ್ವರ, ಎಡೂರಪ್ಪ, ಶೆಟ್ಟರ್ ಯಾವ ಲೆಕ್ಕಾರಿ. ಅಂಗೇ ನೋಡ್ತಾಯಿರಿ “ಬಿಜೆಪಿನ ಇನ್ನೂ ಹ್ಯಂಗೆ ಚೊಕ್ಕ ಮಾಡ್ತಿವಿ” ಅಂತ ಜಾರುತ್ತಿದ್ದ ಖಾಕಿ ಚೆಡ್ಡಿಯನ್ನ ಮೇಲೆಳೆದುಕೊಂಡು ಹೋದನಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...