Homeಕರ್ನಾಟಕಮೊದಲ ವರದಿ ಸಲ್ಲಿಸಿದ ಎಸ್‌ಇಪಿ ಆಯೋಗ: ಮೂರು ವರ್ಷಗಳ ಪದವಿಗೆ ಒಲವು

ಮೊದಲ ವರದಿ ಸಲ್ಲಿಸಿದ ಎಸ್‌ಇಪಿ ಆಯೋಗ: ಮೂರು ವರ್ಷಗಳ ಪದವಿಗೆ ಒಲವು

- Advertisement -
- Advertisement -

ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ)ಆಯೋಗವು ತನ್ನ ಮೊದಲ ಸಲಹಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಕಾಲೇಜುಗಳಲ್ಲಿ ಈ ಹಿಂದೆ ಇದ್ದಂತೆ ಮೂರು ವರ್ಷಗಳ ಪದವಿಗೆ ಒಲವು ತೋರಿದೆ ಎಂದು ತಿಳಿದು ಬಂದಿದೆ.

ಕೇಂದ್ರ ಸರ್ಕಾರ 2020ರಲ್ಲಿ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಬದಲಾಗಿ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತೇವೆ ಎಂದು ಕಾಂಗ್ರೆಸ್‌ ಚುನಾವಣಾ ಪೂರ್ವದಲ್ಲಿ ಭರವಸೆ ಕೊಟ್ಟಿತ್ತು. ಅದರಂತೆ ಅಧಿಕಾರಕ್ಕೆ ಬಂದ ಬಳಿಕ, ಅಕ್ಟೋಬರ್‌ 11,2023ರಲ್ಲಿ ಸುಖದೇವ್ ಥೋರಟ್ ಅಧ್ಯಕ್ಷತೆಯಲ್ಲಿ ಎಸ್‌ಇಪಿ ಆಯೋಗ ರಚಿಸಿದೆ. ಈ ಆಯೋಗ ತನ್ನ ಮೊದಲ ಸಲಹಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

2021-22ನೇ ಸಾಲಿನಲ್ಲಿ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಈ ವರ್ಷದ ಜೂನ್‌ ಒಳಗೆ 6ನೇ ಸೆಮಿಸ್ಟರ್ ಪರೀಕ್ಷೆ ನಡೆಯಲಿದೆ. ಅಂದರೆ, ಅವರ ಮೂರು ವರ್ಷಗಳ ಪದವಿ ಪೂರ್ಣಗೊಳ್ಳಲಿದೆ. ಹಾಗಾಗಿ, ಪ್ರಸ್ತುತ ಜಾರಿಯಲ್ಲಿರುವ ಎನ್‌ಇಪಿ ಅಡಿ ನಾಲ್ಕನೇ ವರ್ಷದ ಪದವಿ ಮುಂದುವರಿಸಬೇಕೆ? ಇಲ್ಲ ಎಸ್‌ಇಪಿ ಅಡಿ ಮೂರು ವರ್ಷಗಳ ಪದವಿಗೆ ಸೀಮಿತಿಗೊಳಿಸಬೇಕೆ? ಎಂದು ಸರ್ಕಾರ ತುರ್ತಾಗಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಈಗ ಎಸ್‌ಇಪಿ ಆಯೋಗ ನೀಡಿರುವ ವರದಿ ಆಧರಿಸಿ ಮೂರು ವರ್ಷಗಳ ಪದವಿಯನ್ನು ಮರು ಪರಿಚಯಿಸುವ ಸಾಧ್ಯತೆ ಇದೆ.

ಎನ್‌ಇಪಿ ಅಡಿ ನಾಲ್ಕು ವರ್ಷಗಳ ಪದವಿ ಹೇಗೆ?

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಪ್ರಸ್ತುತ ಕರ್ನಾಟಕದಲ್ಲಿ ಜಾರಿಯಲ್ಲಿದೆ. ಎನ್‌ಇಪಿಯನ್ನು 2021-222ನೇ ಸಾಲಿನ ಶೈಕ್ಷಣಿಕ ವರ್ಷದಿಂದಲೇ ಬಸವರಾಜ ಬೊಮ್ಮಾಯಿ ನೇತೃತ್ವದ ಆಗಿನ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಜಾರಿಗೊಳಿಸಿದೆ. ಎನ್‌ಇಪಿ ಪ್ರಕಾರ, ವಿದ್ಯಾರ್ಥಿಗಳು ನಾಲ್ಕು ವರ್ಷಗಳ ಪದವಿ ಪೂರೈಸಬೇಕಿದೆ. ನಾಲ್ಕು ವರ್ಷಗಳಲ್ಲಿ ಮೊದಲ ವರ್ಷಕ್ಕೆ ‘ಸರ್ಟಿಫಿಕೇಟ್‌ ಕೋರ್ಸ್‌’, ಎರಡನೇ ವರ್ಷಕ್ಕೆ ‘ಡಿಪ್ಲೋಮಾ’, ಮೂರನೇ ವರ್ಷಕ್ಕೆ ‘ಪದವಿ’ ಮತ್ತು ನಾಲ್ಕನೇ ವರ್ಷಕ್ಕೆ ‘ಆನರ್ಸ್‌’ ನೀಡುವ ನಿಯಮವಿದೆ.

ವರದಿ ಪರಿಶೀಲಿಸಿ ನಿರ್ಧಾರ:

ಎಸ್‌ಇಪಿ ಆಯೋಗ ಸಲಹೆಯ ರೀತಿ ವರದಿ ಸಲ್ಲಿಸಿದೆ. ಅದರಲ್ಲಿ ಮಾಡಿರುವ ಶಿಫಾರಸ್ಸಿನ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ವರದಿಯ ಕುರಿತು ಸಿಎಂ ಸಿದ್ದರಾಮಯ್ಯ ಜೊತೆ ಚರ್ಚಿಸಿ ವಾರದೊಳಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಹೇಳಿದ್ದಾಗಿ ವರದಿಗಳು ತಿಳಿಸಿವೆ.

ನಾಲ್ಕು ವರ್ಷಗಳ ಪದವಿ ಅನಗತ್ಯ: 

ಯುರೋಪ್‌ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಮೂರು ವರ್ಷಗಳ ಪದವಿಯೇ ಜಾರಿಯಲ್ಲಿದೆ. ಭಾರತದ ಮಟ್ಟಿಗೆ ನಾಲ್ಕು ವರ್ಷಗಳ ಪದವಿ ಅನಗತ್ಯ ಎಂದು ಸಚಿವ ಸುಧಾಕರ್ ಹೇಳಿದ್ದಾರಂತೆ.

ಇದನ್ನೂ ಓದಿ: ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಸುಗ್ರೀವಾಜ್ಞೆ ವಾಪಸ್ ಕಳುಹಿಸಿದ ರಾಜ್ಯಪಾಲರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...