Homeಕರ್ನಾಟಕಸಿದ್ದು ಸರ್ಕಾರ: ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಸೂತ್ರಕ್ಕೆ ಸ್ಪಷ್ಟ ಭರವಸೆ ನೀಡದ ವರಿಷ್ಠರು

ಸಿದ್ದು ಸರ್ಕಾರ: ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಸೂತ್ರಕ್ಕೆ ಸ್ಪಷ್ಟ ಭರವಸೆ ನೀಡದ ವರಿಷ್ಠರು

- Advertisement -
- Advertisement -

ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರೂ ಪಟ್ಟು ಹಿಡಿದಿದ್ದರು. ಕೊನೆಗೆ ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ ಸಂಧಾನ ಸಭೆ ಯಶಸ್ವಿಯಾಗಿದೆ. ಈ ವೇಳೆ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಸೂತ್ರ ಅನುಸರಿಸಲಾಗುತ್ತದೆಯೇ ಎನ್ನುವ ಪ್ರಶ್ನೆ ಎಲ್ಲರಿಗೂ ಮೂಡಿತ್ತು ಆದರೆ ಕಾಂಗ್ರೆಸ್ ಪಕ್ಷದ ವರಿಷ್ಠರು ಆ ಬಗ್ಗೆ ಸ್ಪಷ್ಟ ಭರವಸೆ ನೀಡಿಲ್ಲ.

ಹಿರಿಯ ನಾಯಕ ಸಿದ್ದರಾಮಯ್ಯ ಅವರ ಕೈಮೇಲಾಗಿದ್ದು, ಅವರಿಗೆ ಎರಡನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿ ಹುದ್ದೆ ಅರಸಿಕೊಂಡು ಬಂದಿದೆ. ಉಪಮುಖ್ಯಮಂತ್ರಿ ಸ್ಥಾನವನ್ನು ಡಿಕೆ ಶಿವಕುಮಾರ್ ಅವರಿಗೆ ನೀಡಲಾಗಿದೆ.

ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಡಿಕೆ ಶಿವಕುಮಾರ್ ಅವರು, ”ಫಲಿತಾಂಶ ಪ್ರಕಟಗೊಂಡ ದಿನದಿಂದಲೇ ಅತ್ತು ಕರೆದ, ಹೊಣೆ ವಹಿಸುವ ಸಂದರ್ಭದಲ್ಲಿ ನೀಡಿರುವ ವಾಗ್ದಾನದಂತೆ ಕೂಲಿ ಕೊಡುವ ಭರವಸೆ ನೆನಪಿಸಿದ, ವರಿಷ್ಠರನ್ನು ಬೆದರಿಸುವ ತಂತ್ರ ಪ್ರಯೋಗಿಸಿದರು. ಹಲವು ಭಾವನಾತ್ಮಕ ಬಾಣಗಳನ್ನು ಎಸೆದರು. ಅವರ ಬೇಡಿಕೆ ಹಾಗೂ ಷರತ್ತುಗಳಿಗೆ ಭಾಗಶಃ ಮಣಿದ ಹೈಕಮಾಂಡ್, ಮುಂದಿನ ದಿನಗಳಲ್ಲಿ ಉಡುಗೊರೆ ನೀಡುವ ಭರವಸೆ ನೀಡಿ ಸಮಾಧಾನಪಡಿಸಿದೆ. ರಾಜ್ಯ ಕಾಂಗ್ರೆಸ್‌ನ ಸಾರಥಿ ಉಪಮುಖ್ಯಮಂತ್ರಿ ಸ್ಥಾನವನ್ನು ಒಪ್ಪಿಕೊಂಡಿದ್ದಾರೆ.

ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಬಗ್ಗೆ ವರಿಷ್ಟರು ಹೇಳಿದ್ದೇನು?

”ಒಗ್ಗಟ್ಟಿನಿಂದ ಕೆಲಸ ಮಾಡಿ ಮುಂಬರುವ ಚುನಾವಣೆಗಳು, ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬನ್ನಿ, ಮುಂದೆ ನೋಡೋಣ” ಎಂಬ ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದಾರೆ. ಈಗಲೇ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಸೂತ್ರ ಹೆಣೆದರೆ ಆಡಳಿತ ಯಂತ್ರದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಭಾವಿಸಿದ ಹೈಕಮಾಂಡ್, ಜಾಳ್ಮೆಯ ಹೆಜ್ಜೆ ಇಟ್ಟಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಅವರು ಆರಂಭದಿಂದಲೂ ಸಿದ್ದರಾಮಯ್ಯ ಪರವಾಗಿ ಪ್ರಬಲವಾಗಿ ನಿಂತರು. ವೇಣುಗೋಪಾಲ್ ಹೆಣೆದ ‘ಸಿದ್ಧ’ ಸೂತ್ರವೇ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಲು ಕಾರಣವಾಯಿತು.

ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ..

ಶನಿವಾರ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿತು. ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿತು. ಮರುದಿನವೇ ಅಂದರೆ ರವಿವಾರ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ ಹೊಣೆಯನ್ನು ಹೈಕಮಾಂಡ್‌ಗೆ ಬಿಡುವ ತೀರ್ಮಾನಕ್ಕೆ ಬರಲಾಯಿತು. ಅದಕ್ಕೆ ಬಲವಾಗಿ ಆಕ್ಷೇಪ ವ್ಯಕ್ತಪಡಿಸಿದ ವೇಣುಗೋಪಾಲ್, ”ಈ ಪ್ರಕ್ರಿಯೆ ಪ್ರಜಾಸತ್ತಾತ್ಮಕವಾಗಿ ನಡೆಯಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಪ್ರತಿಯೊಬ್ಬ ಶಾಸಕರು ತಮ್ಮ ಅಭಿಪ್ರಾಯ ನೀಡಬೇಕು” ಎಂದು ಹೇಳಿದರು.

ವೇಣುಗೋಪಾಲ್ ಅವರ ಮಾತಿಗೆ ಆರಂಭದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲಾ ಒಪ್ಪಲಿಲ್ಲ. ಆಗ ವೇಣುಗೋಪಾಲ್ ಮನವೊಲಿಸಿದರು. ಆ ಬಳಿಕ ಪ್ರತಿಯೊಬ್ಬ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಹೆಚ್ಚಿನ ಶಾಸಕರು ಸಿದ್ದರಾಮಯ್ಯ ಕಡೆಗೆ ಒಲವು ವ್ಯಕ್ತಪಡಿಸಿದರು. ಹೆಚ್ಚು ಶಾಸಕರ ಒಲವಿರುವ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ಅದಕ್ಕೂ ಮುನ್ನ ಶಿವಕುಮಾರ್ ಅವರನ್ನು ಮನವೊಲಿಸಬೇಕು. ಪಕ್ಷ ಬಹುಮತ ಗಳಿಸುವಲ್ಲಿ ಅವರ ಪರಿಶ್ರಮವೂ ಅಪಾರ ಎಂದು ರಾಹುಲ್ ಸಲಹೆ ನೀಡಿದರು.

ಶಿವಕುಮಾರ್ ಅವರು ಎರಡು ದಿನ ಹಿಡಿದ ಪಟ್ಟನ್ನು ಸಡಿಲಿಸಲೇ ಇಲ್ಲ. ಬುಧವಾರ ರಾತ್ರಿ ಶಿವಕುಮಾರ್ ಅವರನ್ನು ಕರೆಸಿಕೊಂಡ ವೇಣುಗೋಪಾಲ್ ಸುದೀರ್ಘವಾಗಿ ಸಮಾಲೋಚಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಒಂದು ಹಂತದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮಾತಿಗೂ ಶಿವಕುಮಾರ್ ಸೊಪ್ಪು ಹಾಕಲಿಲ್ಲ. ಮೂರು ದಿನಗಳ ಕಾಲ ನಡೆಸಿದ ಮನವೊಲಿಕೆಗೂ ಅವರು ಬಗ್ಗಲಿಲ್ಲ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಿರ್ದೇಶನದ ಮೇರೆಗೆ ಕೆ.ಸಿ.ವೇಣುಗೋಪಾಲ್‌ ಅವರು ಬುಧವಾರ ರಾತ್ರಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದರು. ಶಿವಕುಮಾರ್‌ ಅವರೊಂದಿಗೆ ಸುಮಾರು ಮೂರು ಗಂಟೆ ಸಮಾಲೋಚಿಸಿದರು. ಅವರ ಎಲ್ಲ ಷರತ್ತುಗಳನ್ನು ಆಲಿಸಿದರು. ಹೈಕಮಾಂಡ್ ಮುಂದಿರುವ ಸೂತ್ರಗಳನ್ನು ಮುಂದಿಟ್ಟರು.

ಆಗ ಡಿಕೆ ಶಿವಕುಮಾರ್ ಅವರು, ”ನನಗೆ ಸೋನಿಯಾ ಅವರೇ ವಾಗ್ದಾನ ನೀಡಿದ್ದಾರೆ. ಅವರ ಜತೆಗೆ ಈಗ ಮಾತನಾಡಬೇಕು” ಎಂದು ಶಿವಕುಮಾರ್ ಹೇಳಿಕೊಂಡರು. ಮಧ್ಯರಾತ್ರಿಯಲ್ಲಿ ಸೋನಿಯಾ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆಗೂ ವ್ಯವಸ್ಥೆ ಮಾಡಲಾಯಿತು. ಮುಂದಿನ ದಿನಗಳಲ್ಲಿ ನಡೆಯಲಿರುವ ಚುನಾವಣೆಗಳು, ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡುವ ಅನಿವಾರ್ಯತೆಗಳ ಕುರಿತು ಈ ವೇಳೆ ಚರ್ಚೆಯಾಯಿತು. ಮುಖ್ಯಮಂತ್ರಿ ಹುದ್ದೆ ಬಿಟ್ಟು ಎಲ್ಲಭರವಸೆಗಳನ್ನು ಈಡೇರಿಸಲು ಪಕ್ಷವು ಒಪ್ಪಿತು. ಪಕ್ಷ ನಿಷ್ಠ’ ಶಿವಕುಮಾರ್ ಅವರು ನಡು ರಾತ್ರಿಯಲ್ಲಿ ವರಿಷ್ಠ ನಾಯಕರ ಮಾತಿಗೆ ಒಪ್ಪಿದರು. ನಾಲ್ಕು ಉಪಮುಖ್ಯಮಂತ್ರಿಯ ಹೈಕಮಾಂಡ್‌ ಸೂತ್ರಕ್ಕೆ ಶಿವಕುಮಾರ್‌ ಸುತಾರಂ ಒಪ್ಪಲಿಲ್ಲ. ನಾನೊಬ್ಬನೇ ಉಪಮುಖ್ಯಮಂತ್ರಿ ಇರಬೇಕು ಎಂದು ಕೊನೆಯ ಅಸ್ತ್ರ ಎಸೆದರು. ಇದಕ್ಕೆ ಹೈಕಮಾಂಡ್ ಒಪ್ಪಿಗೆ ಸೂಚಿಸಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...