Homeಮುಖಪುಟಕಾಶ್ಮೀರದಲ್ಲಿ ಭದ್ರತಾ ಪಡೆಗಳು ಜನರ ಮನೆಗಳಿಗೆ ನುಗ್ಗುತ್ತಿವೆ: ಮೆಹಬೂಬಾ ಮುಫ್ತಿ ಆರೋಪ

ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಜನರ ಮನೆಗಳಿಗೆ ನುಗ್ಗುತ್ತಿವೆ: ಮೆಹಬೂಬಾ ಮುಫ್ತಿ ಆರೋಪ

- Advertisement -
- Advertisement -

”ಭದ್ರತಾ ಪಡೆಗಳು ಕಾಶ್ಮೀರಿ ನಾಗರಿಕರ ಮನೆಗಳಿಗೆ ನುಗ್ಗಿ ಅವರ ಖಾಸಗಿತನವನ್ನು ಉಲ್ಲಂಘಿಸುತ್ತಿವೆ” ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಶ್ರೀನಗರದಲ್ಲಿ ಜಿ20 ಸಭೆಗೂ ಮುನ್ನ ಆರೋಪಿಸಿದ್ದಾರೆ.

ಜೈಲಿನಲ್ಲಿರುವ ಪ್ರತ್ಯೇಕತಾವಾದಿ ನಾಯಕ ಶಬೀರ್ ಶಾ ಅವರ ಪುತ್ರಿ ಸೆಹರ್ ಶಬೀರ್ ಶಾ ಅವರ ಮನೆಯಲ್ಲಿ ಭದ್ರತಾ ಪಡೆಗಳು ಶೋಧ ನಡೆಸಿವೆ ಎಂದು ಆರೋಪಿಸಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥರು ಈ ಹೇಳಿಕೆ ನೀಡಿದ್ದಾರೆ. ಸುಮಾರು 20 ರಿಂದ 30 ಭದ್ರತಾ ಸಿಬ್ಬಂದಿ ತಮ್ಮ ಮನೆಗೆ ಪ್ರವೇಶಿಸಲು ಗೋಡೆಗಳ ಮೇಲೆ ಹಾರಿ, ಹುಡುಕಾಟ ನಡೆಸುವ ಹೆಸರಿನಲ್ಲಿ ಕಿರುಕುಳ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಶಬೀರ್ ಶಾ ಅವರ ಪತ್ನಿ ಮಾತ್ರ ಇದ್ದಾಗ ಭದ್ರತಾ ಸಿಬ್ಬಂದಿ ಅವರ ಮನೆಗೆ ನುಗ್ಗಿ ಶೋಧ ನಡೆಸಿದರು ಎಂದು ಸೆಹರ್ ಶಾ ಹೇಳಿದರು. “ಅವರು ಕೊಠಡಿಗಳನ್ನು ಹುಡುಕಲು ಪ್ರಾರಂಭಿಸಿದರು. ಅಲ್ಲಿ 20 ರಿಂದ 30 ಪುರುಷರು ಇದ್ದರು ಮತ್ತು ನನ್ನ ತಾಯಿ ಅವರೆಲ್ಲರೊಂದಿಗೆ ಇರಲು ಸಾಧ್ಯವಾಗಲಿಲ್ಲ. ಹಾಗಾಗಿ ಅವರು ಕೋಣೆಗೆಹೋದರು. ಆಗ ಒಂದು ಗುಂಪು ನನ್ನ ತಾಯಿಯ ಕೋಣೆಗೆ ಪ್ರವೇಶಿಸಿತು. ಇತರ ಆರ್ಮಿ ಪುರುಷರು … ಇತರ ಕೊಠಡಿಗಳನ್ನು ಪ್ರವೇಶಿಸಿದರು. ಅವರು ಸಂಪೂರ್ಣ ಅವ್ಯವಸ್ಥೆಯನ್ನು ಮಾಡಿದ್ದಾರೆ” ಎಂದು ಸೆಹರ್ ಶಾ ಹೇಳಿದ್ದಾರೆ.

ಇದನ್ನೂ ಓದಿ: ದೇಶಬಿಟ್ಟು ಓಡಿಹೋದ ‘ಮೋದಿ’ಗಳನ್ನು ಕೇಂದ್ರ ಸರ್ಕಾರ ರಕ್ಷಿಸುತ್ತಿದೆ: ನಡ್ಡಾಗೆ ಕಾಂಗ್ರೆಸ್ ತಿರುಗೇಟು

G20 ಪ್ರವಾಸೋದ್ಯಮದ ಮೂರನೇ ಸಭೆಯು ಮೇ 22 ಮತ್ತು 24 ರ ನಡುವೆ ಶ್ರೀನಗರದಲ್ಲಿ ನಡೆಯಲಿದೆ. ಆಗಸ್ಟ್ 5, 2019 ರಂದು ಸಂವಿಧಾನದ ಆರ್ಟಿಕಲ್ 370ರ ಹಿಂದಿನ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಮೊದಲ ಪ್ರಮುಖ ಅಂತರರಾಷ್ಟ್ರೀಯ ಶೃಂಗಸಭೆಯಾಗಿದೆ.

ಸೆಹರ್ ಶಾ ಅವರ ಹೇಳಿಕೆಗಳ ಕುರಿತು ಮಾತನಾಡಿದ ಮುಫ್ತಿ ಅವರು, ”ಕಾಶ್ಮೀರದಲ್ಲಿ G20 ಗಿಂತ ಮುಂಚೆಯೇ, ಭದ್ರತಾ ಪಡೆಗಳು ಮನೆಗಳಿಗೆ ನುಗ್ಗುತ್ತಿವೆ, ದರೋಡೆ ಮಾಡುತ್ತಿವೆ ಮತ್ತು ಇಲ್ಲಿನ ಜನರ ಖಾಸಗಿತನವನ್ನು ಉಲ್ಲಂಘಿಸುತ್ತಿವೆ.

ಸೆಹರ್ ಶಾ ಅವರ ಹೇಳಿಕೆಗಳ ಕುರಿತು ಮುಫ್ತಿ ಹೇಳಿದರು: “ಕಾಶ್ಮೀರದಲ್ಲಿ G20 ಗಿಂತ ಮುಂಚೆಯೇ, ಭದ್ರತಾ ಪಡೆಗಳು ಮನೆಗಳಿಗೆ ನುಗ್ಗುತ್ತಿವೆ, ದರೋಡೆ ಮಾಡುತ್ತಿವೆ ಮತ್ತು ಇಲ್ಲಿನ ಜನರ ಖಾಸಗಿತನವನ್ನು ಉಲ್ಲಂಘಿಸುತ್ತಿವೆ. ಕಾಶ್ಮೀರದಲ್ಲಿ ಈಗಿರುವ ದಬ್ಬಾಳಿಕೆ ಸಾಕಾಗುವುದಿಲ್ಲ ಎಂಬಂತೆ, ಇದೀಗ ಭಾರತದ ಸರ್ಕಾರವು G20 ನೆಪದಲ್ಲಿ ರಾಕ್ಷಸತನದಿಂದ ವರ್ತಿಸುತ್ತಿದೆ, ಮಹಿಳೆಯರನ್ನೂ ಸಹ ಬಿಡಲಾಗುತ್ತಿಲ್ಲ” ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಶ್ರೀನಗರ ಪೊಲೀಸರು, ಶಂಕಿತ ಉಗ್ರಗಾಮಿಗಳ ಚಲನವಲನದ ಬಗ್ಗೆ ಭದ್ರತಾ ಪಡೆಗಳು ಮಾಹಿತಿ ಪಡೆದ ನಂತರ 20 ಸ್ಥನಗಳಲ್ಲಿ ಶೋಧಿಸಲಾಗಿದೆ.ಅದರಲ್ಲಿ ಶಾ ಅವರ ಮನೆಯೂ ಸೇರಿದೆ ಎಂದು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ರಾಹುಲ್ ಗಾಂಧಿ ಪ್ರದರ್ಶಿಸಿದ್ದು ‘ಚೀನಾ ಸಂವಿಧಾನದ’ ಪ್ರತಿಯಲ್ಲ

0
"ಭಾರತದ ಸಂವಿಧಾನದ ಮೂಲ ಪ್ರತಿಯ ಬಣ್ಣ ನೀಲಿಯಾಗಿದೆ. ಚೀನಾದ ಸಂವಿಧಾನದ ಮೂಲ ಪ್ರತಿಯ ಬಣ್ಣ ಕೆಂಪು. ರಾಹುಲ್ ಗಾಂಧಿ ಚೀನಾದ ಸಂವಿಧಾನ ತೋರಿಸಿದ್ದಾರೆಯೇ? ನಾವು ಈ ಬಗ್ಗೆ ಪರಿಶೀಲಿಸಬೇಕಿದೆ" ಎಂದು ಎಕ್ಸ್‌ನಲ್ಲಿ ಬರೆದುಕೊಂಡಿರುವ...