Homeಮುಖಪುಟಭೂಮಿಗೆ ಅಪ್ಪಳಿಸಲಿದೆ ಸೌರ ಬಿರುಗಾಳಿ : ಜಿಪಿಎಸ್‌, ಮೊಬೈಲ್ ನೆಟ್ವರ್ಕ್ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ಭೂಮಿಗೆ ಅಪ್ಪಳಿಸಲಿದೆ ಸೌರ ಬಿರುಗಾಳಿ : ಜಿಪಿಎಸ್‌, ಮೊಬೈಲ್ ನೆಟ್ವರ್ಕ್ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

- Advertisement -
- Advertisement -

ಅಂತರಿಕ್ಷದಲ್ಲಿ ಉಂಟಾಗಿರುವ ಕೆಲವು ವಿದ್ಯಮಾನಗಳು ಭೂಮಿಯ ಮೇಲಿರುವವರ ಅರಿವಿಗೆ ಬರುವುದಿಲ್ಲ. ಕೆಲವೊಮ್ಮೆ ಬಾಹ್ಯಾಕಾಶ ಮಂಡಲದ ಬೆಳವಣಿಗೆಗಳು ಭೂಮಿಯ ಮೇಲೆ ನೇರ ಪರಿಣಾಮ ಬೀರುತ್ತವೆ. ಉಲ್ಕಾಪಾತ, ಗ್ರಹಣ, ಗ್ರಹಗಳ ಮುಖಮುಖಿ ಇನ್ನು ಕೆಲವು ವಿದ್ಯಮಾನಗಳು ಭುಮಿಯ ವಾತಾವರಣದ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತವೆ. ಈಗ ನಭೋ ಮಂಡಲದಲ್ಲಿ ಉಂಟಾಗಿರುವ ಸೌರ ಚಂಡಮಾರುತ ಭೂಮಿಗೆ ಅಪ್ಪಳಿಸುತ್ತಿದ್ದು ನಾಸಾ ವಿಜ್ಞಾನಿಗಳು ಸೋಲಾರ್‌ ಸ್ಟಾರ್ಮ್ ಅಪಾಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಪ್ರಕಾರ, ಸೌರ ಚಂಡಮಾರುತವು ಗಂಟೆಗೆ ಸುಮಾರು 1.6 ದಶಲಕ್ಷ ಕಿಲೋಮೀಟರ್ ವೇಗದಲ್ಲಿ ಭೂಮಿಯ ಕಡೆಗೆ ಚಲಿಸುತ್ತಿದೆ. ಬಹುಶಃ ಅದರ ವೇಗ ಮತ್ತಷ್ಟು ಹೆಚ್ಚಾಗಲಿದೆ. ಸೌರ ಬಿರುಗಾಳಿ ಉಪಗ್ರಹ ಸಂಕೇತಗಳನ್ನು ಅಡ್ಡಿಪಡಿಸಬಹುದು. ಸೋಮವಾರ  ಅಥವಾ ಮಂಗಳವಾರ ಸೌರ ಬಿರುಗಾಳಿ ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ನಾಸಾ ಹೇಳಿದೆ.

ಸ್ಪೇಸ್‌ವೆದರ್‌.ಕಾಮ್‌ ಸಂಸ್ಥೆ ಹೇಳುವ ಪ್ರಕಾರ ಸೌರ ಬಿರುಗಾಳಿ ವೇಳೆಯಲ್ಲಿ ಉತ್ತರ ಅಥವಾ ದಕ್ಷಿಣ ಧ್ರುವದ  ಜನರಿಗೆ ರಾತ್ರಿಯ ಸಮಯದಲ್ಲಿ ಪ್ರಕಾಶಮಾನವಾದ ಬೆಳಕು ಕಾಣಿಸಲಿದೆ. ಸೋಲಾರ್‌ ಸ್ಟಾರ್ಮ್ ಭೂಮಿಯ ಮೇಲಿನ ಜಿಪಿಎಸ್, ಮೊಬೈಲ್ ಫೋನ್ ಮತ್ತು ಉಪಗ್ರಹ ಸಂಪರ್ಕ ಜಾಲಕ್ಕೆ ಅಡಚಣೆ ಉಂಟಾಗಲಿದೆ ಎಂದು ತಜ್ಞರು ಮುನ್ಸೂಚನೆ ನೀಡಿದ್ದಾರೆ. ಇತರ ರೇಡಿಯೋ ಫ್ರಿಕ್ವೆನ್ಸಿ ಸಂಚಾಲಿತ ಸಾಧನಗಳೂ ಕೂಡ ಕೆಲ ಹೊತ್ತು ಸ್ಥಗಿತವಾಗುವ ಸಾಧ್ಯತೆಗಳಿವೆ ಎಂದು ಅಂತರಾಷ್ಟ್ರೀಯ ವೆಬ್‌ಸೈಟ್‌ ವರದಿ ಮಾಡಿದೆ.

ಇದನ್ನೂ ಓದಿ: ರಾಜಸ್ಥಾನ: ಸೆಲ್ಫಿ ತೆಗೆದುಕೊಳ್ಳುವಾಗ ಸಿಡಿಲು ಬಡಿದು 11 ಮಂದಿ ಸಾವು

ಸೌರ ಬಿರುಗಾಳಿಯ ಹೊಡೆತದಿಂದ ಪವರ್‌ ಗ್ರಿಡ್‌ ಮತ್ತು ಅನಿಲ ಕೊಳವೆಗಳಿಗೂ ಇದೆ ಅಪಾಯ

ಸೌರ ಚಂಡಮಾರುತದ ಸಮಯದಲ್ಲಿ, ಬಲವಾದ ವಿದ್ಯುತ್ ಪ್ರವಾಹವು ಭೂಮಿಯ ಮೇಲ್ಮೈಗೆ ಹರಿಯುವುದರಿಂದ ಪವರ್ ಗ್ರಿಡ್ ವಿಫಲಗೊಳ್ಳುವ ಸಾಧ್ಯತೆ ಇದೆ. ಇದರಿಂದ ಭೂಮಿಯ ಹೊರಗಿನ ವಾತಾವರಣ ಬಿಸಿಯಾಗಬಹುದು. ಇದು ಉಪಗ್ರಹಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ವಿದ್ಯುತ್ ಲೈನ್‌ಗಳಲ್ಲಿ ಪ್ರವಾಹವು ಅಧಿಕವಾಗಿರಬಹುದು, ಇದು ಟ್ರಾನ್ಸ್‌ಫಾರ್ಮರ್‌ಗಳನ್ನು ಸಹ ಸ್ಫೋಟಿಸುವಷ್ಟು ಶಕ್ತಿಶಾಲಿಯಾಗಿರಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಕೆಲವು ಸ್ಥಳಗಳಲ್ಲಿ, ತೈಲ ಮತ್ತು ಅನಿಲ ಪೈಪ್‌ಲೈನ್‌ಗಳ ಮೇಲೂ ಬಿರುಗಾಳಿ ಪರಿಣಾಮ ಉಂಟಾಗುತ್ತದೆ. ಹೈ ಫ್ರಿಕ್ವೆನ್ಸಿ ರೇಡಿಯೊ ಸಂವಹನದ ಮೇಲೆ ಸೋಲಾರ್‌ ಸ್ಟಾರ್ಮ್ ಪರಿಣಾಮ ಬೀರುವುದರಿಂದ ಜಿಪಿಎಸ್ ಮತ್ತು ಮೊಬೈಲ್‌ ನೆಟ್ವರ್ಕ್‌ಗಳು  ಸಹ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ.

ಸೌರ ಚಂಡಮಾರುತವು ಕೆಲವು ನಿಮಿಷಗಳಿಂದ ಕೆಲ ಗಂಟೆಗಳವರೆಗೆ ಪರಿಣಾಮ ಬೀರಲಿದೆ. ಭೂಮಿಯ ಕಾಂತೀಯ ಮೇಲ್ಮೈ ಮತ್ತು ವಾತಾವರಣದಲ್ಲಿ ಇದರ ಪರಿಣಾಮವು ಹಲವು ದಿನಗಳು ಅಥವಾ  ವಾರಗಳವರೆಗೆ ಇರುತ್ತದೆ ಎಂದು ಖಗೊಳ ಶಾಸ್ತ್ರಜ್ಞರು ತಿಳಿಸಿದ್ದಾರೆ.

 ಇದನ್ನೂ ಓದಿ: ಉತ್ತರ ಪ್ರದೇಶ: ಭಾರಿ ಮಳೆ, ಸಿಡಿಲಿಗೆ ಮಕ್ಕಳು , ಮಹಿಳೆಯರು ಸೇರಿ 40 ಮಂದಿ ಬಲಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...