Homeಕರ್ನಾಟಕರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೋಮಣ್ಣ ಪಟ್ಟು: ಬಿಜೆಪಿಯಲ್ಲಿ ಶುರುವಾಯಿತು ಟೆನ್ಷನ್

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೋಮಣ್ಣ ಪಟ್ಟು: ಬಿಜೆಪಿಯಲ್ಲಿ ಶುರುವಾಯಿತು ಟೆನ್ಷನ್

- Advertisement -
- Advertisement -

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿಯಲ್ಲಿ ಈಗ ವಿಪಕ್ಷ ನಾಯಕನ ಆಯ್ಕೆಯ ಜೊತೆಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಅದರಲ್ಲಿಯೂ ಚಾಮರಾಜನಗರ ಹಾಗೂ ವರುಣಾ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಸೋಲು ಕಂಡಿರುವ ಮಾಜಿ ಸಚಿವ ವಿ. ಸೋಮಣ್ಣ ನನ್ನನ್ನು ರಾಜ್ಯಾಧ್ಯಕ್ಷನಾಗಿ ಮಾಡುವಂತೆ ಕೇಂದ್ರ ನಾಯಕರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ರಾಜ್ಯಧ್ಯಕ್ಷ ಸ್ಥಾನಕ್ಕೆ ವಿ ಸೋಮಣ್ಣ, ಸಿಟಿ ರವಿ, ಅಶ್ವತ್ ನಾರಾಯಣ ಹಾಗೂ ಆರ್ ಅಶೋಕ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ನಡುವೆ ಹಾಲಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ರಾಜ್ಯಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಇದೀಗ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿಯ ಜೊತೆಗೆ ಗೊಂದಲಗಳೂ ಹೆಚ್ಚಾಗಿವೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ ಸೋಮಣ್ಣ ಅವರು, ”ಚುನಾವಣಾ ಬಳಿಕ ಎರಡು ಬಾರಿ ದೆಹಲಿಗೆ ಹೋಗಿ ಬಂದಿದ್ದೇನೆ. ಯಾರ ಮೇಲೆ ಏನು ಅಭಿಪ್ರಾಯ ಎಂದು ಹೇಳುವುದಕ್ಕಿಂತ ನನ್ನ 45 ವರ್ಷದ ಅನುಭವ ಹೇಳಿದ್ದೇನೆ. ನನ್ನನ್ನು ರಾಜ್ಯಾಧ್ಯಕ್ಷ ಮಾಡಿ ಎಂದು ಹೇಳಿದ್ದೇನೆ. ಕೇಂದ್ರ ನಾಯಕರಿಗೆ ಪತ್ರ ಬರೆದಿದ್ದೇನೆ. ಅದು ಎಷ್ಟು ಚರ್ಚೆ ಆಗುತ್ತಿದೆ ಎನ್ನುವ ಬಗ್ಗೆ ಗೊತ್ತಿಲ್ಲ” ಎಂದರು.

”ನಾನು ಬಿಜೆಪಿಗೆ ಬಂದು 15 ವರ್ಷ ಆಯಿತು. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಯನ್ನು ಒಟ್ಟಿಗೆ ನಡೆಸಿಕೊಂಡು ಹೋಗಬೇಕಿದೆ. ಹೈಕಮಾಂಡ್ ನನಗೆ ನೀಡಿದ್ದ ಎಲ್ಲಾ ಟಾಸ್ಕ್ ಮಾಡಿದ್ದೇನೆ ಆದರೆ ಆರ್ ಅಶೋಕ್ ಅವರು ಟಾಸ್ಕ್‌ಅನ್ನು ಸರಿಯಾಗಿ ನಿಭಾಯಿಸಿಲ್ಲ. ಅವರು ಡಿಕೆ ಶಿವಕುಮಾರ್ ವಿರುದ್ಧ ಸ್ಪರ್ಧೆ ಮಾತ್ರ ಮಾಡಿದರು. ಆದರೆ ಪೈಪೋಟಿ ನೀಡುವ ಪ್ರಯತ್ನ ಮಾಡಲಿಲ್ಲ. ಆದರೆ ನಾನು ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಿ ಪ್ರಬಲ ಪೈಪೋಟಿ ನೀಡಿದ್ದೇನೆ. ನನ್ನ ತವರು ಕ್ಷೇತ್ರ ಬಿಟ್ಟು ಬೇರೆ ಎರಡು ಕಡೆಗಳಲ್ಲಿ ನನಗೆ ಸ್ಪರ್ಧೆ ಮಾಡಲು ಟಾಸ್ಕ್ ಕೊಟ್ಟರು, ನಾನು ಅದಕ್ಕೆ ಒಪ್ಪಿದೆ. ನಾನು ಪಕ್ಷ ಹೇಳಿದಂತೆ ನಡೆದುಕೊಂಡು ಬಂದಿದ್ದೇನೆ ಹಾಗಾಗಿ ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂದು ನಮ್ಮ ವರಿಷ್ಠರಿಗೆ ಒತ್ತಾಯ ಮಾಡಿದ್ದೇನೆ” ಎಂದು ಸೋಮಣ್ಣ ತಿಳಿಸಿದರು.

”ನಾನು ಕೇವಲ 100 ದಿನ ಮಾತ್ರ ಅವಕಾಶ ಕೇಳಿದ್ದೇನೆ. ಒಬ್ಬ ರಾಜ್ಯಾಧ್ಯಕ್ಷ ಯಾವ ರೀತಿ ಸಂಚಲನವನ್ನು ಮೂಡಿಸಬೇಕು ಎಂದು ತೋರಿಸುತ್ತೇನೆ. ನಾನು ಸ್ವಲ್ಪ ಜೋರಾಗಿ ಮಾತಾಡುತ್ತೇನೆ ಸತ್ಯ ಮಾತಾಡುತ್ತೇನೆ ಗಲಾಟೆ ಮಾಡುತ್ತೇನೆ ನಿಜ. ಆದರೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂಥ ಸಾಮರ್ಥ್ಯವಿದೆ. ಅವಕಾಶ ಕೊಟ್ಟರೆ ಎಲ್ಲರ ಮನೆಗೆ ಹೋಗಿ ಪಕ್ಷ ಸಂಘಟನೆ ಮಾಡುತ್ತೇನೆ. ನಮ್ಮಲ್ಲೂ ಕೂಡ ಪ್ರತಿಭೆ ಇದೆ, ಶಕ್ತಿ ಇದೆ, ದೂರದೃಷ್ಟಿ ಚಿಂತನೆ ಇದೆ” ಎಂದು ಹೇಳಿದ್ದಾರೆ.

”ಇವತ್ತಿನ ಸಂದರ್ಭದಲ್ಲಿ ನನಗಿಂತ ಯಾರಾದರೂ ಸಮರ್ಥರು ಇದ್ದರೆ ಅವರ ಜೊತೆ ಕೂತು ಮಾತನಾಡಿಸಿ. ಅದನ್ನು ಮಾಡದೆ ನಾಲ್ಕು ಗೋಡೆಗಳ ಮಧ್ಯೆ ಇನ್ನೇನೂ ಆಗುವುದು ಬೇಡ. ಇವತ್ತಿನ ಸಂದರ್ಭ ಅರ್ಥ ಮಾಡಿಕೊಂಡು ಕೆಲಸ ಮಾಡುವವನಿಗೆ ಅವಕಾಶ ಕೊಡಿ ಎಂದು ಕೇಳಿದ್ದೇನೆ. ಪಕ್ಷ ಅವಕಾಶ ಕೊಟ್ಟರೆ ಈಗ ಏನು 3-4 ತಿಂಗಳಿಂದ ಮಲಗಿದ್ದೇವೆ ಯಾರನ್ನು ಬಿಡದೆ ಎಲ್ಲರ ಮನೆಗೆ ಹೋಗಿ ಪಕ್ಷ ಸಂಘಟನೆ ಮಾಡುತ್ತೇನೆ” ಎಂದರು.

”ನಾನು ಇದ್ದೇನೆ ಅಂದಾಕ್ಷಣ ನಾಲ್ಕಾರು ಜನಕ್ಕೆ ಮುಜುಗರ ಆಗಬಹುದು ಅಷ್ಟೇ. ಎಂಥ ವಿರೋಧ ಬಂದರೂ ನಾನು ಎದುರಿಸಿ ಹೋಗುತ್ತೇನೆ. ಯಾರ್ಯಾರಿಗೆ ಎಲ್ಲೆಲ್ಲಿ ಇಂಜೆಕ್ಷನ್ ಕೊಡಬೇಕು ನನಗೆ ಗೊತ್ತಿದೆ. ಇವರು ಎಲ್ಲೋ ಕುಳಿತುಕೊಂಡು ಇಂಜೆಕ್ಷನ್ ಕೊಡುತ್ತಾರೆ ನಾನು ಓಡಾಡಿಕೊಂಡು ಕೊಡುತ್ತೇನೆ. ಪಕ್ಷ ಅಂತಿಮ, ಪಕ್ಷ ಸಂಘಟನೆ ಮಾಡುವ ಕೆಲಸ ಬೇಕು ಮಾಡುತ್ತೇನೆ” ಎಂದು ಸೋಮಣ್ಣ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕಕ್ಕೆ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದ ಕೇಂದ್ರ; ಇದು ರಾಜಕೀಯ ದುರುದ್ದೇಶ: ಮುನಿಯಪ್ಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತಮಿಳುನಾಡು: 1 ಗಂಟೆಗಳ ಕಾಲ ಕಾರ್ಯನಿರ್ವಹಿಸದ ಮತಯಂತ್ರ ಸಂಗ್ರಹಿಸಿಟ್ಟಿದ್ದ ‘ಸ್ಟ್ರಾಂಗ್ ರೂಂ’ ಹೊರಗಿನ ಸಿಸಿಟಿವಿ

0
ತಮಿಳುನಾಡಿನ ಈರೋಡ್ ಸಂಸದೀಯ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ಗಳು (ಇವಿಎಂ) ಮತ್ತು ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಯಂತ್ರಗಳನ್ನು ಸಂಗ್ರಹಿಸಿಟ್ಟಿದ್ದ 'ಸ್ಟ್ರಾಂಗ್ ರೂಂ' ಹೊರಗೆ ಇರಿಸಲಾದ ಸಿಸಿಟಿವಿ ಕ್ಯಾಮೆರಾ ಸೋಮವಾರ...