Homeಮುಖಪುಟಕಂಗನಾ ರಣಾವತ್ ಮೇಲಿನ ಹೇಳಿಕೆ ವಿವಾದ; ಮಹಾರಾಜ್‌ಗಂಜ್‌ ಕ್ಷೇತ್ರದಿಂದ ಸುಪ್ರಿಯಾ ಹೆಸರು ಕೈಬಿಟ್ಟ ಕಾಂಗ್ರೆಸ್!

ಕಂಗನಾ ರಣಾವತ್ ಮೇಲಿನ ಹೇಳಿಕೆ ವಿವಾದ; ಮಹಾರಾಜ್‌ಗಂಜ್‌ ಕ್ಷೇತ್ರದಿಂದ ಸುಪ್ರಿಯಾ ಹೆಸರು ಕೈಬಿಟ್ಟ ಕಾಂಗ್ರೆಸ್!

- Advertisement -
- Advertisement -

ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ನಟಿ ಕಂಗನಾ ರಣಾವತ್ ಅವರ ಮೇಲಿನ ವಿವಾದಾತ್ಮಕ ಟೀಕೆಗೆ ಆಕ್ರೋಶದ ವ್ಯಕ್ತವಾಗುತ್ತಿದ್ದಂತೆಯೇ, 2019 ರಲ್ಲಿ ಸುಪ್ರಿಯಾ ಶ್ರೀನಾಟೆ ಸ್ಪರ್ಧಿಸಿದ್ದ ಮಹಾರಾಜ್‌ಗಂಜ್ ಲೋಕಸಭಾ ಕ್ಷೇತ್ರಕ್ಕೆ ಬೇರೆಯವರ ಹೆಸರನ್ನು ಘೋಷಣೆ ಮಾಡಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನಿಂದ ಸ್ಪರ್ಧಿಸಿದ್ದ ಶ್ರೀನಾಟೆ, ಬಿಜೆಪಿಯ ಪಂಕಜ್ ಚೌಧರಿ ವಿರುದ್ಧ ಸೋತಿದ್ದರು. ಈ ಬಾರಿ, ಕಂಗನಾ ರಣಾವತ್ ಕುರಿತ ವಿವಾದಾತ್ಮಕ ಪೋಸ್ಟ್‌ನಿಂದಾಗಿ ಅವರು ಭಾರೀ ರಾಜಕೀಯ ಸುಳಿಯಲ್ಲಿ ಸಿಲುಕಿದ್ದುಮ ಕಾಂಗ್ರೆಸ್ ಅವರ ಬದಲಿಗೆ ವೀರೇಂದ್ರ ಚೌಧರಿ ಅವರನ್ನು ಆಯ್ಕೆ ಮಾಡಿದೆ.

ಶ್ರೀನಾಟೆ ಅವರು ಪಕ್ಷದ ಸಾಮಾಜಿಕ ಮಾಧ್ಯಮ ಮುಖ್ಯಸ್ಥರಾಗಿ ತಮ್ಮ ಕೆಲಸದ ಮೇಲೆ ಕೇಂದ್ರೀಕರಿಸಲು ಬಯಸುತ್ತಾರೆ; ಚುನಾವಣೆಯಲ್ಲಿ ತನ್ನನ್ನು ಕಣಕ್ಕಿಳಿಸದಂತೆ ಪಕ್ಷವನ್ನು ಕೇಳಿಕೊಂಡಿದ್ದಾಗಿ ಅವರು ಹೇಳಿದ್ದು, ತನ್ನ ಬದಲಿಗೆ ಅಭ್ಯರ್ಥಿಯನ್ನು ಸಹ ಸೂಚಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಶ್ರೀನಾಟೆ ಅವರ ಇನ್‌ಸ್ಟಾಗ್ರಾಂ ಖಾತೆಯಿಂದ ಸೋಮವಾರ, ಕಂಗನಾ ರಣಾವತ್ ಅವರ ಚಿತ್ರ ಮತ್ತು ಅವಹೇಳನಕಾರಿ ಶೀರ್ಷಿಕೆಯೊಂದಿಗೆ ಆಕ್ಷೇಪಾರ್ಹ ಪೋಸ್ಟ್ ಅನ್ನು ಪೋಸ್ಟ್‌ ಮಾಡಲಾಗಿತ್ತು. “ಹಲವಾರು ಜನರು ನನ್ನ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಪ್ರವೇಶವನ್ನು ಹೊಂದಿದ್ದಾರೆ; ಅವರಲ್ಲಿ ಒಬ್ಬರು ಅನುಚಿತ ಪೋಸ್ಟ್ ಮಾಡಿದ್ದಾರೆ” ಎಂದು ಅವರು ವಿವಾದದ ನಂತರ ಸ್ಪಷ್ಟಪಡಿಸಿದ್ದಾರೆ.

“ನನಗೆ ಗೊತ್ತಾದ ತಕ್ಷಣ, ನಾನು ಆ ಪೋಸ್ಟ್ ಅನ್ನು ಅಳಿಸಿದ್ದೇನೆ. ನನ್ನನ್ನು ತಿಳಿದಿರುವ ಪ್ರತಿಯೊಬ್ಬರಿಗೂ ಚೆನ್ನಾಗಿ ತಿಳಿದಿದೆ, ನಾನು ಯಾವುದೇ ಮಹಿಳೆಯ ಬಗ್ಗೆ ವೈಯಕ್ತಿಕ ಮತ್ತು ಅಸಭ್ಯವಾದ ಕಾಮೆಂಟ್‌ಗಳನ್ನು ಎಂದಿಗೂ ಮಾಡಲಾರೆ. ಇದು ಹೇಗೆ ಸಂಭವಿಸಿತು ಎಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ” ಎಂದು ಅವರು ಹೇಳಿದರು. ಹಿಂದಿನ ದಿನ, ಚುನಾವಣಾ ಆಯೋಗವು ಶ್ರೀನಾಟೆ ಅವರಿಗೆ ಶೋಕಾಸ್ ನೋಟಿಸ್ ನೀಡಿತು.

ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಎಂಟನೇ ಪಟ್ಟಿಯನ್ನು ಬುಧವಾರ ಪ್ರಕಟಿಸಿದ್ದು, ಮಧ್ಯಪ್ರದೇಶ, ಉತ್ತರ ಪ್ರದೇಶ, ತೆಲಂಗಾಣ ಮತ್ತು ಜಾರ್ಖಂಡ್ ಎಂಬ ನಾಲ್ಕು ರಾಜ್ಯಗಳಿಗೆ 14 ಅಭ್ಯರ್ಥಿಗಳನ್ನು ಹೆಸರಿಸಿದೆ. ಪಕ್ಷವು ಇದುವರೆಗೆ 208 ಅಭ್ಯರ್ಥಿಗಳನ್ನು ಘೋಷಿಸಿದೆ.

ಇದನ್ನೂ ಓದಿ; ಲೋಕಸಭಾ ಚುನಾವಣೆ 2024: ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್ ನಟ ಗೋವಿಂದ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read