Homeಕರ್ನಾಟಕಹಿಂಗಿದ್ದ ನಮ್ಮ ರಾಮಣ್ಣ-11; ’ನಾಗೇಗೌಡ್ರ ದೊಡ್ಡಮನೆ ನೋಡಬೇಕು ಕಲ’ ಅಂದ-ಅವುನ ಕಲ್ಪನೆಯ ದೊಡ್ಡಮನೆ ಅಲ್ಲಿರಲಿಲ್ಲ

ಹಿಂಗಿದ್ದ ನಮ್ಮ ರಾಮಣ್ಣ-11; ’ನಾಗೇಗೌಡ್ರ ದೊಡ್ಡಮನೆ ನೋಡಬೇಕು ಕಲ’ ಅಂದ-ಅವುನ ಕಲ್ಪನೆಯ ದೊಡ್ಡಮನೆ ಅಲ್ಲಿರಲಿಲ್ಲ

- Advertisement -
- Advertisement -

ಅಂದಿನ ಆರೋಗ್ಯ ಮಂತ್ರಿ ಮಾರ್ಗದ ಮಲ್ಲಪ್ಪನಿಗೆ ಪೀಕಲಾಟ ಸುರುವಾಗಿತ್ತು. ರಾಮಣ್ಣನ ವರ್ಗಾವಣೆಗೆ ಕೊಟ್ಟ ಮುಖ್ಯಮಂತ್ರಿ ಅರ್ಡರ್‌ನು ಊರ್ಜಿತ ಮಾಡಕ್ಕಾಗ್ದೆ ವದ್ದಾಡತಿದ್ರು. ಆಗ ನಾವು ಹೋಗಿ ಹೆಲ್ತ್ ಮಿನಿಷ್ಟ್ರ ಎದುರಿಗೆ ನಿಂತಗಂಡೊ. ಜಿ.ಮಾದೇಗೌಡ್ರು ಬೆಳ್ಳೂರಿಂದ ತಮ್ಮ ಹುಡುಗನನ್ನ ತಗದು ರಾಮಣ್ಣನ್ನ ಹಾಕಿರದ್ಕೆ ಸಿಟ್ಟಾಗಿ ಬಾಯಿಗೆ ಬಂದಂಗೆ ಜೋರು ಮಾಡಿ ತಡೆಹಿಡಿಸಿದ್ರು. ಪಾಪ ಸಾಧು ಸ್ವಭಾವದ ಮಾರ್ಗದ ಮಲ್ಲಪ್ಪನ ಪರಿಸ್ಥಿತಿ ಗೊತ್ತಾಯ್ತು. ವಾಪಸ್ ಬಂದ ನಾವು ಬಿ. ಪುಟ್ಟಸ್ವಾಮಯ್ಯನ್ನ ಕರಕಂಡೋಗಿ ಮಾರ್ಗದ ಮಲ್ಲಪ್ಪನಿಗೆ ಸಿಫಾರಸ್ ಮಾಡಿಸಿದ್ವು. ಆದ್ರೂ ಮಾದೇಗೌಡ್ರು ಅಗಾಗ್ಗೆ ಪೋನ್ ಮಾಡಿ ಧಮಕಿ ಹಾಕದು ನಿಂತಿರಲಿಲ್ಲ. ಅಂಗಾಗಿ ಪುಟ್ಟಸ್ವಾಮಯ್ಯನ ಸಿಫಾರಸ್ಸು ಕ್ಯಲಸ ಮಾಡಲಿಲ್ಲ. ಯಲ್ಲ ಜನರಲ್ ಹಾಸ್ಟಲಿಗೆ ಬಂದೊ. ಜನರಲ್ ಹಾಸ್ಟಲಲ್ಲಿ ಎಚ್.ಎನ್ ಕಲ್ಲಣ್ಣನವರಿದ್ರು. ಅವುರಾಗ ಎಮ್ಮೆಲ್ಸಿ. ತುಂಬ ಪ್ರಭಾವಿ ರಾಜಕಾರಣಿ. ಲೋಹಿಯಾವಾದಿಯಾಗಿದ್ರು. “ನಮ್ಮ ರಾಮಣ್ಣನೂ ಕೂಡ ಲೋಹಿಯಾವಾದಿ, ಅಂತವರ ವರ್ಗಾವಣೆ ಮಾಡಸಕ್ಕಾಯ್ತಾಯಿಲ್ಲ ಸಾರ್” ಅಂದೊ. ಯಾವಾಗ ಲೋಹಿಯಾ ವಿಷಯ ತಗದವೊ ಕಲ್ಲಣ್ಣನವುರು ರಾಂಗಾದ್ರು. ಆ ಕೂಡ್ಲೆ ಡೈರೆಕ್ಟರಿಗೆ ಫೋನ್‌ನಲ್ಲಿ ಜೋರು ಮಾಡಿ ಅವತ್ತೆ ವರ್ಗಾವಣೆ ಆರ್ಡರ್ ಇಶ್ಯೂ ಆಗಂಗೆ ಮಾಡಿದ್ರು. ನಮಿಗೆ ಕಲ್ಲಣ್ಣನವರ ಶಕ್ತಿ ಏನು ಅಂತ ಗೊತ್ತಾಯ್ತು. ಅಂತೂ ರಾಮಣ್ಣನಿಗೆ ಮುಖ್ಯಮಂತ್ರಿ, ಹೆಲ್ತ್ ಮಂತ್ರಿ ಮಾಡಿಸಕ್ಕಾಗದ ಕ್ಯಲಸನ ಲೋಹಿಯಾ ಹೆಸರು ಮಾಡಿಸಿದಂಗಾಯ್ತು. ಹಳೆಬೀಡು ಬುಟ್ಟು ಬೆಳ್ಳೂರು ಸೇರಿಕಂಡ.

“ರಾಮಣ್ಣ ಬೆಳ್ಳೂರಿಗೆ ಬಂದಿದ್ದು ನನಿಗೂ ಗೊತ್ತಾಯ್ತು ಕಣಣ್ಣ. ಚೋಳಸಂದ್ರದ ನಮ್ಮ ಚಿಗಪ್ಪನ ಮನಿಗೆ ಬೆಳ್ಳೂರಿಂದ ಗೌಸಣ್ಣ ಅಂತ ಬರೋರು ಅವುರು ಬೆಳ್ಳೂರ ಹೈಸ್ಕೂಲಲ್ಲಿ ಅಟೆಂಡ್ರಾಗಿದ್ರು. ಅವುರು ಬೆಳ್ಳೂರಾಸ್ಪತ್ರಿಗೆ ವಸ ಡಾಕ್ಟರು ಬಂದವುರೆ ಚಂದ್ರ. ಮಾತ್ರ ವಳ್ಳೆ ಡಾಕ್ಟರು. ಜನನ್ಯಲ್ಲ ಚನ್ನಾಗಿ ಮಾತಾಡುಸ್ತರಂತೆ ಅದೇನೊ ಕತೆ ಪತೆನೂ ಬರಿತರಂತೆ ಅಂದಿದ್ದ. ಆಗ ನಾನು ಗೌಸಣ್ಣನಿಗೆ ರಾಮಣ್ಣನ ವಿಷಯ ಹೇಳಿದ್ದೆ. ರಾಮಣ್ಣ ಬೆಳ್ಳೂರಲು ವಳ್ಳೆ ಹೆಸರು ತಗಂಡ್ರು”.

ಬೆಳ್ಳೂರಿಗೆ ರಾಮಣ್ಣ ಬಂದ ಮ್ಯಾಲೆ ತನ್ನ ಕಾಡಿಗೆ ಬಂದಂಗಾದ. ಸಂಸಾರನೂ ಕರಕಂಡು ಬಂದ. ಬೆಳ್ಳೂರು ನಮ್ಮ ತಾಲೂಕಿನಲ್ಲೇ ಕಮರ್ಷಿಯಲ್ ಪ್ಲೇಸು. ಪೇಟೆ ಅಂತರೆ ನೋಡು, ಆ ಪದ ಈ ಊರಿಗೆ ಲಗತ್ತಾಯ್ತದೆ. ಆ ಊರಲ್ಲಿ ಜೈನರು, ಸಾಬರದೇ ಕಾರುಬಾರು. ಒಕ್ಕಲಿಗರು ಕಡಮೆ. ಒಕ್ಕಲಿಗರು ರೈತಾಪಿ ಜನಾದ್ರಿಂದ ಹಳ್ಳಿಲಿರೋರು. ಸಿಟಿಲಿ ಕಡಮೆ. ಈಗ ಬತ್ತಾ ಅವುರೆ. ಈ ಜೈನರಿಗೂ ಮುಸ್ಲಿಮರಿಗೂ ಬಿಜಿನೆಸ್ ಪೈಪೋಟಿ. ಜೈನರು ಸುತ್ತಲಳ್ಳಿಗೆ ಸಾಲಕೊಟ್ಟು ವ್ಯವಹಾರ ಮಾಡಿದ್ರೆ. ಸಾಬ್ರು ಇಪ್ಪೆ ಅಳ್ಳೂ, ವಂಗೆ ಬೀಜ, ಬೇವಿನ ಬೀಜ, ಕೋಳಿ ಮೊಟ್ಟೆ, ಆಡು ಕುರಿ ಚರ್ಮ ತಗಳರು. ಊರೂರು ಸುತ್ತೋರು. ದನಕರಿಗೆ ಲಾಳ ಕಟ್ಟೊರು. ಹುಣುಸೆಹಣ್ಣು ಬಡಕಳರು. ರೈತರ ಬದುಕಲ್ಲಿ ಬ್ಯರತೋಗಿದ್ರು. ರಾಮಣ್ಣನ ಕತೆಗಳಿಗೆ ಸಾಮಗ್ರಿ ಒದಗಿಸೊ ಊರಿನಂಗಿತ್ತು ಬೆಳ್ಳೂರು. ಬಿ.ಎಂ ಶ್ರೀಕಂಠಯ್ಯನೋರ ಊರದು. ಅಲ್ಲೆ ಅತ್ರದಲ್ಲಿ ಜಿ.ಶಂ. ಪರಮಶಿವಯ್ಯನ ಊರು ಜೀರಳ್ಳಿ. ಇತ್ತಗೆ ಪಡುವುಲಾಗಿ ನಾಗೇಗೌಡ್ರ ಊರು. ಆ ಕಡಿಗೆ ಚುಂಚನಗಿರಿ ಇತ್ತು. ರಾಮಣ್ಣ ಒಂಥರ ಉಮೇದಿನಲ್ಲಿದ್ದ. ಅವುನು ಬಿಡುವು ಸಿಕ್ಕಿದ್ರೆ ನಮ್ಮೂರಿಗೂ ಬರನು. ನಮ್ಮೂರಾಗ ಭಾಳ ಚನ್ನಾಗಿತ್ತು. ಊರಿಂದ ಆ ಕಡಿಕೆ ಕ್ಯರಿತ್ತು. ಕ್ಯರೆ ಇದ್ದ ಊರು ಚನ್ನಾಗಿರತವೆ. ಕೋಡಿಬಿದ್ದ ಹಳ್ಳದ ಸಾಲು, ಕ್ಯರೆ ಅಂಚು ಇವ್ಯಲ್ಲ ನೋಡೋರ ಕಣ್ಣಿಗೆ ಚೆನ್ನಾಗಿ ಕಾಣತಿದ್ದೊ. ನಮ್ಮೂರ್‍ಯಂಗದೆ ಅಂತ ಗೊತ್ತಾಗಿದ್ದು ಎಚ್.ಎಲ್ ನಾಗೇಗೌಡ್ರು ನನ್ನೂರು ಅಂತ ಪ್ರಬಂಧ ಬರದಮ್ಯಾಲೆ. ಅದ ಓದಿಕಂಡಿದ್ದ ರಾಮಣ್ಣ ಊರು ನೋಡಕ್ಕೆ ಬತ್ತಿದ್ದ. ನಮ್ಮನಿಯೋರು ಯಾರೋ ಡಾಕ್ಟರು ಬಂದವುರೆ ಅಂತ ನಿಗಾವಯಿಸಂಗಿರಲಿಲ್ಲ. ನಮ್ಮಪ್ಪನ ಪರಿಚಯ ಆದ ಮ್ಯಾಲಂತೂ ಅವುನಿಗೆ ಅಪ್ಪನ ಪ್ರೀತಿ ಸಿಕ್ಕಿದಂಗಾಯ್ತು. ವತ್ತರೆಲೆ ಎದ್ದು ಕ್ಯರೆಕಡಿಕೋಗಿ ಬರನು. ಕ್ಯರೆ ಕೋಡಿ ಮ್ಯಾಲೆ ಬಾಳ ಹೊತ್ತು ನಿಂತಗಳನು. ಹಿನ್ನೀರಲ್ಲಿ ತೆಂಗಿನಸಾಲು ಕಾಣದು. ಅದು ಕ್ಯರೆವಳಗೂ ಕಾಣದು. ಕ್ಯರೆ ಅಕ್ಕಪಕ್ಕ ದೂರದಲ್ಲಿ ಯರಡು ಪಾಳುಬಿದ್ದ ಬಂಗ್ಲೆಗಳಿದ್ದೊ. ಅವು ಬ್ರಿಟಿಷ್ ಅಧಿಕಾರಿಗಳ ಬಂಗ್ಲೆಗಳು. ಅದರಲ್ಲಿ ತೊಂಡಳ್ಳಿ ಬಂಗ್ಲಿಲಿ ಮಾತ್ರ ನಮ್ಮವರದೆ ಒಂದು ಕುಟುಂಬ ಇತ್ತು. ಇಂಗ್ಲಿಷ್‌ನೋರು ಯಾವುದೇ ಕಟ್ಟಡ ಕಟ್ಟಿದರು ಎತ್ತರವಾದ ಜಾಗದಲ್ಲಿ ಕಟ್ಟೊರು. ರಸ್ತೆ ಅಗಲಾದ್ರು ಕಟ್ಟಡ ವಡಿಯಕ್ಕೆ ಸಿಗದಂಗೆ ಕಟ್ಟೊರು. ಅವುರು ನಮಿಗೆ ವಡದು ಚಚ್ಚಿದ್ರು ಒಂದು ಸಂಸ್ಕೃತಿ ವಿದ್ಯೆ ಕೊಟ್ಟೊದ್ರು. ಈ ನಮ್ಮ ರಾಜಕಾರಣಿಗಳ ನೋಡಿದ್ರೆ ಅವುರೆ ವಾಸಿ ಅನ್ನಂಗಾಗ್ಯದೆ. ಸ್ವಾತಂತ್ರ ಬಂದೇಟಿಗೆ ಈ ಬಂಗ್ಲೆ ಖಾಲಿ ಮಾಡಿಕಂಡೋದ್ರು. ಇಲ್ಯಲ್ಲ ತಿರುಗಾಡಿದ ರಾಮಣ್ಣ ಮನಿಗೆ ಬಂದು “ಲೇ ಕಮಲಾಕ್ಷ ನಮ್ಮೂರು ನೋಡಕ್ಕೆ ಚನ್ನಾಗ್ಯದೆ ಕಲ. ನಾನು ಏನೊ ಅನ್ನಕಂಡಿದ್ದೆ. ನಿಮ್ಮೂರಲ್ಲಿ ಸೂರ್ಯ ಮುಳಗದ ನೋಡಕ್ಕೆ ಚಂದ. ಕುಣಗಲ ಕ್ಯರೆ ತುದಿಲಿ ಚಂದ್ರ ಎದ್ದು ಬರದ ನೋಡಕ್ಕೆ ಚಂದ ಕಲ. ಅದ್ಕೆ ನಾಗೇಗೌಡ್ರು ನನ್ನೂರು ಅಂತ ಬರದಿರದು ಗೊತ್ತೇನ್ಲ” ಅಂದ. “ಚನ್ನಾಗ್ಯದೆ ಅದಕ್ಕೆ ಬರುದ್ರು ಕಣೊ” ಅಂದೆ.

“ನಿಮ್ಮೂರು ಕ್ಯರೆ ಬಂಗ್ಲೆಯಲ್ಲ ನನಿಗೂ ಚನ್ನಾಗಿ ಗೊತ್ತು ಕಣಣ್ಣ. ನಾನು ಕದಬಳ್ಳಿಲಿ ಓತ್ತಾಯಿದ್ದಾಗ ಬಂಗ್ಲಿ ಸುಬ್ಬೇಗೌಡ್ರು ಮಗನ ಜ್ವತಿಗೆ ಬತ್ತಿದ್ದೆ. ಒಂದು ಸತಿ ಕ್ಯರೆಲಿ ತೇಲತಾಯಿದ್ದ ಬಾತುಕೋಳಿ ನಮ್ಮನ್ನೋಡಿ ಹಾರ್‌ವೋದೊ. ಒಂದು ಬಾತುಕೋಳಿ ಮಾತ್ರ ಹಾರಲಿಲ್ಲ. ಅದ ಹಿಡಿಯಕ್ಕೋದೆ. ಸಿಕ್ಕದೆ ರಕ್ಕೆ ಬಡಕಂಡು ಇಡೀ ಕ್ಯರೆಲ್ಯಲ್ಲ ಓಡಾಡ್ತು. ಬಟ್ಟೆ ವಗಿತಿದ್ದ ಪಾತ್ರೆ ತ್ವಳಿತಿದ್ದ ಹೆಣ್ಣು ಮಕ್ಕಳ ಕೂಗು ಕೇಳಿ ಹುಮ್ಮಸ್ಸು ಬಂತು. ಕ್ಯರೆ ಆಳ ಗುಂಡಿ ಯಾವುದು ಗೊತ್ತಿಲ್ಲದೆಯಿದ್ರು ಓಡಾಡಿದೆ. ಕ್ಯರೆ ಹೂಳು ತುಂಬಿಕಂಡು ತಣಗೆಯಂಗಾಗಿತ್ತು. ಕಡಿಗೂ ಬಾತುಕೋಳಿ ಹಿಡಿದೆ. ಸುಬ್ಬೇಗೌಡ್ರ ತಮ್ಮನ ಮನೆಲಿ ಬಾತುಕೋಳಿ ಸಾರು ಮಾಡಿದ್ರು ಚನ್ನಾಗಿತ್ತು ಕಣಣ್ಣ”

ಓಹೊಹೋ ನೀನು ಬಲುಮನೆ ಉದಕದ ರುಚಿ ನೋಡಿದ್ದಿ ಬುಡು. ನಿನ್ನಂಥೊನಿಗೆ ಅಂತ ಅನುಭವ ವಳ್ಳೆದು. ಯಾಕಂದ್ರೆ ಅನುಭವುಕ್ಯಲ್ಲ, ಕಾರ ಮಸಾಲೆ ಹಾಕಿ ಬರಿಯೋ ಜನ ನೀವು. ರಾಮಣ್ಣನ್ನೆ ನೋಡು, ಬರೀ ಸ್ಟೆತಾಸ್ಕೊಪಿನ ಜೊತೆಲೆ ಇರಲಿಲ್ಲ. ಅವುನು ಸುತ್ತಮುತ್ತ ನೋಡಕ್ಕೆ ಹಾತೊರಿಯನು. ರಾಮಣ್ಣ ಬೆಳ್ಳೂರಿಗೆ ಬಂದು ಸೇರಿಕಂಡ ಮ್ಯಾಲೆ ನಾನು ಬೆಂಗಳೂರು ಸೇರಿಕಂಡೆ. ಅದಾಗ್ಲೆ ದೊಡ್ಡಮನೆ ನಾಗೇಗೌಡ್ರು ತಹಸೀಲ್ದಾರಾಗಿ, ಎಸಿಯಾಗಿ, ಡಿಸಿಯಾಗಿದ್ರು. ಅವುರ ವಿಷಯ ನಮಗಿಂತ ರಾಮಣ್ಣನಿಗೇ ಗೊತ್ತು. ಅವುರದೊಂದು ಪ್ರಸಂಗ ಹೇಳೋನು. ನಾಗೇಗೌಡ್ರು ಅಮಲ್ದಾರಾಗಿ ಹರಿಹರಕ್ಕೋದಾಗ ಅವುರಪ್ಪ ಲಿಂಗೇಗೌಡ್ರು ಅಮಲ್ದಾರಾಗಿದ್ರು. ನನ್ನ ಮಗ ನ್ಯಡಕಂಡು ಓಡಾಡದು ಬ್ಯಾಡ ಅಂತ ನಮ್ಮೂರಿಂದ ಒಂದು ವೆಯಿಕಲ್ ಕಳಿಸಿದರಂತೆ. ಏನು ಗೊತ್ತೆ, ವಳ್ಳೆದೊಂದು ಜ್ವತೆ ಎತ್ತುನೂ ಗಾಡಿನೂ ಕಳಿಸಿದರಂತೆ. ನಾಗೇಗೌಡ್ರು ಅಪ್ಪ ಪ್ರೀತಿಯಿಂದ ಕಳಿಸಿರೊ ವೆಯಿಕಲ್ಲಲ್ಲೆ ಯಲ್ಲಾ ಊರಿಗೂ ಹೋಯ್ತಿದ್ರಂತೆ. ಅವುರೆ ಗಾಡಿ ಕೊಳ್ಳೂಡ್ಕಂಡು ಎತ್ತಿಗ್ ಉಲ್ಲಾಕಿ ಅಲ್ಲಿ ಕ್ಯಲಸ ಮಾಡಿಕಳೋರಂತೆ. ಅಮ್ಯಾಲೆ ಅಲ್ಲೆ ಮೂರು ಕಲ್ಲೂಡಿ ಅಡಿಗೆನೂ ಮಾಡಿಕಳರಂತೆ. ರಾಮಣ್ಣ ಹೇಳಿದ ಈ ಕತೆ ನಿಜ ಅಂತ ಆಮ್ಯಾಲೆ ಗೊತ್ತಾಯ್ತು.

ಗೌಡ್ರು ನಮ್ಮೂರಿಗೆ ಬಂದ್ರೆ ನ್ಯಾಯ ಪಂಚಾಯ್ತಿಕೆ ಮಾಡೋರು. ವತ್ತರಲೆ ಎದ್ದು ಆರೂಡ್ಕಂಡೋಗಿ ತಾವೂ ಉಳೊರು. ಅಥೆ ವಡಿಯೋರು. ಕುಂಟೆ ವಡಿಯೋರು. ಡಿಸಿಯಾದ್ರು ಅದರ ಮುಂದೆ ರೈತಾಪಿ ಕ್ಯಲಸನೆ ಶ್ರೇಷ್ಠ ಅನ್ನರು. ಅವುರು ನಮ್ಮೂರೋರೆ ಆದ್ರೂ ರಾಮಣ್ಣ ಅವುರ ವಿಷಯ ನಮಿಗೇಳನು. ಅವುರ ಓದಿಕೊಂಡಿದ್ದೊನಲವೆ. ಒಂದು ಸತಿ “ನಾಗೇಗೌಡ್ರ ದೊಡ್ಡಮನೆ ನೋಡಬೇಕು ಕಲ” ಅಂದ. ಅವುನ ಕಲ್ಪನೆಯ ದೊಡ್ಡಮನೆ ಅಲ್ಲಿರಲಿಲ್ಲ. ಅವುರ ಕಾದಂಬರಿ ಓದಿ ಭರ್ಜರಿ ಮನೆ ಕಲ್ಪಿಸಿಕೊಂಡು ಬಂದಿದ್ದ. ಅದು ಹೆಗ್ಗಾಳವಂತೆಕೆಲಿ ಮೆರೆದ ಮನಿಯಾಗಿತ್ತೆ ಹೊರತು ಕುಪ್ಪಳಿಲಿರೊ ಕುವೆಂಪು ಮನೆ ತರ ಇರಲಿಲ್ಲ. ಕುವೆಂಪು ಬರದದ್ಯಲ್ಲ ಅಲ್ಲಿತ್ತು. ಆದ್ರೆ ನಾಗೇಗೌಡ್ರು ಬರದಿದ್ದು ಇಲ್ಲಿರದೆ, ಬರಿ ಜನಿದ್ರು. ಅದೂ ಯಲ್ಲ ಪಾಲ್ತಗಂಡು ಮನೆನೂ ಹಂಚಗಂಡು ಸಣ್ಣಸಣ್ಣ ಮನೆಲಿದ್ರು.

ರಾಮಣ್ಣ ನಮ್ಮ ಕಡಿಕೆ ಬಂದ್ರೆ ಜನಗಳಿಗೆ ತಿಳಿವಳಿಕೆ ಹೇಳೋನು. ಆರೋಗ್ಯ ಯಂಗೆ ಕಾಪಾಡಿಕಬೇಕು ಅಂತ ಹೇಳದರ ಜೊತೆಗೆ ಕುಟುಂಬದ ಸಮಸ್ಯೆಗಳನೂ ಬಗೆಹರಸೋನು. ಖಾಸಗಿ ಬದುಕಿನಲ್ಲಿ ಎಷ್ಟೇ ತಮಾಸಿ ಮಾಡಿದ್ರೂ ರೋಗಿಗಳೆದ್ರಿಗೆ ಕಾಯಿಲೆನ ಬೇರುಸಹಿತ ಕಿತ್ತಾಕೊನಂಗೆ ಗಂಭೀರವಾಗಿರೋನು. ಹಳ್ಳಿ ಜನಗಳ ಕಾಯಿಲೆ ಜಗಳದಿಂದ್ಲೆ ಬತ್ತವೆ. ಜಗಳ ನಿಲ್ಲಿಸಿದ್ರೆ ಯಲ್ಲ ಸರಿಹೋಯ್ತದೆ ಅಂತಿದ್ದ.

ಚುಂಚನಗಿರಿ ಹತ್ರದಲ್ಲೇ ಇದ್ರು ಅಲ್ಯಲ್ಲ ಹೋದನಲ್ಲ. ಆದ್ರೆ ಒಂದು ಸತಿ ಯಾವೊ ಬೆಟ್ಟಕ್ಕೆ ಬಂದವು ಜೇನುಗುಡಿಗೆ ಕಲ್ಲುಬೀರಿ ಬುಟ್ಟವೆ. ತಗೊ ಜೇನುಳಗಳ್ಯಲ್ಲ ಭಕ್ತಾದಿಗಳ ಮ್ಯಾಲೆ ದಾಳಿ ಮಾಡಿಬುಟ್ಟವೆ. ಪಾಪ ಬೈರವುನೂ ಏನೂ ಮಾಡಕ್ಕಾಗಲಿಲ್ಲ. ರಾಮಣ್ಣ ಜೇನುಗಳದ ದಾಳಿಗೆ ತುತ್ತಾದೋರಿಗ್ಯಲ್ಲ ಫಸ್ಟ್‌ಏಡ್ ಮಾಡಿದ್ದ. ಆಗ ಚುಂಚನಗಿರಿ ಸ್ವಾಮಿಗಳು ಭಕ್ತಾದಿಗಳ ಬಗ್ಗೆ ವಹಿಸಿದ ಕಾಳಜಿ ನೋಡಿದ್ದ. ಒಬ್ಬ ಧರ್ಮಗುರು ವೈದ್ಯನ ಜೊತೆ ಕೈ ಜೋಡಿಸಿ ಭಕ್ತಾದಿಗಳ ಉಷಾರು ಮಾಡಿದ್ರು. ಅದನ್ನ ಆತ ಮೆಚ್ಚಿಗಂಡು ಮಾತಾಡಿದ್ದ. ಬರದೂ ಇದ್ದ. ಅದನ್ನ ಓದಿದ ಕೆಲ ಬುದ್ಧಿಜೀವಿಗಳು ರಾಮಣ್ಣ ವೈದ್ಯನಾಗಿದ್ದು ಜನಾಂಗದ ಸ್ವಾಮಿಗಳ ಪರ ಅವುನೆ ಅಂತ ಬರುದ್ರು. ಮಾತಾಡಿಕಂಡ್ರು. ರಾಮಣ್ಣ ಯಾವತ್ತು ಮಠದತ್ರ ಹೋದೊನಲ್ಲ. ಅವುನು ಕುವೆಂಪು ವಿಚಾರಧಾರೆಗೊಳಪಟ್ಟೊನು. ಆದ್ರು ವೈದ್ಯನಾಗಿ ತನ್ನ ಕರ್ತವ್ಯ ಮಾಡಿದ್ನೂ ಆಡಿಕಂಡೋರ ಬಗ್ಗೆ ಅವುನಿಗೆ ಸಿಟ್ಟು ಬಂದಿತ್ತು. ತಾನು ಸರಿಯಿದ್ದದ್ದರಿಂದ ಹೆಚ್ಚು ತಲೆ ಕೆಡಿಸ್ಕಳಕ್ಕೋಗಲಿಲ್ಲ. ಸ್ವಾಮಿಗಳೂ ಕೂಡ ಟೀಕಾಕಾರರಿಗೆ “ಇಲ್ಲಿ ಬಂದು ಅನಾಥ ಮಕ್ಕಳಿಗೆ ವಿದ್ಯೆಬುದ್ಧಿ ಕೊಡದನ್ನ ನೋಡಿ ಮಾತಾಡಿ” ಅಂದಿದ್ರು. ಅದನ್ಯಲ್ಲ ನೋಡೆ ರಾಮಣ್ಣ ಸ್ವಾಮಿಜಿನ ಸಮರ್ಥಿಸಿಕೊಂಡು ಮಾತಾಡಿದ್ದ.

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ


ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-9; “ಉರುಬಾಡು ಮಾಡಿಕಂಡು ತಿಂತಿವಿಕಲ, ಬೇಕಿದ್ರೆ ಬಾ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...