Homeಮುಖಪುಟಮೊಹರಂ ಮೆರವಣಿಗೆಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ: ಸುಪ್ರೀಂ

ಮೊಹರಂ ಮೆರವಣಿಗೆಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ: ಸುಪ್ರೀಂ

ಅರ್ಜಿದಾರರು ಜೂನ್‌ ತಿಂಗಳಿನಲ್ಲಿ ಓರಿಸ್ಸಾದ ಪೂರಿ ಜಗನ್ನಾಥ ರಥಯಾತ್ರೆಗೆ ಅವಕಾಶ ನೀಡಿದ್ದನ್ನು ಉಲ್ಲೇಖಿಸಿ ಮೊಹರಂ ಹಬ್ಬದ ಮೆರವಣಿಗೆಗೂ ಅವಕಾಶ ನೀಡಬೇಕೆಂದು ಕೋರಿದ್ದರು.

- Advertisement -
- Advertisement -

ಮೊಹರಂ ಮೆರವಣಿಗೆಗಳಿಗೆ ಅನುಮತಿ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್, ಕೊರೊನಾ ಹರಡಲು ಒಂದು ನಿರ್ದಿಷ್ಟ ಸಮುದಾಯವೇ ಕಾರಣವೆಂಬ ಟಾರ್ಗೆಟ್‌ಗೆ ಒಳಗಾಗುವುದರಿಂದ ಅನುಮತಿ ಸಾಧ್ಯವಿಲ್ಲ ಎಂದಿದೆ.

ಉತ್ತರ ಪ್ರದೇಶದ ಸೈಯ್ಯದ್ ಕಾಲ್ಬೆ ಜವಾದ್ ಎಂಬುವವರು ಸಲ್ಲಿಸಿದ್ದ ಅರ್ಜಿ ಆಲಿಸಿದ ಸಿಜೆಐ ಎಸ್‌ ಎ ಬೋಬ್ಡೆ ನೇತೃತ್ವದ ನ್ಯಾಯಪೀಠ ನಾವು ಮೆರವಣಿಗೆಗೆ ಅನುಮತಿ ನೀಡಿದರೆ ನಿರ್ದಿಷ್ಟ ಸಮುದಾಯವೊಂದು ಕೊರೊನಾ ಹರಡಲು ಕಾರಣವೆಂಬ ಟಾರ್ಗೆಟ್‌ಗೆ ಒಳಗಾಗುತ್ತದೆ ಎಂದಿದೆ.

ಅರ್ಜಿದಾರರು ಜೂನ್‌ ತಿಂಗಳಿನಲ್ಲಿ ಓರಿಸ್ಸಾದ ಪೂರಿ ಜಗನ್ನಾಥ ರಥಯಾತ್ರೆಗೆ ಅವಕಾಶ ನೀಡಿದ್ದನ್ನು ಉಲ್ಲೇಖಿಸಿ ಮೊಹರಂ ಹಬ್ಬದ ಮೆರವಣಿಗೆಗೂ ಅವಕಾಶ ನೀಡಬೇಕೆಂದು ಕೋರಿದ್ದರು.

ಇದಕ್ಕೆ ಉತ್ತರಿಸಿ ಸಿಜೆಐ ‘ನೀವು ಓರಿಸ್ಸಾದ ಪೂರಿ ಜಗನ್ನಾಥ ರಥಯಾತ್ರೆಯನ್ನು ಉಲ್ಲೇಖಿಸಿದ್ದೀರಿ. ಆದರೆ ಅದು ಕೇವಲ ಒಂದು ಊರಿನಲ್ಲಿ ಮತ್ತು ಒಂದು ಬೀದಿಯಲ್ಲಿ ಮಾತ್ರ ನಡೆದ ಮೆರವಣಿಗೆಯಾದ್ದರಿಂದ ನಮಗೆ ಅಪಾಯದ ಅಂದಾಜಿದ್ದರಿಂದ ಅನುಮತಿ ನೀಡಿದ್ದೆವು. ಆದರೆ ಇಡೀ ದೇಶಕ್ಕೆ ಅನ್ವಯವಾಗುವಂಥಹ ಸಾಮಾನ್ಯ ತೀರ್ಪು ನೀಡುವುದು ಕಷ್ಟ’ ಎಂದಿದ್ದಾರೆ.

ಒಂದು ಜಾಗದಲ್ಲಿ ನಡೆಯುವ ಮೆರವಣಿಗೆಯಾದರೆ ನಾವು ಅಪಾಯವನ್ನು ಅಂದಾಜಿಸಬಹುದು. ಹಾಗಾಗಿ ಇಡೀ ದೇಶದ ಜನರ ಆರೋಗ್ಯವನ್ನು ಅಪಾಯಕ್ಕೆ ತಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಇದಕ್ಕೆ ಪ್ರತಿಯಾಗಿ ಅರ್ಜಿದಾರರು ಲಕ್ನೋ ನಗರದಲ್ಲಿ ಮೆರವಣಿಗೆ ನಡೆಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ಹಾಗಾದರೆ ನೀವು ಅಲಹಾಬಾದ್ ಹೈಕೋರ್ಟ್ ಅನ್ನು ಸಂಪರ್ಕಿಸಿ ಎಂದು ಸುಪ್ರೀಂ ಹೇಳಿದೆ.

ಜೂನ್ ತಿಂಗಳಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದ ವೇಳೆ ಸುಪ್ರೀಂ ಕೋರ್ಟ್ ‘ಜಗನ್ನಾಥ ದೇವರು ನಮ್ಮನ್ನು ಕ್ಷಮಿಸುವುದಿಲ್ಲ’ ಎಂದು ಹೇಳುವ ಮೂಲಕ ಓರಿಸ್ಸಾದ ಪೂರಿ ಜಗನ್ನಾಥ ರಥಯಾತ್ರೆಗೆ ಅನುಮತಿ ನಿರಾಕರಿಸಿತ್ತು. ಆದರೆ ಐದು ದಿನಗಳ ನಂತರ ಕೇಂದ್ರ ಮನವಿ ಮೇರೆಗೆ ಮೆರವಣಿಗೆಗೆ ಅವಕಾಶ ನೀಡಿತ್ತು.


ಇದನ್ನೂ ಓದಿ: ’ಬ್ಯಾಡ್‌ ಬಾಯ್‌ ಬಿಲಿಯನೇರ್ಸ್’ ಸಾಕ್ಷ್ಯಚಿತ್ರದ ವಿರುದ್ದ ಕೋರ್ಟ್ ಮೆಟ್ಟಿಲೇರಿದ ಮೆಹುಲ್ ಚೋಕ್ಸಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...