Homeಮುಖಪುಟಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದಕ್ಕೆ ತೇಜಸ್ವಿನಿ ಅನಂತಕುಮಾರ್ ಅಪಸ್ವರ: ಪಾಠ ಮಾಡಿದ ನೆಟ್ಟಿಗರು

ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದಕ್ಕೆ ತೇಜಸ್ವಿನಿ ಅನಂತಕುಮಾರ್ ಅಪಸ್ವರ: ಪಾಠ ಮಾಡಿದ ನೆಟ್ಟಿಗರು

- Advertisement -
- Advertisement -

ಅಪೌಷ್ಠಿಕತೆಯನ್ನು ಹೋಗಲಾಡಿಸುವ ಸಲುವಾಗಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ನೀಡಬೇಕೆಂಬ ತಜ್ಞರ ಶಿಫಾರಸ್ಸನ್ನು ಕರ್ನಾಟಕ ಸರ್ಕಾರ ಒಪ್ಪಿಕೊಂಡಿದೆ. ಆದರೆ ಇದಕ್ಕೆ ಅಲ್ಲೊಂದು ಇಲ್ಲೊಂದು ಅಪಸ್ವರಗಳು ಕೇಳಿಬರುತ್ತಲೆ ಇವೆ. ಈ ಹಿಂದೆ ಕೆಲ ಮಠಾಧೀಶರು ಮೊಟ್ಟೆ ನೀಡಬಾರದು ಎಂದು ಹೇಳಿ ಟೀಕೆಗೆ ಗುರಿಯಾಗಿದ್ದರು. ಈಗ ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್‌ರವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಸಹ ಮೊಟ್ಟೆ ನೀಡುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ಮೊಟ್ಟ ಏಕೆ ಬೇಕೆಂದು ನೆಟ್ಟಿಗರು ಅವರಿಗೆ ಪಾಠ ಮಾಡಿದ್ದಾರೆ.

ಸಮಾನತೆಯ ಬಗ್ಗೆ ಮಾತನಾಡುತ್ತಲೇ ನೀವು ಏಕೆ ಸಸ್ಯಾಹಾರಿಗಳ ಪರ ವಹಿಸಿದ್ದೀರಿ? ಮಕ್ಕಳು ಅವರಿಷ್ಟ ಬಂದಿದ್ದನ್ನು ತಿನ್ನುತ್ತಾರೆ, ನಿಮ್ಮ ಹೇರಿಕೆ ಏಕೆ ಎಂದು ಹಲವು ಪ್ರಶ್ನಿಸಿದ್ದಾರೆ.

“ನಮ್ಮ ಕರ್ನಾಟಕ ಸರ್ಕಾರ ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ನೀಡಲು ಏಕೆ ನಿರ್ಧರಿಸಿದೆ? ಅದೊಂದೆ ಪೋಷಣೆಯ ಏಕೈಕ ಮೂಲವಲ್ಲ. ಸಸ್ಯಾಹಾರಿಗಳಾಗಿರುವ ಅನೇಕ ವಿದ್ಯಾರ್ಥಿಗಳನ್ನು ಇದು ಹೊರಗಿಡುತ್ತದೆ.
ಪ್ರತಿಯೊಬ್ಬ ವಿದ್ಯಾರ್ಥಿಗೂ ಸಮಾನ ಅವಕಾಶ ಸಿಗುವಂತೆ ನಮ್ಮ ನೀತಿಗಳನ್ನು ರೂಪಿಸಬೇಕು” ಎಂದು ತೇಜಸ್ವಿನಿ ಅನಂತಕುಮಾರ್ ಟ್ವೀಟ್ ಮಾಡಿದ್ದರು.

ಅದಕ್ಕೆ ಪ್ರತಿಯಾಗಿ ನೂರಾರು ಜನರು ಮೊಟ್ಟೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ನೀವು ಸಸ್ಯಹಾರಿಯಾಗಿದ್ದಾರೆ ಅದು ನಿಮ್ಮಿಷ್ಟ. ಆದರೆ ಅದನ್ನು ದಯವಿಟ್ಟು ಇತರರ ಮೇಲೆ ಹೇರಬೇಡಿ. ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದರಿಂದ ತಪ್ಪೇನು? ನಿಮ್ಮ ಬ್ರಾಹ್ಮಣ್ಯವನ್ನು ಶಾಲೆಗಳಿಗೆ ತರಬೇಡಿ” ಎಂದು ಲಿಖಿತ್ ಕುಮಾರ್ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

ಮೊಟ್ಟೆ/ಬಾಳೆಹಣ್ಣು/ಕಡ್ಲೆಮಿಠಾಯಿ ಈ ಮೂರು ಆಯ್ಕೆಗಳಿವೆ. ಮಕ್ಕಳು ತಮಗೆ ಬೇಕಾದುದ್ದನ್ನು ತಿನ್ನುತ್ತಾರೆ. ಇಂತದ್ದೆ ತಿನ್ನಿ ಎಂದು ಹೇಳಲು ನಾವ್ಯಾರು ಎಂದು ಗಣೇಶ್ ಭಟ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ತೇಜಸ್ವಿನಿಯವರ ಪ್ರಕಾರ ಬಹುಸಂಖ್ಯಾತ ಮಾಂಸಾಹಾರಿಗಳು ಅಲ್ಪಸಂಖ್ಯಾತ ಸಸ್ಯಾಹಾರಿಗಳಿಗಾಗಿ ತಮ್ಮ ಆಹಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು?!! ವಾಹ್, ಇದೇ ನೋಡಿ ಬ್ರಾಹ್ಮಣ್ಯ ಅಂದರೆ!. ಇದರ ಬದಲಿಗೆ ಯಾಕೆ ಸಸ್ಯಾಹಾರಿಗಳೂ ಮೊಟ್ಟೆ ತಿನ್ನಬಾರದು.? ಆರೋಗ್ಯಕ್ಕೆ ಒಳ್ಳೆಯದು. ಆಗ ಸಮಾನತೆ ಕೂಡಾ ಉಂಟಾಗುತ್ತದೆ ಅಲ್ವಾ?!! ಎಂದು ಶ್ರೀನಿವಾಸ ಕಾರ್ಕಳರವರು ತಿರುಗೇಟು ನೀಡಿದ್ದಾರೆ.

ದಯವಿಟ್ಟು ಮೊಟ್ಟೆಯಷ್ಟು ಅಗ್ಗದ, ಪೌಷ್ಟಿಕ ಮತ್ತು ರುಚಿಕರವಾದ ಪರ್ಯಾಯವನ್ನು ಸೂಚಿಸಿ. ಕೆಲವು ದುರ್ಬಲವಾದ ಬ್ರಾಹ್ಮಣ ಇಂದ್ರಿಯಗಳನ್ನು ರಕ್ಷಿಸಲು ನಮ್ಮ ನೀತಿಗಳನ್ನು ಹೇರಬಾರದು. ಮೊಟ್ಟೆ ತಿನ್ನದವರಿಗೆ ಚಿಕ್ಕಿ ಇದೆ. ಮೊಟ್ಟೆ ತಿನ್ನುವವರು ಮೊಟ್ಟೆ ತಿಂದರೆ ಏಕೆ ಸಮಸ್ಯೆ? ಎಂದು ಟ್ವಿಟರ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

“ಸರ್ಕಾರಿ ಶಾಲೆಲಿ ಬ್ರಾಹ್ಮಣ, ಲಿಂಗಾಯತ ಹೀಗೆ ಸಸ್ಯಹಾರಿ ಸಮುದಾಯದ ಮಕ್ಕಳು ಹೆಚ್ಚು ಓದ್ತಾಯಿಲ್ಲ. OBC/SC/ST ಮಕ್ಕಳು ಅಧಿಕವಾಗಿದ್ದರೆ. ಮೊಟ್ಟೆನು ಕೊಡ್ತಾನೆ, ಮಾಂಸನು ಕೊಡ್ತಾರೆ. ದುಬಾರಿ ಪೀಸ್ ಕಟ್ಟುವ ಶಾಲೆಲಿ ಮಕ್ಳನ್ನ ಓದಿಸುತ್ತಾ ಇರುವ ನೀವುಗಳು ಸರ್ಕಾರಿ ಶಾಲೆಲಿ ನಿಮ್ಮ ಪದ್ಧತಿಯನ್ನ ಹೇರಿಕೆ ಮಾಡೋಕೆ ಬರಬೇಡಿ. ತಮಿಳುನಾಡಿನಲ್ಲಿ ವಾರಕ್ಕೆ 5 ದಿನ ಮೊಟ್ಟೆ. ತೆಲಂಗಾಣ, ಆಂಧ್ರದಲ್ಲಿ ಮೊಟ್ಟೆ ಕೊಡ್ತಾರೆ. ಬರೀ ಧಾನ್ಯಗಳಿಂದ ಸಂಪೂರ್ಣ ಪೌಷ್ಟಿಕಾಂಶ ಬರಲ್ಲ. ಮೀನು, ಮೊಟ್ಟೆ, ಮಾಂಸ, ಹಾಲು ಅಗತ್ಯ. ಕಲ್ಯಾಣ ಕರ್ನಾಟಕ ಭಾಗದ 14 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಮೊಟ್ಟೆ ಕೊಟ್ಟಿದ್ದರಿಂದ ಅವರು ನ್ಯೂನಪೋಷಣೆಯ ಕೊರತೆ ಇಳಿಮುಖವಾಗಿದೆ. ಮೊದಲು ನ್ಯೂನಪೋಷಣೆಯ ತೀವ್ರ ಕೊರತೆ ಇತ್ತು” ಎಂದು ಟ್ವಿಟರ್ ಬಳಕೆದಾರರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

79% ಕನ್ನಡಿಗರು ಮಾಂಸಾಹಾರ ಸೇವಿಸುತ್ತಾರೆ. ಮೊಟ್ಟೆ ತಿನ್ನುವ ಜನಸಂಖ್ಯೆಯು ಕನಿಷ್ಠ 90% ಆಗಿರುತ್ತದೆ ಎಂದು ನನಗೆ ಖಾತ್ರಿಯಿದೆ. ಹಾಗಾದರೆ 10% ಜನರಿಗೆ ಪರ್ಯಾಯವನ್ನು ಒದಗಿಸಿದಾಗ 90% ಜನರು ಏನು ತಿನ್ನುತ್ತಾರೆ ಎಂಬುದನ್ನು ಏಕೆ ನಿರ್ಧರಿಸಬೇಕು. ನಿಮ್ಮ ಸಮಸ್ಯೆ ಏನು ಮೇಡಂ, ನೀವು ವಿವರಿಸುವಿರಾ? ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ 75: ಹಳೇ ರಾಜಕಾರಣದ ಕಡೇ ವರಸೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಒಂದೋ ಮೊಟ್ಟೆ ತಿನ್ನುತ್ತಿರುವ ನಿಮಗೆ ಹೀಗೆ ಎಲ್ಲರೂ ಮೊಟ್ಟೆ ತಿಂದರೆ ಅದರ ಬೆಲೆ ಜಾಸ್ತಿ ಆಗಬಹುದೆಂಬ ಭಯ,ಅಥವಾ ನಿಮ್ಮ ವಕ್ರ ಬುದ್ದಿಯನ್ನು ಇದು ತೋರಿಸುತ್ತದೆ,ಇಲ್ಲವೇ ದೇವರ ಮೇಲೆ ಆಣೆ ಮಾಡಿ ಸತ್ಯ ಹೇಳಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...