ಆರ್ಥಿಕವಾಗಿ ಹಿಂದುಳಿದ ವರ್ಗಗಳ (ಇಡಬ್ಲ್ಯೂಎಸ್) ಕೋಟಾದಡಿ ರಾಜ್ಯ ಸರ್ಕಾರಿ ಹುದ್ದೆಗಳು ಮತ್ತು ಸೇವೆಗಳಲ್ಲಿ ಮಹಿಳೆಯರಿಗೆ ಶೇಕಡಾ 33.3 ರಷ್ಟು ಮೀಸಲಾತಿ ನೀಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ.
ತೆಲಂಗಾಣದಾದ್ಯಂತ ಶೇಕಡಾ 10 ರಷ್ಟು ಇಡಬ್ಲ್ಯೂಎಸ್ ಮೀಸಲಾತಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಂಗಳವಾರ ಸರ್ಕಾರ ಆದೇಶ ಹೊರಡಿಸಿದೆ. ತೆಲಂಗಾಣದ ಪ್ರತಿ ಉನ್ನತ ಶಿಕ್ಷಣ ಸಂಸ್ಥೆಯು ತಮ್ಮ ಪ್ರತಿ ಶಾಖೆಯಲ್ಲಿ ಮತ್ತು ಅಧ್ಯಾಪಕರ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಿ ಇಎಡಬ್ಲ್ಯುಎಸ್ ಅಭ್ಯರ್ಥಿಗಳನ್ನು ನೇಮಕ ಮಾಡಲು ಸೂಚನೆ ನೀಡಿದೆ.
“EWS ವರ್ಗಕ್ಕೆ ಮೀಸಲಾಗಿರುವ ರಾಜ್ಯ ಸರ್ಕಾರದ ಅಡಿಯಲ್ಲಿನ ಹುದ್ದೆಗಳು ಮತ್ತು ಸೇವೆಗಳಲ್ಲಿನ ಆರಂಭಿಕ ನೇಮಕಾತಿಯಲ್ಲಿ 33.3% ಅಷ್ಟು ಮಹಿಳೆಯರಿಗೆ ಹಂಚಿಕೆಯಾಗಬೇಕು” ಎಂದು ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕವೇ ಮೊದಲ ರಾಜ್ಯ: ಸರ್ಕಾರಿ ಉದ್ಯೋಗಗಳಲ್ಲಿ ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ 1% ಮೀಸಲಾತಿ ಘೋಷಣೆ
ಕೇಂದ್ರವು ಶಿಕ್ಷಣ ಮತ್ತು ಉದ್ಯೋಗದಲ್ಲಿ 10 % EWS ಮೀಸಲಾತಿಯನ್ನು ಘೋಷಿಸಿದೆ. ಇದರ ಎರಡು ವರ್ಷಗಳ ನಂತರ ತೆಲಂಗಾಣದಲ್ಲಿ ಇದೇ ಕೋಟಾದ ಅಡಿಯಲ್ಲಿ ಶೇಕಡಾ 33.3 ರಷ್ಟು ಮೀಸಲಾತಿ ನೀಡಲು ಮಾರ್ಗಸೂಚಿಗಳನ್ನು ನೀಡಲಾಗಿದೆ.
ಪ್ರಸ್ತುತ ರಾಜ್ಯದಲ್ಲಿ ಶೇ 50 ರಷ್ಟು ಮೀಸಲಾತಿಯನ್ನು ಹಿಂದುಳಿದ, ದುರ್ಬಲ ವರ್ಗಗಳಿಗೆ ಜಾರಿಗೊಳಿಸಲಾಗುತ್ತಿದೆ. ಈಗ EWSನ ಶೇಕಡಾ 10 ರಷ್ಟು ಮೀಸಲಾತಿಯೊಂದಿಗೆ, ಒಟ್ಟು ಶೇಕಡಾ 60 ರಷ್ಟು ಮೀಸಲಾತಿ ಸಿಕ್ಕಿದಂತಾಗುತ್ತದೆ.
ಎಸ್‌ಸಿ, ಎಸ್‌ಟಿ ಮತ್ತು ಬಿಸಿಗಳಿಗೆ ಮೀಸಲಾತಿ ಯೋಜನೆಯ ವ್ಯಾಪ್ತಿಗೆ ಒಳಪಡದ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯ ಎಂಟು ಲಕ್ಷಕ್ಕಿಂತ ಕಡಿಮೆ ಇರುವ ವ್ಯಕ್ತಿಗಳನ್ನು ಇಡಬ್ಲ್ಯೂಎಸ್ ಕೋಡಾದಡಿ ಮೀಸಲಾತಿಗೆ ಅರ್ಹರು ಎಂದು ಗುರುತಿಸಬೇಕು ಎಂದು ಮಾರ್ಗಸೂಚಿಗಳಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಮರಾಠಾ ಮೀಸಲಾತಿ ರದ್ದುಗೊಳಿಸಿದ ಸುಪ್ರೀಂ; ರಾಜ್ಯದ ಮೇಲೂ ಪರಿಣಾಮ, ಜನಸಂಖ್ಯೆ ಆಧರಿಸಿದ ಮೀಸಲಾತಿ ಚರ್ಚೆ ಮುನ್ನೆಲೆಗೆ!


