HomeUncategorizedಗೋವಾ: ಚರ್ಚ್ ಮುಂಭಾಗ “ವಿಜಯ ದುರ್ಗೆ”ಯ ವಿಗ್ರಹ ಪ್ರತಿಷ್ಠಾಪನೆ; ಎಫ್‌ಐಆರ್ ದಾಖಲು  

ಗೋವಾ: ಚರ್ಚ್ ಮುಂಭಾಗ “ವಿಜಯ ದುರ್ಗೆ”ಯ ವಿಗ್ರಹ ಪ್ರತಿಷ್ಠಾಪನೆ; ಎಫ್‌ಐಆರ್ ದಾಖಲು  

- Advertisement -
- Advertisement -

ಚರ್ಚ್ ನ ಮುಂದೆ ದೇವರ (ವಿಜಯ ದುರ್ಗೆಯ) ವಿಗ್ರಹವೊಂದಿರುವ ರಚನೆಯನ್ನು ಇಟ್ಟುಕೊಂಡ  ಹಿನ್ನೆಲೆ ಉದ್ವಗ್ನತೆ  ಉಂಟಾಗಿರುವ ಘಟನೆ ಗೋವಾದ ಸ್ಯಾನ್‌ಕೋಲೆ ಎಂಬಲ್ಲಿ ನಡೆದಿದೆ.

ಸುಮಾರು 10-12 ಜನರ ಗುಂಪು ಚರ್ಚ್ ಆಸ್ತಿಯಲ್ಲಿ ದೇವಿಯ ವಿಗ್ರಹವನ್ನು ಪ್ರತಿಷ್ಟಾಪಿಸಿದ್ದಾರೆ. ಶುಕ್ರವಾರದ ಮುಂಜಾನೆ ಈ ರಚನೆಯನ್ನು ಇರಿಸಲಾಗಿದ್ದು, ಜನರು ಬಂದು ದೇವಿಯ ಆಶೀರ್ವಾದ ಪಡೆಯುವಂತೆ  ಒತ್ತಾಯಿಸಿದ ವೀಡಿಯೊವನ್ನು ವೈರಲ್ ಮಾಡಲಾಗಿದೆ.

ಚರ್ಚ್ ಆಸ್ತಿಯಲ್ಲಿ ವಿಗ್ರಹವನ್ನು ಇಟ್ಟುಕೊಂಡಿದ್ದಕ್ಕಾಗಿ ಶುಕ್ರವಾರ ಸಂಜೆ ವ್ಯಕ್ತಿಗಳ ಗುಂಪಿನ ವಿರುದ್ಧ ವೆರ್ನಾ ಪೊಲೀಸರು  ಎಫ್‌ಐಆರ್ ದಾಖಲಿಸಿದ್ದಾರೆ,

ಈ ಕುರಿತು 10ಮಂದಿಯ ವಿರುದ್ಧ  ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ಪೊಲೀಸ್‌ ಠಾಣೆಗೆ ಕರೆಸಿ, ವಿಚಾರಣೆ ನಡೆಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ವೀಡಿಯೊ ವೈರಲ್ ಆಗುತ್ತಿದ್ದಂತೆ, ಸಂಜೆ ನೂರಾರು ಜನರು  ಸ್ಥಳದಲ್ಲಿ ಜಮಾಯಿಸಿದರು. ನಂತರ ಜನರು ಪೊಲೀಸರಿಗೆ ಕರೆ ಮಾಡಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು.

ಉಪ ಪೊಲೀಸ್ ವರಿಷ್ಠಾಧಿಕಾರಿಗಳು, ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನುಒಳಗೊಂಡ ಪೊಲೀಸ್ ಪಡೆಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಈ ಗುಂಪು ಗ್ರಾಮದಲ್ಲಿ ಶಾಂತಿ ಹಾಳು ಮಾಡಲು ಯತ್ನಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇದೇ ಆಸ್ತಿಯಲ್ಲಿ ವ್ಯಕ್ತಿಗಳ ಗುಂಪು ಇಂತಹ ಕೃತ್ಯಗಳಲ್ಲಿ ತೊಡಗಿದ್ದು, ಗ್ರಾಮದಲ್ಲಿ ಉದ್ವಿಗ್ನತೆಗೆ ಕಾರಣವಾಗಿತ್ತು ಎಂದು ಆರೋಪಿಸಿದರು.

ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದಲ್ಲಿ ಗೋವಾದಾದ್ಯಂತ ಜನರನ್ನು ಒಟ್ಟುಗೂಡಿಸಿ ಪ್ರತಿಭಟನೆ ನಡೆಸುವುದಾಗಿ ಜನಸಂದಣಿ ಪೊಲೀಸರಿಗೆ ಎಚ್ಚರಿಕೆ ನೀಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read