Homeಕರ್ನಾಟಕಪಠ್ಯಪುಸ್ತಕ ರಚನೆಯಲ್ಲಿ ಏಕ‘ಚಕ್ರ’ ಅಧಿಪತ್ಯ: ಸಮಿತಿ ಸದಸ್ಯರ ಗೊಂದಲಕಾರಿ ಹೇಳಿಕೆ

ಪಠ್ಯಪುಸ್ತಕ ರಚನೆಯಲ್ಲಿ ಏಕ‘ಚಕ್ರ’ ಅಧಿಪತ್ಯ: ಸಮಿತಿ ಸದಸ್ಯರ ಗೊಂದಲಕಾರಿ ಹೇಳಿಕೆ

- Advertisement -
- Advertisement -

ಪಠ್ಯಪುಸ್ತಕ ಪರಿಶೀಲನೆ ಹಾಗೂ ಪರಿಷ್ಕರಣೆ ವೇಳೆ ರೋಹಿತ್‌ ಚಕ್ರತೀರ್ಥ ಅವರು ಸಮಿತಿ ಸದಸ್ಯರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಪಠ್ಯಗಳನ್ನು ರೂಪಿಸಿದ್ದಾರೆಂಬ ಸಂಗತಿ ಹೊರಬಿದ್ದಿದೆ.

ರೋಹಿತ್‌ ಚಕ್ರತೀರ್ಥರ ಸಮಿತಿಯಲ್ಲಿನ ಸದಸ್ಯರನ್ನು ಸಂಪರ್ಕಿಸಿ ಈ ಕುರಿತು ಸ್ಪಷ್ಟನೆ ಪಡೆಯಲು ‘ನಾನುಗೌರಿ.ಕಾಂ’ ಪ್ರಯತ್ನಿಸುತ್ತಿದ್ದು, ಕೆಲವು ಸದಸ್ಯರು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಪ್ರತಿಕ್ರಿಯೆ ನೀಡಿದವರು ಗೊಂದಲಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬೆಂಗಳೂರು ವಿವಿಎಸ್ ಶಾಲೆ ನಿವೃತ್ತ ಮುಖ್ಯೋಪಾಧ್ಯಾಯರಾದ ಡಾ.ಎನ್‌.ಸತ್ಯಪ್ರಕಾಶ್‌ ಸಮಿತಿ ಸದಸ್ಯರಾಗಿದ್ದರು. ಈಗ ಉಂಟಾಗಿರುವ ವಿವಾದದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, “ನಾನು ಸಮಾಜ ವಿಜ್ಞಾನ ಪಠ್ಯಪುಸ್ತಕ ರಚನೆಯಲ್ಲಿದ್ದೆ. ಈಗ ಆಗಿರುವ ತಪ್ಪುಗಳು ಕನ್ನಡ ಪಠ್ಯಪುಸ್ತಕದಲ್ಲಿವೆ” ಎಂದರು.

“ಹತ್ತನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕ ರಚನೆ ಮಾಡಿದ್ದೇನೆ” ಎಂದು ಅವರು ಹೇಳಿದರು.

ಮುಂದುವರಿದು, “ಕನ್ನಡ ಪಠ್ಯಪುಸ್ತಕ ರಚನೆಗೆ ಒಂದು ಸಮಿತಿ, ಸಮಾಜ ವಿಜ್ಞಾನ ಪಠ್ಯ ರಚನೆಗೆ ಒಂದು ಸಮಿತಿ ಮಾಡಿದ್ದರು. ಒಂದೊಂದು ಸಮಿತಿಯಲ್ಲೂ ಹತ್ತರಿಂದ ಹದಿನೈದು ಜನ ಇದ್ದರು. ಕನ್ನಡ ಪಠ್ಯಪುಸ್ತಕ ಸಮಿತಿಯಲ್ಲಿದ್ದವರು ಎಲ್ಲೆಲ್ಲಿ ಭೇಟಿ ಮಾಡಿದ್ದಾರೆ ಎಂಬುದು ಗೊತ್ತಿಲ್ಲ” ಎಂದರು.

ಇದನ್ನೂ ಓದಿರಿ: ಪಠ್ಯ ಪರಿಶೀಲಿಸಿದ ಸಮಿತಿಯ ಸದಸ್ಯರ್‍ಯಾರೂ ಪ್ರತಿಕ್ರಿಯೆಗೆ ಸಿದ್ಧರಿಲ್ಲ!

“ನಾವು ನೀಡಿದ ವರದಿ ಆಧಾರದಲ್ಲಿ ಪಠ್ಯಪುಸ್ತಕ ರಚಿಸಲಾಗಿದೆ. ಕನ್ನಡ ಪಠ್ಯಪುಸ್ತಕ ಸಮಿತಿ ಸದಸ್ಯರು ನೀಡಿದ ಸಲಹೆಗಳನ್ನೇ ಜಾರಿ ಮಾಡಿದ್ದಾರೆ. ಅಧ್ಯಕ್ಷರು ವೈಯಕ್ತಿಕವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲರೂ ಸಹಿ ಮಾಡಿರುತ್ತೇವೆ. ಎರಡು ಮೂರು ತಪ್ಪುಗಳಾಗಿವೆಯಷ್ಟೇ. ಇದನ್ನೇ ದೊಡ್ಡದ್ದಾಗಿ ಬಿಂಬಿಸುತ್ತಿದ್ದಾರೆ” ಎಂದರು.

ಸತ್ಯಪ್ರಕಾಶ್ ಅವರ ಹೇಳಿಕೆಗಳು ಗೊಂದಲಕಾರಿಯಾಗಿದ್ದವು.

ನಾನುಗೌರಿ: ‘ಸಮಾಜ ವಿಜ್ಞಾನ’ ಪಠ್ಯಪುಸ್ತಕದಲ್ಲಿ ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌’ ಎಂಬ ಸಾಲನ್ನು ಕಿತ್ತು ಹಾಕಿದ್ದೀರಲ್ಲ?

ಎನ್.ಸತ್ಯಪ್ರಕಾಶ್‌: ಇಲ್ಲ. ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಈ ತಪ್ಪಾಗಿಲ್ಲ. ಅದು ಕನ್ನಡ ಪಠ್ಯಪುಸ್ತಕದಲ್ಲಿ ಆಗಿರುವ ತಪ್ಪಷ್ಟೇ.

ನಾನುಗೌರಿ: 9ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಈ ತಪ್ಪಾಗಿದೆ. ಈ ಕುರಿತು ನಾವೇ ವರದಿ ಮಾಡಿದ್ದೇವೆ.

ಸತ್ಯಪ್ರಕಾಶ್‌: ಓಹ್, ಒಂಬತ್ತನೇ ತರಗತಿಯದ್ದಾ?

ನಾನುಗೌರಿ: ಇಷ್ಟೇ ಅಲ್ಲ. ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದೀರಿ.

ಸತ್ಯಪ್ರಕಾಶ್: ಸಾಕಷ್ಟು ಎಂಬ ಪದ ಉಪಯೋಗಿಸಬೇಡಿ. ಯಾವುದೆಂದು ಹೇಳಿ.

ನಾನುಗೌರಿ: ‘ಸಿಂಧೂ ಬಯಲಿನ ನಾಗರಿಕತೆ’ ಎಂಬುದನ್ನು ‘ಸಿಂಧೂ ಸರಸ್ವತಿ ನಾಗರಿಕತೆ’ ಎಂದು ಮಾಡಿದ್ದೀರಿ. ನಾವು ಇಲ್ಲಿಯವರೆಗೂ ಇದನ್ನು ಓದಿಯೇ ಇರಲಿಲ್ಲ.

ಸತ್ಯಪ್ರಕಾಶ್‌: ಹಾಗೇನಿಲ್ಲ, ಹೀಗೆ ಬದಲಾವಣೆ ಆಗಬಾರದೆಂದೇನೂ ಇಲ್ಲ. ‘ಸಿಂಧೂ ಸರಸ್ವತಿ ನಾಗರಿಕತೆ’ ಎಂದರೆ- ಭಾರತೀಯ ಇತಿಹಾಸ, ದ್ರಾವಿಡ ಸಂಸ್ಕೃತಿ ಎಲ್ಲವೂ ಆಗುತ್ತದೆ. ಇಂಗ್ಲಿಷ್‌ನವರು ಬರೆದದ್ದು ಇಟ್ಟುಕೊಳ್ಳಬೇಕಾ?

ನಾನುಗೌರಿ: ಇಷ್ಟೇ ಅಲ್ಲ. ಸಮಾಜ ವಿಜ್ಞಾನ ಪಠ್ಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಕನಕದಾಸ, ಪುರಂದರದಾಸ, ನಾರಾಯಣಗುರು- ಈ ಎಲ್ಲ ಮಹನೀಯರ ಪಠ್ಯಗಳನ್ನು ಕೈಬಿಡಲಾಗಿದೆ. ಇದಕ್ಕೆ ಕಾರಣವೇನು?

ಸತ್ಯಪ್ರಕಾಶ್‌: ಯಾವಾಗಲಾದರೂ ಬನ್ನಿ ಮಾತನಾಡೋಣ.

ನಾನುಗೌರಿ: ಪ್ರತಿಭಟನೆಗಳು ನಡೆದಿವೆ. ಪಠ್ಯಪುಸ್ತಕಗಳ ಅಧ್ವಾನಗಳ ಕುರಿತು ಚರ್ಚೆಯಾಗುತ್ತಿದೆ. ನಿಮ್ಮನ್ನು ಪ್ರಶ್ನಿಸಿದಾಗಲೆಲ್ಲ ಹೀಗೆಯೇ ಉತ್ತರಿಸುತ್ತೀರಿ. ಜನರಿಗೆ ಸ್ಪಷ್ಟನೆ ಸಿಗುವುದು ಯಾವಾಗ?

ಇದನ್ನೂ ಓದಿರಿ: ಪಠ್ಯಪುಸ್ತಕ ರಚನೆಯಲ್ಲಿ ಸಮಿತಿ ಸದಸ್ಯರ ಅಭಿಪ್ರಾಯ ತಿರಸ್ಕರಿಸಿ ಏಕಪಕ್ಷೀಯ ಪಠ್ಯ ರಚಿಸಿದ ಚಕ್ರತೀರ್ಥ!

ಸತ್ಯಪ್ರಕಾಶ್‌: ಸಮಿತಿ ಅಧ್ಯಕ್ಷರಿದ್ದಾರೆ. ವಿವಾದದ ಕುರಿತು ಪ್ರತಿಕ್ರಿಯೆ ನೀಡಲು ಎಲ್ಲರಿಗೂ ಅನುಮತಿ ನೀಡಿಲ್ಲ.

ನಾನುಗೌರಿ: ಪ್ರೊ.ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಸಮಿತಿಯಲ್ಲಿದ್ದವರೆಲ್ಲರೂ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಚಕ್ರತೀರ್ಥ ನೇತೃತ್ವದ ಸಮಿತಿಯವರ್‍ಯಾಕೆ ಮಾತನಾಡುತ್ತಿಲ್ಲವಲ್ಲ?

ಸತ್ಯಪ್ರಕಾಶ್‌: ಬರಗೂರರ ನೇತೃತ್ವದಲ್ಲಿ ಪಠ್ಯ ಪರಿಷ್ಕರಣೆಯಾದಾಗಲೂ ವಿವಾದವಾಗಿತ್ತು. ಹೊರಗೆ ಬರಲಿಲ್ಲವಷ್ಟೇ. ಈಗ ಎಲ್ಲರೂ ಮಾತನಾಡುತ್ತಿದ್ದಾರೆ. ನಾವು ಎಲ್ಲ ವರದಿಯನ್ನು ಸರ್ಕಾರಕ್ಕೆ ಕೊಟ್ಟಿದ್ದೇವೆ.

ಸತ್ಯಪ್ರಕಾಶ್ ಅವರು ತಮ್ಮ ಪ್ರತಿಕ್ರಿಯೆಯನ್ನು ಮೊಟುಕುಗೊಳಿಸಿದರು.

ಪಠ್ಯಪುಸ್ತಕ ಪರಿಶೀಲನಾ ಸಮಿತಿಯಲ್ಲಿದ್ದ ಮಿಥಿಕ್ ಸೊಸೈಟಿಯ ಸಂಶೋಧಕ ವಿಠಲ್ ಪೋತೇದಾರ್‌‌ ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದರು.

ನಾನುಗೌರಿ: ನಿಮ್ಮ ಅಭಿಪ್ರಾಯಕ್ಕೆ ವಿರುದ್ಧವಾಗಿ ಪಠ್ಯ ರಚನೆಯಾಗಿದೆಯೇ?

ವಿಠಲ್: ಅದಕ್ಕೂ ನಮಗೂ ಸಂಬಂಧವಿಲ್ಲ. ಸಮಿತಿ ವಿಸರ್ಜನೆಯಾಗಿದೆ.

ನಾನುಗೌರಿ: ನಿಮ್ಮ ಸಮಿತಿಯಲ್ಲಿ ಈ ರೀತಿಯ ಗೊಂದಲ ಉಂಟಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಕೇಳುತ್ತಿದ್ದೇವೆ.

ವಿಠಲ್‌: ನಾನು ಆ ಸಮಿತಿಯಲ್ಲಿ ಇರಲಿಲ್ಲ. ಅದಕ್ಕೂ ನನಗೂ ಸಂಬಂಧವಿಲ್ಲ.

ನಾನುಗೌರಿ: ಸಮಿತಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಲ್ಲ?

ವಿಠಲ್‌: ಈಗ ಬಂದಿರುವ ಇದರೊಳಗೆ… ಸಮಿತಿ… (ಮಾತು ಅಸ್ಪಷ್ಟವಾಗಿತ್ತು)

ನಾನುಗೌರಿ: ನೀವು ಪಠ್ಯಪುಸ್ತಕ ಸಮಿತಿಯಲ್ಲೇ ಇರಲಿಲ್ಲವೇ?

ವಿಠಲ್: ನಾವು ವರದಿ ಕೊಟ್ಟಾಯಿತು. ವಿಸರ್ಜನೆಯೂ ಆಯಿತು.

ನಾನುಗೌರಿ: ನಿಜ. ಆದರೆ ನಿಮ್ಮ ಪಠ್ಯಪುಸ್ತಕ ವಿವಾದ ಇನ್ನೂ ಜೀವಂತವಾಗಿದೆ. ಅದೇ ಪಠ್ಯವನ್ನು ಮಕ್ಕಳಿಗೆ ಬೋಧಿಸಲು ಹೊರಟಿದ್ದಾರೆ.

ವಿಠಲ್: ನಾವು ವೃತ್ತಿಪರರು. ಪಠ್ಯ ಪುಸ್ತಕ ರಚನೆ ಮಾಡಿ ಸರ್ಕಾರಕ್ಕೆ ಕೊಟ್ಟಿರುತ್ತೇವಷ್ಟೇ.

ನಾನುಗೌರಿ: ಈಗ ಬಂದಿರುವ ಪ್ರಶ್ನೆ ಇಷ್ಟೇ. ಕೆಲವು ಪಠ್ಯಗಳನ್ನು ಮುಂದುವರಿಸಬಹುದು ಎಂದು ಸದಸ್ಯರು ಹೇಳಿದ್ದರು. ಆದರೆ ಅದನ್ನು ಸಮಿತಿಯ ಅಧ್ಯಕ್ಷರು ಕಡೆಗಣಿಸಿದ್ದಾರೆಂದು ತಿಳಿದುಬಂದಿದೆ.

ವಿಠಲ್: ನಾವು ಏನು ಹೇಳಲು ಬರುವುದಿಲ್ಲ. ಇದು ಸರ್ಕಾರ ಮತ್ತು ಸಚಿವರು ತೆಗೆದುಕೊಳ್ಳುವ ನಿರ್ಧಾರವಷ್ಟೇ. ವರದಿ ಕೊಟ್ಟಿದ್ದೀವಿ. ಅದನ್ನು ಸ್ವೀಕರಿಸುವುದು ಅಥವಾ ಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು.

ನಾನುಗೌರಿ: ಸರ್ಕಾರಕ್ಕೆ ಸಲ್ಲಿಸಿದ ವರದಿಯ ಕುರಿತು ಹೇಳುತ್ತಿಲ್ಲ. ನೀವು ಸಮಿತಿಯ ಅಧ್ಯಕ್ಷರಿಗೆ ನೀಡಿದ ಅಭಿಪ್ರಾಯಗಳನ್ನು ಅಧ್ಯಕ್ಷರು ಕಡೆಗಣಿಸಿದ್ದಾರೆಂದು ವರದಿಯಾಗಿದೆ. ಈ  ಕುರಿತು ಕೇಳುತ್ತಿದ್ದೇವೆ.

ಇದನ್ನೂ ಓದಿರಿ: ಸಂವಿಧಾನ ಒಬ್ಬರೇ ಬರೆದಿದ್ದು ಎಂದು ಹೇಗೆ ಹೇಳುತ್ತೀರಿ?: ಪಠ್ಯದಿಂದ ‘ಸಂವಿಧಾನ ಶಿಲ್ಪಿ’ ಪದ ಕೈಬಿಟ್ಟಿದ್ದಕ್ಕೆ ಪಠ್ಯ ಪರಿಶೀಲನೆ ಸಮಿತಿ ಸದಸ್ಯನ ಸಮರ್ಥನೆ

ವಿಠಲ್‌: ನಾವು ಕೊಟ್ಟಿದ್ದಲ್ಲ. ಬೇರೆ ಸಮಿತಿ ಕೊಟ್ಟಿರುವ ವರದಿ ಅದು.

ನಾನುಗೌರಿ: ಎಷ್ಟು ಸಮಿತಿ ಮಾಡಿದ್ದಿರಿ?

ವಿಠಲ್‌: ಅದನ್ನು ನಮಗೆ ಗೊತ್ತಿಲ್ಲ. ಕರ್ನಾಟಕ ಪಠ್ಯಪುಸ್ತಕ ಸಂಘದ (ಕೆಟಿಬಿಎಸ್) ಅಧಿಕಾರಿಗಳನ್ನು ಕೇಳಿದರೆ ಮಾಹಿತಿ ಸಿಗುತ್ತದೆ.

(ಕೆಟಿಬಿಎಸ್‌ ನಿರ್ದೇಶಕರ ಅಭಿಪ್ರಾಯಕ್ಕೆ ಸಂಪರ್ಕಿಸಲಾಗಿದೆ. ಪ್ರತಿಕ್ರಿಯೆ ಸಿಕ್ಕಲ್ಲಿ ಅಪ್‌ಡೇಟ್ ಮಾಡಲಾಗುವುದು)

ಪ್ರತಿಕ್ರಿಯೆ ನೀಡಲು ನಿರಾಕರಣೆ

ಸಮಿತಿಯ ಮತ್ತೊಬ್ಬ ಸದಸ್ಯರಾದ ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟ ವಿವೇಕಾನಂದ ಗಿರಿಜನ ಪ್ರೌಢಶಾಲೆಯ ಬಿ.ಜಿ.ವಾಸುಕಿ ಅವರನ್ನು ಸಂಪರ್ಕಿಸಿದಾಗ, “ಈಗ ಸಮಿತಿ ವಿಸರ್ಜನೆಯಾಗಿದೆ. ನಾವು ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ಹೇಳಿದರು.‘

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...