ಬುಧವಾರ ಅಫ್ಘಾನಿಸ್ಥಾನದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದ್ದು, 950ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ 600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ದೂರದ ಪರ್ವತ ಪ್ರದೇಶದ ಹಳ್ಳಿಗಳಿಂದ ಮಾಹಿತಿ ಇನ್ನೂ ಬರಬೇಕಿರುವುದರಿಂದ ಸಾವು ನೋವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪದಲ್ಲಿನ ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸಲು ಸೂಕ್ತ ವೈದ್ಯಕೀಯ ಸರಬರಾಜಿಗಾಗಿ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ ಎಂದು ಆಂತರಿಕ ಸಚಿವಾಲಯದ ಅಧಿಕಾರಿ ಸಲಾವುದ್ದೀನ್ ಅಯೂಬಿ ತಿಳಿಸಿದ್ದಾರೆ.
ಮೃತರಲ್ಲಿ ಹೆಚ್ಚಿನವು ಪೂರ್ವ ಪ್ರಾಂತ್ಯದ ಪಕ್ತಿಕಾದಲ್ಲಿವೆ. ಅಲ್ಲಿ 255 ಜನರು ಸಾವನ್ನಪ್ಪಿದ್ದು, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸಲಾವುದ್ದೀನ್ ಅಯೂಬಿ ತಿಳಿಸಿದ್ದಾರೆ. ಖೋಸ್ಟ್ ಪ್ರಾಂತ್ಯದಲ್ಲಿ 25 ಮಂದಿ ಸಾವನ್ನಪ್ಪಿದ್ದು, 90 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಹೆಚ್ಚುತ್ತಿರುವ ಅತ್ಯಾಚಾರ: ಪಾಕಿಸ್ತಾನದ ಪಂಜಾಬ್‌ನಲ್ಲಿ ‘ತುರ್ತು ಪರಿಸ್ಥಿತಿ’ ಘೋಷಣೆ
ಪಾಕಿಸ್ತಾನ, ಅಫ್ಘಾನಿಸ್ಥಾನ ಮತ್ತು ಭಾರತ ಸೇರಿದಂತೆ ಸುಮಾರು 119 ಮಿಲಿಯನ್ ಜನರು ಭೂಕಂಪನಕ್ಕೆ ಸಿಲುಕಿದ್ದಾರೆ ಎಂದು EMSC ಟ್ವಿಟರ್‌ನಲ್ಲಿ ತಿಳಿಸಿದೆ, ಆದರೆ ಪಾಕಿಸ್ತಾನದಲ್ಲಿ ಯಾವುದೇ ಹಾನಿ ಅಥವಾ ಸಾವುನೋವುಗಳ ವರದಿ ಸಿಕ್ಕಿಲ್ಲ. EMSC ಭೂಕಂಪದ ತೀವ್ರತೆಯನ್ನು 6.1 ಎಂದಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಭೂಕಂಪದ ಫೋಟೋ, ವಿಡಿಯೋಗಳು ಹರಿದಾಡತ್ತಿವೆ.
#AfghanistanEarthQuake : at least 250 dead after 6.1 magnitude quake, state media says pic.twitter.com/hN6ooTaDB3
— Nizzam گلبرگہ (@NizzamSarkar) June 22, 2022
ಎರಡು ದಶಕಗಳ ಯುದ್ಧದ ನಂತರ ಅಮೆರಿಕಾ ನೇತೃತ್ವದ ಅಂತರಾಷ್ಟ್ರೀಯ ಪಡೆಗಳು ಹಿಂತೆಗೆದುಕೊಂಡ ಕಾರಣ, ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ಅಫ್ಘಾನಿಸ್ಥಾನವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದರ ನಡುವೆಯೇ ಈ ವಿಪತ್ತು ಸಂಭವಿಸಿದೆ.
ತಾಲಿಬಾನ್ ಆಕ್ರಮಿಸಿಕೊಂಡ ಬಳಿಕ, ಅನೇಕ ರಾಷ್ಟ್ರಗಳು ಅಫ್ಘಾನಿಸ್ಥಾನದ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ನಿರ್ಬಂಧಗಳನ್ನು ವಿಧಿಸಿದವು. ಜೊತೆಗೆ ಶತಕೋಟಿ ಡಾಲರ್ ಮೌಲ್ಯದ ಅಭಿವೃದ್ಧಿ ಸಹಾಯವನ್ನು ಕಡಿತಗೊಳಿಸಿದವು. ಆದರೂ, ವಿಶ್ವಸಂಸ್ಥೆಯಂತಹ ಅಂತರಾಷ್ಟ್ರೀಯ ಏಜೆನ್ಸಿಗಳು ಅಫ್ಘಾನಿಸ್ಥಾನದಲ್ಲಿ ಮಾನವೀಯ ನೆರವು ಮುಂದುವರೆಸಿವೆ. ಮಾನವೀಯ ನೆರವಿಗಾಗಿ ಭೂಕಂಪ ಪೀಡಿತ ಪ್ರದೇಶಕ್ಕೆ ತಂಡಗಳನ್ನು ಕಳುಹಿಸಲಾಗುತ್ತಿದೆ.
ಇದನ್ನೂ ಓದಿ: ಉದ್ಧವ್ ಸರ್ಕಾರಕ್ಕೆ ಸಂಕಷ್ಟ: ವಿಧಾನಸಭೆ ವಿಸರ್ಜನೆಯತ್ತ ರಾಜಕೀಯ ಬೆಳವಣಿಗೆ-ಸಂಜಯ್ ರಾವತ್ ಟ್ವೀಟ್