Homeಕರ್ನಾಟಕಪಠ್ಯಪುಸ್ತಕ ಮತ್ತು ದಲಿತ ಚಿಂತನೆಗಳ ಹೊರಗಿಡುವಿಕೆ

ಪಠ್ಯಪುಸ್ತಕ ಮತ್ತು ದಲಿತ ಚಿಂತನೆಗಳ ಹೊರಗಿಡುವಿಕೆ

- Advertisement -
- Advertisement -

ಭಾರತದ ಬಹುಸಂಖ್ಯಾತ ಮತೀಯವಾದವು ತನ್ನ ರಾಜಕೀಯ ಸಾಮಾಜಿಕ ಧಾರ್ಮಿಕ ಐಡಿಯಾಲಜಿಯನ್ನು ಹೇರಲು ಹೇಗೆ ಪಠ್ಯಪುಸ್ತಕಗಳನ್ನು ಪ್ರಮುಖ ಮಾಧ್ಯಮವಾಗಿಸಿಕೊಳ್ಳುತ್ತದೆ ಎಂಬುದು, ಈಚಿನ ಪಠ್ಯಪರಿಷ್ಕರಣೆಯ ಪ್ರಕರಣದಲ್ಲಿ ಸಾರ್ವಜನಿಕಗೊಂಡಿದೆ. ಈ ವಿವಾದದಲ್ಲಿ ಬಹಿರಂಗಗೊಂಡಿರುವ ಇನ್ನೊಂದು ಮುಖವೆಂದರೆ, ಅದು ಏನೆಲ್ಲವನ್ನು ಆಚೆಗಿಡುತ್ತದೆ ಅಥವಾ ಒಳಗೊಳ್ಳಲು ಅಳುಕುತ್ತದೆ ಎನ್ನುವುದು. ಅದು ಒಳಗೊಳ್ಳಲು ನಿರಾಕರಿಸುವ ಸಂಗತಿಗಳಲ್ಲಿ ಮುಸ್ಲಿಮರ ಕೊಡುಗೆ, ಸ್ತ್ರೀಸಮಾನತೆ
ಅಥವಾ ಲಿಂಗತಾರತಮ್ಯ ವಿರೋಧ, ಜಾತಿವಾದ ನಿರಾಕರಣೆ, ಸಮಾಜವಾದಿ ಆಶಯ ಹಾಗೂ ದಲಿತ ಚಿಂತನೆಗೆ ಸಂಬಂಧಿಸಿದವಾಗಿವೆ. ಈ ಟಿಪ್ಪಣಿಯಲ್ಲಿ ಕೊನೆಯ ಅಂಶದ ಬಗ್ಗೆ ಮಾತ್ರ ವಿಶ್ಲೇಷಿಸಲು ಯತ್ನಿಸಿದೆ.

ಇಲ್ಲಿ ದಲಿತ ಚಿಂತನೆಯೆಂದರೆ, ಜಾತಿಪದ್ಧತಿಯ ಕ್ರೌರ್ಯವನ್ನು ಕಾಣಿಸುವ, ದಲಿತರೇ ರೂಢಿಸಿಕೊಂಡಿರುವ ಭಾಷೆ, ಆಹಾರ, ಆಚರಣೆಗಳನ್ನು ಘನತೀಕರಿಸುವ; ಅಂಬೇಡ್ಕರ್ ಹಾಗೂ ಬೌದ್ಧಧಮ್ಮವನ್ನು ವಿಮೋಚನೆಯ ಹಾದಿಯೆಂದು ಕಾಣಿಸುವ ಆಶಯವುಳ್ಳ ಸಂಗತಿಗಳು. ತನ್ನ ಸಾಮಾಜಿಕ ರಾಜಕೀಯ ಬುನಾದಿಯ ವಿಸ್ತರಣೆಗಾಗಿ ದಲಿತರನ್ನು ಒಳಗೊಳ್ಳುವ, ಅವರಿಗೆ ಸ್ಥಾನಮಾನ ಕಲ್ಪಿಸುವ, ತನ್ನ ಸಿದ್ಧಾಂತದ ಪ್ರಚಾರಕ್ಕೆ ಬಳಸುವ ರಾಜಕಾರಣವನ್ನು ಮತೀಯವಾದವು ಸಮರ್ಥವಾಗಿ ಮಾಡಿಕೊಂಡು ಬಂದಿದೆ. ಅಂಬೇಡ್ಕರ್‌ವಾದದಲ್ಲಿ ರೂಪುಗೊಂಡ ದಲಿತ ನಾಯಕರನ್ನು ಕೂಡ ಒಳಗೊಂಡಿರುವುದು, ಅದರ ಸೈದ್ಧಾಂತಿಕ ತಂತ್ರಗಾರಿಕೆ ಮತ್ತು ರಾಜಕೀಯ ಯಶಸ್ಸಿನ ದೊಡ್ಡ ಸಾಧನೆಯಾಗಿದೆ. ಕಾಂಗ್ರೆಸ್ಸನ್ನು ಮತ್ತು ಮುಸ್ಲಿಮರನ್ನು ದುರುಳೀಕರಿಸಲು ಅಂಬೇಡ್ಕರ್ ಅವರು ನಿರ್ದಿಷ್ಟ ಚಾರಿತ್ರಿಕ ಸಂದರ್ಭದಲ್ಲಿ ಬರೆದ ಬರೆಹಗಳನ್ನು ತಂತ್ರಗಾರಿಕೆಯಿಂದ ಕೂಡ ವ್ಯಾಖ್ಯಾನಿಸುತ್ತಿದೆ. ಹಾಗಿದ್ದರೂ ಬಾಬಾಸಾಹೇಬರು ಪ್ರತಿಪಾದಿಸಿದ, ದಲಿತರ ವಿಮೋಚನೆಗೆ ಹಾದಿಹಾಸುವ ದಲಿತ ಚಿಂತನೆಯ ಮೇಲ್ಕಾಣಿಸಿದ ನಾಲ್ಕು ಅಂಶಗಳನ್ನು ಒಳಗೊಳ್ಳಲು ಅದು ಯಾಕೆ ಹಿಂಜರಿಯುತ್ತದೆ? ಯಾಕೆಂದರೆ, ಈ ನಾಲ್ಕು ಅಂಶಗಳು, ಹಿಂದುತ್ವದ ರಾಜಕಾರಣವನ್ನು, ಅರ್ಥಾತ್ ಅದರ ತಿರುಳಾದ ಬ್ರಾಹ್ಮಣವಾದವನ್ನು ಒಳಗಿನಿಂದಲೇ ಆಸ್ಫೋಟಿಸುತ್ತವೆ. ಹೀಗಾಗಿಯೇ ಅದು ಚೆನ್ನಣ್ಣ ವಾಲೀಕಾರರು ಬಾಬಾಸಾಹೇಬರ ಮೇಲೆ ಬರೆದ ಹಾಡನ್ನು ಕೈಬಿಟ್ಟಿದೆ. ಅರವಿಂದ ಮಾಲಗತ್ತಿಯವರ ಬುದ್ಧ ಮತ್ತು ಆತನ ಧಮ್ಮವನ್ನು ಕುರಿತ ಹಾಡನ್ನು ಹೊರಗಿಟ್ಟಿದೆ. ಬಸವಣ್ಣ ಅಂಬೇಡ್ಕರ್ ಬುದ್ಧ ಕುವೆಂಪು ಭಗತ್‌ಸಿಂಗ್ ಕುರಿತ ಅದರ ಆಳದಲ್ಲಿರುವ ಈ ಅಳುಕು ಮತ್ತು ಆತಂಕಗಳು, ಅದು ಮುಸ್ಲಿಮರ ಕ್ರೈಸ್ತರ ವಿರೋಧಿ ಎಂಬ ಜನಪ್ರಿಯ ಮಿಥ್ಯೆಯನ್ನು ಒಡೆದುಹಾಕಿವೆ. ಅದು ಕಟ್ಟಲಿರುವ ಸಮಾಜದಲ್ಲಿ ಮತ್ತು ದೇಶದಲ್ಲಿ ಯಾವೆಲ್ಲ ಸಂಗತಿಗಳು ಇರುತ್ತವೆ ಮತ್ತು ಇರುವುದಿಲ್ಲ ಎಂಬುದರ ಮುನ್ನೋಟವನ್ನು ಒದಗಿಸಿವೆ. ಆದ್ದರಿಂದ ಪರಿಷ್ಕೃತ ಪಠ್ಯಗಳು, ಮತೀಯವಾದಿ ಭಾರತದ ಪರಿಕಲ್ಪನೆಯಲ್ಲಿ (ಐಡಿಯಾ ಆಫ್ ಇಂಡಿಯಾ) ಯಾವೆಲ್ಲ ಮೌಲ್ಯಗಳ ಹೇರಿಕೆಯಾಗುತ್ತದೆ, ಯಾವನ್ನು ಬದಿಗೆ ಸರಿಸಲಾಗುತ್ತದೆ ಮತ್ತು ಯಾವನ್ನು ಮರೆಮಾಚಲಾಗುತ್ತದೆ ಎಂಬುದರ ಪ್ರಾತ್ಯಕ್ಷಿತೆಗಳಾಗಿವೆ. ಈ ಹಿನ್ನೆಲೆಯಲ್ಲಿ ಮತೀಯ ನಂಜಿನ ಪಠ್ಯಪುಸ್ತಕಗಳನ್ನು ಪ್ರತಿರೋಧಿಸುವ ಚಳವಳಿಯಲ್ಲಿ, ಬಸವ, ಕುವೆಂಪು, ಬುದ್ಧ ಮತ್ತು ಅಂಬೇಡ್ಕರ್ ನದಿಗಳು ಕೂಡಿರುವುದು ಆಕಸ್ಮಿಕವಾಗಿಲ್ಲ. ಈ ಪ್ರತಿರೋಧದ ಆಂದೋಲನವನ್ನು ದೇವನೂರರು ತಮ್ಮ ಪಠ್ಯ ಹಿಂತೆಗೆಯುವ ಮೂಲಕ ಆರಂಭಿಸಿರುವುದು ಕೂಡ ಆಕಸ್ಮಿಕವಾಗಿಲ್ಲ.


ಇದನ್ನೂ ಓದಿ: ಒಳಗೊಳ್ಳದ ಮಾದರಿಯ ಸರ್ಕಾರಕ್ಕೆ ವಿದೇಶದಿಂದ ಬಂದೊದಗಿದ ಘಾಸಿ

ಇದನ್ನೂ ಓದಿ: ಪಠ್ಯ ಪರಿಶೀಲಿಸಿದ ಸಮಿತಿಯ ಸದಸ್ಯರ್‍ಯಾರೂ ಪ್ರತಿಕ್ರಿಯೆಗೆ ಸಿದ್ಧರಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐಎಎಸ್ ಅಧಿಕಾರಿ ಮಾನನಷ್ಟ ಮೊಕದ್ದಮೆ ಪ್ರಕರಣ: ಎನ್‌ಟಿವಿ ಸಂಪಾದಕ, ಇಬ್ಬರು ಪತ್ರಕರ್ತರ ಬಂಧನ

ತೆಲಂಗಾಣ ಸರ್ಕಾರದ ರಸ್ತೆ ಮತ್ತು ಕಟ್ಟಡಗಳ ಸಚಿವ ಕೋಮತಿರೆಡ್ಡಿ ವೆಂಕಟ್ ರೆಡ್ಡಿ ಹಾಗೂ ಮಹಿಳಾ ಐಎಎಸ್ ಅಧಿಕಾರಿ ಅವರ ಕುರಿತು ವಿವಾದಾತ್ಮಕ ಸುದ್ದಿ ವರದಿಗೆ ಸಂಬಂಧಿಸಿದಂತೆ, ಹೈದರಾಬಾದ್ ಕೇಂದ್ರ ಅಪರಾಧ ಠಾಣೆ...

ಇರಾನ್: ಪ್ರತಿಭಟನಾಕಾರರ ಮೇಲೆ ನಡೆದ ದಮನ ಕಾರ್ಯಾಚರಣೆಯಲ್ಲಿ ಸಾವಿನ ಸಂಖ್ಯೆ 2571ಕ್ಕೆ ಏರಿಕೆ 

ಇರಾನ್‌ನಲ್ಲಿ ಪ್ರತಿಭಟನೆಗಳ ಮೇಲೆ ನಡೆದ ದಮನ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಕನಿಷ್ಠ 2,571 ಕ್ಕೆ ಏರಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಬುಧವಾರ ತಿಳಿಸಿದ್ದಾರೆ. ಈ ಅಂಕಿ ಅಂಶವು ಅಮೆರಿಕ ಮೂಲದ ಮಾನವ ಹಕ್ಕುಗಳ...

ಕಾಂಗ್ರೆಸ್‌ ಮುಖಂಡನ ಗೂಂಡಾವರ್ತನೆ : ಫ್ಲೆಕ್ಸ್‌ ತೆರವುಗೊಳಿಸಿದ್ದಕ್ಕೆ ಪೌರಾಯುಕ್ತೆಗೆ ಧಮ್ಕಿ, ಅವಾಚ್ಯ ಶಬ್ದಗಳಿಂದ ನಿಂದನೆ

ಸಚಿವ ಝಮೀರ್ ಅಹ್ಮದ್ ಅವರ ಮಗ ಝೈದ್ ಖಾನ್ ನಟನೆಯ 'ಕಲ್ಟ್' ಸಿನಿಮಾದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ ವಿಚಾರವಾಗಿ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ, ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ. ಅಮೃತಗೌಡ ಅವರೊಂದಿಗೆ ಗೂಂಡಾವರ್ತನೆ...

ಹಿಂದಿ ಶೈಕ್ಷಣಿಕ ಪದ್ಧತಿ ಹೇರಿಕೆಯಿಂದ ಉತ್ತರದ ಜನರಿಂದ ದಕ್ಷಿಣಕ್ಕೆ ವಲಸೆ: ಮಾರನ್

ಇಂಗ್ಲಿಷ್ ಶಿಕ್ಷಣವನ್ನು ನಿರುತ್ಸಾಹಗೊಳಿಸುತ್ತಾ, ವಿದ್ಯಾರ್ಥಿಗಳು ಹಿಂದಿ ಮಾತ್ರ ಕಲಿಯಲು ಪ್ರೋತ್ಸಾಹಿಸುತ್ತಿದ್ದಾರೆ. ಉತ್ತರ ರಾಜ್ಯಗಳ ಈ ನೀತಿಗಳಿಂದ ಉದ್ಯೋಗ ಸಿಗದೆ ದಕ್ಷಿಣದ ರಾಜ್ಯಗಳಿಗೆ ವಲಸೆ ಬರುತ್ತಿದ್ದಾರೆ ಎಂದು ಡಿಎಂಕೆ ಸಂಸದ ದಯಾನಿಧಿ ಮಾರನ್ ಉತ್ತರ...

ಚಿಕ್ಕಮಗಳೂರು| ದಲಿತರ ಜಮೀನಿಗೆ ನುಗ್ಗಿ ಬೆಳೆ ನಾಶ; ಪ್ರಬಲ ಜಾತಿ ಜನರಿಂದ ವಿನಾಕಾರಣ ತೊಂದರೆ

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿಯ ಸತ್ತಿಹಳ್ಳಿ ಗ್ರಾಮದ ದಲಿತ ಸಮುದಾಯದ ರೈತರಿಗೆ ಅದೇ ಊರಿನ ಪ್ರಬಲ ಜಾತಿಗೆ ಸೇರಿದ ಜನರು ವಿನಾಕಾರಣ ತೊಂದರೆ ನಿಡುತ್ತಿದ್ದು, ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿದ್ದಾರೆ ಎಂಬ...

ಎಲ್‌ಡಿಎಫ್‌ನ ‘ಕೇರಳಂ’ ಮರುನಾಮಕರಣ ಕ್ರಮ ಬೆಂಬಲಿಸಿದ ರಾಜ್ಯ ಬಿಜೆಪಿ; ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಮನವಿ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೇರಳ ಘಟಕವು, ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್‌) ಸರ್ಕಾರದ 'ಕೇರಳಂ' ಮರುನಾಕರಣ ಪ್ರಸ್ತಾವನೆಯನ್ನು ಬೆಂಬಲಿಸಿದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮಧ್ಯಸ್ಥಿಕೆ ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಲ್ಲಿ...

ರಾಯಚೂರು ಕೃಷಿ ವಿವಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ತಡೆಗೆ ಸಂಚು ಆರೋಪ: ನಿಗದಿತ ದಿನಾಂಕದಂದು ಪರೀಕ್ಷೆ ನಡೆಸಲು ಒತ್ತಾಯ 

ಬೆಂಗಳೂರು: ರಾಯಚೂರು ಕೃಷಿ ವಿವಿಯಲ್ಲಿನ 75 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ನಿಗದಿತ ದಿನಾಂಕಗಳಾದ ಜನವರಿ.17 ಮತ್ತು ಜನವರಿ.18ರಂದೇ ನಡೆಸಬೇಕು. ಪಟ್ಟಭದ್ರ ಹಿತಾಸಕ್ತಿಗಳ ಒತ್ತಾಯಕ್ಕೆ ಮಣಿದು ಪರೀಕ್ಷೆಯನ್ನು ಮುಂದೂಡಬಾರದು ಎಂದು ಅಭ್ಯರ್ಥಿಗಳು...

ಸಂಭಾಲ್ ಹಿಂಸಾಚಾರ ಪ್ರಕರಣ : ಹಿರಿಯ ಅಧಿಕಾರಿಗಳು ಸೇರಿ 12 ಪೊಲೀಸ್ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ

2024ರ ನವೆಂಬರ್‌ನಲ್ಲಿ ಶಾಹಿ ಜಾಮಾ ಮಸೀದಿ ಬಳಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪಾತ್ರವಿದೆ ಎಂಬ ಆರೋಪದ ಮೇಲೆ ಹಿರಿಯ ಅಧಿಕಾರಿಗಳು ಸೇರಿದಂತೆ 12 ಪೊಲೀಸ್ ಸಿಬ್ಬಂದಿಯ ವಿರುದ್ಧ ಕ್ರಿಮಿನಲ್...

ಪಿಎಂ ಕೇರ್ಸ್ ನಿಧಿಗೆ ಆರ್‌ಟಿಐ ಕಾಯ್ದೆಯಡಿ ಗೌಪ್ಯತೆಯ ಹಕ್ಕಿದೆ : ದೆಹಲಿ ಹೈಕೋರ್ಟ್

ಪಿಎಂ ಕೇರ್ಸ್ ನಿಧಿಯು ಕಾನೂನು ಅಥವಾ ಸರ್ಕಾರಿ ಘಟಕವಾಗಿದ್ದರೂ, ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಗೌಪ್ಯತೆಯ ಹಕ್ಕನ್ನು ನಿರಾಕರಿಸಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಮಂಗಳವಾರ (ಜ.13) ಮೌಖಿಕವಾಗಿ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು...

ಬಿಜೆಪಿ-ಆರ್‌ಎಸ್‌ಎಸ್‌ ನಾಯಕರನ್ನು ಭೇಟಿಯಾದ ಚೀನಾ ಕಮ್ಯುನಿಸ್ಟ್ ಪಕ್ಷದ ನಿಯೋಗ

ಗಾಲ್ವಾನ್ ಘರ್ಷಣೆಯ ನಂತರ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಚೀನಾದ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ನಿಯೋಗ ಬಿಜೆಪಿ-ಆರ್‌ಎಸ್‌ಎಸ್‌ ನಾಯಕರನ್ನು ಭೇಟಿ ಮಾಡಿದೆ ಎಂದು ವರದಿಯಾಗಿದೆ. ಸೋಮವಾರ (ಜ.12) ನವದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ...