ಇಲ್ಲಿನ ಮುಸಲ್ಮಾನರನ್ನು ವಿಭಜಿಸಲು ಹೈದರಾಬಾದ್‌ನಿಂದ ಒಂದು ಪಕ್ಷವನ್ನು ಕರೆತರಲು ಬಿಜೆಪಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ ಎಐಎಂಐಎಂ ಮುಖಂಡ ಅಸದುದ್ದೀನ್ ಓವೈಸಿ “ಓವೈಸಿಯನ್ನು ಹಣದಿಂದ ಖರೀದಿಸಬಲ್ಲ ವ್ಯಕ್ತಿ ಇನ್ನೂ ಹುಟ್ಟಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೈತ ವಿರೋಧಿ ಶಾಸನಗಳು ಮತ್ತು ಬಿಜೆಪಿಯ ಹತ್ತು ಸುಳ್ಳುಗಳು: ಶಿವಸುಂದರ್
“ಅಸದುದ್ದೀನ್ ಓವೈಸಿಯನ್ನು ಹಣದಿಂದ ಖರೀದಿಸಬಲ್ಲ ವ್ಯಕ್ತಿ ಹುಟ್ಟಿಲ್ಲ. ಆಕೆಯ ಆರೋಪ ಆಧಾರರಹಿತವಾಗಿದ್ದು, ಅವರು ಚಡಪಡಿಸುತ್ತಿದ್ದಾರೆ. ಅವರು ತನ್ನ ಸ್ವಂತ ಮನೆಯ ಬಗ್ಗೆ ಚಿಂತಿಸಬೇಕು. ಅವರ ಅನೇಕ ಜನರು ಬಿಜೆಪಿಗೆ ಹೋಗುತ್ತಿದ್ದಾರೆ. ನಮಗೆ ಮತ ಹಾಕಿದ ಬಿಹಾರದ ಮತದಾರರನ್ನು ಅವರು ಅವಮಾನಿಸಿದ್ದಾರೆ” ಎಂದು ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹಾದ್-ಉಲ್-ಮುಸ್ಲೀಮೀನ್ (ಎಐಐಎಂಐಎಂ) ಮುಖಂಡ ಓವೈಸಿ ಹೇಳಿದರು.
ಓವೈಸಿ ಅವರ ಪಕ್ಷವು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಿದ ನಂತರ ಮುಂದಿನ ವರ್ಷದ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ.
ಇದನ್ನೂ ಓದಿ: ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ: ಎಡಪಕ್ಷಗಳ ಒಕ್ಕೂಟಕ್ಕೆ ಮುನ್ನಡೆ
ಪಶ್ಚಿಮ ಬಂಗಾಳದ ಗಡಿಯಲ್ಲಿರುವ ಬಿಹಾರದ ಮುಸ್ಲಿಂ ಪ್ರಾಬಲ್ಯದ ಸೀಮಾಂಚಲ್ ಪ್ರದೇಶದಲ್ಲಿ ಎಐಎಂಐಎಂ ಐದು ಸ್ಥಾನಗಳನ್ನು ಗೆದ್ದುಕೊಂಡಿತ್ತು.
“ಮುಸ್ಲಿಂ ಮತಗಳನ್ನು ವಿಭಜಿಸಲು, ಹೈದರಾಬಾದ್‌ನಿಂದ ಒಂದು ಪಕ್ಷವನ್ನು ತರಲು ಬಿಜೆಪಿ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಬಿಜೆಪಿ ಹಿಂದೂ ಮತಗಳನ್ನು ಪಡೆಯುತ್ತದೆ ಮತ್ತು ಈ ಹೈದರಾಬಾದ್ ಪಕ್ಷವು ಮುಸ್ಲಿಂ ಮತಗಳನ್ನು ಪಡೆಯುತ್ತದೆ ಎಂಬುದು ಅವರ ಯೋಜನೆಯಾಗಿದೆ. ಇತ್ತೀಚಿನ ಬಿಹಾರ ಚುನಾವಣೆಗಳಲ್ಲಿ ಈ ಪಕ್ಷವು ಬಿಜೆಪಿಯ ಬಿ-ತಂಡವಾಗಿದೆ” ಎಂದು ಮಮತಾ ಬ್ಯಾನರ್ಜಿ ಮಂಗಳವಾರ ಹೇಳಿದ್ದರು.
ಇದನ್ನೂ ಓದಿ: ಸಿದ್ದಾಂತ ಹೊಂದಿಕೆಯಾದರೆ ರಜನಿಕಾಂತ್ ಜೊತೆ ಮೈತ್ರಿಗೆ ಸಿದ್ದ: ಕಮಲ್ ಹಾಸನ್
ಮುಂದಿನ ವರ್ಷ ಬಂಗಾಳದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಓವೈಸಿ ಘೋಷಿಸಿದಾಗ, ಈ ಕ್ರಮವು ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸಬಹುದು ಮತ್ತು ತೃಣಮೂಲ ಕಾಂಗ್ರೆಸ್‌ಗೆ ಹೊಡೆತ ನೀಡಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು.
ಮುಂದಿನ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದ 294 ಕ್ಷೇತ್ರಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ನಾವು ಹಿಂದುತ್ವವನ್ನು ಇನ್ನೂ ಬಿಟ್ಟು ಕೊಟ್ಟಿಲ್ಲ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ



ಬಿ.ಜೆ.ಪಿ.ಯ ವಿರೋಧಿ ಮತಗಳು ವಿಭಜನೆ ಆಗಬಾರದು ಎಂಬ ವಿವೇಕ ಎಲ್ಲಾ ವಿರೋಧ ಪಕ್ಷದವರಲ್ಲಿಯೂ ಇರಬೇಕು.
ಎಲ್ಲಾ ರಾಜ್ಯಗಳ ಚುನಾವಣೆಯಲ್ಲಿ ಇದೇ ಗಿಮಿಕ್ ನಿಂದ BJP ಗೆಲ್ಲುತ್ತಿರುವುದು…
BJP” B ” TEAM ಈ MIM..
ಕರೆಕ್ಟ್.