Homeಮುಖಪುಟಪ್ರಸ್ತುತ ಕೇಂದ್ರದ ಒಟ್ಟು ಸಾಲ 155.8 ಲಕ್ಷ ಕೋಟಿ ರೂ.!; ಮೋದಿ ಅಧಿಕಾರವಧಿಯಲ್ಲೇ 100ಲಕ್ಷ ಕೋಟಿ...

ಪ್ರಸ್ತುತ ಕೇಂದ್ರದ ಒಟ್ಟು ಸಾಲ 155.8 ಲಕ್ಷ ಕೋಟಿ ರೂ.!; ಮೋದಿ ಅಧಿಕಾರವಧಿಯಲ್ಲೇ 100ಲಕ್ಷ ಕೋಟಿ ಹೆಚ್ಚಳ

- Advertisement -
- Advertisement -

2023ರ ಮಾರ್ಚ್‌ 31ರ ಹೊತ್ತಿಗೆ ಕೇಂದ್ರ ಸರ್ಕಾರದ ಒಟ್ಟು ಸಾಲದ ಮೊತ್ತವು 155.8 ಲಕ್ಷ ಕೋಟಿ ರೂ. (ದೇಶದ ಜಿಡಿಪಿಯ ಶೇಕಡ 57.3ರಷ್ಟು ) ಎಂದು ಅಂದಾಜು ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಸಭೆಗೆ ತಿಳಿಸಿದ್ದಾರೆ.

ಒಟ್ಟು ಸಾಲದ ಮೊತ್ತದಲ್ಲಿ ವಿದೇಶಿ ಸಾಲದ ಮೊತ್ತವು ಸದ್ಯ ಇರುವ ವಿನಿಮಯ ದರದ ಆಧಾರದಲ್ಲಿ 7.03 ಲಕ್ಷ ಕೋಟಿ ರೂ. (ಜಿಡಿಪಿಯ ಶೇ 2.6) ಆಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಒಟ್ಟು ಸಾಲದಲ್ಲಿ ವಿದೇಶಿ ಸಾಲದ ಪ್ರಮಾಣವು ಶೇ 4.5ರಷ್ಟು (ಜಿಡಿಪಿಯ 3%) ಇದೆ ಎಂದು ಅವರು ಹೇಳಿದ್ದಾರೆ.

ವಿದೇಶಿ ಸಾಲವನ್ನು ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಏಜೆನ್ಸಿಗಳು ರಿಯಾಯಿತಿ ದರದಲ್ಲಿ ಹಣಕಾಸು ಒದಗಿಸುತ್ತವೆ, ಆದ್ದರಿಂದ ಯಾವುದೇ ಅಪಾಯವಿಲ್ಲದೇ ಸುರಕ್ಷಿತ ಮತ್ತು ವಿವೇಕಯುತವಾಗಿದೆ ಎಂದು ಉತ್ತರದಲ್ಲಿ ಹೇಳಲಾಗಿದೆ.

ವಿದೇಶಿ ಹೂಡಿಕೆಯ ಮೂಲಗಳನ್ನು ವಿಸ್ತರಿಸಲು ಆರ್‌ಬಿಐನ ಸಲಹೆಯ ಮೇರೆಗೆ ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ವಿನಿಮಯ ದರದಲ್ಲಿನ ಏರಿಳಿತ ಮತ್ತು ಜಾಗತಿಕ ಪರಿಣಾಮಗಳನ್ನು ನಿಭಾಯಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪೂರ್ವಾನುಮತಿ ಇಲ್ಲದೇ ಪಡೆಯುವ ವಿದೇಶಿ ವಾಣಿಜ್ಯ ಸಾಲದ ಮಿತಿಯನ್ನು 1.5 ಬಿಲಿಯನ್‌ ಡಾಲರ್‌ಗೆ ಹೆಚ್ಚಿಸಲಾಗಿದೆ ಎಂದು ನಿರ್ಮಲಾ ತಿಳಿಸಿದ್ದಾರೆ.

ಮೋದಿ ಅಧಿಕಾರಕ್ಕೂ ಮುಂಚೆ ದೇಶದ ಸಾಲ ಎಷ್ಟು?

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುಂಚೆ 2014 ರಲ್ಲಿ ದೇಶದ ಒಟ್ಟು ಸಾಲ ರೂ.55.8 ಲಕ್ಷ ಕೋಟಿ ರೂ. ಇತ್ತು. ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಲ್ಲಿಯವರೆಗೆ ಒಟ್ಟು ದೇಶದ ಇಂದಿನ ಸಾಲ 155.8 ಲಕ್ಷ ಕೋಟಿ ರೂ. ತಲುಪಿದೆ. 

ಕೇವಲ ಒಂಬತ್ತು ವರ್ಷಗಳ ಅವಧಿಯಲ್ಲಿ ದೇಶದ ಸಾಲ ಸರಿಸುಮಾರು ಮೂರುಪಟ್ಟು ಹೆಚ್ಚಾಗಿದೆ. ಅಂದರೆ ಮೋದಿ ಅಧಿಕಾರ ಅವಧಿಯಲ್ಲೇ ದೇಶದ ಸಾಲ 10೦ ಲಕ್ಷ ಕೋಟಿ ರೂ. ಹೆಚ್ಚಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಮಹಾಲಕ್ಷಿ ಮತ್ತು ಮೆಟ್ರೋ’: ತೆಲಂಗಾಣ ಸರ್ಕಾರ-ಎಲ್‌&ಟಿ ನಡುವೆ ಜೋರಾದ ಜಟಾಪಟಿ

0
ಹೈದರಾಬಾದ್ ಮಹಾನಗರ ಮೆಟ್ರೋ ಸೇವೆ ಸೇರಿದಂತೆ ತೆಲಂಗಾಣ ರಾಜ್ಯದ ಹಲವು ಬೃಹತ್ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆ ಮಾಡುತ್ತಿರುವ 'ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ)' ಕಂಪನಿ ಮತ್ತು ರಾಜ್ಯ ಸರ್ಕಾರದ...