Homeಮುಖಪುಟಮುಂಬೈನ 3% ವಿಚ್ಛೇದನಕ್ಕೆ ಟ್ರಾಫಿಕ್ ಕಾರಣ!: ಮಾಜಿ ಸಿಎಂ ಪತ್ನಿ ಅಮೃತ ಫಡ್ನವಿಸ್‌‌‌ ವಿಚಿತ್ರ ಹೇಳಿಕೆ

ಮುಂಬೈನ 3% ವಿಚ್ಛೇದನಕ್ಕೆ ಟ್ರಾಫಿಕ್ ಕಾರಣ!: ಮಾಜಿ ಸಿಎಂ ಪತ್ನಿ ಅಮೃತ ಫಡ್ನವಿಸ್‌‌‌ ವಿಚಿತ್ರ ಹೇಳಿಕೆ

- Advertisement -
- Advertisement -

ಮೂರು ಶೇಕಡಾ ವಿಚ್ಛೇದನ ಮುಂಬೈ ನಗರದ ಟ್ರಾಫಿಕ್‌ನಿಂದಾಗಿಯೆ ನಡೆಯುತ್ತದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಶನಿವಾರ ಹೇಳಿದ್ದಾರೆ. ರಾಜ್ಯದ ರಾಜಧಾನಿಯಲ್ಲಿನ ರಸ್ತೆಗಳ ಸ್ಥಿತಿ ಮತ್ತು ಟ್ರಾಫಿಕ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಚಿತ್ರವಾದ ಹೇಳಿಕೆಯನ್ನು ನೀಡಿದ್ದಾರೆ.

ಅಮೃತಾ ಅವರ ಹೇಳಿಕೆಯನ್ನು ಪರೋಕ್ಷವಾಗಿ ಟೀಕಿಸಿರುವ ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ, “ಇದು ದಿನದ ಅತ್ಯುತ್ತಮ ತರ್ಕ” ಎಂದು ವ್ಯಂಗ್ಯವಾಡಿದ್ದಾರೆ. ಅಮೃತಾ ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗಳು ಪ್ರಾರಂಭವಾಗಿದೆ.

ಇದನ್ನೂ ಓದಿ: ನಮ್ಮನ್ನು ಮೊದಲು ಸಂಪರ್ಕಿಸಿದ್ದು ಅಜಿತ್‌ ಪವಾರ್‌, ಅವರೇಳಿದ ಅರ್ಧ ಸತ್ಯವನ್ನು ನಂಬಿದ್ದೆವು: ಫಡ್ನವಿಸ್‌

“ಮುಂಬೈನಲ್ಲಿ ಮೂರು ಪ್ರತಿಶತದಷ್ಟು ವಿಚ್ಛೇದನಗಳು ಟ್ರಾಫಿಕ್ ಜಾಮ್‌ನಿಂದ ಉಂಟಾಗುತ್ತವೆ ಎಂದು ನಿಮಗೆ ತಿಳಿದಿದೆಯೇ?. ಯಾಕೆಂದರೆ ಜನರು ತಮ್ಮ ಕುಟುಂಬದೊಂದಿಗೆ ಸಮಯವನ್ನು ವಿನಿಯೋಗಿಸಲು ಸಾಧ್ಯವಾಗುತ್ತಿಲ್ಲ” ಎಂದು ಅಮೃತಾ ಫಡ್ನವಿಸ್‌ ಹೇಳಿದ್ದಾರೆ.

ರಸ್ತೆಗಳಲ್ಲಿನ ಗುಂಡಿಗಳಿಂದ ಮತ್ತು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿರುವುದರಿಂದ ವೈಯಕ್ತಿಕವಾಗಿ ತೊಂದರೆಗೊಳಗಾಗಿದ್ದೇನೆ ಎಂದು ಫಡ್ನವಿಸ್ ಹೇಳಿದ್ದಾರೆ.

“ನಾನು ದೇವೇಂದ್ರ ಫಡ್ನವೀಸ್ ಅವರ ಪತ್ನಿ ಎಂಬುದನ್ನು ಮರೆತುಬಿಡಿ. ನಾನು ಮಹಿಳೆಯಾಗಿ ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ರಸ್ತೆಗಳ ಹೊಂಡಗಳು ಮತ್ತು ಟ್ರಾಫಿಕ್ ನಮಗೆ ಎಷ್ಟೊಂದು ತೊಂದರೆ ನೀಡುತ್ತದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 40,000 ಕೋಟಿ ರೂ ಉಳಿಸಲು ಫಡ್ನವಿಸ್‌ ಸಿಎಂ ಆದರು ಎಂದ ಅನಂತ್‌ ಕುಮಾರ್ ಹೆಗಡೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಮಾಜಿ ಮುಖ್ಯಮಂತ್ರಿ ಅವರ ಪತ್ನಿಯ ಹೆಸರನ್ನು ಬಳಸದೆ ಲೇವಡಿ ಮಾಡಿದ್ದಾರೆ. ಇವರ ಪ್ರತಿಪಾದನೆಯನ್ನು ಬೆಂಗಳೂರಿನ ಕುಟುಂಬಗಳು ಓದಬೇಡಿ ಎಂದು ಅವರು ಹೇಳಿದ್ದಾರೆ.

‘“ಈ ದಿನದ ಅತ್ಯುತ್ತಮ ‘ಇಲ್ಲಾಜಿಕ್’ ಪ್ರಶಸ್ತಿಯು 3% ಮುಂಬೈ ಜನತೆ ರಸ್ತೆಗಳಲ್ಲಿನ ಟ್ರಾಫಿಕ್‌ನಿಂದಾಗಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಹೇಳುವ ಮಹಿಳೆಗೆ ಸಲ್ಲುತ್ತದೆ. ದಯವಿಟ್ಟು ಮನಸ್ಸಿಗೆ ತೊಂದರೆ ತೆಗೆದುಕೊಳ್ಳುವುದಕ್ಕಿಂತ ರಜೆಯ ವಿರಾಮ ತೆಗೆದುಕೊಳ್ಳಿ. ದಯವಿಟ್ಟು ಇವರ ಪ್ರತಿಪಾದನೆಯನ್ನು ಬೆಂಗಳೂರಿನ ಕುಟುಂಬಗಳು ಓಡಬೇಡಿ, ಇದು ನಿಮ್ಮ ಮದುವೆಗೆ ಮಾರಕವಾಗಬಹುದು” ಎಂದು ಪ್ರಿಕಾಂ ಚತುರ್ವೇದಿ ಅವರು ನಗುವ ಎಮೋಜಿಯೊಂದಿಗೆ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಗೋವಾ BJP ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಪರಿಕ್ಕರ್‌ ಮಗನಿಗೆ ಪಣಜಿಯಿಂದ ಟಿಕೆಟ್ ನಿರಾಕರಣೆ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...