Homeಕರ್ನಾಟಕಮಹಾಧರಣಿ: ಜನದ್ರೋಹಿ ಕೇಂದ್ರ ಸರ್ಕಾರ, ಜಗಮೊಂಡ ರಾಜ್ಯ ಸರ್ಕಾರ: ನೂರ್ ಶ್ರೀಧರ್

ಮಹಾಧರಣಿ: ಜನದ್ರೋಹಿ ಕೇಂದ್ರ ಸರ್ಕಾರ, ಜಗಮೊಂಡ ರಾಜ್ಯ ಸರ್ಕಾರ: ನೂರ್ ಶ್ರೀಧರ್

- Advertisement -
- Advertisement -

ಜನದ್ರೋಹಿ ಕೇಂದ್ರ ಸರ್ಕಾರ, ಜಗಮೊಂಡ ರಾಜ್ಯ ಸರ್ಕಾರಗಳಿವೆ. ಕೇಂದ್ರ ಸರ್ಕಾರ ಜನ ವಿರೋಧಿ ನೀತಿಗಳ ಮೂಲಕ ಜನರನ್ನು ಶೋಷಿಸುತ್ತಿದೆ. ಬಿಜೆಪಿಯನ್ನು ಮಣಿಸಿ ಜನರು ಅಧಿಕಾರಕ್ಕೆ ತಂದ ರಾಜ್ಯ ಸರ್ಕಾರ ಜನರ ಮಾತಿಗೆ ಕಿವಿಗೊಡದೆ ಮೊಂಡುತನ ಮೆರೆಯುತ್ತಿದೆ ಎಂದು ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಹೇಳಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ‘ದುಡಿಯುವ ಜನರ ಮಹಾಧರಣಿ’ಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಭ್ರಷ್ಟಾಚಾರ ಮಾಡುತ್ತಿದೆ ಎಂದು ಮೋದಿಗೆ ಅಧಿಕಾರ ಕೊಟ್ಟೆವು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದರೆ ಯುವಜನರಿಗೆ ಉದ್ಯೋಗ ಸಿಗುತ್ತದೆ, ಕೃಷಿಗೆ ಬೆಂಬಲ ಬೆಲೆ ಸಿಗುತ್ತದೆ ಎಂದು ಜನರಿಗೆ ಉತ್ತಮ ಜೀನನ ಸಿಗುತ್ತದೆ ಎಂದು ನಾವು ಅವರಿಗೆ ಮತ ಹಾಕಿದೆವು. ಅದರೆ, ಆಗಿದ್ದೇನು? ಜನರು ಮತ್ತಷ್ಟು ಬಡವರಾದರು. ಅಂಬಾನಿ-ಅದಾನಿಗಳು ಮತ್ತಷ್ಟು ಶ್ರೀಮಂತರಾದರು. ಕೊರೊನಾ ಸಂದರ್ಭದಲ್ಲೂ ಜನರನ್ನು ಶೋಷಿಸಲಾಯಿತು” ಎಂದು ತಿಳಿಸಿದರು.

ಕೊರೊನಾ ಸಂದರ್ಭದಲ್ಲೂ ಜಗ್ಗದೆ ಹೋರಾಟ ಮಾಡಿದವರು ರೈತರು. ಅವರ ಹೋರಾಟಕ್ಕೆ ಮೋದಿ ಸರ್ಕಾರ ಮಣಿಯಿತು. ರೈತ ವಿರೋಧಿ ಕೃಷಿ ನೀತಿಗಳನ್ನು ಹಿಂಪಡೆಯಿತು. ಆದರೆ, ಕಾರ್ಮಿಕರು ಅಂತದ್ದೊಂದು ಹೋರಾಟ ಮಾಡಲು ಸಾಧ್ಯವಿಲ್ಲ. ಅದರೂ, ಸರ್ಕಾರಕ್ಕೆ ತಕ್ಕ ಪಾಠ ಕಲಿಸಬಹುದು. ಹಾಗಾಗಿ, ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಿದೆವು. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಿತು. ಆದರೆ, ಈ ಸರ್ಕಾರ ಏನು ಮಾಡುತ್ತಿದೆ? ರೈತರು, ಕಾರ್ಮಿಕರು, ದಲಿತರ ಜೊತೆ ಒಂದೇ ಒಂದು ಸಭೆಯನ್ನೂ ಮಾಡಲಿಲ್ಲ. ಯಾರ ಸಮಸ್ಯೆಗಳನ್ನೂ ಕೇಳಲಿಲ್ಲ. ಈ ಆಳುವವರಿಗೆ ಸರಿಯಾದ ಪಾಠ ಕಲಿಸಬೇಕಿದೆ. ನಾವು ಕೇಂದ್ರ ಸರ್ಕಾರದ ವಿರುದ್ಧ ಏನು ಮಾಡಬೇಕು. ರಾಜ್ಯ ಸರ್ಕಾರಕ್ಕೆ ಪಾಠ ಕಲಿಸಲು ಏನು ಮಾಡಬೇಕು ಎಂಬ ಬಗ್ಗೆ ನಿರ್ಧಾರ ಮಾಡಬೇಕಿದೆ” ಎಂದು ಹೇಳಿದರು.

ನಾವು ಯಾಕೆ ಇಲ್ಲಿ ಹೋರಾಟ ಮಾಡ್ತಿದ್ದೀವಿ? ರಾಜ್ಯದ ಮೂಲೆ ಮೂಲೆಯಿಂದ ಕೆಲಸ, ಕಾರ್ಯ ಬಿಟ್ಟು ಬೆಂಗಳೂರಿಗೆ ಬಂದು ಯಾಕೆ ಕೂತಿದ್ದೀವಿ? ಬಗರ್‌ಹುಕುಂ ಭೂಮಿಗಾಗಿ, ನಿವೇಶನಕ್ಕಾಗಿ, ವಸತಿಗಾಗಿ, ವೇತನ ಹೆಚ್ಚಳಕ್ಕಾಗಿ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯಾಗಿ, ಮಹಿಳೆಯರ ರಕ್ಷಣೆಗಾಗಿ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳನ್ನ ಹೊತ್ತು ಇಲ್ಲಿಗೆ ಬಂದಿದ್ದೇವೆ. ಈ ಸಮಸ್ಯೆಗಳು ಹೇಗೆ ಬಗೆಹರಿಯುತ್ತವೆ ಎಂದು ಪ್ರಶ್ನಿಸಿದರು.

ಸಂಘಟನೆಗಳು ಕರೆದಿವೆ, ಬಂದಿದ್ದೇವೆ, ಮುಗಿಸಿಕೊಂಡು ಹೋಗುತ್ತೇವೆ ಎಂದು ಹೋರಾಟಕ್ಕೆ ಬಂದಿದ್ದೇವೆ ಎನ್ನಬಾರದು. ನಮ್ಮ ಹಕ್ಕುಗಳನ್ನು ಪಡೆದೇ ಹೋಗಬೇಕು. ನಮ್ಮೆಲ್ಲೆ ಸಮಸ್ಯೆಗಳಿಗೂ ಮೂಲ ಕಾರಣ ನಮ್ಮನ್ನಾಳುತ್ತಿರುವ ಸರ್ಕಾರಗಳು. ಬಲಾಢ್ಯರು ಜನರನ್ನು ದೋಚುತ್ತಿದ್ದಾರೆ. ಅವರಿಗೆ ಸರ್ಕಾರಗಳು ದಳ್ಳಾಳಿಗಳಂತೆ ಕೆಲಸ ಮಾಡುತ್ತಿವೆ. ಸರ್ಕಾರಗಳು ಬಲಾಢ್ಯರನ್ನು ನಿಯಂತ್ರಿಸಿ ಜನರನ್ನು ರಕ್ಷಿಸಬೇಕು. ಆದರೆ, ಆ ಕೆಲಸವನ್ನು ಯಾವ ಸರ್ಕಾರಗಳೂ ಮಾಡುತ್ತಿಲ್ಲ. ಬದಲಾಗಿ, ಬಲಾಢ್ಯರಿಂದ ಹಣ ಪಡೆದು, ಜನರನ್ನು ಶೋಷಿಸುತ್ತಿವೆ” ಎಂದರು.

ಇದನ್ನೂ ಓದಿ : ಮಹಾಧರಣಿ | ಮೋದಿ ಸರ್ಕಾರದಲ್ಲಿ ಮಹಿಳೆಯರು ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದಾರೆ: ಮೀನಾಕ್ಷಿ ಬಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...