Homeಮುಖಪುಟವಿಶ್ವಸಂಸ್ಥೆಯ ಮೌನವೇ ಇಸ್ರೇಲಿನ ಅನಾಗರಿಕ ದಾಳಿಗೆ ಪ್ರೇರಣೆ: ಜೋರ್ಡನ್

ವಿಶ್ವಸಂಸ್ಥೆಯ ಮೌನವೇ ಇಸ್ರೇಲಿನ ಅನಾಗರಿಕ ದಾಳಿಗೆ ಪ್ರೇರಣೆ: ಜೋರ್ಡನ್

- Advertisement -
- Advertisement -

ವಿಶ್ವಸಂಸ್ಥೆ ಭದ್ರತಾ ಮಂಡಳಿ ತನ್ನ ಮೌನದ ಮೂಲಕ ಗಾಝಾದ ಮುಖ್ಯ ಆಸ್ಪತ್ರೆಯ ಮೇಲೆ ಇಸ್ರೇಲಿನ ಅನಾಗರಿಕ ದಾಳಿಗೆ ಪ್ರೇರಣೆ ನೀಡಿದೆ ಎಂದು ಜೋರ್ಡನ್ ಬುಧವಾರ ಆರೋಪಿಸಿದೆ.

ಗಾಯಾಳುಗಳು ಮತ್ತು ಆಶ್ರಯ ಪಡೆದ ಪ್ಯಾಲೆಸ್ಟೀನಿಯಾದವರಿಂದ ತುಂಬಿ ತುಳುಕುತ್ತಿದ್ದ ಗಾಜಾ ಸಿಟಿ ಆಸ್ಪತ್ರೆಯೊಂದರಲ್ಲಿ ಮಂಗಳವಾರ ಭಾರೀ ಸ್ಫೋಟ ಸಂಭವಿಸಿದ್ದು, ನೂರಾರು ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ತಿಳಿಸಿದೆ.

ಇಸ್ರೇಲ್ ಈ ವೈಮಾನಿಕ ದಾಳಿ ನಡೆಸಿದೆ ಎಂದು ಹಮಾಸ್ ದೂಷಿಸಿದೆ, ಆದರೆ ಇಸ್ರೇಲಿ ಮಿಲಿಟರಿಯು ಪ್ಯಾಲೇಸ್ಟಿನಿಯನ್ ಗುಂಪಿನವರು ರಾಕೆಟ್‌ನಿಂದ ಆಸ್ಪತ್ರೆಯನ್ನು ಹೊಡೆದಿದೆ ಎಂದು ಹೇಳಿದೆ. ಕನಿಷ್ಠ 500 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.

”ಅಲ್-ಶಿಫಾ ಆಸ್ಪತ್ರೆಯಲ್ಲಿನ ದುರಂತವು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಮೌನದಿಂದ ಆಗಿರುವ ಅನಾಗರಿಕತೆಗೆ ಸಾಕ್ಷಿಯಾಗಿದೆ ಎಂದು ಜೋರ್ಡನ್ ವಿದೇಶಾಂಗ ಸಚಿವ ಅಯಾನ್ ಸಫಾದಿ ಹೇಳಿದ್ದಾರೆ.

”ಈ ಕ್ರೂರ ಕೃತ್ಯದ ಕುರಿತ ಮೌನವನ್ನು ನಾವು ಖಂಡಿಸುತ್ತೇವೆ. ಇದು ಯುದ್ಧ ಅಪರಾಧಗಳಿಗೆ ರಕ್ಷಣೆ ನೀಡುತ್ತಿದೆ. ಇದು ಸ್ವೀಕಾರಾರ್ಹವಲ್ಲ ಸಮರ್ಥನೀಯವಲ್ಲ ವಿಶ್ವಸಂಸ್ಥೆ ಭದ್ರತಾ ಮಂಡಳಿ ತಕ್ಷಣ ಕಾರ್ಯನಿರ್ವಹಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.

ಅಲ್ ಶಿಫಾ ಆಸ್ಪತ್ರೆಯಲ್ಲಿ ನಡೆಸುತ್ತಿರುವ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿರುವ ಇಸ್ರೇಲ್, ಅಗತ್ಯಬಿದ್ದರೆ ದಾಳಿ, ಕಾರ್ಯಾಚರಣೆಯನ್ನು ವಿಸ್ತರಿಸಲಾಗುವುದು ಎಂದು ಹೇಳಿದೆ.

ಈ ಮಧ್ಯೆ ಅಲ್-ಶಿಫಾ ಆಸ್ಪತ್ರೆಯ ಮೇಲಿನ ದಾಳಿಯ ಬಳಿಕ ಕದನ ವಿರಾಮಕ್ಕೆ ಇಸ್ರೇಲ್ ಮೇಲೆ ಅಂತರಾಷ್ಟ್ರೀಯ ಒತ್ತಡ ಹೆಚ್ಚಿದೆ. ಒತ್ತೆಯಾಳುಗಳ ಬಿಡುಗಡೆ ಮತ್ತು ಕದನ ವಿರಾಮಕ್ಕೆ ಸಂಬಂಧಿಸಿ ಎರಡೂ ದೇಶಗಳು ತಮ್ಮ ಷರತ್ತನ್ನು ಬದಿಗಿರಿಸಿ ಗಾಝಾದಲ್ಲಿ ತಕ್ಷಣ ಕದನ ವಿರಾಮ ಜಾರಿಯಾಗಲು ಅವಕಾಶ ನೀಡಬೇಕೆಂದು ಖತರ್ ಹಮಾಸ್ ಮತ್ತು ಇಸ್ರೇಲನ್ನು ಆಗ್ರಹಿಸಿದೆ.

ನಮ್ಮನ್ನು ಕೆಣಕಿದ ಹಮಾಸ್ ಗೆ ಗಾಝಾದಲ್ಲಿ ಅವಿತುಕೊಳ್ಳಲು ಯಾವುದೇ ಸ್ಥಳ ಸುರಕ್ಷಿತವಲ್ಲ ಇಸ್ರೇಲ್ ಸೇನೆ ಗಾಝಾದ ಯಾವುದೇ ಪ್ರದೇಶಕ್ಕೂ ಪ್ರವೇಶಿಸುವ ಸಾಮರ್ಥ್ಯ ಹೊಂದಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಯುದ್ಧದಿಂದ ಜರ್ಝರಿತಗೊಂಡಿರುವ ಗಾಝಾಕ್ಕೆ ತುರ್ತು ಅಗತ್ಯದ ವಸ್ತುಗಳನ್ನು ಒದಗಿಸಲು ವಿಶ್ವಸಂಸ್ಥೆ ಇನ್ನಷ್ಟು ಕ್ರಮ ಕೈಗೊಳ್ಳಬೇಕು ಎಂದು ಇರಾನ್ ವಿದೇಶಾಂಗ ಇಲಾಖೆ ಬುಧವಾರ ಆಗ್ರಹಿಸಿದೆ.

ಅಲ್ಲಿನ ಆರೋಗ್ಯ ಸಚಿವಾಲಯದ ಪ್ರಕಾರ, ಗಾಜಾದಲ್ಲಿ ಸುಮಾರು 3,000 ಜನರು ಸಾವನ್ನಪ್ಪಿದ್ದಾರೆ ಮತ್ತು 9,700 ಜನರು ಗಾಯಗೊಂಡಿದ್ದಾರೆ. ಹಮಾಸ್‌ನ ಅಕ್ಟೋಬರ್ 7 ರ ದಾಳಿಯಲ್ಲಿ 1,400 ಕ್ಕೂ ಹೆಚ್ಚು ಇಸ್ರೇಲಿಗಳು ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ: ಗಾಝಾ: ಸಂಸತ್ತು, ಸರ್ಕಾರಿ ಕಚೇರಿಗಳನ್ನು ವಶಪಡಿಸಿಕೊಂಡ ಇಸ್ರೇಲ್‌ ಸೇನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read