ಟ್ವಿಟ್ಟರ್ ಮೂಲಕ ಆಕ್ಸಿಜನ್ ಸಿಲಿಂಡರ್‌ಗಾಗಿ ಮನವಿ ಮಾಡಿದ ಯುವಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅಮೆಥಿ ಪೊಲೀಸರು ಮಂಗಳವಾರ ಸಂಜೆ ಟ್ವೀಟ್ ಮಾಡಿದ್ದಾರೆ.
“ಭಯ ಉಂಟುಮಾಡುವ ಉದ್ದೇಶದಿಂದ, ವದಂತಿಯನ್ನು ಪ್ರಸಾರ ಮಾಡಿದ್ದಾರೆ. ಅವರ ಟ್ವೀಟ್ ರಾಜ್ಯದ ವಿರುದ್ಧ ಅಥವಾ ಸಾರ್ವಜನಿಕ ನೆಮ್ಮದಿಗೆ ತೊಂದರೆ ಉಂಟು ಮಾಡಿ ಅಪರಾಧ ಮಾಡಲು ಪ್ರೇರೇಪಿಸಲ್ಪಡಬಹುದು” ಎಂದು ಪೊಲೀಸರು ಅವರ ಮೇಲೆ ಆರೋಪವನ್ನು ಹೊರಿಸಿದ್ದಾರೆ.
ಸೋಮವಾರ ಸಂಜೆ, ಶಶಾಂಕ್ ಯಾದವ್ ಎಂಬವರು ನಟ ಸೋನು ಸೂದ್ ಅವರನ್ನು ತಮ್ಮ ಟ್ವೀಟ್‌ನಲ್ಲಿ ಟ್ಯಾಗ್ ಮಾಡಿ ಆಕ್ಸಿಜನ್ ಸಿಲಿಂಡರ್‌ಗೆ ಮನವಿ ಮಾಡಿದ್ದರು. ಆದರೆ ಅವರು ಕೊರೊನಾ ಅಥವಾ ಇನ್ಯಾವುದೆ ಕಾಯಿಲೆಯ ಬಗ್ಗೆ ಅವರು ಹೇಳಿಕೊಂಡಿರಲಿಲ್ಲ.
ಇದನ್ನೂ ಓದಿ: ಕೊರೊನಾ ರೋಗಿಯನ್ನು ಆಸ್ಪತ್ರೆಯ ಸಿಬ್ಬಂದಿ ಕೊಲ್ಲುತ್ತಿದ್ದಾರೆ ಎಂಬ ಈ ವಿಡಿಯೊ ಸುಳ್ಳು!
ಅವರ ಸ್ನೇಹಿತರಲ್ಲೊಬ್ಬರಾದ ಅಂಕಿತ್ ಎಂಬವರು, ರಾತ್ರಿ 8: 33 ಕ್ಕೆ ಶಶಾಂಕ್ ಯಾದವ್ ಅವರ ಮನವಿಯನ್ನು ರಿಟ್ವೀಟ್ ಮಾಡಿದ್ದಾರೆ. ಜೊತೆಗೆ ಟ್ವಿಟರ್‌ನಲ್ಲಿ ದಿ ವೈರ್‌ನ ಹಿರಿಯ ಸಂಪಾದಕಿ ಅರ್ಫಾ ಖಾನೂಮ್ ಶೆರ್ವಾನಿ ಅವರಿಗೆ ಸಹಾಯ ಕೋರಿ ನೇರ ಸಂದೇಶವನ್ನು ಕಳುಹಿಸಿದ್ದರು.

ಕೊರೊನಾ ತೀವ್ರಗೊಂಡ ಹಿನ್ನಲೆಯಲ್ಲಿ ವೈರ್ ಸಂಪಾದಕಿ ಅರ್ಫಾ ಖಾನೂಂ ಅವರು ತನ್ನ ಸಾಮಾಜಿಕ ಜಾಲತಾಣವನ್ನು ಕೊರೊನಾ ಚಿಕಿತ್ಸೆಗೆ ಸಹಾಯ ಕೇಳುತ್ತಿರುವವರಿಗೆ ಸಹಾಯ ಮಾಡುವಂತೆ ಹೇಳಿಕೊಳ್ಳಲು ಬಳಸುತ್ತಿದ್ದಾರೆ. ಅವರು ಈ ರೀತಿಯ ಸಂದೇಶಗಳನ್ನು ಹಂಚಿ ಪ್ರಭಾವಿಗಳ ಗಮನಕ್ಕೆ ತರುತ್ತಿದ್ದರು. ಅದರಂತೆ ಮಧ್ಯರಾತ್ರಿ ಈ ಟ್ವೀಟ್ ಅನ್ನು ಅವರು ನೋಡಿದ್ದು, ನಂತರ ಅದನ್ನು ರೀಟ್ವೀಟ್ ಮಾಡಿದ್ದಾರೆ.
ನಂತರದ ಟ್ವೀಟ್‌ಗಳಲ್ಲಿ, ಅಮೆಥಿಯಿಂದ ಸಂಸದರಾಗಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಕೊರೊನಾ ರೋಗಿಗಳಿಗೆ ಸಹಾಯ ಮಾಡುವಲ್ಲಿ ತೊಡಗಿಸಿಕೊಂಡಿರುವ ಲಕ್ನೋ ಮೂಲದ ಪ್ರಮುಖ ಸಂಪಾದಕ ಮತ್ತು ಸಮಾಜವಾದಿ ರಾಜಕಾರಣಿಯನ್ನು ಟ್ಯಾಗ್ ಮಾಡಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು.
ಇದನ್ನೂ ಓದಿ: ಕನ್ನಡ ಪತ್ರಿಕೋದ್ಯಮದ ಹಾಲಿನ ಬಟ್ಟಲಿಗೆ ಲಿಂಬೆಹುಳಿ ಹಿಂಡಿದವರು ‘ಸಂಕೇಶ್ವರ್’!
ಇದಕ್ಕೆ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ, ತಾನು ಶಶಾಂಕ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ, ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.
Called Shashank thrice .. no response on the number shared by you in your tweet. Have alerted office of @DmAmethi & @amethipolice to find and help the person in need. https://t.co/4D3Nfe2Nue
— Smriti Z Irani (@smritiirani) April 26, 2021
ಏತನ್ಮಧ್ಯೆ, ರಾತ್ರೆ 12:44 ಕ್ಕೆ ಅರ್ಫಾ ಖಾನೂಂ ಅವರಿಗೆ, ತನ್ನ ಸ್ನೇಹಿತನ ಅಜ್ಜ ನಿಧನರಾದರು ಎಂದು ಹೇಳಿ ಆಮ್ಲಜನಕ ಬೇಕೆಂದು ಕೇಳಿದ್ದ ಅಂಕಿತ್ ಅವರು ಸಂದೇಶ ಕಳುಹಿಸಿದ್ದಾರೆ.

ಜೊತೆಗೆ ಅರ್ಫಾ ಖಾನೂಂ ಅವರು ಸ್ಮೃತಿ ಇರಾನಿಗೆ ಈ ಮಾಹಿತಿಯನ್ನು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವೆ, “ಅವರ ಸಂಖ್ಯೆಗೆ CMO, ಅಮೇಥಿ ಪೊಲೀಸ್ ಸೇರಿದಂತೆ ನಾವೆಲ್ಲರೂ ಕರೆ ಮಾಡಿದ್ದೇವೆ. ಅವರು ತನ್ನ ಫೋನ್ ರಿಸೀವ್ ಮಾಡಬೇಕೆಂದು ನಾನು ಬಯಸಿದ್ದೆ. ನನ್ನ ಸಂತಾಪ” ಎಂದು ಹೇಳಿದ್ದರು.
ಇದನ್ನೂ ಓದಿ: ಮದ್ರಾಸ್ ಹೈಕೋರ್ಟ್ ಎಚ್ಚರಿಕೆಗೆ ಎಚ್ಚೆತ್ತ ಚುನಾವಣಾ ಆಯೋಗ: ವಿಜಯೋತ್ಸವಗಳಿಗೆ ನಿಷೇಧ
ಜೊತೆಗೆ ಸಂತ್ರಸ್ತ ಕುಟುಂಬಕ್ಕೆ ಸಹಾಯ ಮಾಡಲು ಪ್ರಯತ್ನಿಸಿದ್ದಕ್ಕೆ ಅಂಕಿತ್ ಅವರು ಸ್ಮೃತಿ ಇರಾನಿ ಮತ್ತು ಅರ್ಫಾ ಖಾನೂಂ ಅವರಿಗೆ ಧನ್ಯವಾದ ಕೂಡಾ ಅರ್ಪಿಸಿದ್ದರು.
ಇದಾಗಿ, ಏಪ್ರಿಲ್ 27 ರಂದು ಮಧ್ಯಾಹ್ನದ ಸಮಯದ ನಂತರ, ಅಮೆಥಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಅಮೆಥಿ ಮುಖ್ಯ ವೈದ್ಯಾಧಿಕಾರಿಯ ವರದಿಯನ್ನು ಅರ್ಫಾ ಖಾನೂಂ ಅವರ ಟ್ವೀಟ್‌ಗೆ ಉತ್ತರವಾಗಿ ಟ್ವೀಟ್ ಮಾಡಿದ್ದರು. ಈ ವರದಿಯು, ಯಾರಿಗೆ ಆಕ್ಸಿಜನ್ ಸಿಲಿಂಡರ್ ಬೇಕೆಂದು ಕೇಳಿದ್ದರೋ, ಆ ವ್ಯಕ್ತಿಯು ಕೊರೊನಾದಿಂದ ಬಳಲುತ್ತಿರಲಿಲ್ಲ ಹಾಗೂ ದುರ್ಗಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿಸಿತ್ತು.
उक्त प्रकरण में मुख्य चिकित्सा अधिकारी अमेठी की जांच रिपोर्ट। pic.twitter.com/Rg15yfto4r
— DMAmethi (@DmAmethi) April 27, 2021
ಶಶಾಂಕ್ ಯಾದವ್ ಅಥವಾ ಅರ್ಫಾ ಖಾನೂಂ ಎಲ್ಲಿಯೂ, ‘ಕೊರೊನಾ ರೋಗಿ’ಗೆ ಆಮ್ಲಜನಕದ ಅಗತ್ಯವಿದೆ ಎಂದು ಹೇಳಿಲ್ಲವಾದರೂ, ಪೊಲೀಸರು ಇಬ್ಬರು ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ: ‘ಮೋದಿಯೇ ಕೊರೋನಾ ಸೂಪರ್ ಸ್ಪ್ರೆಡರ್, 2ನೆ ಅಲೆಗೆ ಅವರೇ ಕಾರಣ’: ಭಾರತೀಯ ವೈದ್ಯಕೀಯ ಸಂಘ
ಮಂಗಳವಾರ ಸಂಜೆ, ಅಮೆಥಿ ಪೊಲೀಸರು ಶಶಾಂಕ್ ಯಾದವ್ ಮತ್ತು ಅರ್ಫಾ ಖಾನೂಂ ಅವರು ಮೂಲ ಸಂದೇಶಗಳಿಗೆ ಪ್ರತ್ಯುತ್ತರವನ್ನು ಟ್ವೀಟ್ ಮಾಡಿದ್ದು, ಅದರಲ್ಲಿ “ಅಜ್ಜ ಕೋವಿಡ್‌ನಿಂದ ಬಳಲುತ್ತಿರಲಿಲ್ಲ. ಅವರಿಗೆ ಆಮ್ಲಜನಕದ ಪ್ರಿಸ್ಕ್ರಿಪ್ಷನ್ ಕೂಡಾ ಇರಲಿಲ್ಲ, ಅವರು ‘ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ರೀತಿಯ ವದಂತಿಗಳನ್ನು ಹರಡುವುದು ಖಂಡನೀಯ ಮಾತ್ರವಲ್ಲ, ಕ್ರಿಮಿನಲ್ ಅಪರಾಧವಾಗಿದೆ” ಎಂದು ಬರೆದಿದ್ದರು.
तत्काल संपर्क किया तो जानकारी हुई कि इनके चचेरे भाई के नाना 88 वर्षीय थे, न उन्हें COVID था, न ऑक्सीजन की चिकित्सीय परामर्श थी। रात 8 बजे उनकी मृत्यु हार्ट अटैक से हुई। इस समय सोशल मीडिया पर इसप्रकार की समाज मे भय पैदा करने वाली पोस्ट डालना निन्दनीय ही नहीं, कानूनी अपराध भी है।
— AMETHI POLICE (@amethipolice) April 27, 2021
ಪೊಲೀಸರ ಈ ಎಚ್ಚರಿಕೆಗೆ ಅರ್ಫಾ ಖಾನೂಂ ಅವರು ಪ್ರತಿಕ್ರಿಯಿಸಿ, “ಜನರು ಸಹಾಯ ಕೇಳುತ್ತಿದ್ದಾರೆ, ಜವಾಬ್ದಾರಿಯುತ ಪ್ರಜೆಯಾಗಿ ನನ್ನಲ್ಲಿ ಸಹಾಯ ಕೇಳುವ ಜನರಿಗಾಗಿ ನಾನು ಟ್ವೀಟ್ ಮಾಡುತ್ತೇನೆ. ಸತ್ಯವನ್ನು ಹುಡುಕುವುದು ಪೊಲೀಸರ ಕೆಲಸ. ನಾನು ಟ್ವೀಟ್ ಮಾಡಿರುವ 99% ಜನರ ಬಗ್ಗೆ ನನಗೆ ವೈಯಕ್ತಿಕ ಪರಿಚಯ ಇಲ್ಲ. ಆದರೆ ಭಾರತೀಯ ಪ್ರಜೆಯ ಕರ್ತವ್ಯವನ್ನು ನಿರ್ವಹಿಸುತ್ತಾ ನಾನು ಅವರ ಸಂದೇಶವನ್ನು ಜನರಿಗೆ ಹರಡುತ್ತಿದ್ದೇನೆ” ಎಂದು ತನ್ನೊಂದಿಗೆ ಸಹಾಯ ಕೋರಿದ್ದ ಸಂದೇಶದ ಸ್ಕ್ರೀನ್‌ಶಾಟ್‌ನೊಂದಿಗೆ ಬರೆದಿದ್ದರು.
संकट की इस घड़ी में नागरिक एक दूसरे की मदद कर रहे हैं,जान बचाने की कोशिश कर रहे हैं। मैं भी एक ज़िम्मेदार नागरिक होने के नाते जो लोग मुझसे मदद की गुहार लगा रहे हैं, उनके संदेश ट्वीट कर रही हूँ। तथ्यों की जाँच करना पुलिस का काम है।आपकी जानकारी के लिये ये स्क्रीन शॉट लगा रही हूँ1/2 pic.twitter.com/cjkHiFSHOq
— Arfa Khanum Sherwani (@khanumarfa) April 27, 2021
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಾವಧಿಯಲ್ಲಿ ಕೇವಲ ಒಂದೇ ಒಂದು ಏಮ್ಸ್ ಸ್ಥಾಪನೆಯಾಯಿತೆ…?
ಇದರ ನಂತರ ಪೊಲೀಸರು ಶಶಾಂಕ್ ಯಾದವ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಾಂಕ್ರಾಮಿಕ ಕಾಯ್ದೆಯ ಸೆಕ್ಷನ್ 3 ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 54 ರೊಂದಿಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188, 269 ಮತ್ತು 505 (1) (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ದಿ ವೈರ್‌ನ ಸಂಸ್ಥಾಪಕ ಸಂಪಾದಕ ಸಿದ್ದಾರ್ಥ್, ಪೊಲೀಸರ ಈ ಕ್ರಮವು ವೈದ್ಯಕೀಯ ಸಹಾಯಕ್ಕಾಗಿ ಹತಾಶರಾಗಿ ಕೇಳುವ ರೋಗಿಗಳ ಕುಟುಂಬಗಳನ್ನು ಬೆದರಿಸುವ ಪ್ರಯತ್ನವಾಗಿದೆ ಎಂದು ಖಂಡಿಸಿದ್ದಾರೆ.
“ಶಶಾಂಕ್ ಯಾದವ್ ವಿರುದ್ಧ ಪೊಲೀಸರು ಮಾಡಿರುವ ಆರೋಪಗಳು ಗಂಭೀರವಾಗಿದ್ದು, ಪೊಲೀಸರು ಈ ಪ್ರಕರಣವನ್ನು ಮುಂದುವರೆಸಿದರೆ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಚಿಕಿತ್ಸೆ ಪಡೆಯುವಲ್ಲಿನ ತೊಂದರೆಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡದಂತೆ ಉತ್ತರ ಪ್ರದೇಶದಾದ್ಯಂತ ಶಶಾಂಕ್ ಯಾದವ್ ಅವರಂತಹ ಕುಟುಂಬಗಳಿಗೆ ಸಂದೇಶ ಕಳುಹಿಸುವುದು ಇದರ ಉದ್ದೇಶವಾಗಿದೆ” ಎಂದು ಸಿದ್ದಾರ್ಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Amethi Police 'clarifies' (https://t.co/ckNN1qjwUv) case is against @shashankdy999, who appealed for oxygen for his nana (and not @khanumarfa, I presume, though one can never be sure). Yogi's message to UP patients desperate for medical help is—Shut up, or we can send you to jail
— Siddharth (@svaradarajan) April 27, 2021
ಇದನ್ನೂ ಓದಿ: 9 ವರ್ಷದಿಂದ ಯಾವುದೆ ಲಸಿಕೆ ಉತ್ಪಾದಿಸದ ಅತ್ಯಾಧುನಿಕ ಸರ್ಕಾರಿ ವ್ಯಾಕ್ಸಿನ್ ಕಾಂಪ್ಲೆಕ್ಸ್!


