Homeಮುಖಪುಟಮದ್ರಾಸ್ ಹೈಕೋರ್ಟ್ ಎಚ್ಚರಿಕೆಗೆ ಎಚ್ಚೆತ್ತ ಚುನಾವಣಾ ಆಯೋಗ: ವಿಜಯೋತ್ಸವಗಳಿಗೆ ನಿಷೇಧ

ಮದ್ರಾಸ್ ಹೈಕೋರ್ಟ್ ಎಚ್ಚರಿಕೆಗೆ ಎಚ್ಚೆತ್ತ ಚುನಾವಣಾ ಆಯೋಗ: ವಿಜಯೋತ್ಸವಗಳಿಗೆ ನಿಷೇಧ

- Advertisement -
- Advertisement -

ಕೊರೊನಾ ಉಲ್ಬಣಗೊಳ್ಳುತ್ತಿರುವ ಮಧ್ಯೆಯೇ ಮೇ 2 ರಂದು ಪಂಚರಾಜ್ಯ ಚುನಾವಣೆಗಳ  ಮತಎಣಿಕೆ ಮತ್ತು ಕೆಲವು ಸ್ಥಳಿಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಮತಎಣಿಕೆ ದಿನ ಅಥವಾ ನಂತರ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಚುನಾವಣಾ ಗೆಲುವಿನ ಸಂಭ್ರಮಾಚರಣೆಗಳನ್ನು ನಡೆಸುವಂತಿಲ್ಲ ಭಾರತದ ಚುನಾವಣಾ ಆಯೋಗ ಆದೇಶಿಸಿದೆ.

ದೇಶದಲ್ಲಿ ಕೊರೊನಾ ಉಲ್ಬಣವಾಗಲು ಚುನಾವಣಾ ಆಯೋಗವೇ ಮುಖ್ಯ ಕಾರಣ. ಆಯೋಗದ ವಿರುದ್ಧ ಕೊಲೆ ಪ್ರಕರಣ ಏಕೆ ದಾಖಲಿಸಬಾರದು ಎಂದು ಮದ್ರಾಸ್ ಹೈಕೋರ್ಟ್ ಆಯೋಗವನ್ನು ತರಾಟೆಗೆ ತೆಗೆದುಕೊಂಡ ನಂತರ ಚುನಾವಣಾ ಆಯೋಗ ಎಚ್ಚೆತ್ತುಕೊಂಡಿದೆ.

ಏಪ್ರಿಲ್ 06 ರಂದು ತಮಿಳುನಾಡು, ಕೇರಳ ಮತ್ತು ಪುದುಚೇರಿಯ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಅಸ್ಸಾಂನ್ಲಲಿ ಮೂರು ಹಂತಗಳಲ್ಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣೆಯನ್ನು ಎಂಟು ಹಂತಗಳಲ್ಲಿ ನಿಗದಿಪಡಿಸಲಾಗಿತ್ತು. ಬಂಗಾಳದಲ್ಲಿ ಮಾರ್ಚ್ 27 ರಂದು ಆರಂಭವಾಗಿರುವ ಮತದಾನ ಏಪ್ರಿಲ್ 29 ಕ್ಕೆ ಕೊನೆಗೊಳ್ಳಲಿದೆ.

ಇದನ್ನೂ ಓದಿ: ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು: ಮದ್ರಾಸ್​ ಹೈಕೋರ್ಟ್

“ಚುನಾವಣಾ ವಿಜೇತ ಅಭ್ಯರ್ಥಿ ಗೆಲುವಿನ ಪ್ರಮಾಣ ಪತ್ರ ಪಡೆಯುವ ವೇಳೆ ಅವರ ಜೊತೆಗೆ ಇಬ್ಬರಿಗಿಂತ ಹೆಚ್ಚು ಜನರು ಇರಲು ಅನುಮತಿ ನೀಡಲಾಗುವುದಿಲ್ಲ” ಎಂದು ಚುನಾವಣಾ ಆಯೋಗದ ಅಧಿಸೂಚನೆ ತಿಳಿಸಿದೆ.

Image

ರಾಜಕೀಯ ಪಕ್ಷಗಳು ಮತ್ತು ನಾಯಕರು ಕೊರೊನಾ ಸೋಂಕಿನ ಹರಡುವಿಕೆಯನ್ನು ಕಡಿಮೆ ಮಾಡಲು ಅನುಸರಿಸಬೇಕಾದ ನಿಯಮಾವಳಿಗಳನ್ನು ಆಯೋಗ ನೀಡಿದೆ.

ಪಂಚರಾಜ್ಯ ಚುನಾವಣೆಗಳಲ್ಲಿ ಹೆಚ್ಚಾಗಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು, ಬೃಹತ್ ರ್‍ಯಾಲಿಗಳನ್ನು, ಮೆರವಣಿಗೆಗಳನ್ನು ಆಯೋಜಿಸುವ ಮೂಲಕ, ರ್‍ಯಾಲಿಗಳಲ್ಲಿ ಕೊರೊನಾ ನಿಯಮಗಳನ್ನು ಪಾಲಿಸದೆ ಸೋಂಕು ಹರಡಲು ಕಾರಣರಾಗಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ.

ಮೇ.2 ರಂದು ಎಲ್ಲಾ ಪಂಚರಾಜ್ಯಗಳ ಮತ ಎಣಿಕೆ ಆರಂಭವಾಗಲಿದೆ. ಆದರೆ, ಶುಕ್ರವಾರದೊಳಗೆ ಕೊರೊನಾ ನಿಯಮಗಳನ್ನು ಜಾರಿಗೊಳಿಸುವ ಯೋಜನೆಯ ಬಗ್ಗೆ ಚುನಾವಣಾ ಆಯೋಗ ನೀಲನಕ್ಷೆಯನ್ನು ನೀಡದಿದ್ದರೆ ಮತ ಎಣಿಕೆಯನ್ನೇ ನಿಲ್ಲಿಸುವುದಾಗಿಯೂ ಮದ್ರಾಸ್ ಹೈಕೋರ್ಟ್ ಎಚ್ಚರಿಸಿತ್ತು.


ಇದನ್ನೂ ಓದಿ: ಜನರ ಸಂಕಷ್ಟ ಮರೆತು ಬಿಜೆಪಿಯ ಪಿಆರ್ ಕೆಲಸ ಮಾಡುತ್ತಿರುವ ಟೈಮ್ಸ್ ನೌ: ಸಂಪಾದಕರಿಗೆ ಚಾನೆಲ್ ವರದಿಗಾರರ ’ದಿಟ್ಟ ಪತ್ರ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...