Homeಕರ್ನಾಟಕಮನೆ ಮುಂದೆ ಕಾರು ಪಾರ್ಕಿಂಗ್‌ಗೆ ವಾರ್ಷಿಕ 5000/- ವರೆಗೆ ಶುಲ್ಕ: ತರಾತುರಿ ಟೆಂಡರ್ ಕರೆದ BBMP

ಮನೆ ಮುಂದೆ ಕಾರು ಪಾರ್ಕಿಂಗ್‌ಗೆ ವಾರ್ಷಿಕ 5000/- ವರೆಗೆ ಶುಲ್ಕ: ತರಾತುರಿ ಟೆಂಡರ್ ಕರೆದ BBMP

- Advertisement -
- Advertisement -

ರಸ್ತೆ ಬದಿ ಪಾರ್ಕಿಂಗ್‌ಗೆ ಶುಲ್ಕ ವಿಧಿಸಲು ಮುಂದಾಗಿದ್ದ ರಾಜ್ಯ ಸರ್ಕಾರ, ಇದೀಗ ಮನೆ ಮುಂದೆ ಪಾರ್ಕಿಂಗ್‌ ಮಾಡಲು ಸಹ ಶುಲ್ಕ ವಿಧಿಸಲು ಮುಂದಾಗಿದೆ. ಪಾರ್ಕಿಂಗ್ 2.0 ನೀತಿ ಜಾರಿಗೆ ತರಲು ಉದ್ದೇಶಿಸಿದ್ದು, ರಸ್ತೆ ಬದಿ ಪಾರ್ಕಿಂಗ್‌ಗೆ ಮತ್ತು ಮನೆ ಮುಂದೆ ಪಾರ್ಕಿಂಗ್‌ಗೆ ದುಬಾರಿ ಶುಲ್ಕ ವಿಧಿಸಲು ಹೊರಟಿದೆ.

ಮನೆ ಮುಂದೆ ಸಣ್ಣ ಕಾರು ಪಾರ್ಕಿಂಗ್‌ಗೆ ವಾರ್ಷಿಕ 1000 ರೂ ಮತ್ತು ದೊಡ್ಡ ಕಾರುಗಳಿಗೆ 5000 ರೂವರೆಗೆ ಶುಲ್ಕ ವಿಧಿಸುವುದಾಗಿ ಸರ್ಕಾರ ಘೋಷಿಸಿದೆ. ಶುಲ್ಕ ಪಾವತಿಸಿ ಪರವನಾಗಿ ಪಡೆದವರು ಮಾತ್ರ ಪಾರ್ಕಿಂಗ್ ಮಾಡಬಹುದಾಗಿದ್ದು, ಇಲ್ಲದಿದ್ದರೆ ದಂಡ ಕಟ್ಟಬೇಕಾಗಿದೆ. ನಗರ ಭೂಸಾರಿಗೆ ನಿರ್ದೇಶನಾಲಯ ಮತ್ತು ಬಿಬಿಎಂಪಿ ಜಂಟಿಯಾಗಿ ಇದನ್ನು ಅನುಷ್ಠಾನಗೊಳಿಸುವ ಹೊಣೆ ಹೊತ್ತಿವೆ.

ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ವಾಹನ ಕೊಳ್ಳುವಾಗಲೇ ತೆರಿಗೆ ಕಟ್ಟಿರುತ್ತೇವೆ ಹಾಗಿದ್ದೂ ಮತ್ತೆ ಮತ್ತೆ ಶುಲ್ಕ ಸಂಗ್ರಹಿಸುವ ಮೂಲಕ ಸರ್ಕಾರ ಹಗಲು ದರೋಡೆಗಿಳಿದಿದೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಗರ ಭೂ ಸಾರಿಗೆ ನಿರ್ದೇಶನಾಲಯವು (DULT) ವಿವರವಾದ ಅಧ್ಯಯನದ ನಂತರ ಸಿದ್ಧಪಡಿಸಿದ ಮತ್ತು ಎಲ್ಲಾ ಎಂಟು ವಲಯಗಳಲ್ಲಿ ಜಾರಿಗೊಳಿಸುವ ಈ ಯೋಜನೆಯಿಂದ ಕನಿಷ್ಠ 188 ಕೋಟಿ ರೂ.ಗಳ ವಾರ್ಷಿಕ ಆದಾಯವನ್ನು ಗಳಿಸುವ ಉದ್ದೇಶವನ್ನು ಬಿಬಿಎಂಪಿ ಸಂಸ್ಥೆ ಹೊಂದಿದೆ.

“ಭೂಮಿಯ ಮಾರುಕಟ್ಟೆ ಮೌಲ್ಯ ಮತ್ತು ಕ್ಯಾರೇಜ್‌ ವೇ ಅಗಲದ ಆಧಾರದ ಮೇಲೆ ರಸ್ತೆಗಳನ್ನು ಎ, ಬಿ ಮತ್ತು ಸಿ ಎಂದು ವರ್ಗೀಕರಿಸಲಾಗಿದೆ. ಸ್ಥಳದ ಲಭ್ಯತೆಯ ಆಧಾರದ ಮೇಲೆ ಪ್ರತಿಯೊಂದು ವಲಯಗಳಲ್ಲಿ ಪಾರ್ಕಿಂಗ್ ಸ್ಥಳವನ್ನು ಗುರುತಿಸಲಾಗಿದೆ” ಎಂದು ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ (TEC) ) ಹೆಚ್.ಎನ್. ಜಯಸಿಂಹ ಹೇಳಿದ್ದಾರೆ.

“ಪಾರ್ಕಿಂಗ್ ಶುಲ್ಕ ಮತ್ತು ವಾಹನ ನಿಲುಗಡೆ ಅವಧಿಯ ಕುರಿತು ಚರ್ಚೆ ಅಂತಿಮ ಹಂತದಲ್ಲಿದೆ. ತಾತ್ಕಾಲಿಕವಾಗಿ ‘ಎ ವರ್ಗ’ದ ಪಾರ್ಕಿಂಗ್ ಸ್ಥಳವನ್ನು ದ್ವಿಚಕ್ರ ವಾಹನಗಳಿಗೆ ರೂ 15/ಗಂಟೆಗೆ ಮತ್ತು ನಾಲ್ಕು-ಚಕ್ರ ವಾಹನಗಳಿಗೆ ರೂ 30/ಗಂಟೆ ವೆಚ್ಚವಾಗಲಿದೆ” ಎಂದು ಅವರು ಹೇಳಿದ್ದಾರೆ.

“‘ಬಿ ವರ್ಗ’ ಜಾಗದಲ್ಲಿ ಪಾರ್ಕಿಂಗ್ ದ್ವಿಚಕ್ರ ವಾಹನಗಳಿಗೆ ರೂ 10/ಗಂಟೆಗೆ ಮತ್ತು ಕಾರುಗಳಿಗೆ 20 ರೂ. ವೆಚ್ಚವಾಗಲಿದೆ. ‘ಸಿ ವರ್ಗ’ದ ಪಾರ್ಕಿಂಗ್ ಜಾಗವೂ ಅಗ್ಗದಲ್ಲಿ ಲಭ್ಯವಾಗಲಿದ್ದು, ಬೈಕ್ ಮತ್ತು ಕಾರ್ ಮಾಲೀಕರು ಕ್ರಮವಾಗಿ 5 ರೂ. ಮತ್ತು 10ರೂ. ಪ್ರತಿ ಗಂಟೆಗೆ ಪಾವತಿಸಬೇಕಾಗಿದೆ” ಎಂದು ಅವರು ಹೇಳಿದ್ದಾರೆ.

ತರಾತುರಿ ಟೆಂಡರ್‌

ಬಿಬಿಎಂಪಿಯು ಪಾರ್ಕಿಂಗ್ 2.0 ಟೆಂಡರ್‌ಗೆ ಕೇವಲ 15 ದಿನಗಳ ಕಾಲಾವಕಾಶ ನೀಡಿದೆ. ಇದು ಕನಿಷ್ಟ 40 ದಿನಗಳ ಕಾಲಾವಕಾಶ ನೀಡಬೇಕೆನ್ನುವ ಕೆಟಿಟಿಪಿ (ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ) ಕಾಯ್ದೆಯನ್ನು BBMP ಉಲ್ಲಂಘಿಸಿದೆ ಎಂಬ ಆರೋಪ ಕೇಳಿಬಂದಿದೆ.

2012 ರಿಂದಲೇ ಈ ಯೋಜನೆ ತರುವ ಮಾತಕತೆಗಳಾಗಿವೆ. 2020ರಲ್ಲಿ ನಿಗಧಿಪಡಿಸಿದ ಶುಲ್ಕವನ್ನೆ ಜಾರಿಗೊಳಿಸುತ್ತಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳದ್ದಾರೆ.

ಇದನ್ನೂ ಓದಿ:  ಬೆಂಗಳೂರು: ಇನ್ನು ಮುಂದೆ ರಸ್ತೆ ಬದಿ ಪಾರ್ಕಿಂಗ್‌‌‌ಗೆ ಶುಲ್ಕ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

11 COMMENTS

 1. ಈ ವಿಷಯ ಕೇಳಿ ತುಂಬಾ ಸಂತೋಷವಾಯಿತು. ಇದನ್ನು ಸುಮಾರು ವರ್ಷಗಳ ಮುಂದೇನೆ ಕಾನೂನು ಮಾಡಬೇಕಾಗಿತ್ತು. ಈಗಲಾದರೂ ಮಾಡಿದ್ರೆ ಬಾರಿ ಒಳ್ಳೆಯದು ಇದು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತ ಮಾಡಬಾರದು ಪ್ರತಿ ಜಿಲ್ಲೆಯಲ್ಲೂ ಮಾಡಬೇಕು ಸಾರ್ವಜನಿಕ ಜಾಗಗಳಲ್ಲಿ ಸ್ವಂತ ಕಾರ್ಯಗಳನ್ನು ನಿಲ್ಲಿಸಿದರೆ ಪಾಲ್ಕ್ ಮಾಡಿದರೆ ದಂಡ ವಸೂಲಿ ಮಾಡಬೇಕು ಈ ಕಾನೂನು ಬರಬೇಕು ಬಂದ್ರೆ ತುಂಬಾ ಒಳ್ಳೆಯದು ಯಾಕೆಂದರೆ 30 40 ಸೈಟ್ ನಲ್ಲಿ ಸಂಪೂರ್ಣ ಜಾಗ ಬಿಡದೆ ಮನೆ ಕಟ್ಟಿಕೊಂಡು ತಮ್ಮ ಕಾರುಗಳನ್ನು ಸರ್ಕಾರಿ ರಸ್ತೆಗಳ ಮೇಲೆ ನಿಲ್ಲಿಸುವ ವ್ಯವಸ್ಥೆ ಆಗಿಬಿಟ್ಟಿದೆ ಇಂದು ನಮ್ಮ ದೇಶದಲ್ಲಿ ಇದನ್ನೆಲ್ಲಾ ಹೋಗಲಾಡಿಸಬೇಕು ಎಂದರೆ ಇಂಥ ಕಾನೂನು ಬರಲೇಬೇಕು.

 2. At last some good news. Those who have own house occupied even the footpaths. Parking two wheelers. And then they park their cars one the roads. It’s such a ridiculous problem for those flat owners and others who reside at the end point. While constructing the houses why don’t they leave space for parking,,and knowing that they don’t have 0arking why should they buy cars and create problems for others. BBMP must be strict with this rule.

 3. ಒಂದು ಒಳ್ಳೆಯ ಆರಂಭವಾಗಿದೆ, ತಮ್ಮ ವಾಹನಗಳನ್ನು ಸಮವಾಗಿ ನಿಲ್ಲಿಸಿದರೆ ದ್ವಿ ಚಕ್ರ ವಾಹನಗಳಿಗೆ, ಜನ ಓಡಾಟಕ್ಕೆ ತುಂಬಾ ಅನುಕೂಲ ಆಗಲಿದೆ.

  ಹಾಗೆಯೇ ಸಿಗ್ನಲ್ ಹತ್ತಿರ ಇರುವ ಬಸ್ಸು ಸ್ಟಾಪ್ ಗಳನ್ನ ಸ್ವಲ್ಪ ದೂರ ಎರಡು ಸ್ಟಾಪ್ ಗಳ ಮಧ್ಯೆ ಸ್ಥಳಾಂತರಿಸಿ

  ವಾಹನಗಳು ಹೋಗುವಂಗೆ ಪಾದಚಾರಿಗಳಿಗೂ ಸಮಯ ನಿಗದಿ ಪಡಿಸಿ.

 4. S i agree this rule has come immediately my house no 15, 9th cross Agrahar Dasarahalli Bangalore so many car , tempo, auto, if ambulance come also very diffcult to pass the ambulance not our road whole Agrahara DASRAHALLi t full of temp car, auto do it immediately help the public to walk flow rain water and others

 5. If they collect annual money for parking, it will be legalised. Atleast now we can ask them to vacate the place, if BBMP collects money, organization people will develop, for residential problem will multiply

 6. It’s ridiculous and high burden on middle class people. Already cost of living very high at Bangalore, bbmp tax is very high. Private parking people are looting money.
  Even if bbmp also adopts to very parking charges it’s curse on middle class.
  Cars are already sold with high road tax and parking fee is adding to their worries

 7. It is a good move from the govt. While building the house, every one should plan for the type and number of vehicles they would like to have, more particularly in Bangalore and other districts. Let this rule come in to effect as early as possible.

 8. This is ridiculous as now bbmp is legalizing bad practice. Also when go out on work someone else and parks his vehicle free of cost. People who stay to commercial locality face this menace of encroachment by unknown people. Now that we pay tax, can I build a fence around my parking area to protect my parking place?
  Simply means of money generation to bump, not a genuine motive here. There are umpteen public nuisances and bbmp does nothing to rectify them.

LEAVE A REPLY

Please enter your comment!
Please enter your name here

- Advertisment -

Must Read

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ | Naanu Gauri

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ

0
ಗುಜರಾತ್‌ನಾದ್ಯಂತ ನಡೆದ ಹೈನುಗಾರಿಕೆ ನಡೆಸುವ ಸಮುದಾಯದ ಪ್ರತಿಭಟನೆಯ ನಂತರ ರಾಜ್ಯ ವಿಧಾನಸಭೆಯು ಗೋವು ನಿಯಂತ್ರಣ ಮಸೂದೆಯನ್ನು ಸರ್ವಾನುಮತದಿಂದ ಹಿಂಪಡೆದಿದೆ. ಸುಮಾರು ಐದು ತಿಂಗಳ ಹಿಂದೆ ರಾಜ್ಯದ ನಗರ ಪ್ರದೇಶಗಳ ರಸ್ತೆಗಳು ಮತ್ತು ಸಾರ್ವಜನಿಕ...