Homeಅಂತರಾಷ್ಟ್ರೀಯJNU ವಿದ್ಯಾರ್ಥಿ, ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿಗೆ ನೊಬೆಲ್ ಪ್ರಶಸ್ತಿ

JNU ವಿದ್ಯಾರ್ಥಿ, ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿಗೆ ನೊಬೆಲ್ ಪ್ರಶಸ್ತಿ

- Advertisement -
- Advertisement -

2019ನೇ ಸಾಲಿನ ಅರ್ಥಶಾಸ್ತ್ರಜ್ಞ ಕ್ಷೇತ್ರದಲ್ಲಿನ ಸಾಧನೆಗೆ ಭಾರತೀಯ ಮೂಲದ ಅಮೆರಿಕ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಸೇರಿ ಮೂವರು ಅರ್ಥಶಾಸ್ತ್ರಜ್ಞರು ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಭಾರತೀಯ ಮೂಲದ ಅಮೆರಿಕ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, ಫೆಂಚ್-ಅಮೆರಿಕನ್ ಅರ್ಥಶಾಸ್ತ್ರಜ್ಞ ಎಸ್ತಾರ್ ಡೂಪ್ಲೋ ಮತ್ತು Iಅಮೆರಿಕದ ಮೈಕೆಲ್ ಕ್ರೆಮರ್ ಅವರಿಗೆ ಪ್ರಶಸ್ತಿ ದೊರೆತಿದೆ. ಜಾಗತಿಕ ಬಡತನ ನಿವಾರಣೆಗೆ ಕೈಗೊಂಡ ಪ್ರಾಯೋಗಿಕ ಅಧ್ಯಯನ ಪರಿಗಣಿಸಿ, ಮೂವರಿಗೆ ಸ್ವಿಡೀಶ್ ಅಕಾಡೆಮಿ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇನ್ನು ನೊಬೆಲ್ ಪ್ರಶಸ್ತಿಯ ಮೊತ್ತವನ್ನು ಮೂವರು ಹಂಚಿಕೊಳ್ಳಲಿದ್ದಾರೆ.

58 ವರ್ಷದ ಅಭಿಜಿತ್ ಬ್ಯಾನರ್ಜಿ ಕೋಲ್ಕತ್ತಾ ಮೂಲದವರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪಡೆದಿದ್ದರು. ನಂತರ ಅಮೆರಿಕದ ಎಂಐಟಿಯಲ್ಲಿ ಅರ್ಥಶಾಸ್ತ್ರಜ್ಞ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೊಬ್ಬ ಪ್ರಶಸ್ತಿ ಪುರಸ್ಕೃತ 57 ವರ್ಷದ ಎಸ್ತಾರ್ ಡೂಪ್ಲೋ ಎಂಐಟಿಯಲ್ಲಿ ಪಿ.ಎಚ್.ಡಿ ಪಡೆದಿದ್ದು, ಅರ್ಥಶಾಸ್ತ್ರ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನು 55 ವರ್ಷದ ಮೈಕೆಲ್ ಕ್ರೆಮರ್ ಕೂಡ ಎಂಐಟಿಯಲ್ಲಿ ಪಿ.ಎಚ್.ಡಿ ಪಡೆದಿದ್ದು, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇನ್ನು ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿಗೆ ಸಂದಿರುವ ನೊಬೆಲ್ ಪ್ರಶಸ್ತಿಗೆ ಹಲವು ಗಣ್ಯರು ಶುಭಾಶಯ ತಿಳಿಸಿದ್ದಾರೆ. ಯುವ ನೇತಾರ ಜಿಗ್ನೇಶ್ ಮೇವಾನಿ, ಅರವಿಂದ್ ಕೇಜ್ರಿವಾಲ್ ಕೂಡ ಟ್ವೀಟ್ ಮಾಡಿ, ಅಭಿಜಿತ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

ಇನ್ನು ರಾಜಾರಾಂ ತಲ್ಲೂರ್ ಅವರು, ‘ಇವರಿಗ್ಯಾರು ನೊಬೆಲ್ ಕೊಟ್ರು ಮಾರಾಯ್ರೆ’..?!!!
ಇವರು ಜೆ.ಎನ್.ಯು ಪ್ರಾಡಕ್ಟ್. ಜತೆಗೆ ಹಾರ್ವರ್ಡೂ ಹೌದು;ಹಾರ್ಡ್ ವರ್ಕೂ ಹೌದು. ಮೇಲಾಗಿ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನ NYAY ಯೋಜನೆ ಇವರದೇ ಸಲಹೆಯಂತೆ. ಡಿಮಾನಿಟೈಸೇಷನ್ ಲಾಜಿಕ್ಕೇ ಅವರಿಗೆ ಇನ್ನೂ ಅರ್ಥ ಆಗಿಲ್ಲವಂತೆ. ಎಂಥದು ಮಾರಾಯ್ರೆ, ಭಕ್ತರಿಗೆ ಅಷ್ಟು ಚೆನ್ನಾಗಿ ಅರ್ಥ ಆದದ್ದು, ಅರೆದು ಕುಡಿದದ್ದು – ತಜ್ಞರಾಗಿ ಇವರಿಗೆ ಅರ್ಥ ಆಗ್ಲಿಲ್ಲ ಅಂದ್ರೆ ಎಂಥಾ ತಜ್ಞರಿವರು..! ಎಂದು ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.

ಇನ್ನು ಬಡವರ ಪರವಾಗಿ ಇವರ ಚಿಂತನೆಗಳಿರುವ ಇವರು ನರೇಗಾ ಯೋಜನೆ ಜಾರಿಯಲ್ಲಿಯೂ ಪ್ರಧಾನ ಪಾತ್ರವಹಿಸಿದ್ದರು. ಹಾಗಾಗಿ ಇವರನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ “ಅರ್ಬನ್‌ ನಕ್ಸಲ್‌” ಎಂದು ಹಲವರು ಕರೆದುದ್ದಲ್ಲದೇ ಅವರಿಗೆ ನೊಬೆಲ್ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮನುವಾದಿಗಳಿಂದ ‘ನಗರದ ನಕ್ಸಲ್’ ಎಂದು ಬಿರುದಾಂಕಿತರಾಗಿದ್ದ, JNU ವಿದ್ಯಾರ್ಥಿಯಾಗಿದ್ದ ಅಭಿಜಿತ್ ಬ್ಯಾನರ್ಜಿ ಅವರಿಗೆ ನೊಬೆಲ್ ಪ್ರಶಸ್ತಿ ದೊರಕಿರುವುದು ಭಾರತದ ಜಾತ್ಯತೀತವಾದಿಗಳಿಗೆ ಹೆಮ್ಮೆಯ ಸಂಗತಿ.

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಕ್ಷೌರ ಮಾಡಲು ತಡವಾಗಿ ಬಂದ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿದ ಪೊಲೀಸ್‌ ಅಧಿಕಾರಿ

0
ಕ್ಷೌರಕ್ಕಾಗಿ ಮನೆಗೆ ಕ್ಷೌರಿಕ ತಡವಾಗಿ ಬಂದ ಎಂದು ಪೊಲೀಸ್‌ ಅಧಿಕಾರಿಯೋರ್ವ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಬುದೌನ್‌ನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಸರ್ಕಲ್ ಆಫೀಸರ್(ಸಿಒ) ಸುನೀಲ್ ಕುಮಾರ್...