Homeಮುಖಪುಟಗಾಝಾದಲ್ಲಿ ಮಕ್ಕಳ ರಕ್ತಪಾತಕ್ಕೆ ಅಮೆರಿಕ ನೇರ ಹೊಣೆ: ಪ್ಯಾಲೆಸ್ತೀನ್

ಗಾಝಾದಲ್ಲಿ ಮಕ್ಕಳ ರಕ್ತಪಾತಕ್ಕೆ ಅಮೆರಿಕ ನೇರ ಹೊಣೆ: ಪ್ಯಾಲೆಸ್ತೀನ್

- Advertisement -
- Advertisement -

ಪ್ಯಾಲೆಸ್ತೀನ್‌ ಮೇಲೆ ಇಸ್ರೇಲ್‌ ಕಳೆದ 2 ತಿಂಗಳಿನಿಂದ ನಿರಂತರವಾಗಿ ದಾಳಿಯನ್ನು ನಡೆಸುತ್ತಿದೆ. ತಕ್ಷಣದ ಕದನ ವಿರಾಮಕ್ಕೆ ಕರೆ ನೀಡುವ ಯುಎನ್ ನಿರ್ಣಯವನ್ನು ಅಮೆರಿಕ ವಿಟೊ ಅಧಿಕಾರ ಬಳಸಿ ತಡೆದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್, ಗಾಝಾದಲ್ಲಿ ಮಕ್ಕಳ ರಕ್ತಪಾತಕ್ಕೆ ಅಮೆರಿಕ ನೇರ ಹೊಣೆ ಎಂದು ಹೇಳಿದ್ದಾರೆ.

ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಈ ಕುರಿತು ಮಾತನಾಡುತ್ತಾ, ಅಮೆರಿಕದ ನಡೆಯು ಆಕ್ರಮಣಕಾರಿ ಮತ್ತು ಅನೈತಿಕ. ಈ ಬೆಳವಣಿಗೆ ಎಲ್ಲಾ ಮಾನವೀಯ ತತ್ವಗಳು ಮತ್ತು ಮೌಲ್ಯಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಗಾಝಾ ಪಟ್ಟಿಯಲ್ಲಿರುವ ಪ್ಯಾಲೆಸ್ತೀನ್‌ನ ಮಕ್ಕಳು, ಮಹಿಳೆಯರು ಮತ್ತು ವೃದ್ಧರ ರಕ್ತಪಾತಕ್ಕೆ ಅಮೆರಿಕ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

ಗಾಝಾದಲ್ಲಿ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿದ ಯುಎನ್ ಭದ್ರತಾ ಮಂಡಳಿಯ ನಿರ್ಣಯವನ್ನು ಯುಎಸ್ ವಿಟೊ ಅಧಿಕಾರ ಬಳಸಿ ರದ್ದು ಮಾಡಿದ ಬೆನ್ನಲ್ಲೇ ಪ್ಯಾಲೆಸ್ತೀನ್‌ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.

ಅಮೆರಿಕದ ಕ್ರಮವನ್ನು ಖಂಡಿಸಿರುವ ಟರ್ಕಿ ಅಧ್ಯಕ್ಷ ಎರ್ಡೊಗನ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎಲ್ಲಾ ಸದಸ್ಯರು ಬೆಂಬಲಿಸಿದ ನಿರ್ಣಯವನ್ನು ಅಮೆರಿಕ ವಿಟೊ ಬಳಸಿ ತಡೆಯುವುದಾದರೆ ಇದು ನ್ಯಾಯಸಮ್ಮತವೇ? ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಮತ್ತೆ ರಚನೆ ಮಾಡಬೇಕು. ಇದು ಅದಕ್ಕೆ ಸೂಕ್ತ ಕಾಲವಾಗಿದೆ ಎಂದು ಹೇಳಿದ್ದಾರೆ.

ಪ್ಯಾಲೆಸ್ತೀನ್‌ ಪ್ರಧಾನಿ ಮೊಹಮ್ಮದ್ ಶ್ತಯ್ಯೆಹ್ ಕೂಡ ಅಮೆರಿಕದ ನಿರ್ಧಾರವನ್ನು ಖಂಡಿಸಿದರು ಮತ್ತು ವಿಟೊ ಅಧಿಕಾರ ಬಳಕೆ ನಾಚಿಕೆಗೇಡು. ಇದು ಇಸ್ರೇಲ್‌ಗೆ ಹತ್ಯಾಕಾಂಡಕ್ಕೆ ನೀಡಲಾದ ಮತ್ತೊಂದು ಖಾಲಿ ಚೆಕ್ ಎಂದು ಹೇಳಿದ್ದಾರೆ.

ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್ ಅವರು ಭದ್ರತಾ ಮಂಡಳಿಯ ಸಭೆಯನ್ನು ತುರ್ತಾಗಿ ಕರೆದು ತಕ್ಷಣದ ಕದನ ವಿರಾಮಕ್ಕೆ ಒತ್ತಾಯಿಸಿದ್ದರು. ಭದ್ರತಾ ಮಂಡಳಿಯ 15 ಸದಸ್ಯ ರಾಷ್ಟ್ರಗಳ ಪೈಕಿ 13 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದವು. ಬ್ರಿಟನ್ ಮತದಾನದಿಂದ ದೂರ ಉಳಿದಿತ್ತು. ಪ್ಯಾಲೆಸ್ತೀನ್‌ ಹಾಗೂ ಇಸ್ರೇಲ್ ಜನರು ಶಾಂತಿಯುತವಾಗಿ ಬದುಕಬೇಕು. ಆದರೆ ದೀರ್ಘಕಾಲದ ಶಾಂತಿಯನ್ನು ಹಮಾಸ್ ಬಯಸುವುದಿಲ್ಲ. ಹಾಗಾಗಿ ಶಾಂತಿಯನ್ನು ಅಮೆರಿಕ ಬಯಸಿದರೂ ತಕ್ಷಣದ ಕದನ ವಿರಾಮ ನಿರ್ಣಯವನ್ನು ಬೆಂಬಲಿಸುವುದಿಲ್ಲ ಎಂದು ಅಮೆರಿಕ ಹೇಳಿ ನಿರ್ಣಯಕ್ಕೆ ತಡೆ ನೀಡಿತ್ತು.

ಇಸ್ರೇಲ್‌ ಯುದ್ಧ ಘೋಷಿಸಿದ ಬಳಿಕ 17,487 ಪ್ಯಾಲೆಸ್ತೀನ್‌ ನಾಗರಿಕರನ್ನು ಇಸ್ರೇಲ್‌ ಹತ್ಯೆ ಮಾಡಿದೆ. ಅದರಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಗಾಝಾದ ವಿಶಾಲ ಪ್ರದೇಶಗಳು ಪಾಳುಭೂಮಿಯಾಗಿ ಮಾರ್ಪಟ್ಟಿವೆ. ಸುಮಾರು 80 ಪ್ರತಿಶತ ಜನಸಂಖ್ಯೆಯು ಸ್ಥಳಾಂತರಗೊಂಡಿದ್ದು, ಆಹಾರ, ಇಂಧನ, ನೀರು ಮತ್ತು ಔಷಧಿಗಳ ಭೀಕರ ಕೊರತೆಯನ್ನು ಎದುರಿಸುತ್ತಿದ್ದಾರೆ ಮತ್ತು ಸಾಂಕ್ರಾಮಿ ರೋಗದ ಭೀತಿ ಎದುರಾಗಿದೆ ಎಂದು UN ಹೇಳಿದೆ.

ಇದನ್ನು ಓದಿ: ರಜಪೂತ ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆ ಪ್ರಕರಣ: ಮೂವರ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...