Homeಮುಖಪುಟಉತ್ತರ ಪ್ರದೇಶ: ಬುಂದೇಲ್‌ಖಂಡ್ ಪಟಾಕಿ ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡ ಮಕ್ಕಳು

ಉತ್ತರ ಪ್ರದೇಶ: ಬುಂದೇಲ್‌ಖಂಡ್ ಪಟಾಕಿ ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡ ಮಕ್ಕಳು

- Advertisement -
- Advertisement -

ಉತ್ತರ ಪ್ರದೇಶದ ಚಿತ್ರಕೂಟದ ಬುಂದೇಲ್‌ಖಂಡ ಗೌರವ ಮಹೋತ್ಸವದಲ್ಲಿ ಸಂಭವಿಸಿದ ಪಟಾಕಿ ಸ್ಫೋಟದಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಉತ್ಸವದಲ್ಲಿ ಪಟಾಕಿ ಸಿಡಿಸುವ ವೇಳೆ ಸ್ಫೋಟ ಸಂಭವಿಸಿದೆ.

‘ಇದರಲ್ಲಿ ನಮ್ಮ ನಾಲ್ವರು ಮಕ್ಕಳು ಸಾವನ್ನಪ್ಪಿದ್ದು, ಚಿತ್ರಕೂಟದ ಡಿಐಜಿ, ಜಿಲ್ಲಾ ಅಧಿಕಾರಿ ಮತ್ತು ಎಸ್ಪಿ, ಹೆಚ್ಚುವರಿ ಎಸ್ಪಿ, ಇತರ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ನಮ್ಮ ವಿಧಿವಿಜ್ಞಾನ ತಂಡ, ಬಾಂಬ್ ನಿಷ್ಕ್ರಿಯ ದಳದ (ಬಿಡಿಎಸ್) ತಂಡವೂ ಆಗಮಿಸುತ್ತಿದೆ’ ಎಂದು ಪ್ರಯಾಗ್ರಾಜ್ ವಲಯ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಭಾನು ಭಾಸ್ಕರ್ ಅವರು ಚಿತ್ರಕೂಟದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಘಟನೆಗೆ ಸಂಬಂಧಿಸಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಎಫ್‌ಐಆರ್‌ನಲ್ಲಿ ಇನ್ನೂ ಹೆಚ್ಚಿನವರ ಹೆಸರು ಸೇರುವ ಸಾಧ್ಯತೆ ಇದ್ದು, ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

‘ಪ್ರಸ್ತುತ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಅದರಲ್ಲಿ ಹೆಚ್ಚಿನ ಜನರನ್ನು ಸೇರಿಸಲಾಗುವುದು. ತನಿಖೆ ನಡೆಯುತ್ತಿದೆ’ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ಹೇಳಿದ್ದಾರೆ.

‘ನಾವು ಪ್ರಕರಣದ ಸಂಪೂರ್ಣ ತನಿಖೆಯನ್ನು ಹೊಸ ತನಿಖಾಧಿಕಾರಿ ಹರ್ಷ್ ಪಾಂಡೆ ಅವರಿಗೆ ನೀಡಿದ್ದೇವೆ. ಆದ್ದರಿಂದ, ನಾವು ತನಿಖೆ ಮಾಡುತ್ತಿರುವಾಗಲೆ ನವ ದೆಹಲಿ ಮತ್ತು ಲಕ್ನೋದಿಂದ ಬರುವ ತಂಡಗಳೊಂದಿಗೆ ಸಮನ್ವಯಗೊಳಿಸುವುದರ ಮೂಲಕ ತನಿಖೆ ತೀಬ್ರಗೊಳಿಸಲಾಗುತ್ತದೆ. ಹಾಗೆಯೇ ಪ್ರಯಾಗ್‌ರಾಜ್‌ನಿಂದ ಮತ್ತು ಆಗ್ರಾದಿಂದ ಬರುವ ತಂಡಗಳೊಂದಿಗೆ ನಾವು ಶೀಘ್ರದಲ್ಲೇ ತನಿಖೆ ಮುಂದುವರಿಸುತ್ತೇವೆ’ ಎಂದು ಅವರು ಹೇಳಿದರು.

‘ತನಿಖೆಗೆ ಸಂಬಂಧಿಸಿದಂತೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದು ಈಗ ಸೂಕ್ತವಲ್ಲ. ಏಕೆಂದರೆ, ಎಲ್ಲಾ ಸಣ್ಣಸಣ್ಣ ಸಂಗತಿಗಳನ್ನು ಪರಿಶೀಲಿಸಲಾಗುತ್ತಿದೆ. ಮಕ್ಕಳ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿಲ್ಲ. ಹೆಚ್ಚಿನ ಜನರನ್ನು ವಿಚಾರಣೆ ನಡೆಸಲಾಗುತ್ತಿದೆ ಮತ್ತು ಅವರು ನೀಡಿದ ಸುಳಿವುಗಳೊಂದಿಗೆ ನಾವು ತನಿಖೆ ನಡೆಸುತ್ತಿದ್ದೇವೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಘಟನೆಯ ತನಿಖೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖಾ ಸಮಿತಿಗೆ ಆದೇಶ ನೀಡಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ₹5 ಲಕ್ಷ ಹಾಗೂ ಗಾಯಗೊಂಡವರಿಗೆ ₹50 ಸಾವಿರ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದರು.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ಮಾತನಾಡಿ, ಸಂತ್ರಸ್ತರ ಕುಟುಂಬ ಸದಸ್ಯರನ್ನು ಅಧಿಕಾರಿಗಳು ಭೇಟಿಯಾಗುತ್ತಿದ್ದಾರೆ. ಮಕ್ಕಳ ಗುರುತು ಇನ್ನೂ ಬಹಿರಂಗವಾಗಿಲ್ಲ, ಸಂತ್ರಸ್ತರ ಕುಟುಂಬಕ್ಕೆ ಸರ್ಕಾರ ಪರಿಹಾರವನ್ನು ಘೋಷಿಸಿದೆ ಎಂದು ಹೇಳಿದರು.

‘ಈಗ ನಾವು ಎಲ್ಲರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ, ಕುಟುಂಬ ಸದಸ್ಯರನ್ನು ಭೇಟಿ ಮಾಡುವುದು ನಮ್ಮ ಮೊದಲ ಕೆಲಸವಾಗಿತ್ತು. ಆದ್ದರಿಂದ ನಾವು ಇಲ್ಲಿಯವರೆಗೆ ಇಬ್ಬರನ್ನು ಮಾತ್ರ ಭೇಟಿ ಮಾಡಿದ್ದೇವೆ, ನಾವು ಅಲಹಾಬಾದ್ ಮತ್ತು ಪ್ರಯಾಗ್ರಾಜ್ನಲ್ಲಿ ಕುಟುಂಬವನ್ನು ಭೇಟಿ ಮಾಡಿದ್ದೇವೆ. ಅದರ ನಂತರ ನಾವು ಉಳಿದವರನ್ನು ಭೇಟಿ ಮಾಡಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಅವರು ಹೇಳಿದರು.

‘ಸರ್ಕಾರದ ಕಡೆಯಿಂದ ಪರಿಹಾರದ ಬಗ್ಗೆ ಕೆಲ ಮಾತುಗಳು ಕೇಳಿ ಬರುತ್ತಿದ್ದು, ಅದರಲ್ಲಿ ಪ್ರತಿ ಕುಟುಂಬಕ್ಕೆ ₹5 ಲಕ್ಷ ಹಾಗೂ ಗಾಯಗೊಂಡವರಿಗೆ ₹5 ಲಕ್ಷ ನೀಡಬೇಕು. ಇದನ್ನು ಹೊರತುಪಡಿಸಿ ಉಳಿದ ಪ್ರಕ್ರಿಯೆ ನಡೆಯುತ್ತಿದೆ, ಆದ್ದರಿಂದ ನಾವು ಎಲ್ಲ ಅಂಶಗಳನ್ನು ನೋಡುತ್ತೇವೆ; ಶೀಘ್ರದಲ್ಲೇ ಇದನ್ನು ತೀರ್ಮಾನಿಸುತ್ತೇವೆ’ ಎಂದು ಎಡಿಜಿ ಭಾಸ್ಕರ್ ಹೇಳಿದರು.

ಇದನ್ನೂ ಓದಿ; ಫೆ.21ರಂದು ಮಮತಾ ಬ್ಯಾನರ್ಜಿ ಪಂಜಾಬ್‌ಗೆ ಭೇಟಿ; ಕೇಜ್ರಿವಾಲ್, ಭಗವಂತ್ ಮಾನ್ ಜತೆ ಮಾತುಕತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read