Homeಮುಖಪುಟ’ನಾವೇನು 2014ರ ನಂತರ ರಾಗ ಬದಲಾಯಿಸಿದವರಲ್ಲ’: 2009 ರ ವಿಡಿಯೊ ಹಂಚಿಕೊಂಡ ನಟ ಸಿದ್ದಾರ್ಥ್

’ನಾವೇನು 2014ರ ನಂತರ ರಾಗ ಬದಲಾಯಿಸಿದವರಲ್ಲ’: 2009 ರ ವಿಡಿಯೊ ಹಂಚಿಕೊಂಡ ನಟ ಸಿದ್ದಾರ್ಥ್

- Advertisement -
- Advertisement -

ಸಾಮಾಜಿಕ ವಿಷಯದ ಬಗ್ಗೆ ಸದಾ ಧ್ವನಿ ಎತ್ತುತ್ತಿರುವ ಪ್ರತಿಭಾನ್ವಿತ ಬಹುಭಾಷ ನಟ ಸಿದ್ಧಾರ್ಥ್, ಟ್ವಿಟರ್‌‌ನಲ್ಲಿ 2009 ರಲ್ಲಿ ಇಂಡಿಯನ್ ಬ್ಯುಸಿನೆಸ್ ಸ್ಕೂಲ್‌‌ನಲ್ಲಿ ಮಾಡಿರುವ ಭಾಷಣವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ 2009 ರಲ್ಲಿ ನನ್ನ ಅಭಿಪ್ರಾಯಕ್ಕಾಗಿ ಯಾರೂ ನನ್ನ ಮೇಲೆ ದಾಳಿ ಮಾಡಿಲ್ಲ. ಆದರೆ ಇದರ ನಂತರ ದೇಶವು ಎಷ್ಟು ಬದಲಾಗಿದೆ? ಎಂದು ಪ್ರಶ್ನಿಸಿದ್ದಾರೆ.

ಟೂಲ್‌ಕಿಟ್ ಪ್ರಕರಣದಲ್ಲಿ ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರನ್ನು ಬಂಧಿಸಿರುವುದನ್ನು ಸಿದ್ದಾರ್ಥ್ ಖಂಡಿಸಿದ್ದರು. ಇದಕ್ಕಾಗಿ ಅವರು ಮೇಲೆ ಬೆದರಿಕೆ ಸೇರಿದಂತೆ, ಟ್ರೋಲ್ ದಾಳಿಗಳಾಗಿದ್ದವು. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “2009 ರಲ್ಲಿ, ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ನಾನು ಮಾಡಿದ ಭಾಷಣ. ಈ ದೇಶಕ್ಕೆ ಮರೆವಿನ ರೋಗವಿದೆ. ಈಗ ಅದು ಬ್ರೈನ್ ವಾಶ್ ಆಗಿದೆ ಮತ್ತು ದುಷ್ಟತನದ ಅನುಮಾನದ ಬೀಜಗಳನ್ನು ಬಿತ್ತಲಾಗುತ್ತಿದೆ. ನಾವು 2014 ರ ನಂತರ ರಾಗವನ್ನು ಬದಲಾಯಿಸಿದವರಲ್ಲ. ಸತ್ಯದೊಂದಿಗೆ ನಿಲ್ಲಿ ಮತ್ತು ಸತ್ಯವನ್ನೇ ಮಾತನಾಡಿ” ಎಂದು ಟ್ವೀಟ್ ಮಾಡಿ, ಅದರಲ್ಲಿ ಅವರು 2009 ರಲ್ಲಿ ಮಾಡಿದ ಭಾಷಣವನ್ನು ಶೇರ್‌ ಮಾಡಿದ್ದಾರೆ.

ಇದನ್ನೂ ಓದಿ: ರೈತರ ಮೊಮ್ಮಗಳನ್ನು ಬಂಧಿಸಿದರೆ ಹೋರಾಟ ದುರ್ಬಲಗೊಳ್ಳುವುದಿಲ್ಲ: ದಿಶಾ ರವಿಗೆ ಜಾಗತಿಕ ಬೆಂಬಲ

“ಈ ಭಾಷಣಕ್ಕಾಗಿ ನಾನು ಅವತ್ತು ಒಂದೇ ಒಂದು ದೂರು ಅಥವಾ ಬೆದರಿಕೆ ಎದುರಿಸಿಲ್ಲ ಎಂದು ನನಗೆ ಆಶ್ಚರ್ಯವಾಗುತ್ತಿದೆ. ಯಾರೂ ಕೂಡಾ ಈ ನನ್ನ ಅಭಿಪ್ರಾಯ ಹಾಗೂ ಪ್ರಶ್ನೆಗಳಿಗಾಗಿ ದಾಳಿ ಮಾಡಲಿಲ್ಲ. ಆದರೆ ಭಾರತವು ಬದಲಾಗಿದೆ. ಅದು ನಮ್ಮ ಕಣ್ಣುಗಳ ಮುಂದೆಯೆ ಬದಲಾಯಿತು. ಆದರೆ ಪ್ರಶ್ನೆಯಿರುವುದು, ಇದರ ಬಗ್ಗೆ ನಾವು ಏನು ಮಾಡಲಿದ್ದೇವೆ ಎಂಬುವುದಾಗಿದೆ” ಎಂದು ಅವರು ಹೇಳಿದ್ದಾರೆ.

ಹಲವಾರು ಹಿಟ್ ಚಿತ್ರದ ಮೂಲಕ ಖ್ಯಾತಿ ಗಳಿಸಿರುವ ನಟ ಸಿದ್ಧಾರ್ಥ್, 2009 ರಲ್ಲಿ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ದೇಶದ ಸ್ಥಿಗತಿಗಳ ಬಗ್ಗೆ ಮಾತನಾಡಿದ್ದರು. ಭಾಷಣದಲ್ಲಿ ಆಂಧ್ರಪ್ರದೇಶದಲ್ಲಿ ಸಂಭವಿಸಿದ ಪ್ರವಾಹವನ್ನು ಅಲ್ಲಿನ ಮುಖ್ಯಮಂತ್ರಿ ನಿಭಾಯಿಸಿದ ರೀತಿ ಮತ್ತು 25/11 ಮುಂಬೈ ಭಯೋತ್ಪಾದಕ ದಾಳಿಯನ್ನು ಮಾಧ್ಯಮಗಳು ನಿಭಾಯಿಸಿದ್ದ ರೀತಿಯನ್ನು ಅವರು ಭಾಷಣದಲ್ಲಿ ಟೀಕಿಸಿದ್ದರು.

ಇದನ್ನೂ ಓದಿ: ಟ್ರ್ಯಾಕ್ಟರ್ ಪರೇಡ್‌ನಲ್ಲಿ ರೈತನ ಸಾವಿನ ಕುರಿತ ಟ್ವೀಟ್: ‘ವೈರ್’ನ ಸಿದ್ದಾರ್ಥ್ ವರದರಾಜನ್ ವಿರುದ್ಧ FIR

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...