Homeಕರ್ನಾಟಕದೇಶದ ಹೆಸರು ಬದಲಾವಣೆ ಮಾಡಿದ್ರೆ ಏನು ಲಾಭ? ಜನರ ಬದುಕು ಬದಲಾಗಬೇಕು: ಡಿ.ಕೆ.ಶಿವಕುಮಾರ್

ದೇಶದ ಹೆಸರು ಬದಲಾವಣೆ ಮಾಡಿದ್ರೆ ಏನು ಲಾಭ? ಜನರ ಬದುಕು ಬದಲಾಗಬೇಕು: ಡಿ.ಕೆ.ಶಿವಕುಮಾರ್

- Advertisement -
- Advertisement -

”ದೇಶದ ಹೆಸರು ಬದಲಾವಣೆ ಮಾಡಿದರೆ ಏನು ಲಾಭ. ದೇಶದ ಜನರ ಜೀವನದಲ್ಲಿ ಬದಲಾವಣೆ ಆಗುವುದು ಮುಖ್ಯ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರು, ದೇಶದ ಹೆಸರನ್ನು ಇಂಡಿಯಾ ಬದಲು ಭಾರತ್ ಎಂದು ಬದಲಿಸುವ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಅವರು, ”ದೇಶದ ಎಲ್ಲ ಜನರಿಗೂ ಅನ್ನ, ಉದ್ಯೋಗ, ಮನೆ ಸಿಕ್ಕರೆ ಅದನ್ನು ಬದಲಾವಣೆ ಎನ್ನಬಹುದು. ಕಳೆದ 9 ವರ್ಷಗಳಲ್ಲಿ ಜನರ ಆದಾಯ ದುಪಟ್ಟಾಯಿತೇ, 15 ಲಕ್ಷ ಹಣ ಬ್ಯಾಂಕ್ ಖಾತೆಗೆ ಬಂದಿದೆಯೇ? ಇಲ್ಲ. ಒಂದೇ ಒಂದು ಅಕ್ಕಿಕಾಳು ಕಡಿಮೆ ಕೊಟ್ಟರು ಬಿಡುವುದಿಲ್ಲ ಎಂದು ಬಿಜೆಪಿಯವರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದರು, ಆದರೆ ಅವರು ಕೊಟ್ಟ ಮಾತನ್ನು ಒಂದಾದರೂ ಉಳಿಸಿಕೊಂಡಿದ್ದಾರೆಯೇ?” ಎಂದು ಪ್ರಶ್ನೆ ಮಾಡಿದರು.

”ಶ್ರೀಮಂತರು, ದೊಡ್ಡ ಉದ್ಯಮಿಗಳು ದೇಶಬಿಟ್ಟು ಹೋಗುತ್ತಿದ್ದಾರೆ. 12 ಲಕ್ಷ ಪಾಸ್‌ಪೋರ್ಟ್ಸ್‌ಗಳನ್ನು ಸರ್ಕಾರದ ವಶಕ್ಕೆ ನೀಡಿ ಈ ದೇಶದ ಕೋಟ್ಯಾಧಿಪತಿಗಳು ಬೇರೆ ದೇಶದ ಪೌರತ್ವ ತೆಗೆದುಕೊಂಡಿದ್ದಾರೆ. ನಮ್ಮ ದೇಶದ ಹಣ ಹೊರಗಡೆ ಹೋಗುತ್ತಿದೆ. ಹೆಸರು ಬದಲಾವಣೆಯಿಂದ ಏನೂ ಲಾಭವಿಲ್ಲ. ನಮ್ಮ ಆಚಾರ- ವಿಚಾರ ಬದಲಾವಣೆಯಾಗಬೇಕು” ಎಂದರು.

”ಸರ್ಕಾರ ಜನರ ಕಲ್ಯಾಣ ಮಾಡುವ ಹೊಸ ಕಾನೂನುಗಳನ್ನು ತರಬೇಕು. ನಮ್ಮ ಯುಪಿಎ ಸರ್ಕಾರ ಇದ್ದಾಗ ಮಾಹಿತಿಹಕ್ಕು, ಆರ್ಟಿಐ, ನರೇಗಾ, ಆಹಾರ ಭದ್ರತಾ ಕಾಯ್ದೆಗಳನ್ನು ಜಾರಿಗೆ ತಂದೆವು, ಇಂತಹ ಯೋಚನೆಗಳು ಬಿಜೆಪಿಯವರಿಗೆ ಬರುವುದಿಲ್ಲವೇ?” ಎಂದು ಕೇಳಿದ್ದಾರೆ.

ಹಿಂದೂ ಧರ್ಮಕ್ಕೆ ಅಪ್ಪ- ಅಮ್ಮ ಯಾರು ಇಲ್ಲ ಎಂದು ಗೃಹ ಸಚಿವರಾದ ಪರಮೇಶ್ವರ್ ಅವರು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮದವರು ಕೇಳಿದಾಗ, ”ನಾನು ಭಾರತೀಯ ಹಾಗೂ ಹಿಂದೂವಾಗಿರುವುದ್ದಕ್ಕೆ ಹೆಮ್ಮೆ ಪಡುತ್ತೇನೆ” ಎಂದು ಉತ್ತರಿಸಿದರು.

ಇದೇ ವೇಳೆ ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡಿನ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿರುವ ಬಗ್ಗೆ ಕೇಳಿದಾಗ, ”ಕಾವೇರಿ ನೀರಿನ ವಿಚಾರವಾಗಿ ನಡೆಯುತ್ತಿರುವ ವಿಚಾರಣೆಯ ಜೂಮ್ ಲಿಂಕ್‌ನ್ನು ನನಗೆ ಕಳುಹಿಸಿದ್ದರು. ನಾನು ವಿಚಾರಣೆಯನ್ನು ನೋಡಲು ಕಾಯುತ್ತಿದ್ದೆ. ಆದರೆ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಮುಂದಕ್ಕೆ ಹಾಕಿದೆ. ಕಳೆದೆರಡು ದಿನಗಳಲ್ಲಿ ಮಳೆ ಬರುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು, ಮಳೆಯಾಗಿಲ್ಲ. ಹೀಗಾಗಿ ನಾವು ಮತ್ತೆ ಕಾಯಬೇಕು” ಎಂದು ತಿಳಿಸಿದರು.

ಇದನ್ನೂ ಓದಿ: ”ಗೇಮ್ ಚೇಂಜರ್ಸ್” ಎಂದು ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಕೇವಲ “ನೇಮ್ ಚೇಂಜರ್ಸ್” ಆಗಿದೆ: ಪ್ರಿಯಾಂಕ್ ಖರ್ಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...