Homeಮುಖಪುಟಐದು ರಾಜ್ಯಗಳ ಚುನಾವಣಾ ಫಲಿತಾಂಶ ಹೇಳುವುದೇನು?

ಐದು ರಾಜ್ಯಗಳ ಚುನಾವಣಾ ಫಲಿತಾಂಶ ಹೇಳುವುದೇನು?

- Advertisement -
- Advertisement -

ಇತ್ತೀಚಿಗೆ ನಡೆದ ಐದು ರಾಜ್ಯಗಳ ಚುನಾವಣೆಗಳು ಮತ್ತು ಆ ಚುನಾವಣೆಗಳ ಫಲಿತಾಂಶಗಳು ದೇಶಕ್ಕೆ ಹಲವಾರು ಸೂಚ್ಯವಾದ ಸಂದೇಶಗಳನ್ನು ನೀಡಬಯಸುತ್ತಿವೆ.

ಸದ್ಯ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಸಂದೇಶವೇನೆಂದರೆ- ಐದು ರಾಜ್ಯಗಳಲ್ಲಿ ಬಿಜೆಪಿ ಟಿಕೆಟ್ ಅಡಿಯಲ್ಲಿ ಗೆದ್ದಿರುವ ಶಾಸಕರ ಸಂಖ್ಯೆಯಲ್ಲಿ ಕುಸಿತವಾಗಿದೆ. ಎಲ್ಲಾ ಐದು ರಾಜ್ಯಗಳನ್ನು ಪರಿಗಣಿಸಿದಾಗ, ಈ ವರ್ಷ 356 ಶಾಸಕರು ಬಿಜೆಪಿ ಟಿಕೆಟ್‌ನಲ್ಲಿ ಆಯ್ಕೆಯಾದರೆ 2017ರ ಚುನಾವಣೆಗಳಲ್ಲಿ ಆ ಸಂಖ್ಯೆ 406 ಆಗಿತ್ತು. ಅಂದರೆ ಕಳೆದ ಚುನಾವಣೆಗಿಂತ 50 ಶಾಸಕರು ಈ ಬಾರಿ ಕಡಿಮೆಯಾಗಿದ್ದಾರೆ. ಶುದ್ಧ ಸಂಖ್ಯಾತ್ಮಕ ಪರಿಭಾಷೆಯಲ್ಲಿ ಹೇಳುವುದಾದರೆ ಉತ್ತರ ಪ್ರದೇಶ (312 ರಿಂದ 255), ಉತ್ತರಾ ಖಂಡ (57 ರಿಂದ 47), ಪಂಜಾಬ್ (03 ರಿಂದ 02) ರಾಜ್ಯಗಳಲ್ಲಿ ಬಿಜೆಪಿ ಶಾಸಕರ ಸಂಖ್ಯೆ ಕುಸಿದಿದೆ. ಇದೇ ಸಂದರ್ಭದಲ್ಲಿ ಮಣಿಪುರ (21 ರಿಂದ 32) ಮತ್ತು ಗೋವಾದಲ್ಲಿ (13 ರಿಂದ 20) ಬಿಜೆಪಿ ಶಾಸಕರ ಸಂಖ್ಯೆ ಏರಿಕೆಯಾಗಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಶಾಸಕರ ಸಂಖ್ಯೆ 2017ರಲ್ಲಿ 47 ಇದ್ದಿದ್ದು ಈಗ 111 ಆಗಿದೆ. ಬಿಜೆಪಿಯ ರ್‍ಯಾಲಿಗಳು ಮತ್ತು ಪ್ರಧಾನ ಮಂತ್ರಿಗಳ ಕೋಮು ಧ್ರುವೀಕರಣವು 2014 ಮತ್ತು 2017ರಲ್ಲಿ ಕೆಲಸ ಮಾಡಿದಂತೆ ಇನ್ನು ಮುಂದೆ ಚುನಾವಣಾ ಲಾಭ ತಂದುಕೊಡುವುದಿಲ್ಲ ಎಂಬುದು ಬಿಜೆಪಿಗೆ ಸಂದೇಶವಾಗಿದೆ.

ಹಿಂದೂಯೇತರರು ಪ್ರಧಾನವಾಗಿರುವ ರಾಜ್ಯಗಳಲ್ಲಿ ಹೊಸಬರು ಸಹ ಹಿಂದುತ್ವ ಸಿದ್ಧಾಂತವನ್ನು ಸೋಲಿಸಬಹುದು ಎಂಬುದು ಆಪ್‌ನಂತಹ ಪಕ್ಷಗಳಿಗೆ ಸಂದೇಶವಾಗಿದೆ. ರಾಷ್ಟ್ರೀಯ ಪಕ್ಷವಾಗಬೇಕೆಂಬ ಆಕಾಂಕ್ಷೆಯೊಂದಿಗೆ ಹಾತೊರೆಯುತ್ತಿರುವ ಟಿಎಂಸಿಯಂತಹ ಪಕ್ಷಗಳು ಇನ್ನೂ ಸ್ವಲ್ಪ ಸಮಯದವರೆಗೆ ಕಾಯಬೇಕು ಎಂಬುದು ಆ ಸಂದೇಶವಾಗಿದೆ. ಕಾಂಗ್ರೆಸ್‌ಗೆ ಪಂಜಾಬ್, ಮಣಿಪುರ, ಗೋವಾ ಮತ್ತು ಉತ್ತರಾಖಂಡ ಚುನಾವಣೆಗಳ ಸಂದೇಶವೆಂದರೆ, ಆ ಪಕ್ಷದ ಸಂಪೂರ್ಣ ರೂಪಾಂತರಕ್ಕೆ ನಿರ್ಧರಿಸಿದರೆ ಅದು ಈ ಕ್ಷಣದಿಂದಲೇ ಶುರುವಾಗಬೇಕು ಮತ್ತು ಒಂದು ನಿಮಿಷವನ್ನೂ ವ್ಯರ್ಥ ಮಾಡಬಾರದೆಂಬುದು. ಇದನ್ನು ಮಾಡದೆ ಹೋದರೆ, ಪಕ್ಷದೊಳಗಿನ ಬಂಡಾಯ ಮತ್ತು ಅಲ್ಲಿಂದ ದೂರವಾಗುವ ಪ್ರಕ್ರಿಯೆಗಳು ಹೆಚ್ಚಾಗಲಿವೆ. ಅಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಕುಟುಂಬದ ನಾಯಕತ್ವ ಅತ್ಯಗತ್ಯವಾಗಿರಬಹುದು, ಆದರೆ ಅದನ್ನು ಮತದಾರರು ಬಯಸುತ್ತಿಲ್ಲ ಎಂದು ಈ ಚುನಾವಣೆಗಳು ಸ್ಪಷ್ಟಪಡಿಸಿವೆ. ಕಾಂಗ್ರೆಸ್ ತನ್ನ ಅಸ್ತಿತ್ವ ಮತ್ತು ಕಾರ್ಯನಿರ್ವಹಣೆಯ ಎಲ್ಲಾ ಅಂಶಗಳ ಬಗ್ಗೆ ಹೊಸದಾಗಿ ಯೋಚಿಸಬೇಕಾಗಿದೆ.

ಗೋವಾ, ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ಸ್ಪರ್ಧೆಯಲ್ಲಿದ್ದ ಹಲವು ಸಣ್ಣ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಸಂದೇಶವೆಂದರೆ, ಅವರು ಅತಂತ್ರ ವಿಧಾನಸಭೆಯ ಪರಿಸ್ಥಿತಿ ಏರ್ಪಟ್ಟು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದವರೊಂದಿಗೆ ಮೈತ್ರಿ ಮಾಡಿಕೊಳ್ಳೋಣ ಎಂದು ಕಾಯುವುದಕ್ಕಿಂತ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದು ಅವರ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂಬುದಾಗಿದೆ. ದೊಡ್ಡ ಪಕ್ಷಗಳಿಗೆ ಬಿ ಟೀಮ್‌ಗಳಾಗಿ ಕೆಲಸ ಮಾಡುವ ಪಕ್ಷಗಳಿಗೂ ಇದೇ ಅನ್ವಯಿಸುತ್ತದೆ. ತಮ್ಮ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಪ್ರಾಣವನ್ನೇ ಪಣಕ್ಕಿಡುವ ಸಾಹಸಿ ಪಕ್ಷಗಳಂತೆ ಬಿಂಬಿಸಿಕೊಳ್ಳುವುದಕ್ಕಿಂತ ಒಂದು ದೊಡ್ಡ ಪಕ್ಷದ ಜೊತೆ ಬಹಿರಂಗವಾಗಿ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಹೆಚ್ಚಿನ ಬಲ ಪಡೆಯಬಹುದು ಎಂಬ ಸಂದೇಶವಿದೆ.

ಚುನಾವಣಾ ರಾಜಕೀಯದಿಂದ ದೂರ ಇರುವವರು, ಚಳವಳಿಗಳು, ನಾಗರಿಕ ಸಮಾಜ ಮತ್ತು ಎನ್‌ಜಿಒಗಳಿಗೆ ಸಂದೇಶವೆಂದರೆ ಪ್ರತ್ಯೇಕವಾದ ಸಾಮಾಜಿಕ ಅಥವಾ ಆರ್ಥಿಕ ಸಮಸ್ಯೆಗಳಿಂದ ಅಥವಾ ಅಮೂರ್ತ ತತ್ವಗಳ ಪರಿಗಣನೆಯಿಂದ ಮತದಾರರು ಪ್ರಭಾವಿತರಾಗುವುದಿಲ್ಲ ಎಂಬುದಾಗಿದೆ. ಅವರು ನೆನಪಿಡಬೇಕಾದ ಸಂಗತಿಯೆಂದರೆ ಪರೋಕ್ಷ ರಾಜಕೀಯ ಎಂಬುದು ಇಂದು ವೇಗವಾಗಿ ನೆಲೆ ಕಳೆದುಕೊಳ್ಳುತ್ತಿದೆ ಮತ್ತು ಚುನಾವಣೆಗಳಲ್ಲಿ ಪ್ರಭಾವ ಬೀರಲು ಬಯಸುವವರು ಯಾವ ಪಕ್ಷದೊಂದಿಗೆ ಮೈತ್ರಿ ಹೊಂದಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟವಾಗಿ ಹೇಳಬೇಕಾಗುತ್ತದೆ. 2021ರ ರೈತ ಹೋರಾಟ ಮತ್ತು 2020ರ ಸಿಎಎ ವಿರೋಧಿ ಹೋರಾಟವು ಪಂಜಾಬ್ ಮತ್ತು ಉತ್ತರ ಪ್ರದೇಶದ ಚುನಾವಣೆಯ ಫಲಿತಾಂಶವನ್ನು ಪ್ರಭಾವಿಸುತ್ತದೆ ಎಂಬ ದೊಡ್ಡ ಭರವಸೆ ಇತ್ತು. ಆದರೆ ಆ ಭರವಸೆ ಫಲ ಕೊಟ್ಟಿಲ್ಲ.

ಈ ಎಲ್ಲಾ ವಾಸ್ತವ ಅಂಶಗಳನ್ನು ಒಟ್ಟು ಮಾಡಿ ನೋಡಿದರೆ ದೇಶಕ್ಕೆ ಯಾವ ಸಂದೇಶವಿದೆ? 2024ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಈಗಲೇ ನಿರ್ಧರಿತವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಮುಂಚಿತವಾಗಿ ಮತ್ತು ಸೂಕ್ತ ರೀತಿಯಲ್ಲಿ ಮೈತ್ರಿ ಮಾಡಿಕೊಂಡಲ್ಲಿ ಅಂತಹ ಪಕ್ಷಗಳು ಮೈತ್ರಿ ಸಂಸತ್ ಚುನಾವಣೆಯನ್ನು ಎದುರಿಸಬಹುದು ಮತ್ತು ಗೆಲುವು ಸಾಧಿಸಬಹುದಾಗಿದೆ. ನಾಗರಿಕ ಸಮಾಜ ಮತ್ತು ರಾಜಕೀಯ ಕಾರ್ಯಕರ್ತರು ಇದುವರೆಗಿನ ತೆರೆಮರೆಯಲ್ಲಿರುವ ಅಭ್ಯಾಸ ತೊರೆದರೆ ಮತ್ತು ಆಯಾ ರಾಜ್ಯಗಳಲ್ಲಿ ತಮ್ಮ ಆಯ್ಕೆಯ ಪಕ್ಷದ ಹಿಂದೆ ಬಹಿರಂಗವಾಗಿ ನಿಂತರೆ ಬಿಜೆಪಿಯನ್ನು ಸೋಲಿಸಲು ಆಶಿಸಬಹುದು. 2022ರ ಚುನಾವಣೆಯ ಫಲಿತಾಂಶಗಳು
ತೋರಿಸುವುದೇನೆಂದರೆ ದಕ್ಷಿಣ ಭಾರತವು ಹಿಂದುತ್ವ ಸಿದ್ಧಾಂತಕ್ಕೆ ಭೇದಿಸಲಾಗದ ಚಕ್ರವ್ಯೂಹವಾಗಿಯೇ ಉಳಿದಿದೆ. ಇಲ್ಲಿ ಹಿಂದುತ್ವ ತನ್ನ ಹೊಳಪನ್ನು ಕಳೆದುಕೊಂಡಿದೆ.

ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಹೊಸದಾದ, ತರ್ಕಬದ್ದವಾದ (ವೈಚಾರಿಕವಾದ), ಅದೇ ರೀತಿ ಭಾವನಾತ್ಮಕವಾದ ಹೊಸ ನಿರೂಪಣೆಯನ್ನು ಮತದಾರರು ಬಯಸುತ್ತಿದ್ದಾರೆ ಎಂಬುದು ಎಲ್ಲಾ ಪಕ್ಷಗಳಿಗೆ ಈ ಚುನಾವಣೆಯ ಸಂದೇಶವಾಗಿದೆ. ಕಳೆದ ಏಳು ವರ್ಷಗಳಲ್ಲಿ ತೆವಳುವುದನ್ನು ಕಲಿತ ಮಾಧ್ಯಮಗಳು ಹೇಗೆ ನಿಲುವು ತಳೆಯಬೇಕು ಎಂಬುದನ್ನು ಮರೆತಿವೆ, ಹಾಗಾಗಿಯೇ ಚುನಾವಣಾ ಫಲಿತಾಂಶವನ್ನು ಬಿಜೆಪಿಗೆ ಅಭೂತಪೂರ್ವ ಜಯ ಎಂದು ಬಿಂಬಿಸುತ್ತಿವೆ. ಬಿಜೆಪಿ ನಾಯಕರು ಕೂಡ ಈ ಕ್ಷಣವನ್ನು ವಿಜಯೋತ್ಸವದ ಕ್ಷಣವನ್ನಾಗಿ
ಆಚರಿಸಿದರು. ಖಂಡಿತವಾಗಿ 2024 ಕೇಕ್-ವಾಕ್ ಅಲ್ಲ ಎಂದು ಅವರಿಬ್ಬರಿಗೂ ತಿಳಿದಿದೆ. ನಾಗರಿಕ
ಸಮಾಜವು ತಕ್ಷಣವೇ ನಿರುತ್ಸಾಹಗೊಂಡಿದೆ ಮತ್ತು ಪಕ್ಷಪಾತವಿಲ್ಲದ ವಿಶ್ಲೇಷಣೆ ಮತ್ತು ಹೊಸ ಸಂಕಲ್ಪಗಳಿಗೆ ಇದು ಕ್ಷಣವಾಗಿದೆ ಎಂಬುದನ್ನು ಮರೆತಿದೆ. ಹಳೆಯ ತರ್ಕ ಮತ್ತು ಚಿಂತನೆಯ ಅಭ್ಯಾಸದ ಮುಖವಾಡಗಳನ್ನು ಕಿತ್ತೆಸೆಯದ ಹೊರತು ಹಳೆಯ ಘೋಷಣೆಗಳು ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂಬುದನ್ನು ಅದು ಮರೆತಿದೆ. ನಾವೆಲ್ಲರೂ ನಮ್ಮನ್ನು ಪರಿವರ್ತಿಸಿಕೊಳ್ಳುವ, ಸಂಕುಚಿತ ಉದ್ದೇಶಗಳನ್ನು ಬದಿಗಿಟ್ಟು ಪ್ರಜಾಪ್ರಭುತ್ವವನ್ನು ಬಲಪಡಿಸುವ ಕೆಲಸ ಮಾಡುವ ಕ್ಷಣ ಇದು. ಅದಕ್ಕೆ ಮತದಾರರು ಸ್ಪಷ್ಟ ಕರೆ ನೀಡಿದ್ದಾರೆ. ಅವರ ಮಾತನ್ನು ಕೇಳಲು ನಾವು ಸಿದ್ಧರಿದ್ದೇವೆಯೇ?

ಕನ್ನಡಕ್ಕೆ: ಮುತ್ತುರಾಜ್

ಪ್ರೊ. ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.


ಇದನ್ನೂ ಓದಿ: ಮತೀಯ ಗೂಂಡಾಗಿರಿಯಿಂದ ಮುಸ್ಲಿಮರ ವ್ಯಾಪಾರ ನಿಷೇಧದವರೆಗೆ: ಬೊಮ್ಮಾಯಿ ಸರ್ಕಾರದ ಮತಾಂಧತೆಯ ಹೆಜ್ಜೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...