Homeಅಂಕಣಗಳುಎಲೆಕ್ಷನ್ ಬಂದಾಕ್ಷಣ ಪಾರ್ಟಿನೇ ತಾಯಿ ಅಂತಾರೆ; ದೇಶನೇ ಮರ್ತೋಗ್ತಾರಲ್ಲಾ!

ಎಲೆಕ್ಷನ್ ಬಂದಾಕ್ಷಣ ಪಾರ್ಟಿನೇ ತಾಯಿ ಅಂತಾರೆ; ದೇಶನೇ ಮರ್ತೋಗ್ತಾರಲ್ಲಾ!

- Advertisement -
- Advertisement -

ಎದುರು ಬರುತ್ತಿರುವವನು ಕಾಂಗ್ರೆಸ್ ಕಾರ್ಯಕರ್ತ ಎಂದು ಗೊತ್ತಾದರೆ ಸಾಕು ಭಕ್ತಿಯಿಂದ ಕೈ ಮುಗಿದು, ’ದಯಮಾಡಿ ನನ್ನನ್ನ ಕಾಂಗ್ರೆಸ್‌ಗೆ ಸೇರಿಸಿ’ ಎಂದು ಕೇಳಿಕೊಳ್ಳುತ್ತಿದ್ದ ಕಡೂರು ದತ್ತಣ್ಣ ಕಾಂಗ್ರೆಸ್ ಸೇರಿಯೂ ಆಯ್ತು; ಅದನ್ನು ಬಿಟ್ಟು ಮತ್ತೆ ಜೆಡಿಎಸ್ ಸೇರಿ ಕಡೂರಿನ ಕ್ಯಾಂಡೇಟ್ ಆಗಿಯೂ ಆಯ್ತು. ಕಡೂರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಅಂತಹ ವ್ಯತ್ಯಾಸವಿಲ್ಲ, ಹಾಗಾಗಿ ದತ್ತಣ್ಣ ಎಲ್ಲಿ ನಿಂತರೂ ಮೂರನೆ ಸ್ಥಾನ ಕಾಯಂ ಆಗಿದೆಯಂತಲ್ಲಾ, ಥೂತ್ತೇರಿ.

*****

ಸಿ.ಸೋಮಶೇಖರ ನೆನಪಿಸಿಕೊಳ್ಳಿ; ಅಧಿಕಾರಿಯಾಗಿ ಅಖಂಡ ಐಶ್ವರ್ಯ ಹೊಂದಿದ್ದವರು ಮತ್ತು ಲಂಕೇಶ್‌ರಿಂದ ಜನ್ಮಾಪಿ ನೆನೆಸಿಕೊಳ್ಳುವಂತೆ ಟೀಕಿಸಿಕೊಂಡಿದ್ದವರು. ಇದಕ್ಕಿಂತ ಹೆಚ್ಚಾಗಿ ವಚನ ಸಾಹಿತ್ಯವನ್ನು ಅರೆದು ಕುಡಿಯಲು ಪ್ರಯತ್ನಿಸಿ, ಅರಗಿಸಿಕೊಳ್ಳಲಾಗದೆ ವಾಂತಿ ಮಾಡಿಕೊಂಡಿದ್ದರು. ಈತ ವಚನ ಹೇಳುತ್ತಿರುವುದು ಬಿಜೆಪಿ ಪಡಸಾಲೆಯಲ್ಲಿ, ಏಕೆಂದರೆ ಬಿಜೆಪಿ ಗರ್ಭಗುಡಿಗೆ ಆತ ಹೋಗುವಂತಿಲ್ಲ. ಬಿಜೆಪಿ ಲಿಂಗಾಯಿತರಿಗೆ ಗೌರವ ತಂದುಕೊಟ್ಟ ಪಕ್ಷ ಎಂದು ಹೇಳಿಕೊಂಡು ತಿರುಗುತ್ತಿರುವ ಈತ ತುಮಕೂರು ಜಿಲ್ಲೆಯ ಡಿ.ಸಿಯಾಗಿದ್ದಾಗ, ಇಂಥದೇ ಚುನಾವಣೆ ಬಂದು ಮೊದಲು ಆ ಡಿ.ಸಿಯನ್ನ ವರ್ಗಮಾಡಿ ಎಂದು ದೇವೇಗೌಡರು ಹಟ ಹಿಡಿದದ್ದು ಯಾಕೆ ಅಂತ ಈಗ ಗೊತ್ತಾಗುತ್ತಿದೆಯಲ್ಲಾ, ಥೂತ್ತೇರಿ.

*****

ಬಿಜೆಪಿ ಪರವಾಗಿ ಸಿ.ಸೋಮಶೇಖರ್ ನಂತಹವರು ಎಷ್ಟೇ ವಕಾಲತ್ತು ವಹಿಸಿದರೂ ಈಶ್ವರಪ್ಪನಿಗಿರುವ ಪಕ್ಷನಿಷ್ಠೆ ಇಡೀ ದೇಶದಲ್ಲಿಯೇ ಯಾರಿಗೂ ಇಲ್ಲ ಎಂಬುದು ಸಾಬೀತಾಗಿದೆಯಲ್ಲಾ. ಅದಕ್ಕಾಗಿಯೇ ಪ್ರಧಾನಿಯವರೇ ಫೋನು ಮಾಡಿ ಅಭಿನಂದಿಸಿ, ’ಈಶ್ವರಪ್ಪಾಜಿ, ತು ಅಸಾಧಾರಣ ವ್ಯಕ್ತಿ ಹೈ. ಏಕ್ ಬಾರ್ ಇದರ್ ಆನ’ ಎಂದರಂತಲ್ಲಾ. ಆ ಕೂಡಲೇ ಕೇಸರಿ ಮೈದುಂಬಿದಂತಾದ ಈಶ್ವರಪ್ಪ, ’ಆ ಜಗದೀಶ್ ಶೆಟ್ಟರ್ ಕಾಂಗ್ರೆಸ್ಸಲ್ಲಿ ಸಾಯಿಲಿ, ನಾನು ಮಾತ್ರ ಬಿಜೆಪಿಲಿದ್ದೇ ಹೋಯ್ತಿನಿ’ ಎಂದರಂತಲ್ಲಾ. ಇಂತಹ ಕಠೋರ ಶಪಥ ಮಾಡಿದ ಈಶ್ವರಪ್ಪನನ್ನು ಅಭಿನಂದಿಸುವುದು ನಮ್ಮ ಕರ್ತವ್ಯ ಅಲ್ಲವೆ! ಅದಕ್ಕಾಗಿ ಫೋನು ಮಾಡಲಾಗಿ ರಿಂಗಾಯ್ತು. ರಿಂಗ್ ಟೋನ್, ’ನಮಸ್ತೇ ಸದಾ ವತ್ಸಲೇ ಮಾತೃ ಭೂಮಿ..’

“ಹಲೋ ಯಾರೂ?”

“ನಾನು ಸಾರ್ ಯಾಹೂ.”

“ಯಾಹೂ ಎಲ್ಲಿಗೋದ್ರಿ, ಬನ್ರಿ ಮಾತಾಡನ”.

“ಡೆಡ್‌ಲೈನಿಗೆ ಒಂದೆರಡು ಮಾತ್ ಹೇಳಿ ಸಾರ್.”

“ಏನು ಮಾತಾಡದ್ರಿ.. ಯಾವುದ್ಕು ಉತ್ಸಾಹ ಇಲ. ಸುಮ್ಮನೆ ತೋರಿಕೆಗೆ ಏನೇನೋ ಮಾತಾಡ್ತಿನಿ.”

“ಅದು ಗೊತ್ತು ಸಾರ್, ನಿಮ್ಮತ್ರ ಸೇವಕನಂಗಿದ್ದ ಹುಡುಗನ ಪರ ಓಟು ಕೇಳಿದರಂತೆ. ಹಿಂಸೆ ನ್ಯನಿಸಿಗಳಕ್ಕಾಗಲ್ಲ.”

“ಆದ್ರು ಕೇಳಬೇಕಲ್ಲ ಹೇಳಿ.”

“ಯಾಕ್ಸರ್ ಬಿಜೆಪಿಗಳು ನಿಮಿಗೆ ಇಂತ ಅವುಮಾನ ಮಾಡಿದ್ರು. ಬಿಜೆಪಿ ಇತಿಹಾಸದಲ್ಲಿ ಯಾರಿಗೂ ಇಂತ ಅವುಮಾನಾಗಿಲ್ಲ ಸಾ.”

“ಶೆಟ್ಟರ್‌ಗಿಂತ ಅವುಮಾನಾಗಿಲ್ಲ ಬುಡ್ರಿ.”

“ಅಂಗಂತಿರಾ?”

ಇದನ್ನೂ ಓದಿ: ಮೂರು ಪಾರ್ಟಿಯವರೂ ಅಳುತ್ತಿದ್ದಾರಲ್ಲಾ!

“ಊ ಮತ್ತೆ. ಮುಖ್ಯಮಂತ್ರಿಯಾಗಿದ್ದೋರಿಗೆ ಮಿಸ್ ಕಾಲ್ ಕೊಟ್ಟು, ಇವುರು ಪೋನ್ ಮಾಡಿದಾಗ ನಿಮಗೆ ಟಿಕೆಟ್ ಇಲ್ಲ ಅಂದುಬುಟ್ಟು ಕಟ್ ಮಾಡ್ಯವುರಲ್ಲ, ಇದವು ಅವಮಾನ ಅಲವೆ?”

“ನಿಮ್ಮ ಅವುಮಾನದ ಮುಂದೆ ಅವುರದೇನೂ ಅಲ್ಲ ಸಾರ್.”

“ಅದ್ಯಂಗರೀ?”

“ನೀವು ಬಿಜೆಪಿ ಕಟ್ಟಿ ಬೆಳೆಸಿದ ಮಹಾನಾಯಕ. ಶಿವಮೊಗ್ಗದಲ್ಲಿ ಪಾರ್ಟಿಗಾಗಿ ಬಂದ್, ಗೋಲಿಬಾರು, ಲೂಟಿ ಯಲ್ಲಾನು ಮಾಡಿಸಿದ್ದಿರಿ. ಕೆ.ಹೆಚ್.ಶ್ರೀನಿವಾಸ್ ಊರಾಬುಟ್ಟೋಗಂಗೆ ಮಾಡಿದ್ದಿರಿ, ಮುಸ್ಲಿಮರ ಮದುವೆಗೂ ದುಡ್ಡುಕೊಟ್ಟಿದ್ದಿರಿ. ತಮುಳು ಜನ ಸಂಘಟಿಸಿ ಅವುರನೆಲ್ಲಾ ಬಸ್ಸಲ್ಲಿ ಸರದಿ ಪ್ರಕಾರ ತುಂಬಿಕಂಡೋಗಿ ತಮುಳು ನಾಡಿನ ತಂಜಾವ್ಯೂರು, ರಾಮೇಶ್ವರ, ಚಿದಂಬರ, ಮದುರೆ, ಪಳನಿ ಯಲ್ಲಾನು ತೋರಿಸಿಗಂಡು ಬಂದು ಸುರದ್ದಿದ್ದಿರಿ. ಹಂಗೆ ನೋಡಿದ್ರೆ ಆ ಶಿವಮೊಗ್ಗದಲ್ಲಿ ನಿಮ್ಮನ್ನ ಸೋಲಸಕ್ಕೆ ಯಾರಿಂದ್ಲೂ ಸಾಧ್ಯವಿಲ್ಲ. ಇದ್ಯಾವುದನ್ನು ಲೆಕ್ಕಕ್ಕೆ ತಗೊಳ್ದೆ, ಕೇವಲ ಸಿದ್ದರಾಮಯ್ಯನ ತಲೆ ಕಡಿತಿನಿ ಅಂದಿದ್ದ ಮಾತ್ರಕ್ಕೆ ನಿಮ್ಮ ಸೇವಕನಿಗೆ ಟಿಕೆಟ್ ಕೊಟ್ಟು ನಿಮಗಿಲ್ಲ ಅಂದರಲ್ಲಾ ಸಾರ್. ನನಗೇ ಇಷ್ಟು ಹಿಂಸೆ ಆಯ್ತಾ ಅದೆ. ನೀವ್ಯಂಗೆ ತಡ್ಕೋತಾ ಇದೀರಿ ಅನ್ನದೆ ಆಶ್ಚರ್ಯ ಸಾರ್.”

“ಅದು ಪಾರ್ಟಿ ನಿಷ್ಟೆ ಕಂಡ್ರಿ, ನನಿಗೆ ಇಲ್ಲಿವರಿಗೂ ಸಿಕ್ಕಿದೆಲ್ಲಾ ಪಾರ್ಟಿಯಿಂದ. ಪಾರ್ಟಿ ನಮ್ಮ ತಾಯಿಯಿದ್ದಂಗೆ.”

“ಪಾರ್ಟಿ ತಾಯಿಯಾದ್ರೆ, ತಂದೆ ಯಾರು ಸಾರ್?”

“ಪೊಲಿಟಿಕೆಲ್ ಪಾರ್ಟಿ ಅಂದ್ರೆ ತಾಯಿ, ಅಲ್ಲಿ ತಂದೆಯಿರಲ್ಲ”

“ಅಂದ್ರೆ ಪೊಲಿಟಿಕಲ್ ಪಾರ್ಟಿಗೆ ತಂದೆಯಿರಲ್ವ ಸಾರ್?”

“ರಿ ತಲೆಕೆಟ್ಟಂಗೆ ಮಾತಾಬ್ಯಾಡಿ. ನಮ್ಮನ್ನ ಬೆಳೆಸಿ ಸ್ಥಾನಮಾನ ಕೊಟ್ಟ ಪಾರ್ಟಿ ತಾಯಿಗೆ ಸಮಾನ ಅಂತ ನಾನು ಹೇಳಿದ್ದು.”

“ನನಿಗೇನೂ ಈ ಹೋಲಿಕೆನೆ ಸರಿಯಿಲ್ಲ ಸಾರ್. ಅಪ್ರಭುದ್ಧ ಮೂರ್ಖರು ಮಾತ್ರ ಇಂತ ಹೋಲಿಕೆ ಮಾಡಬಲ್ಲರು.”

“ಯಾಕ್ರಿ ಅಂಗಂತಿರಿ?”

“ಮತ್ತಿನ್ನೇನು ಸಾರ್, ಹೆತ್ತು ಹಾಲು ಕುಡಿಸಿ ಬೆಳೆಸೋ ತಾಯಿ ಎಲ್ಲೀ, ಹಾದಿ ಬೀದಿಲಿ ಸಿಕ್ಕಿದೋರ ಹಿಡಕಂಡು ಬಂದು, ಚಡ್ಡಿ ಇಕ್ಕಿ, ಲಾಟಿ ಕೊಟ್ಟು ಮಹೊಡಿ ಸಾಬರಿಗೆ ಅನ್ನೂ ಪಾರ್ಟಿ ಎಲ್ಲಿ? ಅಂಥ ಪಾರ್ಟಿನ ದೇವತೆಯಂತ ತಾಯಿಗೋಲುಸ್ತಿರಲ್ಲಾ. ಆಯ್ತು ನಿಮ್ಮ ಮಾತನ್ನ ಒಪ್ಪಿಗಳನ. ಇವತ್ತು ನಿಮ್ಮ ಕತೆ ಏನಾಗಿದೆ?”

“ಏನು ಆಗಬಾರದ್ದಾಗಿಲ್ಲ ಕಂಡ್ರೀ.”

“ಸಾರ್ ನಿಮಗೆ ಯಂಗೇಳಬೇಕು ಅಂತ ಗೊತ್ತಾಯ್ತಯಿಲ್ಲ. ಬಿಜೆಪಿಲಿ ಚುನಾವಣೆಗೆ ನಿಲ್ಲಕ್ಕೆ ನಿಮ್ಮಷ್ಟು ಯೋಗ್ಯ ಕ್ಯಾಂಡೇಟ್ ಇರಲಿಲ್ಲ. ಅವುರು ನಿರಾಕರಿಸಿದ ತಕ್ಷಣನೆ ಶೆಟ್ಟರ್ ತರ ತೀರ್ಮಾನ ತಗೊಬೇಕಿತ್ತು.”

“ಬ್ಯಾರೆ ಪಾರ್ಟಿಯೋರು ನನ್ನನ್ನ ಸೇರಿಸ್ರಿರಲಿಲ್ಲ ಕಂಡ್ರಿ.”

“ಜೆಡಿಎಸ್‌ನೋರು ಸೇರಿಸ್ತಿದ್ರು ಸಾರ್. ಜೆಡಿಎಸ್ ಟೀಮನ್ನ ದಂಡೂಪಾಳ್ಯದ ಗ್ಯಾಂಗು ಅಂದಿದ್ದ ಆಯನೂರ್ ಮಂಜುನಾಥನ್ನೆ ಸೇರಿಸಿಕೊಂಡ್ರು. ಅಂಥದರಲ್ಲಿ ಕುಮಾರಣ್ಣ ನಿಮ್ಮನ್ನ ಬುಡತಿದ್ರೆ..”

“ಬುಡತಿರಲಿಲ್ಲ ನಿಜ. ಅಂಗೆ ನೋಡಿದ್ರೆ ಕುಮಾರಣ್ಣ ಈ ಹಿಂದೆ ಎರಡು ಬಾರಿ ನಾನೇಳಿದೋರಿಗೆ ಟಿಕೆಟ್ ಕೊಟ್ಟವುರೆ. ಅಂಗಂತ ನಾನು ಪಾರ್ಟಿ ಬುಡಕ್ಕಾಗಲ್ಲ. ಈಗ ನಾನು ಚುನಾವಣಾ ರಾಜಕಾರಣದಿಂದ ದೂರ. ಮುಂದೆ ಪಾರ್ಟಿ ಕೆಲಸ ಮಾಡಿಕಂಡೋಯ್ತಿನಿ”

“ಪಾರ್ಟಿ ಕೆಲಸನ ನಿಮ್ಮಿಂದ ಯಾರೂ ನಿರೀಕ್ಷೆ ಮಾಡಿಲ್ಲ.”

“ಯಾಕ್ರಿ ಅಂಗಂತಿರಿ?”

“ನಿಮ್ಮ ಜಾಗಕ್ಕೆ ನಿಮಗಿಂತ್ಲೂ ಭೀಕರ ವ್ಯಕ್ತಿನ ತಂದಾಗ್ಯದೆ. ಮುಂದೆ ಅವುಂದೆ ರಾಜ್ಯಭಾರ. ಅವುರು ಆವರಿಸಿಕೊಂಡ ಜಾಗದಲ್ಲಿ ನೀವು ಅಪ್ಪಮಕ್ಕಳಿಗೇನೂ ಕೆಲಸಿಲ್ಲ. ನಿಮ್ಮ ಈ ನಿವೃತ್ತಿ ನಂತರ ನಿಮ್ಮ ಮಗ ನಿಮ್ಮ ಜೊತೆ ಬಂದು ಸೇರಿಕಳ್ತನೆ. ನೀವು ಮೂಲೆಗುಂಪಾಗದ್ರಲ್ಲಿ ಈಗಾಗ್ಲೆ ಮೂಲೆಗುಂಪಾಗಿರೊ ಎಡೂರಪ್ಪನ ಕೈವಾಡನೂ ಇದೆ.”

“ಅವುರ ಕೈವಾಡ ಯಾಕಿರತ್ರಿ?”

“ಸಾರ್ ನಿಜ ಹೇಳಿ. ನಿಮಗೆ ಎಡೂರಪ್ಪ ಅಂದ್ರೆ ಅಷ್ಟಕಷ್ಟೆ. ಇನ್ನ ರಾಘವೇಂದ್ರನ ಗೆಲುವು ನಿಮಗೆ ಬೇಕಿರಲಿಲ್ಲ. ಅಂಗೇನೆ ಆ ವಿಜಯೇಂದ್ರನ ಅಭ್ಯುದಯ ನಿಮಗೆ ಬೇಕಿಲ್ಲ, ಇದು ಗೊತ್ತಾಗಿ ಎಡೂರಪ್ಪ ನಮ್ಮ ಕತೆ ಮುಗದರಷ್ಟೆ ಹೋಯ್ತು, ಈಶ್ವರಪ್ಪನ ಕತೆನೂ ಮುಗಿಲಿ ಅಂತ ಕಾಯ್ತಿದ್ರು ಸಾರ್.”

“ಅದು ನನಿಗೂ ಗೊತ್ತು ಕಂಡ್ರಿ. ನಾನೇನು ಅಷ್ಟು ದಡ್ಡ ಅಲ್ಲ.”

“ಆದ್ರು ನೀವು ಅಸಹಾಯಕರಾಗಿ ಅಂತ್ಯವಾಗ್ತಿರಿ ಸಾರ್.”

“ಹ್ಯಂಗ್ರೀ?”

“ಎಡೂರಪ್ಪನ ಮಕ್ಕಳು ಎಂ.ಪಿ ಎಂ.ಎಲ್.ಎ ಆಯ್ತರೆ. ಸಿಟ್ಟು ಸ್ವಾಭಿಮಾನ ತೋರಿದ ಶೆಟ್ಟರ್ ಎಂ.ಎಲ್.ಎ ಆಯ್ತರೆ. ನೀವು ಅಪ್ಪಾ ಮಗ ಏನೂ ಆಗಲವಲ್ಲ ಸಾ.”

“ಆಗದಿದ್ರೆ ಕತ್ತೆ ಬಾಲ, ಸಂಘದ ಕಾರ್ಯಕರ್ತರಾಗಿರ್ತಿವಿ.”

“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...