Homeಮುಖಪುಟಉತ್ತರಪ್ರದೇಶ:ಸಾರ್ವಜನಿಕವಾಗಿ ಬಾಲಕಿಗೆ ಕಪಾಳಮೋಕ್ಷ ಮಾಡಿದ ಮಹಿಳಾ ಅಧಿಕಾರಿ

ಉತ್ತರಪ್ರದೇಶ:ಸಾರ್ವಜನಿಕವಾಗಿ ಬಾಲಕಿಗೆ ಕಪಾಳಮೋಕ್ಷ ಮಾಡಿದ ಮಹಿಳಾ ಅಧಿಕಾರಿ

- Advertisement -
- Advertisement -

ಸರ್ಕಾರಿ ಮಹಿಳಾ ಅಧಿಕಾರಿಯೊಬ್ಬರು ಹದಿಹರೆಯದ ಬಾಲಕಿಗೆ ಕಪಾಳಮೋಕ್ಷ ಮಾಡಿದ ಘಟನೆ ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯಲ್ಲಿ ನಡೆದಿದೆ.ಘಟನೆಯ ವಿಡಿಯೋ ಕೂಡ ವೈರಲ್ ಆಗಿದೆ.

ಉತ್ತರ ಪ್ರದೇಶದ ಬಿಶಂಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.ಉಪ ತಹಶೀಲ್ದಾರ್ ಪ್ರಾಚಿ ಕೇಸರವಾಣಿ ಎಂಬ  ಮಹಿಳಾ ಅಧಿಕಾರಿ  ಅಕ್ರಮವಾಗಿ ಜಮೀನು ಒತ್ತುವರಿ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಕ್ಕೆ ತೆರಳಿದ್ದರು.ಉಪ ತಹಶೀಲ್ದಾರ್ ಮತ್ತು ಬಾಲಕಿಯ ನಡುವೆ ಈ ವೇಳೆ ವಾಗ್ವಾದ ನಡೆದಿದ್ದು ಅಧಿಕಾರಿ ಬಾಲಕಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ವರದಿಗಳ ಪ್ರಕಾರ, ವಾರಣಾಸಿಯ ಕಾಪ್ಸೆಥಿ ಪೊಲೀಸ್ ಠಾಣೆ ವ್ಯಾಪ್ತಿಯ ಭಿಶಂಪುರ ಗ್ರಾಮದಲ್ಲಿ ಕೆಲವು ಗ್ರಾಮಸ್ಥರು ಅಕ್ರಮವಾಗಿ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಜಾಗ ಖಾಲಿ ಮಾಡುವಂತೆ ಹೈಕೋರ್ಟ್‌ ಆದೇಶ ನೀಡಿತ್ತು. ಹೈಕೋರ್ಟ್ ಆದೇಶದ ಮೇರೆಗೆ ಉಪ ತಹಸೀಲ್ದಾರ್ ಪ್ರಾಚಿ ಕೇಶರವಾಣಿ ಸ್ಥಳಕ್ಕೆ ಆಗಮಿಸಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.ಈ ವೇಳೆ ಬಂದ ಬಾಲಕಿ ಹೈಕೋರ್ಟ್ ಆದೇಶವನ್ನು ತೋರಿಸುವಂತೆ ಮಹಿಳಾ ಅಧಿಕಾರಿಗೆ ಆಗ್ರಹಿಸಿದ್ದಾರೆ.ಇದರಿಂದ ಕೋಪಗೊಂಡ ಮಹಿಳಾ ಅಧಿಕಾರಿ ಸಾರ್ವಜನಿಕವಾಗಿ  ಬಾಲಕಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಇದರ ಬೆನ್ನಲ್ಲೆ ಮಹಿಳಾ ಅಧಿಕಾರಿ ವಿರುದ್ಧ ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ಈ ವೇಳೆ ಅಲ್ಲಿದ್ದ ಪೊಲೀಸರು  ಮಹಿಳಾ ಅಧಿಕಾರಿಯನ್ನು ವಾಪಾಸ್ಸು ಕಳುಹಿಸಿದ್ದಾರೆ. ಅಲ್ಲಿ ನೆರೆದಿದ್ದ ಜನ ಮಹಿಳಾ ಅಧಿಕಾರಿಯ ವರ್ತನೆಯನ್ನು ಖಂಡಿಸಿದ್ದು, ಹಿರಿಯ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ  ದೂರು ನೀಡಿದ್ದಾರೆ.

ಇದನ್ನು ಓದಿ: ಅವಿಶ್ವಾಸ ನಿರ್ಣಯ: INDIA ಪ್ರಶ್ನೆಗಳಿಗೆ ಇಂದು ಉತ್ತರ ನೀಡಲಿದ್ದಾರೆ ಪ್ರಧಾನಿ ಮೋದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read