Homeಮುಖಪುಟಮಹಿಳಾ ಮೀಸಲಾತಿ ಮಸೂದೆ: ಕೇಂದ್ರದ ನಡೆಯಲ್ಲಿ ಪಾರದರ್ಶಕತೆ ಕಾಣೆಯಾಗಿದೆ ಎಂದ ಕೆ. ಕವಿತಾ

ಮಹಿಳಾ ಮೀಸಲಾತಿ ಮಸೂದೆ: ಕೇಂದ್ರದ ನಡೆಯಲ್ಲಿ ಪಾರದರ್ಶಕತೆ ಕಾಣೆಯಾಗಿದೆ ಎಂದ ಕೆ. ಕವಿತಾ

- Advertisement -
- Advertisement -

ಸೋಮವಾರ ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ತಿಳಿದುಬಂದಿದೆ. ಈ ಮಸೂದೆಯನ್ನು ತ್ವರಿತವಾಗಿ ಮಂಡನೆ ಮಾಡಿದರೆ, ಅದು ಇಡೀ ದೇಶದ ಮಹಿಳೆಯರಿಗೆ ನೀಡುವ ಗೌರವದ ಸಂಕೇತವಾಗಿರುತ್ತದೆ” ಎಂದು ಭಾರತ ರಾಷ್ಟ್ರೀಯ ಸಮಿತಿಯ(ಬಿಆರ್‌ಎಸ್) ಎಂಎಲ್‌ಸಿ ಕೆ. ಕವಿತಾ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಕ್ಯಾಬಿನೆಟ್ ಅನುಮೋದನೆ ನೀಡಿರುವುದು ನಮಗೆ ಸಂತೋಷವಾಗಿದೆ. ಸಂಸತ್ತಿನಲ್ಲಿ ಈ ಮಸೂದೆಯನ್ನು ಶೀಘ್ರದಲ್ಲೇ ಮಂಡಿಸಬಹುದು ಎಂದು ಭಾವಿಸುತ್ತೇವೆ. ಆದರೆ ಮಸೂದೆಯ ಸ್ವರೂಪದ ಬಗ್ಗೆ ಕೇಂದ್ರವು ಬಹಿರಂಗವಾಗಿ ಚರ್ಚಿಸುತ್ತಿಲ್ಲ. ಇದರಿಂದ ಸರ್ಕಾರದಲ್ಲಿ ಪಾರದರ್ಶಕತೆ ಕಾಣೆಯಾಗಿದೆ ಎಂಬ ಆತಂಕವೂ ಇದೆ” ಎಂದು ಹೇಳಿದರು.

”ಸಧ್ಯ ಕೇಂದ್ರ ಸರ್ಕಾರವು ಪೂರ್ಣ ಬಹುಮತ ಹೊಂದಿದ್ದು, ಯಾವುದೇ ಬೆಂಬಲವಿಲ್ಲದಿದ್ದರೂ ಸ್ವತಂತ್ರವಾಗಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಬಹುದು. ಇಂತಹ ಸಮಯದಲ್ಲಿ ರಾಜಕೀಯ ಹಿತಾಸಕ್ತಿಗಿಂತ ಮಹಿಳೆಯನ್ನು ಪ್ರೋತ್ಸಾಹಿಸುವುದು ಮುಖ್ಯ” ಎಂದು ಕವಿತಾ ಹೇಳಿದ್ದಾರೆ.

”ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತ ನಿರ್ಣಯದ ಮೂಲಕ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಬೇಕು. ಈ ಮೂಲಕ ದೇಶದ ಮಹಿಳೆಯರಿಗೆ ನೀಡುವ ಗೌರವದ ಸಂಕೇತ ಎಂದರಲ್ಲದೆ, ಮಸೂದೆಯನ್ನು ಯಾವ ಸ್ವರೂಪದಲ್ಲಿ ಪರಿಚಯಿಸುತ್ತಾರೆ ಎನ್ನುವುದರ ಮೇಲೆ ನಾವು ಅದನ್ನು ಬೆಂಬಲಿಸುತ್ತೇವೆ” ಎಂದು ಕವಿತಾ ತಿಳಿಸಿದ್ದಾರೆ.

”ಮಹಿಳಾ ಮೀಸಲಾತಿ ಮಸೂದೆಗೆ ಬಿಆರ್‌ಎಸ್ ಬೆಂಬಲ ನೀಡಲಿದೆ. ಶೇ.33ರ ಒಬಿಸಿ ಮೀಸಲಾತಿ ಮಸೂದೆಯನ್ನು ಸಹ ಪರಿಚಯಿಸಬೇಕು ಎಂದು ಒತ್ತಾಯಿಸಿದ್ದೇವೆ. ಸರ್ಕಾರ ಈ ನಿಟ್ಟಿನಲ್ಲಿ ಕೂಡ ಕ್ರಮ ಕೈಗೊಳ್ಳುತ್ತದೆ ಎಂದು ನಾನು ಕವಿತಾ ಭಾವಿಸುತ್ತೇವೆ” ಎಂದು ಹೇಳಿದರು.

ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ ಮಂಡನೆ ಕುರಿತು ಟ್ವೀಟ್ ಮಾಡಿ, ಬಳಿಕ ಡಿಲೀಟ್ ಮಾಡಿದ ಕೇಂದ್ರ ಸಚಿವ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...