Homeಮುಖಪುಟಕೊರೊನಾ ನಡುವೆಯೂ ಕೆಲಸ: ಮಾಸ್ಕ್ ಕೊಡದ ಪಾಲಿಕೆ - ಆತಂಕದಲ್ಲಿ ಪೌರಕಾರ್ಮಿಕರು

ಕೊರೊನಾ ನಡುವೆಯೂ ಕೆಲಸ: ಮಾಸ್ಕ್ ಕೊಡದ ಪಾಲಿಕೆ – ಆತಂಕದಲ್ಲಿ ಪೌರಕಾರ್ಮಿಕರು

ವಿಶೇಷ ಭತ್ಯೆ ಮತ್ತು ಒಂದು ತಿಂಗಳ ಸಂಬಳವನ್ನು ಮುಂಗಡವಾಗಿ ತಕ್ಷಣವೇ ನೀಡಬೇಕು. ಶಿಫ್ಟ್‌ ಆಧಾರದಲ್ಲಿ ಕೆಲಸ ನಿರ್ವಹಿಸಲು ಅವಕಾಶ ನೀಡಬೇಕೆಂಬುದು ಪೌರಕಾರ್ಮಿಕರ ಒತ್ತಾಯವಾಗಿದೆ. 

- Advertisement -
- Advertisement -

ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದರ ನಡುವೆಯೇ ಕೊರೊನ ವೈರಸ್ ನಿಯಂತ್ರಣಕ್ಕೆ ಹಲವು ಕೈಗಳು ದುಡಿಯುತ್ತಿವೆ. ಅವರಲ್ಲಿ ನಗರದ ಸ್ವಚ್ಚತೆ ಕಾಪಾಡುತ್ತಿರುವ ಪೌರಕಾರ್ಮಿಕರು ಪಾತ್ರ ಶ್ಲಾಘನೀಯವಾದುದ್ದು. ಆದರೆ ಅವರು ಯಾವುದೇ ಸುರಕ್ಷ ಸಲಕರಣೆಗಳಲ್ಲಿದೆ ದುಡಿಯುತ್ತಿದ್ದಾರೆ. ನಗರದ ಹೊಲಸನ್ನು ಶುಚಿಗೊಳಿಸುವ ಈ ಕೈಗಳಿಗೆ ಒಂದು ಗ್ಲೌಸ್ ಇಲ್ಲ. ಮುಖ ಮುಚ್ಚಿಕೊಳ್ಳಲು ಮಾಸ್ಕ್ ಕೊಟ್ಟಿಲ್ಲ. ಆದರೂ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಮಾಸ್ಕ್ ಗಳನ್ನು ಖರೀದಿಸಿದ್ದರೂ ಪೌರಕಾರ್ಮಿಕರಿಗೆ ವಿತರಣೆ ಮಾಡಿಲ್ಲ ಎಂದು ತುಮಕೂರಿನಲ್ಲಿ ದೂರು ಕೇಳಿಬಂದಿದೆ.

ಮಾರ್ಚ್ 25ರಿಂದ ಏಪ್ರಿಲ್ 14ರವರೆಗೆ ದೇಶ ಲಾಕ್ ಡೌನ್ ಆಗಿದೆ. ಕೊರೊನ ವೈರಸ್ ಹರಡಿರುವುದರ ಸಂಕೇತ ಇದು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ತಮ್ಮ ಜೀವವನ್ನೇ ಪಣಕ್ಕಿಟ್ಟು ದುಡಿಯುತ್ತಿರುವ ಪೌರಕಾರ್ಮಿಕರಿಗೆ ತುಮಕೂರಿನಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಅವರ ಆರೋಗ್ಯದ ಬಗ್ಗೆ ಗುತ್ತಿಗೆದಾರರು ಮತ್ತು ಮಹಾನಗರ ಪಾಲಿಕೆ ಮುನ್ನೆಚ್ಚರಿಕೆ ವಹಿಸಿದಂತೆ ಕಾಣುತ್ತಿಲ್ಲ. ಪೌರಕಾರ್ಮಿಕರು, ವಾಟರ್ ಮನ್‌ಗಳು, ಕಸಸಂಗ್ರಹ ಗಾಡಿ ಕಾರ್ಮಿಕರು ಬರಿಗೈಯಲ್ಲೇ ಕಸ ತೆಗೆದುಕೊಳ್ಳುವಂತಹ ಸ್ಥಿತಿ ಇದ್ದರು ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರೇ ಇಲ್ಲವಾಗಿದೆ.

ಖಾಯಂ, ನೇರಪಾವತಿ ಮತ್ತು ಹೊರಗುತ್ತಿಗೆ ಆಧಾರದ ಮೇಲೆ  500 ಪೌರಕಾರ್ಮಿಕರು ಬೆಳಗಿನಿಂದ ಸಂಜೆ ತನಕ ದುಡಿಯುತ್ತಾರೆ. ಕೆಲಸ ಮಾಡಿ ನೇರ ಮನೆಗೆ ಹೋಗುತ್ತಾರೆ. ಹೀಗೆ ಮನೆಗೆ ಹೋಗುವುದರಿಂದ ರೋಗ ಕೂಡ ಅವರೊಂದಿಗೆ ಮನೆಯವರಿಗೂ ಹರಡುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಪೌರಕಾರ್ಮಿಕರಿಗೆ ಮುನ್ನೆಚ್ಚರಿಕೆಯ ಸಾಧನಗಳನ್ನು ನೀಡುವುದರ ಜೊತೆಗೆ ಕಡ್ಡಾಯವಾಗಿ ಸ್ನಾನ ಮಾಡಿಕೊಂಡೇ ಮನೆಗೆ ಹೋಗುವಂತಹ ವಾತಾವರಣ ಕಲ್ಪಿಸಬೇಕಿದೆ. ನಗರದಲ್ಲಿ ಇರುವ ಎರಡು ಸ್ನಾನ ಗೃಹಗಳು ಇದ್ದರೂ ಅವುಗಳಿಗೆ ಬೀಗ ಹಾಕಿ ವರ್ಷಗಳೇ ಕಳೆದಿದೆ ಎಂದರೆ ಏನು ಮಾಡೋದು?

ನಗರದ ಬನಶಂಕರಿ ಪಂಪ್ ಹೌಸ್ ಆವರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾರ್ಮಿಕರಿಗಾಗಿ ಸ್ನಾನಗೃಹ ನಿರ್ಮಾಣ ಮಾಡಿದೆ. ಶೆಟ್ಟಿಹಳ್ಳಿಯ ಅಂಗನವಾಡಿ ಕೇಂದ್ರದ ಅವರಣದಲ್ಲಿ ಒಂದು ಸ್ನಾನಗೃಹವಿದೆ ಇವೆರಡೂ ಸ್ನಾನಗೃಹಗಳ ಬಳಕೆಯಾಗುತ್ತಿಲ್ಲ. ಒಂದು ನಗರಕ್ಕೆ ನಾಲ್ಕು ಕಿಲೋ ಮೀಟರ್ ದೂರದಲ್ಲಿದ್ದರೆ, ಇನ್ನೊಂದು ಮಹಾನಗರ ಪಾಲಿಕೆಯಿಂದ ಒಂದು ಕಿಲೋಮೀಟರ್ ದೂರದಲ್ಲಿದೆ. ಬನಶಂಕರಿಯಲ್ಲಿರುವ ಸ್ನಾನಗೃಹ ಮಧ್ಯದಲ್ಲಿದ್ದರು ಯಾರೂ ಅದನ್ನು ಬಳಸುತ್ತಿಲ್ಲ. ಶೆಟ್ಟಿಹಳ್ಳಿಯಲ್ಲಿರುವ ಸ್ನಾನಗೃಹ ಯಾರಿಗೆ ಕಟ್ಟಿದ್ದಾರೆಂಬುದೇ ಅರ್ಥವಾಗುತ್ತಿಲ್ಲ. ಪೌರಕಾರ್ಮಿಕರಿಗೆ ಅವುಗಳನ್ನು ಬಳಸಿಕೊಳ್ಳುವಂತೆ ಯಾರೂ ಅರಿವು ಮೂಡಿಸಿಲ್ಲ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಪೌರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ “ಪೌರ ಕಾರ್ಮಿಕರು, ವಾಟರ್ ಮ್ಯಾನ್‍ಗಳು, ಕಸ ಸಂಗ್ರಹ ಗಾಡಿ ಕಾರ್ಮಿಕರು ಅಗತ್ಯ ಸೇವೆಗಳಡಿ ಕೆಲಸ ಮಾಡುತ್ತಿದ್ದು ಯೋಗ್ಯ ಗುಣಮಟ್ಟದ ಸುರಕ್ಷತಾ ಸಲಕರಣೆಗಳನ್ನು ನೀಡಿಲ್ಲ. ಲಾಕ್‍ಡೌನ್ ನಿಂದಾಗಿ ಸ್ವಚ್ಛತೆಯ ಸಂಗ್ರಹ, ಯುಜಿಡಿ, ನೀರು ಸರಬರಾಜು ಕೆಲಸಗಳಲ್ಲಿ ಇರುವ ಪೌರಕಾರ್ಮಿಕರಿಗೆ ಕುಡಿಯುವ ನೀರು ಮತ್ತು ತಿಂಡಿ ಕೊಡುತ್ತಿಲ್ಲ. ಇದರಿಂದ ಅವರು ಉಪವಾಸವೇ ಇರಬೇಕಾಗುತ್ತದೆ.  ಎಲ್ಲಾ ಕಾರ್ಮಿಕರು ಮನೆಗಳಿಗೆ ಹೋಗುವ ಮುನ್ನ ನಿಗದಿತ ಸ್ಥಳದಲ್ಲಿ ಸ್ನಾನ ಮಾಡಿ ಹೋಗುವುದನ್ನು ಕಡ್ಡಾಯಗೊಳಿಸಬೇಕು. ಇದರಿಂದ ಅವರ ಅವಲಂಬಿತರು ತಂದೆ-ತಾಯಿ, ಹೆಂಡತಿ-ಮಕ್ಕಳಿಗೆ ಸೋಂಕು ಹರಡದಂತೆ ತಡೆಯಬಹುದು. ಆದರೆ ಪಾಲಿಕೆ ಮತ್ತು ಜಿಲ್ಲಾಡಳಿತ ಈ ಬಗ್ಗೆ  ಕ್ರಮ ಕೈಗೊಂಡಿಲ್ಲ” ಎಂದೂ ದೂರಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಪೊಲೀಸರು ಈ ಕಾರ್ಮಿಕರನ್ನು ಓಡಾಡದಂತೆ ಪ್ರಶ್ನಿಸುತ್ತಿದ್ದಾರೆ. ಇವರ ರಕ್ಷಣೆಗೆ ಎಲ್ಲ ಕಾರ್ಮಿಕರಿಗೂ ಕಡ್ಡಾಯವಾಗಿ ಗುರುತಿನ ಚೀಟಿ ನೀಡಬೇಕು. ಎಲ್ಲ ಕಾರ್ಮಿಕರಿಗೆ ವಿಶೇಷ ಭತ್ಯೆ ಮತ್ತು ಒಂದು ತಿಂಗಳ ಸಂಬಳವನ್ನು ಮುಂಗಡವಾಗಿ ತಕ್ಷಣವೇ ನೀಡಬೇಕು. ಬೇಸಿಗೆಯ ಬಿಸಿಲು ಹೆಚ್ಚಿದ್ದು ಬೆಳಗ್ಗೆ 10 ಗಂಟೆಯವರೆಗೆ ಮಾತ್ರ ಕೆಲಸ ನಿರ್ವಹಿಸಲು ಮತ್ತು ಶಿಫ್ಟ್‌ ಆಧಾರದಲ್ಲಿ ಕೆಲಸ ನಿರ್ವಹಿಸಲು ಅವಕಾಶ ನೀಡಬೇಕೆಂಬುದು ಪೌರಕಾರ್ಮಿಕರ ಒತ್ತಾಯವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...