Homeಮುಖಪುಟಝೀ ನ್ಯೂಸ್ ಸಂಪಾದಕ ಸುಧೀರ್ ಚೌಧರಿ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲು

ಝೀ ನ್ಯೂಸ್ ಸಂಪಾದಕ ಸುಧೀರ್ ಚೌಧರಿ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲು

- Advertisement -
- Advertisement -

ಝೀ ನ್ಯೂಸ್ ಸಂಪಾದಕ ಸುಧೀರ್ ಚೌಧರಿ ವಿರುದ್ಧ ಕೇರಳ ಪೊಲೀಸರು ಮುಸ್ಲಿಂ ಧರ್ಮವನ್ನು ಅವಹೇಳನ ಮಾಡಿದ ಆರೋಪಕ್ಕಾಗಿ ಮಾಡಿದ್ದಕ್ಕಾಗಿ ಜಾಮೀನು ರಹಿತ ಪ್ರಕರಣ ದಾಖಲಿಸಿದ್ದಾರೆ.

ಝೀ ನ್ಯೂಸ್‌ನಲ್ಲಿ ಡೈಲಿ ನ್ಯೂಸ್ ಮತ್ತು ಅನಾಲಿಸಿಸ್ ಎಂಬ ಕಾರ್ಯಕ್ರಮವನ್ನು ಅವರು ನಡೆಸಿಕೊಡುತ್ತಿದ್ದು ಮಾರ್ಚ್‌ 11ರಂದು ಜಿಹಾದ್‌ ಚಾರ್ಟ್‌ ಎಂಬ ಅನಪೇಕ್ಷಿತ ಕಾರ್ಯಕ್ರಮ ನಡೆಸಿದ್ದಾರೆ ಎಂದು ಅವರ ಮೇಲೆ ದೂರು ದಾಖಲಾಗಿದೆ.

ಮಾರ್ಚ್ 11 ರಂದು, ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿರುವಾಗ ಸುಧೀರ್ ಚೌಧರಿಯವರು ತಮ್ಮ ವೀಕ್ಷಕರಿಗೆ “ಜಿಹಾದ್ ಫ್ಲೋಚಾರ್ಟ್” ತೋರಿಸುವ ಕಾರ್ಯಕ್ರಮ ನಡೆಸುತ್ತಿದ್ದರು.

ಆ ಕಾರ್ಯಕ್ರಮದಲ್ಲಿ ಜಿಹಾದ್‌ಗಳಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ ಹಾರ್ಡ್ ಜಿಹಾದ್ ಮತ್ತು ಸಾಫ್ಟ್ ಜಿಹಾದ್. “ಹಾರ್ಡ್ ಜಿಹಾದ್ ನಲ್ಲಿ ಜನಸಂಖ್ಯೆ ಜಿಹಾದ್, ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಶಿಕ್ಷಣ ಜಿಹಾದ್, ವಿಕ್ಟಿಮ್ ಜಿಹಾದ್ ಮತ್ತು ನೇರ ಜಿಹಾದ್ ಅನ್ನು ಒಳಗೊಂಡಿದೆ. ಆದರೆ ಸಾಫ್ಟ್ ಜಿಹಾದ್‌ನಲ್ಲಿ ಆರ್ಥಿಕ ಜಿಹಾದ್, ಇತಿಹಾಸ ಜಿಹಾದ್, ಮೀಡಿಯಾ ಜಿಹಾದ್, ಚಲನಚಿತ್ರಗಳು ಮತ್ತು ಹಾಡುಗಳು ಜಿಹಾದ್ ಮತ್ತು ಜಾತ್ಯತೀತ ಜಿಹಾದ್ ಸೇರಿವೆ” ಎಂದು ಅವರು ತಮ್ಮ ಕಾರ್ಯಕ್ರಮದಲ್ಲಿ ವಿವರಿಸುತ್ತಿದ್ದರು.

ಈ ಬಗ್ಗೆ ದೂರು ದಾಖಲಾದ್ದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದ ಆರೋಪದ ಮೇಲೆ ಅವರ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಾಗಿದೆ.

ಈ ಕುರಿತು ಸುಧೀರ್ ಚೌಧರಿಯವರು ತಮ್ಮ ಮೇಲೆ ಕೇರಳದಲ್ಲಿ ದಾಖಲಾದ ಎಫ್‌ಐಆರ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ಸತ್ಯವನ್ನು ವರದಿ ಮಾಡಿದ್ದಕ್ಕಾಗಿ, ಅನಾನುಕೂಲ ಸಂಗತಿಗಳನ್ನು ಬಹಿರಂಗಪಡಿಸಿದ್ದಕ್ಕಾಗಿ” ನನಗೆ ಸಿಕ್ಕ ಪುಲಿಟ್ಜೆರ್ ಪ್ರಶಸ್ತಿ ಎಂದು ಚೌಧರಿ ಬರೆದುಕೊಂಡಿದ್ದಾರೆ.


ಇದನ್ನೂ ಓದಿ: ಒತ್ತಡಕ್ಕೆ ಮಣಿದ ಸರ್ಕಾರ: ನಾಳೆಯಿಂದ ಕಾರ್ಮಿಕರಿಗೆ ರೈಲು ಸೇವೆ ಆರಂಭ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...