Homeಮುಖಪುಟತೆಲಂಗಾಣ ಪಶು ವೈದ್ಯೆಯ ಅತ್ಯಾಚಾರ, ಕೊಲೆಯ ನಾಲ್ಕು ಆರೋಪಿಗಳು 'ಎನ್ ಕೌಂಟರ್'ನಲ್ಲಿ ಸಾವು..

ತೆಲಂಗಾಣ ಪಶು ವೈದ್ಯೆಯ ಅತ್ಯಾಚಾರ, ಕೊಲೆಯ ನಾಲ್ಕು ಆರೋಪಿಗಳು ‘ಎನ್ ಕೌಂಟರ್’ನಲ್ಲಿ ಸಾವು..

- Advertisement -
- Advertisement -

ತೆಲಂಗಾಣದ ಪಶು ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ಕೇಸಿನ ನಾಲ್ಕು ಆರೋಪಿಗಳು ಇಂದು ಮುಂಜಾನೆ 3 ಗಂಟೆಗೆ ‘ಎನ್ ಕೌಂಟರ್’ನಲ್ಲಿ ಹತರಾಗಿದ್ದಾರೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.

ಮೊಹಮ್ಮದ್ ಪಾಶ, ಜೊಲ್ಲು ಶಿವ, ಜೊಲ್ಲು ನವೀನ ಮತ್ತು ಕೇಶವುಲು ಎಂಬ ಆರೋಪಿಗಳನ್ನು ವಿಚಾರಣೆಗೆಂದು ಪಶು ವೈದ್ಯೆಯ ಶವ ದೊರಕಿದ್ದ ಜಾಗಕ್ಕೆ ಕರೆದುಕೊಂಡು ಹೋಗಿದ್ದೆವೆಂದು ಪೊಲೀಸರು ಹೇಳಿದ್ದಾರೆ.

ನಾವು ಸ್ಥಳ ಪರಿಶೀಲನೆ ಮಾಡುತ್ತಿದ್ದೆವು. ಆಗ ನಾಲ್ವರಲ್ಲಿ ಒಬ್ಬ ತಪ್ಪಿಸಿಕೊಳ್ಳಲು ಸನ್ನೆ ಮಾಡಿದ. ಅವರು ಪೊಲೀಸರ ಗನ್ ಗಳನ್ನು ಕಿತ್ತುಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಹಾಗಾಗಿ ಎನ್ ಕೌಂಟರ್ ಮಾಡಿದೆವು. ನಂತರ ಆಂಬುಲೆನ್ಸ್ ಗೆ ಕರೆ ಮಾಡಿತಾದರೂ ಅದು ಬರುವಷ್ಟರಲ್ಲಿ ನಾಲ್ವರು ಮೃತಪಟ್ಟಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರಕಾಶ್ ರೆಡ್ಡಿ ತಿಳಿಸಿದ್ದಾರೆ.

ಪಶು ವೈದ್ಯೆಯ ತಂದೆ ಎ.ಎನ್‌.ಐ ಜೊತೆ ಮಾತನಾಡಿ ನನ್ನ ಮಗಳನ್ನು ಕಳೆದುಕೊಂಡ ಹತ್ತು ದಿನಗಳ ನಂತರ ನಮಗೆ ನ್ಯಾಯ ದೊರಕಿದೆ‌. ನನ್ನ ಮಗಳ ಆತ್ಮವೀಗ ಶಾಂತವಾಗಿದೆ. ಇದಕ್ಕಾಗಿ ತೆಲಂಗಾಣ ಸರ್ಕಾರ ಮತ್ತು ಪೊಲೀಸರಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.

ಈ ಎನ್ ಕೌಂಟರ್ ಕುರಿತು ಸಮಾಜದಲ್ಲಿ ಪರ ವಿರೋಧದ ಚರ್ಚೆಗಳು ಆರಂಭವಾಗಿದೆ.

ಹಿರಿಯ ನ್ಯಾಯವಾದಿ ಮತ್ತು ಸಾಮಾಜಿಕ ಕಾರ್ಯಕರ್ತೆ ವೃಂದ ಗ್ರೋವರ್ ಪೊಲೀಸ್ ಎನ್ ಕೌಂಟರ್ ಅನ್ನು ಖಂಡಿಸಿದ್ದಾರೆ. ” ಈ ರೀತಿಯ ಪೊಲೀಸ್ ನ್ಯಾಯ ನಮಗೆ ಬೇಕಾಗಿಲ್ಲ. ಬಂದೂಕಿನ ನಳಿಕೆಯ ನ್ಯಾಯ ಸಾಧ್ಯವಿಲ್ಲ. ಪೊಲೀಸರ ಮೇಲೆ ಎಫ್.ಐ.ಆರ್ ದಾಖಲಿಸಿ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ನಡೆಸಬೇಕು. ಪೊಲೀಸರು ಉತ್ತರದಾಯಿತ್ವವಾಗಿರಬೇಕು ಎಂದು ಆಗ್ರಹಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಬೇಕೇ ಹೊರತು ಪೊಲೀಸರೇ ತೀರ್ಪು ಕೊಡುವುದು ಸರಿಯಲ್ಲ. ಇದನ್ನು ಸಮಾಜ ಒಪ್ಪುವುದಾದರೆ, ಪೊಲೀಸರು ಬಲಶಾಲಿಗಳಾಗುತ್ತಾರೆ, ನ್ಯಾಯಾಂಗ ದುರ್ಬಲವಾಗುತ್ತದೆ. ಆಗ ಪ್ರಜಾರಾಜ್ಯ ಹಿನ್ನೆಲೆಗೆ ಸರಿದು, ಪೊಲೀಸ್ ರಾಜ್ಯ ಮುನ್ನೆಲೆಗೆ ಬರುತ್ತದೆ.
    ರಾತ್ರಿ ಮೂರು ಗಂಟೆಯಲ್ಲಿ ಮಹಜರ್ ಮಾಡಿದ್ದು ಏಕೆ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.

LEAVE A REPLY

Please enter your comment!
Please enter your name here

- Advertisment -

Must Read