HomeUncategorizedರೆಡ್ಡಿಯ ಗುಡ್ ಟೈಮ್ - ಮೋದಿಯ ಅಚ್ಚೆ ದಿನ್

ರೆಡ್ಡಿಯ ಗುಡ್ ಟೈಮ್ – ಮೋದಿಯ ಅಚ್ಚೆ ದಿನ್

- Advertisement -
- Advertisement -

‘ನೋಡಪಾ… ಕೆಟ್ಟ ಘಳಿಗೆಯಲ್ಲಿ ಏನೇನಾಗಿದೆಯೋ ಅದ್ನೆಲ್ಲಾ ಮರ್‍ತೊಗ್ಬಿಡು, ನನ್ನ ಟೈಮು ಈಗ ಚೆನ್ನಾಗಿ ಶುರುವಾಗಿದೆ.’
ರಾಯಚೂರು ರೂರಲ್ ಎಂಎಲ್‌ಎ ಬಸನಗೌಡರನ್ನು ಆಪರೇಷನ್ ಮಾಡಲು ಹೋಗಿದ್ದ ದಿ ಗ್ರೇಟ್ ಜೆನ್ನಿ ಅಲಿಯಾಸ್ ಜನಾರ್ಧನ ರೆಡ್ಡಿಯ ಡೀಲಿಂಗ್ ಡೈಲಾಗ್ ಇದು. ಇವಿಎಂ ಮಷೀನ್‌ಗಳ ಪಕಡ್ಬಂದಿಯೂ ಸೇರಿದಂತೆ ಮಾಡಬಾರದ ಮಸಲತ್ತುಗಳನ್ನೆಲ್ಲ ಮಾಡಿದ ಹೊರತಾಗಿಯೂ ಮ್ಯಾಜಿಕ್ ನಂಬರ್ ತಲುಪಲಾರದ ಅತಂತ್ರ ಸ್ಥಿತಿಯಲ್ಲಿ ಬಿಜೆಪಿಗೆ ಜನಾರ್ಧನ ರೆಡ್ಡಿಯ ಆಸರೆಯಲ್ಲದೆ ಮತ್ತೇನೂ ಬಾಕಿ ಉಳಿದಿರಲಿಲ್ಲ. ಸ್ವತಃ ಅಮಿತ್ ಶಾ, ಯಡ್ಯೂರಪ್ಪನವರ ಹೆಗಲಿಗೆ ಅಧಿಕಾರದ ಜೋಳಿಗೆ ನೇತುಹಾಕಿ ದಿಲ್ಲಿ ಸೇರಿಕೊಂಡು ರಿಮೋಟ್ ಹಿಡಿದು ಕೂತಮೇಲೆ ಪಾಪ, ರೆಡ್ಡಿಯಾದರು ಇನ್ನೇನು ಮಾಡಬೇಕಿತ್ತು. ಆದ್ರೆ ಇಲ್ಲಿ ನಾವೆಲ್ಲ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಅದು ಜೆನ್ನಿ ರೆಡ್ಡಿಯ ಬಾಯಿಂದ ಹೊರಬಿದ್ದ ‘ನನ್ನ ಟೈಮು ಚೆನ್ನಾಗಿ ಶುರುವಾಗಿದೆ’ ಅನ್ನೋ ಸಂಗತಿ. ಇದು ಯಾಕಷ್ಟು imporatant ವಿಷಯವಾಗುತ್ತೆ ಅನ್ನೋದಕ್ಕೆ 2014ರ ಲೋಕಸಭಾ ಸಮರ ಕಣದಲ್ಲಿ ಮೋದಿ ಮಹಾತ್ಮರು ಉದುರಿಸಿದ್ದ ಡೈಲಾಗ್ ನೆನಪಿಸಿಕೊಳ್ಳಿ. ಅವತ್ತು ಹೋದಬಂದ ಕಡೆಯಲ್ಲೆಲ್ಲ ‘ಅಚ್ಚೇ ದಿನ್ ಆಯೇಗಾ, ಜರೂರ್ ಆಯೇಗಾ’ ಅಂತ ಮಹಾತ್ಮರು ಬಂಬಡಾ ಬಜಾಯಿಸಿದ್ದಕ್ಕೂ ಇವತ್ತು ರೆಡ್ಡಿಯಂತಹ ಮಾಫಿಯಾಗಳು ‘ನಮಗೆ ಗುಡ್ ಟೈಮ್ ಶುರುವಾಗಿದೆ’ ಅನ್ನೋದಕ್ಕೂ ಸಂಬಂಧ ಇರೋದು ಕಾಣಿಸುತ್ತೆ ಅಲ್ವಾ?

ಮೋದಿ ‘ಅಚ್ಚೇ ದಿನ್ ಅಂದಾಗ, ನಮ್ಮ ಬಡ ಬೋರೇಗೌಡಪ್ಪಗಳು ತಮ್ಮ ಮನೆಯ ದೀಪಕ್ಕೆ ಎಣ್ಣೆ ಬರುತ್ತೆ, ತಟ್ಟೆಗೆ ಅನ್ನ ಬಂದು ಬೀಳುತ್ತೆ, ಬೆಲೆಯೇರಿಕೆಯ ಗ್ರಾಫು ಕುಸಿಯುತ್ತೆ ಅಂತ ಕನಸು ಕಂಡಿದ್ದರು. ಆದರೆ ಮೋದಿಯ ಅಚ್ಚೇ ದಿನ್ ವಾಸ್ತವ ಅಂತಹ ಬೋರೇಗೌಡರಿಗಲ್ಲ, ಇಂಥಾ ಜನಾರ್ಧನ ರೆಡ್ಡಿಗಳಿಗೆ. ಇಲ್ಲದೇ ಹೋಗಿದ್ದರೆ, ಅನಾಮತ್ತು ಹದಿನಾರೂವರೆ ಸಾವಿರ ಕೋಟಿಯ ಅದಿರು ಲಫಡಾ ಕೇಸಿನಲ್ಲಿ
ನಂಬರ್1 ಆರೋಪಿಯಾಗಿ ಜೈಲು ಸೇರಿ, ಬೇಲ್‌ಡೀಲ್ ಕೇಸಲ್ಲಿ ಜಡ್ಜ್‌ಗೆ 10 ಕೋಟಿಯ ಬೇಲ್‌ಪೂರಿ ತಿನ್ನಿಸಲು ಹೋಗಿ ತಗಲಾಕ್ಕೊಂಡು ಜೈಲೂಟ ಭದ್ರ ಮಾಡಿಕೊಂಡಿದ್ದ ಜನಾರ್ಧನ ರೆಡ್ಡಿ ಬಿಜೆಪಿ ಅಧಿಕಾರಕ್ಕೆ ಬಂದು ಮೋದಿ ಪ್ರಧಾನಿಯಾಗುತ್ತಿದ್ದಂತೆಯೇ ಸುಲಭವಾಗಿ ಬೇಲ್ ಮೇಲೆ ಹೊರಬಂದು ನಿಟ್ಟುಸಿರು ಬಿಡುತ್ತಿರಲಿಲ್ಲ. ಸಿಬಿಐ ರೇಡುಗಳಿಂದ ಇನ್ನು ರೆಡ್ಡಿಯ ಕಥೆ ಮುಗಿದೇಹೋಯ್ತು, ಅವನ ಆಸ್ತಿಯೆಲ್ಲ ಜಪ್ತಿಯಾಗಿ ಬೀದಿಗೆ ಬಂದ ಅನ್ನುವವರ ಮುಂದೆ ಮುನ್ನೂರು ಕೋಟಿ ಖರ್ಚು ಮಾಡಿ ಮಗಳ ಮದುವೆ ಮಾಡಿ ಕುಟುಂಬ ಸಮೇತ ಹಾಡಿ ಕುಣಿಯುತ್ತಾನೆಂದರೆ ಅವನ ‘ಗುಡ್ ಟೈಂ’ ಹಿಂದೆ ಮೋದಿಯ ‘ಅಚ್ಚೇ ದಿನ್ ಕೆಲಸ ಮಾಡಿಲ್ಲ ಅನ್ನಲಿಕ್ಕಾಗುತ್ತಾ? ಅದೂ ಇಡೀ ದೇಶಕ್ಕೆ ದೇಶವೇ ಮೋದಿ ಮಾಡಿದ ‘ನೋಟ್‌ಬಂಧಿಯಿಂದ ದುಡ್ಡಿಗಾಗಿ ಪರದಾಡುತ್ತಿರುವ ಹೊತ್ತಲ್ಲಿ!

ರೆಡ್ಡಿ ಒಬ್ಬನೇ ಅಲ್ಲ, ಮೋದಿಯ ಅಚ್ಚೇ ದಿನ್‌ಗಳ ಫಾಯಿದೆ ಪಡೆದವರು ಬಹಳಷ್ಟು ಮಂದಿಯಿದ್ದಾರೆ. ಆದರೆ ಅವರೆಲ್ಲ ಈ ನೆಲದ ಸಿರಿವಂತರು, ಇಂಡಸ್ಟ್ರಿಯಲಿಸ್ಟುಗಳು, ಕಾರ್ಪೊರೇಟ್ ಕಂಪನಿಗಳು ಮಾತ್ರ! ಆಮ್ ಆದ್ಮಿಯ ಪಾಲಿಗೆ ಅಚ್ಚೇ ದಿನವೂ ಬರಲಿಲ್ಲ, ಹದಿನೈದು ಲಕ್ಷವೂ ಇಣುಕಿ ನೋಡಲಿಲ್ಲ. ಇದೇ ವರ್ಷ ಚೀನಾದ ಶಾಂಘೈ ಮೂಲದ ಹುರೂನ್ ಎಂಬ ಇಂಟರ್‌ನ್ಯಾಷನಲ್ ಅನಾಲಿಟಿಕಲ್ ಸಂಸ್ಥೆಯೊಂದು ಜಗತ್ತಿನ ಸಿರಿವಂತರ ಪಟ್ಟಿ ಬಿಡುಗಡೆ ಮಾಡಿತು. ಅದರ ಪ್ರಕಾರ ಕಳೆದ ಮೂರ್‍ನಾಲ್ಕು ವರ್ಷದಲ್ಲಿ ಇಂಡಿಯಾದ ಬಿಲಿಯನೇರುಗಳ ಆಸ್ತಿಗಳಿಕೆ ಶೇ.49ರಷ್ಟು ಹೆಚ್ಚಾಗಿದೆಯಂತೆ. ಅಂದಹಾಗೆ ಆ ಲಿಸ್ಟಿನಲ್ಲಿ ಸ್ಥಾನ ಪಡೆದ ಭಾರತದ ಬಿಲಿಯನೇರುಗಳ ಸಂಖ್ಯೆ 131. ಅಂದರೆ 130 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ಕೇವಲ 131 ಜನರ ಆಸ್ತಿ ಮಾತ್ರ ರಾಕೆಟ್ ವೇಗದಲ್ಲಿ ಹೆಚ್ಚಾಗಿದೆ. ಈ ರಿಪೋರ್ಟು ಹೇಳುವ ಪ್ರಕಾರ ಮೋದಿ ಮಹಾತ್ಮರ ಚೆಡ್ಡಿ ದೋಸ್ತು ಅದಾನಿಯ ಆಸ್ತಿ ಕಳೆದ ಒಂದು ವರ್ಷದಲ್ಲೇ 109% ಜಾಸ್ತಿಯಾಗಿದೆಯಂತೆ! ಇನ್ನು ಅಂಬಾನಿ ಬ್ರದರ್‍ಸ್‌ಗಳದ್ದು, ಜಿಂದಾಲ್ ಕುಡಿಗಳದ್ದು, ಮಿತ್ತಲ್ ಕುಟುಂಬಗಳದ್ದು ಕೇಳೋದೆ ಬೇಡ. ದುರಂತವೆಂದರೆ ಮೋದಿ ಹೇಳಿದ್ದ ಅಚ್ಚೇ ದಿನ್ ಇವರೆಲ್ಲ ಆಸ್ತಿಗಳನ್ನು ಇಷ್ಟೆಲ್ಲ ಹೆಚ್ಚು ಮಾಡಿದ್ದರೂ, ಸುಮಾರು 60 ಕೋಟಿ ಬಡ ಭಾರತೀಯರ ಆದಾಯ ಈ ಅವಧಿಯಲ್ಲಿ ಏನಾಗಿದೆ ಎಂಬುದನ್ನು ನಾವು ಮರೆಯುವಂತಿಲ್ಲ.

ಒಟ್ಟಿನಲ್ಲಿ ಮೋದಿ ಮಹಾತ್ಮರ ಅಚ್ಚೇ ದಿನ್ ಜನಸಾಮಾನ್ಯರಿಗೆ ದಕ್ಕಲಿಲ್ಲ, ರೆಡ್ಡಿಯಂಥಾ, ಅಂಬಾನಿ-ಅದಾನಿಗಳಂಥ ಕಾಳಧನಿಕರಿಗೆ ‘ಗುಡ್ ಟೈಂ’ ರೂಪದಲ್ಲಿ ವಕ್ಕರಿಸಿಕೊಂಡಿದೆ ಅನ್ನೋದು ರೆಡ್ಡಿ ಮಾತಿನಿಂದಲೇ ದೃಢವಾಗುತ್ತೆ.

– ಗಿರೀಶ್ ತಾಳಿಕಟ್ಟೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...