Homeಕರೋನಾ ತಲ್ಲಣಕಂಟೈನ್ಮೆಂಟ್ ಪ್ರದೇಶಗಳ ಸೀಲ್‌ಡೌನ್‌ಗೆ 20-25 ಕೋಟಿ ರೂ. ಖರ್ಚು ಮಾಡಿದ ಬಿಬಿಎಂಪಿ!

ಕಂಟೈನ್ಮೆಂಟ್ ಪ್ರದೇಶಗಳ ಸೀಲ್‌ಡೌನ್‌ಗೆ 20-25 ಕೋಟಿ ರೂ. ಖರ್ಚು ಮಾಡಿದ ಬಿಬಿಎಂಪಿ!

ಒಂದೊಂದು ಪ್ರದೇಶದಲ್ಲಿ 15 ಸಾವಿರದಿಂದ ಹಿಡಿದು ಲಕ್ಷದವರೆಗೆ ಸೀಲ್‌ಡೌನ್‌ಗಾಗಿ ಖರ್ಚು ಮಾಡಿರುವುದು ಬಹಿರಂಗವಾಗಿದೆ.

- Advertisement -
- Advertisement -

ಕೊರೊನಾ ಪಾಸಿಟಿವ್ ರೋಗಿಗಳಿರುವ ಕಂಟೈನ್ಮೆಂಟ್ ಪ್ರದೇಶಗಳ ಸೀಲ್‌ಡೌನ್‌ಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸುಮಾರು 20-25 ಕೋಟಿ ರೂ. ಖರ್ಚು ಮಾಡಿದೆ ಎಂದು ಡೆಕ್ಕನ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.

ಸೀಲ್ ಮಾಡಲು ಮಾಡಿದ ಖರ್ಚಿನ ಬಗ್ಗೆ ವಿವರವಾದ ವರದಿಯನ್ನು ಬಿಬಿಎಂಪಿ ತನ್ನ ಅಧಿಕಾರಿಗಳಿಂದ ಆಯುಕ್ತರು ಕೋರಿದ್ದಾರೆ. ಅನೇಕ ಕಂಟೈನ್ಮೆಂಟ್‌ಗಳಲ್ಲಿ ಸೀಲ್ ಮಾಡಲು 15,000 ರೂಗಳಿಂದ ಹಿಡಿದು ಹಲವಾರು ಲಕ್ಷದವರೆಗೆ ಖರ್ಚು ಮಾಡಿರುವುದನ್ನು ಅವರು ಬಹಿರಂಗಪಡಿಸಿದ್ದಾರೆ.

ಕಂಟೈನ್ಮೆಂಟ್ ಪ್ರದೇಶಗಳ ನಿರ್ವಹಣೆ ಮತ್ತು ಮನೆಗಳ ಸೀಲ್‌ಡೌನ್‌ಗೆ ಭಾರಿ ವೆಚ್ಚ ಮಾಡುತ್ತಿರುವುದನ್ನು ಮಾಧ್ಯಮಗಳು ವರದಿ ಮಾಡಿದ್ದವು. ಈ ವಿಷಯ ತನ್ನ ಗಮನಕ್ಕೆ ಬಂದಿದ್ದು, ಎಂಜಿನಿಯರ್‌ಗಳಿಂದ ವಿವರವಾದ ವರದಿಯನ್ನು ಕೋರಿದ್ದೇನೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

ಸೋಮವಾರ ವಿವಿಧ ವಲಯಗಳ ಎಂಜಿನಿಯರ್‌ಗಳೊಂದಿಗೆ ನಡೆದ ಸಭೆಯ ನಂತರ “ಆರ್.ಆರ್. ನಗರವೊಂದರಲ್ಲೆ, ಜೂನ್ ಮತ್ತು ಆಗಸ್ಟ್ ನಡುವೆ, ಕಟ್ಟಡಗಳು ಮತ್ತು ಲೇನ್‌ಗಳ ಸೀಲ್ ಡೌನ್‌ ಹಾಕಲು ಅಧಿಕಾರಿಗಳು 1.5 ಕೋಟಿ ರೂ.ಗಳಿಂದ ಹಿಡಿದು 2 ಕೋಟಿ ರೂ. ಖರ್ಚು ಮಾಡಿದ್ದಾರೆ. ಕೆಲವು ವಲಯಗಳ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು, ನಿಗದಿತ ದರಗಳ (ಎಸ್‌ಆರ್‌ ದರಗಳು) ಅನುಸಾರವಾಗಿ ಮನೆಗಳನ್ನು ಸೀಲ್ ಮಾಡಲು ಶೀಟ್‌ಗಳು ಮತ್ತು ಇತರ ವಸ್ತುಗಳನ್ನು ಖರೀದಿಸಿದರು. ಅವರು ಈ ವಸ್ತುಗಳನ್ನು ಪ್ರಕರಣಗಳು ವರದಿ ಮಾಡಿದ ಕಡೆ ಅದನ್ನು ಕೊ೦ಡೊಯ್ಯುತ್ತಾರೆ. ಆದರೆ ಒಂದು ವಲಯದಲ್ಲಿ ಅಧಿಕಾರಿಗಳು 2 ಕೋಟಿ ರೂ.ಯಷ್ಟು ಖರ್ಚು ಮಾಡಿದ್ದಾರೆ, ಎಲ್ಲಾ ವಲಯಗಳಲ್ಲಿ ನಾವು ಸುಮಾರು 20 ರಿಂದ 25 ಕೋಟಿ ರೂ. ಖರ್ಚು ಮಾಡಿರಬಹುದು. ನಾನು ಅವರೆಲ್ಲರನ್ನೂ ವಿವರವಾದ ವರದಿಗಾಗಿ ಕೇಳಿದ್ದೇನೆ” ಎಂದು ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

ಬಿಬಿಎಂಪಿಯಿಂದ ಯಾವುದೇ ಅಂದಾಜು ಅಥವಾ ಪೂರ್ವ ಅನುಮೋದನೆಯಿಲ್ಲದ ಸೀಲ್‌ಡೌನ್‌ಗಳಿಗೆ ಸಂಬಂಧಿಸಿದ ಯಾವುದೇ ಮಸೂದೆಗಳನ್ನು ಅನುಮೋದಿಸದಂತೆ ಮಂಜುನಾಥ್ ಪ್ರಸಾದ್ ಜಂಟಿ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.

“ಅಂದಾಜುಗಳ ಆಧಾರದ ಮೇಲೆ ಸರಿಯಾದ ಕಾರ್ಯತತ್ಪರತೆ ಮತ್ತು ಪೂರ್ವ ಅನುಮೋದನೆಯೊಂದಿಗೆ ಸಲ್ಲಿಸಿದ ಬಿಲ್ಲುಗಳನ್ನು ಮಾತ್ರ ಕ್ಲಿಯರ್ ಮಾಡುತ್ತೇವೆ. ಇಲ್ಲದಿದ್ದರೆ ಅದನ್ನು ತಡೆಹಿಡಿದು ವಿಚಾರಣೆ ನಡೆಸಲಾಗುವುದು” ಎಂದು ಅವರು ಹೇಳಿದರು.


ಓದಿ: ಕರ್ನಾಟಕ ಸರ್ಕಾರದ ಕೋವಿಡ್ ನಿಜಪರೀಕ್ಷೆ: ಖಾಸಗಿ ಆಸ್ಪತ್ರೆಗಳು ಖಳನಾಯಕರಾಗುವರೇ?


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read