Homeಮುಖಪುಟಸುತ್ತಿಗೆಯಿಂದ ಕ್ರೂರವಾಗಿ ಥಳಿಸಿದ ಗೋರಕ್ಷಕರು: ಕೈಕಟ್ಟಿ ನೋಡುತ್ತಿದ್ದ ಪೊಲೀಸರು..

ಸುತ್ತಿಗೆಯಿಂದ ಕ್ರೂರವಾಗಿ ಥಳಿಸಿದ ಗೋರಕ್ಷಕರು: ಕೈಕಟ್ಟಿ ನೋಡುತ್ತಿದ್ದ ಪೊಲೀಸರು..

- Advertisement -
- Advertisement -

ನಿರಾಯುಧನಾದ ವ್ಯಕ್ತಿಯೊಬ್ಬನನ್ನು ತಮ್ಮನ್ನು ತಾವು ಗೋರಕ್ಷರೆಂದು ಕರೆದುಕೊಳ್ಳುವ ಹಲವಾರು ಮಂದಿ ಸುತ್ತಿಗೆಯಿಂದ ನಿರ್ಧಯವಾಗಿ ಥಳಿಸುತ್ತಿದ್ದಾರೆ. ಕಾಲಿನಿಂದ ಒದೆಯುತ್ತಿದ್ದಾರೆ. ಆದರೆ ಅಲ್ಲಿಯೇ ಇರುವ ಪೊಲೀಸರು ಕೈಕಟ್ಟಿಕೊಂಡು ನೋಡುತ್ತಿದ್ದಾರೆ. ಇಂತಹ ಹೃದಯವಿದ್ರಾವಕ ಘಟನೆ ರಾಷ್ಟ್ರರಾಜಧಾನಿ ಬಳಿಯ ಗುರ್ಗಾವ್‌ನಲ್ಲಿ ನಡೆದಿದೆ. ಇದು ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿರುವುದನ್ನು ಅಥವಾ ಬಲಾಢ್ಯರ ಪರ ಇರುವುದನ್ನು ತೋರಿಸುತ್ತಿದೆ.

ಲುಕ್ಮನ್ ಎಂದು ಗುರುತಿಸಲ್ಪಟ್ಟ ಚಾಲಕನನ್ನು ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹರಿಯಾಣದ ಗುರ್ಗಾವ್‌ನಲ್ಲಿ ಅಮಾನವೀಯವಾಗಿ ಥಳಿಸಲಾಗಿದೆ. ನಂತರ ಆತನನ್ನು ಟ್ರಕ್‌ ಒಂದಕ್ಕೆ ಕಟ್ಟಿ ಗುರಗಾಂವ್‌ನ ಬಾದ್‌ಶಾಹ್‌ಪುರ ಗ್ರಾಮಕ್ಕೆ ಕರೆದೊಯ್ದು ಅಲ್ಲಿಯೂ ಹಲವಾರು ಜನ ಮನಬಂದಂತೆ ಥಳಿಸಿದ್ದಾರೆ. ಅಲ್ಲಿಯೂ ಯಥಾ ಪ್ರಕಾರ ಪೊಲೀಸರು ಮೌನಕ್ಕೆ ಶರಣಾಗಿದ್ದಾರೆ.

ಈ ಘಟನೆ 5 ವರ್ಷಗಳ ಹಿಂದೆ ದಾದ್ರಿಯಲ್ಲಿ ನಡೆದ ಗುಂಪುಹತ್ಯೆ ಪ್ರಕರಣವನ್ನು ನೆನಪಿಸುತ್ತದೆ. ಅಖ್ಲಾಖ್ ಎಂಬ ಅಮಾಯಕನನ್ನು ಗೋರಕ್ಷಕರು ಹೊಡೆದುಕೊಂದಿದ್ದಕ್ಕೂ ಇದಕ್ಕೂ ಹಲವು ಸಾಮ್ಯತೆಗಳಿವೆ. ಇಲ್ಲಿಯೂ ಅಕ್ರಮ ಗೋಮಾಂಸ ಸಾಗಣೆ ಆರೋಪ ಹೊರಿಸಲಾಗಿದೆ. ಇನ್ನೂ ಮುಖ್ಯವಾಗಿ ದಾದ್ರಿಯಂತೆಯೇ ಇಲ್ಲಿಯೂ ಸಹ ಪೊಲೀಸರು ಆರೋಪಿಗಳನ್ನು ಬಂಧಿಸುವುದು ಬಿಟ್ಟು, ಮಾಂಸವನ್ನು ಪರೀಕ್ಷಿಸಲು ಲ್ಯಾಬ್‌ಗೆ ಕಳಿಸಲಾಗಿದೆ.

ಈ ಒಟ್ಟಾರೆ ಘಟನೆಯ ವಿಡಿಯೋಗಳು ಹರಿದಾಡುತ್ತಿವೆ. ಅದರಲ್ಲಿ ಹಲ್ಲೆ ನಡೆಸಿದವರ ಮುಖಚರ್ಯೆಗಳು ಸ್ಪಷ್ಟವಾಗಿ ದಾಖಲಾಗಿದ್ದರೂ ಸಹ ಪೊಲೀಸರು ಕೇವಲ ಒಬ್ಬನನ್ನು ಮಾತ್ರ ಬಂಧಿಸಿದ್ದಾರೆ ಮತ್ತು ಅಪರಿಚಿತರ ಮೇಲೆ ದೂರು ದಾಖಲಿಸಿದ್ದಾರೆ.

ಲುಕ್ಮನ್ ಚಲಾಯಿಸುತ್ತಿದ್ದ ವಾಹನದ ಮಾಲೀಕರು ” ಅದು ಎಮ್ಮೆ ಮಾಂಸವಾಗಿದೆ ಮತ್ತು ಕಳೆದ 50 ವರ್ಷಗಳಿಂದ ಈ ವ್ಯವಹಾರದಲ್ಲಿದ್ದೇವೆ” ಎಂದು ಹೇಳಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೇಳಿಕೆ ನೀಡಲು ಮತ್ತು ವಿವರ ನೀಡಲು ನಿರಾಕರಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದುವರೆಗೂ ಹತ್ತಾರು ಗುಂಪುಹಲ್ಲೆ ಪ್ರಕರಣಗಳು ವರದಿಯಾಗಿವೆ. ಹತ್ತಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ಬಹುತೇಕರು ಮುಸ್ಲಿಮರಾಗಿದ್ದಾರೆ. ಈ ಕುರಿತು ವ್ಯಾಪಕ ಟೀಕೆಗಳು ಕೇಳಿಬಂದ ನಂತರ ಪ್ರಧಾನಿ ಮೋದಿಯವರು ಗುಂಪು ಹಲ್ಲೆ ಮಾಡಬೇಡಿ ಎಂದು ಮನವಿ ಮಾಡಿದ್ದರು. ಆದರೂ ಅವು ಮುಂದುವರೆಯುತ್ತಲೇ ಇವೆ.


ಇದನ್ನೂ ಓದಿ: ಪೊಲೀಸರ ಎದುರೇ ದಲಿತರ ಮೇಲೆ ಹಲ್ಲೆ ಆರೋಪ: ಠಾಣೆ ಎದುರು ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಕ್ರೌರ್ಯದ ಪರಮಾವಧಿ. ಮೂಕಪ್ರೇಕ್ಶಕರಾಗಿ ವರ್ತಿಸಿರುವ ಪೊಲೀಸರನ್ನು ಮೊದಲು ಸೇವೆಯಿಂದ ವಜಾಗೊಳಿಸಬೇಕು.

  2. ಯಾವುದೇ ಕಾರಣಕ್ಕೂ ಕಾನೂನು ಕೈಗೆ ತೆಗೆದು ಕೊಳ್ಳುವ ವರನ್ನು ಸುಮ್ಮನೆ ಬಿಡಬಾರದು… ಇದೊಂದು ಅತ್ಯಂತ ಹೇಯ ಕೃತ್ಯ…. ಪ್ರಜ್ಞಾವಂತ ನಾಗರಿಕರು ಖಂಡಿಸುತ್ತಾರೆ ಎಂದು ಭಾವಿಸುತ್ತೇನೆ….

LEAVE A REPLY

Please enter your comment!
Please enter your name here

- Advertisment -

Must Read