Homeಕರ್ನಾಟಕಬಿಎಸ್‌ವೈಯಿಂದ ಪಕ್ಷದ ಗೌರವ ಹಾಳಾಗುತ್ತಿದೆ, ಅವರ ವಿರುದ್ದ ಕ್ರಮ ಕೈಗೊಳ್ಳಿ: ಶಂಕರ್‌ ಬಿದರಿ

ಬಿಎಸ್‌ವೈಯಿಂದ ಪಕ್ಷದ ಗೌರವ ಹಾಳಾಗುತ್ತಿದೆ, ಅವರ ವಿರುದ್ದ ಕ್ರಮ ಕೈಗೊಳ್ಳಿ: ಶಂಕರ್‌ ಬಿದರಿ

ಪಕ್ಷದ ಗೌರವ, ಭವಿಷ್ಯ ಮತ್ತು ಪ್ರಧಾನಿಯ ಪ್ರತಿಷ್ಟೆ ಎಲ್ಲವೂ ಕರ್ನಾಟಕದ ಕಸದ ಬುಟ್ಟಿಯಲ್ಲಿದೆ.

- Advertisement -
- Advertisement -

ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಜೈಲು ಸೇರಿ ಹೊರಬಂದಿರುವ ಯಡಿಯೂರಪ್ಪ ಅವರಿಂದ ಪಕ್ಷದ ಗೌರವ ಹಾಳಾಗುತ್ತಿದೆ. ಭ್ರಷ್ಟಾಚಾರಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿರುವುದು ಯಾಕೆ? ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಿಎಸ್‌ವೈ ಅವರನ್ನು ಪಕ್ಷದಿಂದ ವಜಾಗೊಳಿಸಿ ಎಂದು ಮಾಜಿ ಪೊಲೀಸ್‌ ಮಹಾನಿರ್ದೇಶಕ ಶಂಕರ್ ಬಿದರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಬಿಎಸ್‌ವೈ ಪುತ್ರ ವಿಜಯೇಂದ್ರ ಅವರು 5,000 ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಬಿಜೆಪಿ ನಾಯಕರೇ ಆರೋಪಿಸಿದ್ದರು. ಈ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆ ಬಗ್ಗೆ ಉಲ್ಲೇಖಿಸಿರುವ ಶಂಕರ್ ಬಿದರಿ ಅವರು, ಯಡಿಯೂರಪ್ಪ ಕುಟುಂಬದ ಬಗ್ಗೆ ಭ್ರಷ್ಟಾಚಾರದ ವರದಿಗಳು ಸುದ್ದಿಯಾಗಿವೆ. ಇದು, ಐಟಿ, ಇಡಿ ಮತ್ತು ಪಕ್ಷದವರಿಗೆ ಗೊತ್ತಿಲ್ಲವಾ, ಅವರ ಗಮನಕ್ಕೆ ಬಂದಿಲ್ಲವಾ? ಪಕ್ಷದ ಭವಿಷ್ಯದ ಬಗೆಗೆ ಬಿಜೆಪಿ ನಾಯಕರಿಗೆ ಕಾಳಜಿ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ರಾಜ್ಯಕ್ಕೆ ಕೇಂದ್ರದ ಪರಿಹಾರ?: ಯಡಿಯೂರಪ್ಪಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆಗಳು!

ಚಿಮನ್​ಭಾಯ್ ಎದುರಾಗಿ ದೊಡ್ಡ ಆಂದೋಲನ ನಡೆಸಿದ ಪಕ್ಷ, ಕೇಶುಭಾಯ್ ಅವರನ್ನ ಕಿತ್ತೊಗೆಯಲು ಮೀನಮೇಷ ಎಣಿಸದ ಪಕ್ಷ ಈಗ ಕರ್ನಾಟಕದ ಕೇಶುಭಾಯ್ ಬಗ್ಗೆ ಭಯಪಡುತ್ತಿದೆಯಾ? ಇದು ಶ್ಯಾಮಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯ ಮತ್ತು ಅಟಲ್​ಜಿ ಅವರ ಪಕ್ಷವೆ ಎಂದು ಪ್ರಶ್ನಿಸಿದ್ದಾರೆ.

ತಮ್ಮ ಟ್ವೀಟ್‌ನಲ್ಲಿ ಪ್ರಧಾನಿ ಮೋದಿ ಮತ್ತು ಪ್ರಹ್ಲಾದ್ ಜೋಶಿ ಅವರನ್ನು ಟ್ಯಾಗ್‌ ಮಾಡಿರುವ ಅವರು, ಬಿಎಸ್‌ವೈ ಮತ್ತು ಅವರ ಕುಟುಂಬದವರ ಭ್ರಷ್ಟಾಚಾರವನ್ನು ಹೇಗೆ ಸಹಿಸಿಕೊಂಡಿದ್ದೀರಿ. ಪಕ್ಷದ ಗೌರವ, ಭವಿಷ್ಯ ಮತ್ತು ಪ್ರಧಾನಿಯ ಪ್ರತಿಷ್ಟೆ ಎಲ್ಲವೂ ಕರ್ನಾಟಕದ ಕಸದ ಬುಟ್ಟಿಯಲ್ಲಿದೆ. ನಿಮ್ಮ ನಿಷ್ಕ್ರಿಯತೆಯಿಂದ ದೇಶವನ್ನು ಹೇಗೆ ಮುನ್ನಡೆಸಲು ಸಾಧ್ಯ? ಎಂದು ಕೇಳಿದ್ದಾರೆ.

ಇದನ್ನೂ ಓದಿ: ಸದ್ಯಕ್ಕೆ ಯಡಿಯೂರಪ್ಪನವರ ಕುರ್ಚಿಗೆ ಅಪಾಯವಿಲ್ಲ. ಏಕೆಂದರೆ…!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎವರೆಸ್ಟ್, ಎಂಡಿಹೆಚ್ ಮಸಾಲೆ ಪದಾರ್ಥಗಳನ್ನು ನಿಷೇಧಿಸಿದ ನೇಪಾಳ

0
ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟ ನಿಯಂತ್ರಣ ಇಲಾಖೆಯು ಎರಡು ಭಾರತೀಯ ಮಸಾಲೆ ಬ್ರಾಂಡ್‌ಗಳಾದ ಎವರೆಸ್ಟ್ ಮತ್ತು ಎಂಡಿಎಂಹೆಚ್‌ಗಳ ಆಮದು, ಬಳಕೆ ಮತ್ತು ಮಾರಾಟವನ್ನು ನಿಷೇಧಿಸಿದೆ. ಅಲ್ಲದೆ ಈ ಮಸಾಲೆಗಳಲ್ಲಿನ ಎಥಿಲೀನ್ ಆಕ್ಸೈಡ್...