Homeಕರೋನಾ ತಲ್ಲಣ2021 ರ ಆರಂಭದಲ್ಲಿ ಕೊರೊನಾ ಲಸಿಕೆ ಲಭ್ಯ: ಕೇಂದ್ರ ಆರೋಗ್ಯ ಸಚಿವ

2021 ರ ಆರಂಭದಲ್ಲಿ ಕೊರೊನಾ ಲಸಿಕೆ ಲಭ್ಯ: ಕೇಂದ್ರ ಆರೋಗ್ಯ ಸಚಿವ

ಈ ಮಧ್ಯೆ ಲಸಿಕೆ ಪ್ರಯೋಗದಲ್ಲಿ ಭಾಗವಹಿಸಿದ ಒಬ್ಬರು ಅನಾರೋಗ್ಯಕ್ಕೆ ತುತ್ತಾದ್ದರಿಂದ, ಅಮೆರಿಕಾ ಮೂಲದ ವೈದ್ಯಕೀಯ ಕಂಪೆನಿ ಜಾನ್ಸನ್ & ಜಾನ್ಸನ್ ತನ್ನ ಕೊರೊನಾ ಲಸಿಕೆಯ ಪ್ರಯೋಗವನ್ನು ನಿಲ್ಲಿಸಿದೆ.

- Advertisement -
- Advertisement -

2021 ರ ಆರಂಭದಲ್ಲಿ ದೇಶದಲ್ಲಿ ಕೊರೊನಾಗೆ ಲಸಿಕೆ ಲಭ್ಯವಾಗುವ ನಿರೀಕ್ಷೆಯಿದ್ದು, ಲಸಿಕೆಗಳನ್ನು ವಿತರಿಸುವ ಕುರಿತು ತಜ್ಞರು ಯೋಜನೆಯನ್ನು ರೂಪಿಸುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಹೇಳಿದ್ದಾರೆ.

ಮುಂದಿನ ವರ್ಷದಿಂದ ಒಂದಕ್ಕಿಂತ ಹೆಚ್ಚು ಮೂಲಗಳಿಂದ ಲಸಿಕೆಯನ್ನು ಪಡೆಯುವ ನಿರೀಕ್ಷಯಿದೆ. ಮುಂದಿನ ವರ್ಷದ ಜುಲೈ ವೇಳೆಗೆ 400 ರಿಂದ 500 ಮಿಲಿಯನ್ ಡೋಸ್ ಲಸಿಕೆಗಳು ದೇಶದಲ್ಲಿ 20-25 ಕೋಟಿ ಜನರನ್ನು ತಲುಪುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ನಿರ್ವಹಣೆಯಲ್ಲಿ ವಿಫಲ: ಕಣ್ಣೀರು ಹಾಕಿ ಕ್ಷಮೆ ಕೇಳಿದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್!

ಈಮಧ್ಯೆ, ಅಮೆರಿಕಾ ಮೂಲದ ವೈದ್ಯಕೀಯ ಕಂಪೆನಿಯಾದ ಜಾನ್ಸನ್ & ಜಾನ್ಸನ್ ತನ್ನ ಕೊರೊನಾ ಲಸಿಕೆಯ ಪ್ರಯೋಗವನ್ನು ತಾತ್ಕಾಲಿಕವಾಗಿ ನಿಲ್ಲಿಸಿರುವುದಾಗಿ ಘೋಷಿಸಿದೆ. ಕಂಪೆನಿಯ ಲಸಿಕೆ ಪ್ರಯೋಗದಲ್ಲಿ ಭಾಗವಹಿಸಿದ ಒಬ್ಬರು ಅನಾರೋಗ್ಯಕ್ಕೆ ಒಳಗಾಗಿದ್ದರು.

ಜೆ & ಜೆ ತನ್ನ ಮೂರನೇ ಹಂತದ ಪ್ರಯೋಗವನ್ನು ಸೆಪ್ಟೆಂಬರ್ ಅಂತ್ಯದಲ್ಲಿ ಅಮೆರಿಕಾ ಮತ್ತು ವಿಶ್ವದಾದ್ಯಂತ 200 ಕ್ಕೂ ಹೆಚ್ಚು ಪ್ರದೇಶಗಳಲ್ಲಿ 60,000 ಸ್ವಯಂಸೇವಕರನ್ನು ದಾಖಲಿಸುವ ಗುರಿಯೊಂದಿಗೆ ಭಾಗವಹಿಸುವವರನ್ನು ನೇಮಕ ಮಾಡಿತ್ತು. ಕೊರೊನಾ ವಿರುದ್ಧ 3 ನೇ ಹಂತದ ಪ್ರಯೋಗವನ್ನು ನಡೆಸಿದ 10 ನೇ ಲಸಿಕಾ ತಯಾರಿಕಾ ಕಂಪೆನಿಯಾಗಿದೆ ಜೆ & ಜೆ.

ದೇಶದಲ್ಲಿ ಕೊರೊನಾ ಪ್ರಕರಣಗಳು 71.8 ಲಕ್ಷ ದಾಟಿದೆ. 1.10 ಲಕ್ಷ ಜನರು ಮೃತಪಟ್ಟಿದ್ದು, 62.3 ಲಕ್ಷ ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಇದನ್ನೂ ಓದಿ: ಕೊರೊನಾ ಲಸಿಕೆ ಪ್ರಯೋಗ ನಿಲ್ಲಿಸಿದ ಜಾನ್ಸನ್ & ಜಾನ್ಸನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಿಂದನೆ ಸಾರ್ವಜನಿಕವಾಗಿ ನಡೆದಿದ್ದರೆ ಮಾತ್ರ ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧವಾಗುತ್ತದೆ: ಸುಪ್ರೀಂ ಕೋರ್ಟ್‌

0
ಸಾರ್ವಜನಿಕವಾಗಿ ಉದ್ದೇಶಪೂರ್ವಕ ಅವಮಾನ ಅಥವಾ ನಿಂದನೆ ಮಾಡಿದರೆ  ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯಿದೆಯಡಿಯಲ್ಲಿ ಅಪರಾಧವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧವಾಗಬೇಕಿದ್ದರೆ 'ನಿಂದನೆಯು...