Homeಮುಖಪುಟಪ್ರತಿಭಟನಾಕಾರರಿಗೆ ಹೆದರಿ ಶ್ವೇತಭವನದ ಬಂಕರ್ ನಲ್ಲಿ ಅಡಗಿದ ಡೊನಾಲ್ಡ್ ಟ್ರಂಪ್

ಪ್ರತಿಭಟನಾಕಾರರಿಗೆ ಹೆದರಿ ಶ್ವೇತಭವನದ ಬಂಕರ್ ನಲ್ಲಿ ಅಡಗಿದ ಡೊನಾಲ್ಡ್ ಟ್ರಂಪ್

- Advertisement -
- Advertisement -

ಅಮೆರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ಶುಕ್ರವಾರ ರಾತ್ರಿ ಶ್ವೇತಭವನದ ಹೊರಗೆ ಪ್ರತಿಭಟನಾಕಾರರು ಜಮಾಯಿಸುತ್ತಿದ್ದಂತೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶ್ವೇತಭವನದ ಭೂಗತ ಬಂಕರ್ ಗೆ ಕರೆದೊಯ್ಯಲಾಯಿತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಡೊನಾಲ್ಡ್ ಟ್ರಂಪ್ ಬಂಕರ್ ಒಳಗೆ ಸುಮಾರು ಒಂದು ಗಂಟೆ ಕಾಲ ಇದ್ದರು ಎನ್ನಲಾಗಿದ್ದು, ಶುಕ್ರವಾರ ಶ್ವೇತಭವನದ ಕಡೆಗೆ ನೂರಾರು ಜನರು ಜಮಾಯಿಸಿದ ನಂತರ ಈ ಘಟನೆ ನಡೆದಿದೆ. ಅಮೆರಿಕಾ ಸೀಕ್ರೆಟ್ ಸರ್ವಿಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಪಾರ್ಕ್ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರನ್ನು ತಡೆಯಲು ಪ್ರಯತ್ನಿಸಿದರು ಎನ್ನಲಾಗಿದೆ.

ಶುಕ್ರವಾರ ರಾತ್ರಿ ಶ್ವೇತಭವನದ ಹೊರಗೆ ದಾಖಲಾಗಿದ್ದ ಪ್ರತಿಭಟನೆಯಿಂದ ಟ್ರಂಪ್ ತಂಡವು ಆಶ್ಚರ್ಯಚಕಿತಗೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರತಿಭಟನಾಕಾರರು ಶ್ವೇತಭವನದಲ್ಲಿ ಜಮಾಯಿಸುತ್ತಿದ್ದಂತೆ ಮೆಲಾನಿಯಾ ಟ್ರಂಪ್ ಮತ್ತು ಬ್ಯಾರನ್ ಟ್ರಂಪ್ ಅವರನ್ನು ಸಹ ಅಧ್ಯಕ್ಷರೊಂದಿಗೆ ಬಂಕರ್ ಗೆ ಕರೆದೊಯ್ಯಲಾಯಿತೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಮೇ 25 ರಂದು ಅಮೆರಿಕಾದ ಮಿನ್ನಿಯಾಪೋಲಿಸ್‌ನಲ್ಲಿ ಪೊಲೀಸರು ಅಮಾಯಕ 46 ವರ್ಷದ ಕರಿಯ ಅಮೇರಿಕನ್ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಮೇಲೆ ದೌರ್ಜನ್ಯವೆಸಗಿ ಅವರು ಸಾವಿಗೀಡಾದ ನಂತರ ಅದರ ವಿರುದ್ಧ ನಿರಂತರ ಪ್ರತಿಭಟನೆಗಳು ನಡೆಯುತ್ತಿದೆ.

ಈ ವರ್ಣಭೇದ ನೀತಿಯನ್ನು ವಿರೋಧಿಸಿ ಪ್ರತಿಭಟನಾಕಾರರು ಬೀದಿಗಿಳಿದಿದ್ದರಿಂದ ಗಲಭೆಯನ್ನು ನಿಗ್ರಹಿಸಲು ಅಮೆರಿಕದ ಪ್ರಮುಖ ನಗರಗಳನ್ನು ಕರ್ಫ್ಯೂಗೆ ಒಳಪಡಿಸಲಾಗಿತ್ತು. ಪೊಲೀಸರು ಭಾನುವಾರ ತಡರಾತ್ರಿ ಶ್ವೇತಭವನದ ಹೊರಗೆ ಜಮಾಯಿಸಿದ್ದ ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಸಿಡಿಸಿದರು ಎಂದು ವರದಿಯಾಗಿದೆ.


ಓದಿ: ಮುಂಬೈ ವೈರಸ್ ಬಿಕ್ಕಟ್ಟಿಗೆ ಗುಜರಾತ್‌ನ ನಮಸ್ತೆ ಟ್ರಂಪ್‌ ಕಾರ್ಯಕ್ರಮ ಕಾರಣ: ಸಂಜಯ್ ರಾವತ್


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಧ್ಯಪ್ರದೇಶ: ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಅನುಮತಿ ನಿರಾಕರಿಸಿದ ವೈದ್ಯರು; ಆಟೋ ರಿಕ್ಷಾದಲ್ಲೆ ಹೆರಿಗೆ

0
ಮಧ್ಯಪ್ರದೇಶದ ನೀಮುಚ್ ಜಿಲ್ಲಾ ಆಸ್ಪತ್ರೆಯಲ್ಲಿ ಅರಿವಳಿಕೆ ವೈದ್ಯರ ಕೊರತೆಯಿಂದಾಗಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ವೈದ್ಯರು ನಿರಾಕರಿಸಿದ್ದು, 30 ವರ್ಷದ ಮಹಿಳೆಯೊಬ್ಬರು ಆಟೋ ರಿಕ್ಷಾದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗುವನ್ನು ತರುವಾಯ ಆಸ್ಪತ್ರೆಗೆ...