Homeನಿಜವೋ ಸುಳ್ಳೋಫ್ಯಾಕ್ಟ್‌ಚೆಕ್: ಇತ್ತೀಚಿನ ಭಾರತ-ಚೀನಾ ಸೈನಿಕರ ಘರ್ಷಣೆಯ ವಿಡಿಯೋ ಬಹಿರಂಗ? ವಾಸ್ತವವೇನು?

ಫ್ಯಾಕ್ಟ್‌ಚೆಕ್: ಇತ್ತೀಚಿನ ಭಾರತ-ಚೀನಾ ಸೈನಿಕರ ಘರ್ಷಣೆಯ ವಿಡಿಯೋ ಬಹಿರಂಗ? ವಾಸ್ತವವೇನು?

- Advertisement -
- Advertisement -

ಇದು ಗಾಲ್ವಾನ್ ಕಣಿವೆಯಲ್ಲಿನ ಭಾರತ ಮತ್ತು ಚೀನಾ ದೇಶಗಳ ಸೈನ್ಯಗಳ ನಡುವೆ ‘ಹಿಂಸಾತ್ಮಕ ಮುಖಾಮುಖಿ’ ಯನ್ನು ತೋರಿಸುತ್ತದೆ ಎಂದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಭಾರತ ಮತ್ತು ಚೀನಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ವಿಡಿಯೋ ಇದಾಗಿದೆ ಎಂದು ಹೇಳಲಾಗಿದೆ.

ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಗಡಿಯಲ್ಲಿ ಸೋಮವಾರ ರಾತ್ರಿ ‘ಎರಡೂ ಕಡೆ ಸಾವುನೋವುಗಳೊಂದಿಗೆ’ ಹಿಂಸಾತ್ಮಕ ಮುಖಾಮುಖಿ ನಡೆದಿದೆ ಎಂದು ಭಾರತೀಯ ಸೇನೆಯು ಜೂನ್ 16, ಮಂಗಳವಾರ ಹೇಳಿದೆ.

ಮಂಡನೆ: ಜೂನ್ 15, ಸೋಮವಾರ ರಾತ್ರಿ ನಡೆದ ಭಾರತ ಮತ್ತು ಚೀನಾ ನಡುವಿನ ಘರ್ಷಣೆಯ ವಿಡಿಯೋ ಎಂದು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ.

ನಿಜ: ಈ ವೈರಲ್ ವಿಡಿಯೋ 2017 ರದ್ದಾಗಿದೆ. ಲಡಾಖ್‌ನ ಪಾಂಗೊಂಗ್ ಸರೋವರದ ಬಳಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಘರ್ಷಣೆ ನಡೆಸುತ್ತಿದೆ ಎಂದು ’ದಿ ಪ್ರಿಂಟ್’ ವರದಿ ಮಾಡಿದೆ.

19 ಆಗಸ್ಟ್ 2017ರ ದಿ ಪ್ರಿಂಟ್‌ ಟ್ವೀಟ್ ಪ್ರಕಾರ, ‘ಭಾರತೀಯ ಮತ್ತು ಚೀನಾದ ಸೈನಿಕರು ಆಗಸ್ಟ್ 15 ರಂದು ಲಡಾಕ್‌ನ ಪಾಂಗೊಂಗ್ ಸರೋವರದಲ್ಲಿ ಘರ್ಷಣೆ ನಡೆಸುತ್ತಿದ್ದಾರೆ’ ಎಂದು ವೀಡಿಯೊದಲ್ಲಿ ತೋರಿಸಲಾಗಿದೆ.

ಇಂಡಿಯಾ ಟುಡೆ ಮತ್ತು ಎನ್‌ಡಿಟಿವಿಯಂತಹ ಹಲವಾರು ಸುದ್ದಿ ಸಂಸ್ಥೆಗಳು ಕೂಡ ಇದೇ ವಿಡಿಯೋವನ್ನು 2017ರಲ್ಲಿ ಅಪ್‌ಲೋಡ್ ಮಾಡಿವೆ.

ಒಟ್ಟಿನಲ್ಲಿ ಜೂನ್ 15 ರಂದು ಭಾರತೀಯ ಮತ್ತು ಚೀನಾದ ಪಡೆಗಳ ನಡುವಿನ ‘ಮುಖಾಮುಖಿ’ ಯಂದು 2017ರ ಹಳೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ : ಲಡಾಖ್ ಘರ್ಷಣೆ: 20 ಭಾರತೀಯ ಸೈನಿಕರ ಹತ್ಯೆ, ನಾಲ್ವರ ಸ್ಥಿತಿ ಗಂಭೀರ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರ: ಪೊಲೀಸ್‌ ಕಸ್ಟಡಿಯಲ್ಲಿದ್ದ ಇಬ್ಬರು ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ; ಠಾಣೆಗೆ ಬೆಂಕಿ ಹಚ್ಚಿದ ಗುಂಪು

0
ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಆರೋಪದಲ್ಲಿ ಬಂಧಿತ ಯುವಕ ಮತ್ತು ಆತನ ಅಪ್ರಾಪ್ತ 'ಪತ್ನಿ' ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿ ಕೋಪಗೊಂಡ ಗ್ರಾಮಸ್ಥರು ಪೊಲೀಸ್‌ ಠಾಣೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಉದ್ರಿಕ್ತರು,...