Homeನಿಜವೋ ಸುಳ್ಳೋಫ್ಯಾಕ್ಟ್‌ಚೆಕ್: ಮುಗಿಬಿದ್ದು ಬಸ್‌ ಹತ್ತುವ ಜನರ ಈ ವಿಡಿಯೋ ಮುಂಬೈದಲ್ಲ, ಪಶ್ಚಿಮ ಬಂಗಾಳದ್ದು

ಫ್ಯಾಕ್ಟ್‌ಚೆಕ್: ಮುಗಿಬಿದ್ದು ಬಸ್‌ ಹತ್ತುವ ಜನರ ಈ ವಿಡಿಯೋ ಮುಂಬೈದಲ್ಲ, ಪಶ್ಚಿಮ ಬಂಗಾಳದ್ದು

- Advertisement -
- Advertisement -

ಲಾಕ್‌ಡೌನ್‌ ಹಂತ ಹಂತವಾಗಿ ತೆರವುಗೊಳ್ಳುತ್ತಿದೆ. ಈ ನಡುವೆ ಎಲ್ಲೆಡೆ ಸಣ್ಣ ಪ್ರಮಾಣದಲ್ಲಿ ಸಾರಿಗೆ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಈ ನಡುವೆ ಬಸ್‌ ಒಂದಕ್ಕೆ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಸರಿಯಾಗಿ ಮಾಸ್ಕ್‌ ಹಾಕಿಕೊಳ್ಳದೆ ಮುಗಿಬಿದ್ದು ಹತ್ತುವ ವಿಡಿಯೋವೊಂದು ವೈರಲ್‌ ಆಗಿದೆ.

ಕಾಂಗ್ರೆಸ್‌ ಮುಖಂಡ ಮತ್ತು ಮಾಜಿ ಸಂಸದ ಮಿಲಿಂದ್‌ ದೊಹ್ರರವರು ಈ ವಿಡಿಯೋವನ್ನು ಮುಂಬೈನಲ್ಲಿ ನಡೆದಿರುವುದು ಎದು ಟ್ವೀಟ್‌ ಮಾಡಿದ್ದು, ಮುಂಬೈ ಮಹಾನಗರ ಸಾರಿಗೆ ಸಂಸ್ಥೆಗೆ ಟ್ಯಾಗ್‌ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿ ಎಂದು ತಿಳಿಸಿದ್ದಾರೆ. ಅಲ್ಲದೇ ಮುಂಬೈನ ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವಾಹನ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದ್ದಾರೆ. ನಂತರ ಅದನ್ನು ಡಿಲೀಟ್‌ ಮಾಡಿದ್ದಾರೆ. ಆರ್ಕೈವ್‌ಗಾಗಿ ಇಲ್ಲಿ ನೋಡಿ.

ಇದೇ ರೀತಿ ನೂರಾರು ಜನರು ಮುಂಬೈನಲ್ಲಿ ನಡೆದ ಘಟನೆ ಎಂದು ಈ ವಿಡಿಯೋವನ್ನು ಷೇರ್‌ ಮಾಡಿದ್ದಾರೆ.

ಫ್ಯಾಕ್ಟ್‌ಚೆಕ್‌: 

ವಿಡಿಯೋದ ಹಿನ್ನೆಲೆ ಆಡಿಯೋದಲ್ಲಿ ಕೇಳಿಬರುವ ಕಂಡಕ್ಟರ್‌ರವರ ಮಾತುಗಳು ಇದು ಮುಂಬೈದಲ್ಲ ಎಂದು ಸ್ಪಷ್ಟಪಡಿಸುತ್ತವೆ. ಕಂಡಕ್ಕರ್‌ ಹಲವು ಬಾರಿ ಬಂಗಾಳಿ ಭಾಷೆಯಲ್ಲಿ ನಿಧಾನ ನಿಧಾನ ಎಂದು ಹೇಳುವುದು ವಿಡಿಯೋದಲ್ಲಿ ಕೇಳಿಬರುತ್ತದೆ. ಅಲ್ಲದೇ ಎಲ್ಲರೂ ಬಂಗಾಳಿ ಭಾಷೆಯಲ್ಲಿ ಮಾತನಾಡಿರುವುದು ವಿಡಿಯೋದಲ್ಲಿ ಸಿಗುತ್ತದೆ.

ಟ್ವಿಟರ್ ಹ್ಯಾಂಡಲ್ @nv3sh ಅನ್ವೇಶ್‌ ಎಂಬುವವರು ಈ ವೀಡಿಯೊವನ್ನು ಮೊದಲು ಟ್ವೀಟ್‌ ಮಾಡಿದ್ದಾರೆ. “ಜೂನ್ 8, 2020 ರಂದು ಕೋಲ್ಕತ್ತಾದ ಬಸ್‌ನ ಪರಿಸ್ಥಿತಿಯನ್ನು ನೀವೇ ನೋಡಿ. ಸ್ನೇಹಿತರ ವೀಡಿಯೊ” ಎಂದು ಅವರು ಬರೆದಿದ್ದಾರೆ.

ಅಲ್ಲದೇ ಅನ್ವೇಶ್‌ರವರ್‌ ಅದಕ್ಕೂ ಮೊದಲು ಅದೇ ಬಸ್‌ನ ಮತ್ತೊಂದು ವಿಡಿಯೋವನ್ನು ಟ್ವೀಟ್‌ ಮಾಡಿದ್ದಾರೆ. ಅದರಲ್ಲಿ ಬಸ್‌ನ ಬಾಗಿಲಿನ್ನು ತೆರೆಯದ ಕಾರಣ ಹೊರಗೆ ಪ್ರಯಾಣಿಕರು ನೂಕುನುಗ್ಗಲು ಮಾಡುತ್ತಿರುವುದು ಕಾಣುತ್ತದೆ. ಆ ವಿಡಿಯೋದ 17ನೇ ಸೆಕೆಂಡ್‌ನಲ್ಲಿ ಕಂಡಕ್ಟರ್‌ “ಟೈಟಗರ್‌, ಪೊಲೀಸ್‌ ಸ್ಟೇಷನ್‌ಗೆ ಬಸ್‌ ಹೋಗುತ್ತದೆ” ಎಂದು ಕೂಗುವುದು ಕೇಳುತ್ತದೆ. ಟೈಟಗರ್‌ ಎಂಬುದು ಉತ್ತರ 24 ಪರಗಣ ಜಿಲ್ಲೆಗೆ ಬರಲಿದ್ದು ಕೋಲ್ಕತ್ತಾ ನಗರಕ್ಕೆ ಹತ್ತಿರವಿದೆ.

ಅಲ್ಲಿಗೆ ಈ ವಿಡಿಯೋ ಪಶ್ಚಿಮ ಬಂಗಾಳಕ್ಕೆ ಸೇರಿದ್ದೆ ಹೊರತು ಮುಂಬೈಗೆ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ.


ಇದನ್ನೂ ಓದಿ: ಶ್ರಮಿಕ್ ರೈಲುಗಳಲ್ಲಿ ವಲಸೆ ಕಾರ್ಮಿಕರ ಸಾವು: ಫ್ಯಾಕ್ಟ್‌ಚೆಕ್ ಮಾಡುವ ಪಿಐಬಿ ಸತ್ಯ ಮರೆಮಾಚಿತೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...