Homeಮುಖಪುಟಕೋವಿಡ್‌ನಿಂದ ಸ್ವಾತಂತ್ರ್ಯ: ಆಗಸ್ಟ್ 15 ರಂದು ಪಣತೊಡಲು ಮೋದಿ ಒತ್ತಾಯ

ಕೋವಿಡ್‌ನಿಂದ ಸ್ವಾತಂತ್ರ್ಯ: ಆಗಸ್ಟ್ 15 ರಂದು ಪಣತೊಡಲು ಮೋದಿ ಒತ್ತಾಯ

- Advertisement -
- Advertisement -

ಈ ವರ್ಷ ಆಗಸ್ಟ್ 15 ರಂದು ದೇಶ ಸ್ವಾತಂತ್ಯ್ರ ದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಕೊರೋನಾದಂತಹ ಸಾಂಕ್ರಾಮಿಕ ರೋಗದಿಂದ ನಾವು ಸ್ವಾತಂತ್ಯ್ರ ಪಡೆಯುವ ಪ್ರತಿಜ್ಞೆಯನ್ನು ಸ್ವೀಕರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಮನ್ ಕಿ ಬಾತ್‌ನಲ್ಲಿ ಮಾತನಾಡಿದ ಅವರು “ಈ ವರ್ಷದ ಆಗಸ್ಟ್ 15ರ ಸ್ವಾತಂತ್ಯ್ರ ದಿನಾಚರಣೆಯನ್ನು ನಾವು ವಿಭಿನ್ನ ಸನ್ನವೇಶದಲ್ಲಿ ಆಚರಿಸುತ್ತಿದ್ದೇವೆ. ಹೀಗಾಗಿ ಈ ಸ್ವಾತಂತ್ಯ್ರದ ದಿನದಂದು ನಾವು ಸಾಂಕ್ರಾಮಿಕ ರೋಗದಿಂದ ಸ್ವಾತಂತ್ರ್ಯದ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕೆಂದು ಯುವಕರನ್ನು ಒತ್ತಾಯಿಸುತ್ತೇನೆ” ಎಂದು ಹೇಳಿದ್ದಾರೆ.

“ಕೊರೊನಾ ಸಾಂಕ್ರಾಮಿಕ ರೋಗದಿಂದ ದೇಶ ಹೆಚ್ಚು ಹಾನಿಗೊಳಗಾಗಿದೆ. ಆದರೆ ಗುಣಮುಖರಾದವರ ಸಂಖ್ಯೆಯು ಹೆಚ್ಚಿದೆ. ನಮ್ಮ ದೇಶದ ಕೊರೊನಾ ಚೇತರಿಕೆ ಪ್ರಮಾಣವು ಇತರ ದೇಶಗಳಿಗಿಂತ ಉತ್ತಮವಾಗಿದೆ. ಸಂಕಷ್ಟದ ನಡುವೆಯೂ ನಾವು ಲಕ್ಷಾಂತರ ಜನರ ಪ್ರಾಣವನ್ನು ಉಳಿಸಲು ಸಾಧ್ಯವಾಗಿದೆ” ಎಂದು ತಿಳಿಸಿದ್ದಾರೆ.

“ಕೊರೊನಾ ವೈರಸ್ ಬೆದರಿಕೆ ಇನ್ನೂ ಮುಗಿದಿಲ್ಲ. ಈ ವೈರಸ್ ಆರಂಭಕ್ಕಿಂತಲೂ ಈಗ ಹೆಚ್ಚು ಅಪಾಯಕಾರಿಯಾಗುತ್ತಿದೆ. ಹೀಗಾಗಿ ನಾವು ಸಾಕಷ್ಟು ಜಾಗರೂಕರಾಗಿರಬೇಕು. ಜನ COVID-19 ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕಾದ ಅಗತ್ಯತೆ ಇದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.


ಇದನ್ನೂ ಓದಿ: ಅಯೋಧ್ಯೆ ಕಾರ್ಯಕ್ರಮಕ್ಕೆ ರಂಜನ್ ಗೊಗೊಯ್‌ಗಿಲ್ಲ ಆಹ್ವಾನ: ಅನ್ಯಾಯವೆಂದ ಯಶ್ವಂತ್ ಸಿನ್ಹಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಕರೋನ ಮುಕ್ತ ದೇಶಕ್ಕಾಗಿ ಇವರು ಮಾಡಿರುವುದಾದರೂ ಏನು.?

    ವಲಸೆ ಕಾರ್ಮಿಕರ ಗೋಳು ಹಾಗು ಸಾವು ಎಷ್ಟೆಂದು ಗೊತ್ತಾ ಇವರಿಗೆ.
    ಎಲ್ಲಾ ಕಾರ್ಮಿಕರಿಗು ಇವರ ಹಣ ತಲುಪಿದೆಯೇ.?

    ಇವರು ನೀಡಿದ 4 ರಿಂದ 5 ಸಾವಿರ ಹಣದಿಂದ 4 ತಿಂಗಳು ಜೀವನ ನಡೆಸಲಾಗುತ್ತದೆಯೇ.?

    PM-CARES ಹಣದ ಸಂಪೂರ್ಣ ಮಾಹಿತಿ ನೀಡಲು ತಯಾರಿಲ್ಲದ ಈ ಕಳ್ಳರು ಸಾವಿರಾರು ಕೋಟಿ ಕೊಳ್ಳೆ ಹೊಡೆದು ತಮ್ಮ ರಾಜಕೀಯ ಪಕ್ಷಗಳ ಕುದುರೆ ವ್ಯಾಪಾರಕ್ಕಾಗಿ ಬಳಸುತ್ತಿದ್ದಾರೆ.

    ಕರೋನ ಎಂಬ ಸೋಂಕಿನ ಸಂಸರ್ಭದಲ್ಲೂ ಅನೇಕ ರೈತ & ಕಾರ್ಮಿಕ ವಿರೋಧಿ ಕಾಯಿದೆಗಳನ್ನು ಜಾರಿ ಮಾಡುತ್ತಿದ್ದಾರೆ.

    ಸಾವಿರಾರು ಕೋಟಿ ಹಗರಣಗಳು ಈ ಕರ್ನಾಟಕ ಸರ್ಕಾರದಿಂದ ಆಗಿದೆ.

    PPE ಕಿಟ್ ಗಳು ಮಾಸ್ಕ್ ಗಳಿಲ್ಲದೆ ಇಷ್ಟು ದಿನ ಪೌರ ಕಾರ್ಮಿಕರ & ವೈದ್ಯಕೀಯ ಸಿಬ್ಬಂದಿಗಳ ನೋವು ಹೇಳತೀರದು.

    ಪ್ರತೀ ದಿನ ಜನ ಸಾಲ ಮಾಡಿಯೇ ಬದುಕುತ್ತಿದ್ದಾರೆ ಹೊರತು.
    ದುಡಿದು ಸಂಪಾದನೆ ಮಾಡಿ ಅಲ್ಲ.

    ಹಾಗಾಗಿ ಈ ಸರ್ಕಾರ ಸುಳ್ಳಿನ ಸರ್ಕಾರವಾಗಿದೆ ಹೊರತು.
    ಜನಪರ ಸರ್ಕಾರವಂತು ಅಲ್ಲ.

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...