Homeಮುಖಪುಟಜಿಡಿಪಿ ಕುಸಿತ: "ಮೋದಿನಾಮಿಕ್ಸ್" ವಿಫಲವಾಗಿದೆ: ಅಧೀರ್ ರಂಜನ್ ಚೌಧರಿ

ಜಿಡಿಪಿ ಕುಸಿತ: “ಮೋದಿನಾಮಿಕ್ಸ್” ವಿಫಲವಾಗಿದೆ: ಅಧೀರ್ ರಂಜನ್ ಚೌಧರಿ

"ಚೀನಾ ತನ್ನ ಆರ್ಥಿಕತೆಯಲ್ಲಿ ಶೇಕಡಾ 3.8 ರಷ್ಟು ಬೆಳವಣಿಗೆಯನ್ನು ದಾಖಲಿಸುತ್ತಿದ್ದರೆ, ಭಾರತವು -23.9% ರಷ್ಟು ಕುಸಿತಗೊಂಡಿದೆ "ಎಂದು ಅವರು ಟ್ವೀಟ್ ಮಾಡಿದ್ದಾರೆ.

- Advertisement -
- Advertisement -

ಕಾಂಗ್ರೆಸ್ ಮುಖಂಡ, ಅಧೀರ್ ರಂಜನ್ ಚೌಧರಿ ಸೋಮವಾರ ಜಿಡಿಪಿ ಕುಸಿತಕ್ಕೆ ಸಂಬಂಧಿಸಿದಂತೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿ, “ಮೋದಿನಾಮಿಕ್ಸ್” ವಿಫಲವಾಗಿದೆ. ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಜಿಂಗೊಯಿಸಂ ಪರಿಹಾರವಲ್ಲ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಸದಸ್ಯರೂ ಆಗಿರುವ ಚೌಧರಿ, “ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ತಾಳ್ಮೆಯಿಂದ ಕೇಳಿ” ಎಂದು ಮೋದಿಗೆ ಸಲಹೆ ನೀಡಿದ್ದಾರೆ.

“ಮೋದಿ ಸರ್ಕಾರ, ರಾಜಕೀಯ ಮತ್ತು ಆರ್ಥಿಕ ದಿವಾಳಿಯಿಂದ ರೋಗಕ್ಕೆ ತುತ್ತಾದ ಸರ್ಕಾರ” ಎಂದು ಸ್ವತಃ ಸಾಬೀತುಪಡಿಸಿದೆ ಎಂದರು.

ಇದನ್ನೂ ಓದಿ: ಜಿಡಿಪಿ ಕುಸಿತ: ನರೇಂದ್ರ ಮೋದಿ ಸರ್ಕಾರದ ಅನೀತಿಗಳೇ ಕಾರಣ ಎಂದ ಕಾಂಗ್ರೆಸ್ ನಾಯಕರು

“ಚೀನಾ ತನ್ನ ಆರ್ಥಿಕತೆಯಲ್ಲಿ ಶೇಕಡಾ 3.8 ರಷ್ಟು ಬೆಳವಣಿಗೆಯನ್ನು ದಾಖಲಿಸುತ್ತಿದ್ದರೆ, ಮೋದಿನಾಮಿಕ್ಸ್ ಪರಿಣಾಮದಿಂದ ಭಾರತವು -23.9% ರಷ್ಟು ಕುಸಿತಗೊಂಡಿದೆ “ಎಂದು ಅವರು ಟ್ವೀಟ್ ಮಾಡಿದ್ದಾರೆ.

‘ಈಗಾಗಲೇ ಕುಸಿಯುತ್ತಿರುವ ಗ್ರಾಹಕರ ಬೇಡಿಕೆ ಮತ್ತು ಹೂಡಿಕೆಯ ಮೇಲೆ ಕೊರೊನಾ ವೈರಸ್-ಸಂಬಂಧಿತ ಲಾಕ್‌ಡೌನ್‌ಗಳ ಪರಿಣಾಮ ಇರುವುದರಿಂದ, ದೇಶದ ಆರ್ಥಿಕತೆಯು ಏಪ್ರಿಲ್-ಜೂನ್ ಅವಧಿಯಲ್ಲಿ ದಾಖಲೆಯ ಕುಸಿತವನ್ನು ಅನುಭವಿಸಿದೆ.

ಜಿಡಿಪಿಯಲ್ಲಿನ ತೀವ್ರ ಕುಸಿತದ ಬಗ್ಗೆ ಕಾಂಗ್ರೆಸ್ ಈ ಹಿಂದೆ ಸರ್ಕಾರದ ಮೇಲೆ ದಾಳಿ ನಡೆಸಿತ್ತು. ಎನ್‌ಡಿಎ ಸರ್ಕಾರವು ತಜ್ಞರ ಎಚ್ಚರಿಕೆಗಳನ್ನು ಕಡೆಗಣಿಸಿ, ಪತನವನ್ನು ತಗ್ಗಿಸಲು ಯಾವುದೇ ಪರಿಹಾರ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿತ್ತು.


ಇದನ್ನೂ ಓದಿ: ಭಾರತಕ್ಕಿಂತ ಅಮೆರಿಕ, ಜಪಾನ್ ಜಿಡಿಪಿ ಕುಸಿತ ಹೆಚ್ಚು?: ಸುಳ್ಳು ಹರಡುತ್ತಿರುವ ಪೋಸ್ಟ್ ಕಾರ್ಡ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...