Homeಅಂತರಾಷ್ಟ್ರೀಯಮತದಾನದಲ್ಲಿ ವಂಚನೆ, ಸುಪ್ರೀಂಕೋರ್ಟ್‌ಗೆ ಹೋಗಲಿದ್ದೇವೆ: ಡೊನಾಲ್ಡ್ ಟ್ರಂಪ್

ಮತದಾನದಲ್ಲಿ ವಂಚನೆ, ಸುಪ್ರೀಂಕೋರ್ಟ್‌ಗೆ ಹೋಗಲಿದ್ದೇವೆ: ಡೊನಾಲ್ಡ್ ಟ್ರಂಪ್

- Advertisement -
- Advertisement -

ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಯ ಎಣಿಕೆ ನಡೆಯುತ್ತಿದ್ದು, ಇದುವರೆಗಿನ ಎಣಿಕೆಯಲ್ಲಿ ಡೆಮೋಕ್ರೆಟಿಕ್ ಪಕ್ಷದ ಜೋ ಬೈಡೆನ್ ಮುಂದಿದ್ದಾರೆ. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿನ್ನಡೆಯಲ್ಲಿದ್ದು, ಮೋಸದ ಮತದಾನವನ್ನು ನಿಲ್ಲಿಸಲು ನಾವು ಅಮೆರಿಕದ ಸುಪ್ರೀಂಕೋರ್ಟ್‌ಗೆ ಹೋಗಲಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಮೆರಿಕಾ ಚುನಾವಾಣೆ: ಭಾರತ ಮೂಲದ ರಾಜ ಕೃಷ್ಣಮೂರ್ತಿ ಪ್ರತಿನಿಧಿಗಳ ಸದನಕ್ಕೆ ಮರು ಆಯ್ಕೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, “ನಾವು ಹಲವು ರಾಜ್ಯಗಳಲ್ಲಿ ಗೆದ್ದಿದ್ದೇವೆ ಮತ್ತು ಅದನ್ನು ಘೋಷಿಸಲು ಹೊರಟಿದ್ದೇವೆ. ಆದರೆ ನಂತರ ಇದ್ದಕ್ಕಿದ್ದಂತೆ ವಂಚನೆ ಸಂಭವಿಸಿದೆ. ಅಮೆರಿಕಾದ ಜನರಿಗೆ ಮೋಸ ಮಾಡಲು ನಾವು ಬಿಡುವುದಿಲ್ಲ, ನಾವು ಸುಪ್ರೀಂ ಕೋರ್ಟ್‌ಗೆ ಹೋಗಲಿದ್ದೇವೆ. ಎಲ್ಲಾ ಮತದಾನ ನಿಲ್ಲಿಸಬೇಕೆಂದು ನಾವು ಬಯಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಒದಿ: ಅಮೇರಿಕಾ ಚುನಾವಣೆ: ಶೇಕಡ 69 ರಷ್ಟು ಮುಸ್ಲಿಮರು ಜೋ ಬೈಡೆನ್ ಪರ; ಸಮೀಕ್ಷೆ!

ಮಂಗಳವಾರದ ನಡೆದ ಚುನಾವಣೆಯ ನಂತರ ರಾಜ್ಯ ಚುನಾವಣಾ ಮಂಡಳಿಗಳು ಕಾನೂನುಬದ್ಧವಾಗಿ ಅಂಗೀಕರಿಸಬಹುದಾದ ಮೇಲ್-ಇನ್ ಮತಪತ್ರಗಳ ಎಣಿಕೆಯನ್ನು ನಿಲ್ಲಿಸಬೇಕು ಎಂಬುವುದು ಅವರ ಆಗ್ರಹವಾಗಿದೆ.

ಟ್ರಂಪ್ ಬೆದರಿಕೆಗೆ ಪ್ರತಿಕ್ರಿಯಿಸಿದ ಪ್ರತಿಸ್ಪರ್ಧಿ ಜೋ ಬೈಡೆನ್ ಅವರ ತಂಡ, “ಅದನ್ನು ಎದುರಿಸಲು ನಮ್ಮ ಕಾನೂನು ತಂಡಗಳು ಸಿದ್ಧವಾಗಿದೆ” ಎಂದಿದ್ದಾರೆ.

ಇದನ್ನೂ ಓದಿ: US Election 2020 Results LIVE Updates: ಯಾರು ಗೆಲ್ಲಲಿದ್ದಾರೆ ಅಮೆರಿಕಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read