Homeಅಂತರಾಷ್ಟ್ರೀಯUS Election 2020 Results LIVE Updates: ಯಾರು ಗೆಲ್ಲಲಿದ್ದಾರೆ ಅಮೆರಿಕಾ?

US Election 2020 Results LIVE Updates: ಯಾರು ಗೆಲ್ಲಲಿದ್ದಾರೆ ಅಮೆರಿಕಾ?

- Advertisement -
- Advertisement -

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಎಣಿಕೆ ಪ್ರಾರಭವಾಗಿದ್ದು, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಗ್ಗರಿಸುತ್ತಿದ್ದು, ಇತ್ತೀಚೆಗಿನ ವರದಿಯಂತೆ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ ಸ್ಪಷ್ಟ ಮುನ್ನಡೆ ಸಾಧಿಸುತ್ತಿದ್ದಾರೆ.

ಒಟ್ಟು 538 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಸ್ಪಷ್ಟ ಬಹುಮತಕ್ಕೆ 270 ಸ್ಥಾನಗಳ ಅಗತ್ಯವಿದ್ದು ಜೋ ಬೈಡನ್ ಅವರು 224 ಸ್ಥಾನಗಳಲ್ಲಿ ಗೆದ್ದಿದ್ದರೆ, ಟ್ರಂಪ್ 213 ಸ್ಥಾನಗಳಲ್ಲಿ ಗೆಲುವು ಕಂಡಿದ್ದಾರೆ.

ಇದನ್ನೂ ಓದಿ: ಬೊಲಿವಿಯಾ ಚುನಾವಣೆ: ಅಮೆರಿಕಾ ಪ್ರೇರಿತ ದಂಗೆಯ ಹೊರತಾಗಿಯೂ ಎಡಪಕ್ಷಕ್ಕೆ ಭರ್ಜರಿ ಜಯ!

ಕೊರೊನಾ ನಡುವೆಯು ಅಮೆರಿಕಾದಲ್ಲಿ ನಿನ್ನೆ ಚುನಾವಣೆ ನಡೆದಿದ್ದು 10 ಕೋಟಿಗೂ ಅಧಿಕ ಮತದಾರರು ಮತ ಚಲಾಯಿಸಿದ್ದರು. ಜೋ ಬೈಡನ್ 19 ರಾಜ್ಯಗಳಲ್ಲಿ ಇದುವರೆಗೂ ಜಯ ಸಾಧಿಸಿದ್ದರೆ, 23 ರಾಜ್ಯಗಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದಿದ್ದಾರೆ.

ಟ್ರಂಪ್ ಇನ್ನೂ 6 ರಾಜ್ಯಗಳಲ್ಲಿ ಮುನ್ನಡೆಯಲ್ಲಿದ್ದು, ಜೋ ಬೈಡನ್ 3 ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಅಲಸ್ಕಾ ರಾಜ್ಯದಲ್ಲಿ ಈಗಷ್ಟೇ ಎಣಿಕೆ ಪ್ರಾರಂಭವಾಗಿದ್ದು ಟ್ರಂಪ್ 60% ಮತದೊಂದಿಗೆ ಮುನ್ನಡೆಯಲ್ಲಿದ್ದು ಜೋ ಬೈಡನ್ 36% ಮತ ಗಳಿಸಿದ್ದಾರೆ.

ಇದನ್ನೂ ಓದಿ: ಉದ್ವಿಗ್ನತೆ ಹೆಚ್ಚಾದರೆ ಟ್ರಂಪ್ ಭಾರತದ ಪರವಾಗಿ ನಿಲ್ಲತಾರೆಂದು ಖಾತರಿಯಿಲ್ಲ: ಅಮೆರಿಕಾದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...