Homeಅಂತರಾಷ್ಟ್ರೀಯದೇಶವನ್ನು ಒಗ್ಗೂಡಿಸಿ ಮುನ್ನಡೆಸಲು ಜೋ ಬೈಡೆನ್ ಉತ್ತಮ ವ್ಯಕ್ತಿ- ಮಾಜಿ ಅಧ್ಯಕ್ಷ ಜಾರ್ಜ್ ಬುಷ್

ದೇಶವನ್ನು ಒಗ್ಗೂಡಿಸಿ ಮುನ್ನಡೆಸಲು ಜೋ ಬೈಡೆನ್ ಉತ್ತಮ ವ್ಯಕ್ತಿ- ಮಾಜಿ ಅಧ್ಯಕ್ಷ ಜಾರ್ಜ್ ಬುಷ್

ಟ್ರಂಪ್‌ಗೆ ಮರು ಎಣಿಕೆಯನ್ನು ಕೋರುವ ಮತ್ತು ಕಾನೂನು ಸವಾಲುಗಳನ್ನು ಅನುಸರಿಸುವ ಹಕ್ಕಿದೆ. ಆದರೆ, ಈ ಚುನಾವಣೆಯು ಮೂಲಭೂತವಾಗಿ ನ್ಯಾಯಯುತವಾಗಿ ನಡೆದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

- Advertisement -
- Advertisement -

ನೂತನ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡೆನ್‌ಗೆ ಅಮೆರಿಕಾದ ಮಾಜಿ ಅಧ್ಯಕ್ಷ ಜಾರ್ಜ್‌ ಬುಷ್ ಅಭಿನಂದನೆಗಳನ್ನು ತಿಳಿಸಿದ್ದು, “ದೇಶವನ್ನು ಮುನ್ನಡೆಸುವ ಮತ್ತು ಒಗ್ಗೂಡಿಸುವ ಅವಕಾಶವನ್ನು ಗೆದ್ದಿರುವ ಜೋ ಬೈಡೆನ್ ಒಬ್ಬ ಉತ್ತಮ ವ್ಯಕ್ತಿ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಎರಡು ಅವಧಿಯ ರಿಪಬ್ಲಿಕನ್ ಅಭ್ಯರ್ಥಿಯಾಗಿದ್ದ ಬುಷ್, ಡಲ್ಲಾಸ್‌ನಲ್ಲಿರುವ ತಮ್ಮ ಅಧ್ಯಕ್ಷೀಯ ಕೇಂದ್ರದಲ್ಲಿ ನೀಡಿದ ಹೇಳಿಕೆಯಲ್ಲಿ, ಸೋತಿರುವ ಡೊನಾಲ್ಡ್ ಟ್ರಂಪ್ ಅವರಿಗೂ ಅಭಿನಂದನೆ ತಿಳಿಸಿದ್ದು, “70 ದಶಲಕ್ಷ ಮತಗಳನ್ನು ಗೆದ್ದ ಅಸಾಧಾರಣ ರಾಜಕೀಯ ಸಾಧನೆ” ಎಂದು ಬಣ್ಣಿಸಿದ್ದಾರೆ.

ಜೋ ಬೈಡೆನ್ ಅವರ ಗೆಲುವನ್ನು ಅಂಗೀಕರಿಸಿ ಅಭಿನಂದಿಸಿದ ದೇಶದ ರಿಪಬ್ಲಿಕನ್ನರಲ್ಲಿ ಜಾರ್ಜ್‌ ಬುಷ್ ಪ್ರಮುಖರಾಗಿದ್ದಾರೆ. ಇವರ ಸಹೋದರ ಜೆಬ್ ಬುಷ್ ಕೂಡಾ ಬೈಡೆನ್‌ಗೆ ಅಭಿನಂದನೆ ತಿಳಿಸಿದ್ದರು.

ಇದನ್ನೂ ಓದಿ: ಅಮೆರಿಕಾದ ಈ ಪಟ್ಟಣದ ಮೇಯರ್‌ ಫ್ರೆಂಚ್ ಬುಲ್‌ಡಾಗ್!

“ನಾನು ನಿಮಗಾಗಿ ಮತ್ತು ನಿಮ್ಮ ಯಶಸ್ಸಿಗೆ ಪ್ರಾರ್ಥಿಸುತ್ತಿದ್ದೇನೆ. ಆಳವಾದ ಗಾಯಗಳನ್ನು ಗುಣಪಡಿಸುವ ಸಮಯ ಈಗ ಬಂದಿದೆ. ದಾರಿಯನ್ನು ಮುನ್ನಡೆಸಲು ಅನೇಕರು ನಿಮ್ಮನ್ನು ಕಾಯುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದರು.

ರಿಪಬ್ಲಿಕನ್ ಸೆನೆಟರ್‌ಗಳಾದ ಉತಾಹ್‌ನ ಮಿಟ್ ರೊಮ್ನಿ ಮತ್ತು ಅಲಾಸ್ಕಾದ ಲಿಸಾ ಮುರ್ಕೋವ್‌ಸ್ಕಿ ಕೂಡ ಬೈಡೆನ್‌ಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಆದರೆ ಇತರ ಅನೇಕ ರಿಪಬ್ಲಿಕನ್ ಅಧಿಕಾರಿಗಳು ಇದನ್ನು ಅಶಾಶ್ವತ ಎಂದು ಕರೆಯುತ್ತಿದ್ದಾರೆ. ಎಲ್ಲಾ ಮತಗಳನ್ನು ಇನ್ನೂ ಎಣಿಸಲಾಗಿಲ್ಲ ಮತ್ತು ಎಲ್ಲಾ ಸವಾಲುಗಳನ್ನು ಪರಿಹರಿಸಲಾಗಿಲ್ಲ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ: Explainer: ಅಮೆರಿಕಾ ಚುನಾವಣಾ ಪದ್ದತಿ, ಅಧ್ಯಕ್ಷರ ಆಯ್ಕೆ ಮತ್ತು ಸಮಸ್ಯೆಗಳು

“ಟ್ರಂಪ್‌ಗೆ ಮರು ಎಣಿಕೆಯನ್ನು ಕೋರುವ ಮತ್ತು ಕಾನೂನು ಸವಾಲುಗಳನ್ನು ಅನುಸರಿಸುವ ಹಕ್ಕಿದೆ. ಆದರೆ, ಈ ಚುನಾವಣೆಯು ಮೂಲಭೂತವಾಗಿ ನ್ಯಾಯಯುತವಾಗಿ ನಡೆದಿದೆ. ಅದರ ಸಮಗ್ರತೆಯನ್ನು ಎತ್ತಿಹಿಡಿಯಲಾಗುತ್ತದೆ. ಅದರ ಫಲಿತಾಂಶವು ಸ್ಪಷ್ಟವಾಗಿದೆ ಎಂದು ಅಮೆರಿಕಾದ ಜನರು ವಿಶ್ವಾಸ ಹೊಂದಬಹುದು” ಎಂದು ಮಾಜಿ ಅಧ್ಯಕ್ಷ ಬುಷ್ ಅಭಿಪ್ರಾಯ ವ್ಯಕ್ತಪಡಿಸಿದರು.

ಬೈಡೆನ್ ಮಾತನ್ನು ಪುನರ್‌ ಉಚ್ಚರಿಸುವಂತೆ ಏಕತೆಯ ಸಂದೇಶವನ್ನು ಮತ್ತೊಮ್ಮೆ ಹೇಳಿದ ಬುಷ್, “ನಾವು ನಮ್ಮ ಕುಟುಂಬಗಳು ಮತ್ತು ನೆರೆಹೊರೆಯವರ ಸಲುವಾಗಿ ಹಾಗೂ ನಮ್ಮ ರಾಷ್ಟ್ರ ಮತ್ತು ಅದರ ಭವಿಷ್ಯಕ್ಕಾಗಿ ಒಟ್ಟಾಗಿರಬೇಕು” ಎಂದು ಹೇಳಿದರು.


ಇದನ್ನೂ ಓದಿ: ’ಉಸಿರು ಬಿಗಿ ಹಿಡಿದ ಅಮೆರಿಕಾ’ – ವಿಶ್ವದ ಪ್ರಮುಖ ಪತ್ರಿಕೆಗಳ ಕಣ್ಣಲ್ಲಿ ಅಮೆರಿಕಾ ಚುನಾವಣಾ ಫಲಿತಾಂಶ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರ: ಪೊಲೀಸ್‌ ಕಸ್ಟಡಿಯಲ್ಲಿದ್ದ ಇಬ್ಬರು ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ; ಠಾಣೆಗೆ ಬೆಂಕಿ ಹಚ್ಚಿದ ಗುಂಪು

0
ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಆರೋಪದಲ್ಲಿ ಬಂಧಿತ ಯುವಕ ಮತ್ತು ಆತನ ಅಪ್ರಾಪ್ತ 'ಪತ್ನಿ' ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿ ಕೋಪಗೊಂಡ ಗ್ರಾಮಸ್ಥರು ಪೊಲೀಸ್‌ ಠಾಣೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಉದ್ರಿಕ್ತರು,...