Homeಮುಖಪುಟಕ್ಷುಲ್ಲಕ ವಿಚಾರಕ್ಕೆ ಹೋರಾಟಗಾರ ಕೆ.ಎಲ್ ಅಶೋಕ್‌ರನ್ನು ನಿಂದಿಸಿದ ಕೊಪ್ಪ ಪೊಲೀಸರು: ಪೇದೆ, ಎಸ್‌ಐ ಅಮಾನತ್ತಿಗೆ ಆಗ್ರಹ

ಕ್ಷುಲ್ಲಕ ವಿಚಾರಕ್ಕೆ ಹೋರಾಟಗಾರ ಕೆ.ಎಲ್ ಅಶೋಕ್‌ರನ್ನು ನಿಂದಿಸಿದ ಕೊಪ್ಪ ಪೊಲೀಸರು: ಪೇದೆ, ಎಸ್‌ಐ ಅಮಾನತ್ತಿಗೆ ಆಗ್ರಹ

ಅಧಿಕಾರ ದುರುಪಯೋಗಿಪಡಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದರಿಂದ ಕೂಡಲೇ ಪೇದೆ, ಎಸ್‌ಐ ಅಮಾನತ್ತು ಮಾಡಬೇಕೆಂದು ಒತ್ತಾಯಿಸಿ ಸಂವಿಧಾನ ಉಳಿವಿಗಾಗಿ ಕರ್ನಾಟಕದ ಪದಾಧಿಕಾರಿಗಳು ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.

- Advertisement -
- Advertisement -

ಕ್ಷುಲ್ಲಕ ಪಾರ್ಕಿಂಗ್ ವಿಚಾರಕ್ಕೆ ಹೋರಾಟಗಾರರಾದ ಕೆ.ಎಲ್ ಅಶೋಕ್‌ರನ್ನು ನಿಂದಿಸಿದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಠಾಣೆಯ ಸಬ್‌ ಇನ್ಸ್‌ಪೆಕ್ಟರ್ ರವಿ ಮತ್ತು ಪೇದೆ ರಮೇಶ್ ರವರನ್ನು ಅಮಾನತ್ತು ಮಾಡಬೇಕೆಂದು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಕೊಪ್ಪ ಪೊಲೀಸರು ಕೆ.ಎಲ್‌ ಅಶೋಕ್‌ರವರನ್ನು ಗುರಿಮಾಡಿ ಉದ್ದೇಶಪೂರ್ವಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿದ್ದಾರೆ. ಈ ರೀತಿ ಅಧಿಕಾರ ದುರುಪಯೋಗಿಪಡಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದರಿಂದ ಕೂಡಲೇ ಪೇದೆ, ಎಸ್‌ಐ ಅಮಾನತ್ತು ಮಾಡಬೇಕೆಂದು ಒತ್ತಾಯಿಸಿ ಸಂವಿಧಾನ ಉಳಿವಿಗಾಗಿ ಕರ್ನಾಟಕದ ಪದಾಧಿಕಾರಿಗಳು ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಘಟನೆಯ ವಿವರ:

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕೊಪ್ಪಗೇಟ್‌ಗೆ ಖಾಸಗಿ ಕೆಲಸದ ನಿಮಿತ್ತ ಬಂದಿದ್ದ ಸಂವಿಧಾನ ಉಳಿವಿಗಾಗಿ ಕರ್ನಾಟಕ ಮತ್ತು ಕರ್ನಾಟಕ ಜನಶಕ್ತಿಯ ಮುಖಂಡರಾದ ಕೆ.ಎಲ್‌ ಅಶೋಕ್‌ರವರು ನೋ ಪಾರ್ಕಿಂಗ್‌ ಜಾಗದಲ್ಲಿ ಕಾರು ನಿಲ್ಲಿಸಿದ್ದಾರೆ. ಅಲ್ಲಿಗೆ ಬಂದ ರಮೇಶ್ ಎಂಬ ಪೊಲೀಸ್ ಪೇದೆ ಯೂನಿಫಾರ್ಮ್ ಸಹ ಹಾಕಿರದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಗೊತ್ತಿಲ್ಲದೆ ನಿಲ್ಲಿಸಿದ್ದೇವೆ, ಈಗಲೇ ಹೊರಡುತ್ತೇವೆ ಅಥವಾ ದಂಡ ಕಟ್ಟುತ್ತೇವೆ ಎಂದರೂ ಬಿಡದೆ ಕಾರಿನ ಫೋಟೊ ತೆಗೆದುಕೊಂಡಿದ್ದಲ್ಲದೇ ಕಾರು ಸೀಜ್‌ ಮಾಡಲು ಮುಂದಾದರು ಎಂದು ಕೆ.ಎಲ್ ಅಶೋಕ್‌ ದೂರಿದ್ದಾರೆ.

“ಪೊಲೀಸರು ಅಡ್ರೆಸ್ ಕೇಳಿದಾಗ ನಾನು ಶಿವಮೊಗ್ಗದ ನನ್ನ ಮನೆಯ ವಿಳಾಸ ನೀಡಿದೆ. ಆಗ ಪೇದೆಯು ಚಿಕ್ಕಮಗಳೂರಿನಲ್ಲಿದ್ದು, ಶಿವಮೊಗ್ಗದ ಅಡ್ರೆಸ್‌ ನೀಡುತ್ತೀಯ, ನಾಟಕ ಮಾಡುತ್ತೀಯ ಅಂದರು. ಇದರಿಂದ ನಾನು ಕೋಪಗೊಂಡು ಜೋರಾಗಿ ಮಾತನಾಡಿದಾಗ ಅಧಿಕ ಪ್ರಸಂಗ ಮಾಡಬೇಡಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನಂತರ ಠಾಣೆಗೆ ಹೋದರೆ ಅಲ್ಲಿದ್ದ ಎಸ್‌ಐ  ರವಿ ಎಂಬಾತರೂ ಸಹ ಅನುಚಿತವಾಗಿ ನಡೆದುಕೊಂಡು ಘಾಸಿಗೊಳಿಸಿದರು” ಎಂದು ಕೆ.ಎಲ್ ಅಶೋಕ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.

ವಿಡಿಯೋ ನೋಡಿ.

ಕ್ಷುಲ್ಲಕ ಕಾರಣಕ್ಕೆ ಹೋರಾಟಗಾರ, ಚಿಂತಕರಾದ ಕೆ. ಎಲ್ ಅಶೋಕ್ ರನ್ನು ಗುರಿ ಮಾಡಿದ ಕೊಪ್ಪ ಪೊಲೀಸರುವಿಡಿಯೋ ನೋಡಿ…#Naanugauri #klashok #police #koppa

Posted by Naanu Gauri on Tuesday, September 8, 2020

ಬೆಳಂಬೆಳಿಗ್ಗೆಯೇ ನಡೆದ ಈ ಘಟನೆಯಿಂದ ನನಗೆ ದಿಗ್ಭಾಂತ್ರಿಯಾಯಿತು. ಒಂದು ಸಣ್ಣ ತಪ್ಪಿಗೆ ಇಷ್ಟೆಲ್ಲಾ ರಾದ್ಧಾಂತ ಮಾಡಬೇಕಿತ್ತೆ ಎನಿಸಿತು. ಅಲ್ಲದೇ ಠಾಣೆಯಲ್ಲಿ ಇನ್ಸ್‌ಪೆಕ್ಟರ್‌ ರವಿ ನನ್ನ ಫೋನ್‌ ಕಿತ್ತುಕೊಂಡರು. ಅವರ ನಡವಳಿಕೆ ನೋಡಿದರೆ ಬೆಳಿಗ್ಗೆಯೇ ಕುಡಿದುಬಂದಿದ್ದರು ಅನ್ನಿಸುತ್ತದೆ. ನಾನು ಸ್ಥಳೀಐ ಎಂಎಲ್‌ಎ ರಾಜೇಗೌಡರಿಗೆ ಫೋನ್ ಮಾಡಲು ಮುಂದಾದಾಗಲೂ ಅವರು ಬಂದರೂ ಸಹ ಕ್ಷಮೆ ಕೇಳಿಸುತ್ತೇನೆ ಎಂದು ದರ್ಪ ಮೆರದಿದ್ದಾರೆ ಎಂದು ಅವರು ದೂರಿದ್ದಾರೆ.

ಸಣ್ಣ ಅವಘಡಕ್ಕೆ ಪೊಲೀಸರು ಅತ್ಯಂತ ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಮಧುಕರ್ ಶೆಟ್ಟಿ, ಬಿಕೆ ಸಿಂಗ್, ವಿಪುಲ್ ಕುಮಾರ್‌ರವರಂತಹ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳನ್ನು ಕಂಡ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂತಹ ಪೊಲೀಸರು ಇರುವುದು ಹೇಗೆ ಸಾಧ್ಯ ಎನಿಸಿತು. ಇವರು ಜನಸಾಮಾನ್ಯರ ಬಗ್ಗೆ ಹೇಗೆ ವರ್ತಿಸುತ್ತಾರೆ? ಇವರು ಹಣವಸೂಲಿ ದಂಧೆ ಮಾಡುತ್ತಾ, ನಿಕೃಷ್ಟವಾಗಿ ವರ್ತಿಸುತ್ತಾರೆ ಎಂಬುದರಲ್ಲಿ ಸಂದೇಹವೇ ಇಲ್ಲ ಎಂದು ಅಶೋಕ್ ತಮ್ಮ ವಿಡಿಯೋದಲ್ಲಿ ತಿಳಿಸಿದ್ದಾರೆ.

ನಾನು ಇದನ್ನು ಅವಮಾನ ಅಂದುಕೊಳ್ಳದೇ ಸುಮ್ಮನೆ ಇರಬಹುದಿತ್ತು. ಆದರೆ ಕೊಪ್ಪ, ಮಲೆನಾಡಿನಲ್ಲಿ ಹಲವು ಜನ ಸಾಮಾನ್ಯರಿಗೂ ಇದೇ ರೀತಿಯ ತೊಂದರೆ ಕೊಡುತ್ತಿದ್ದಾರೆ ಎಂಬ ದೂರುಗಳಿವೆ. ಅದನ್ನು ತಡೆಗಟ್ಟಬೇಕಿದೆ. ಹಾಗಾಗಿ ನನ್ನನ್ನು ನಿಂದಿಸಿದ, ಅವಮಾನಿಸಿದ, ಕಾನೂನು ದುರುಪಯೋಗಪಡಿಸಿಕೊಂಡ ಮತ್ತು ಹಗಲು ಹೊತ್ತಿನಲ್ಲೇ ಕುಡಿದು ಠಾಣೆಗೆ ಬರುವ ಎಸ್‌ಐ ಮತ್ತು ಪೇದೆ ಇಬ್ಬರನ್ನು ಅಮಾನತ್ತು ಮಾಡಬೇಕೆಂದು ಆಗ್ರಹಿಸಿದ್ದಾರೆ.

ಪೊಲೀಸರ ಮೇಲೆ ಕ್ರಮ ಜರುಗಿಸದಿದ್ದರೆ ಪ್ರತಿಭಟನೆ

ಸಂವಿಧಾನ ಉಳಿವಿಗಾಗಿ ಕರ್ನಾಟಕದ ಜಿಲ್ಲಾ ಸಂಚಾಲಕರಾದ ಗೌಸ್ ಮೊಯಿದ್ದೀನ್ ಮಾತನಾಡಿ “ನೋ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿದ್ದ ಕೆ.ಎಲ್ ಅಶೋಕ್‌ರವರು ಇನ್ನು ಡ್ರೈವಿಂಗ್‌ ಸೀಟ್‌ನಲ್ಲೇ ಕುಳಿತಿದ್ದರು. ಈ ಸಮಯದಲ್ಲಿ ಪೊಲೀಸರು ಬೇರೆ ಕಡೆ ನಿಲ್ಲಿಸಿ ಎಂದು ತಿಳಿಹೇಳಬೇಕು. ಆದರೆ ಅವರ ಕುಟುಂಬದವರ ಎದುರೆ ಕೆಟ್ಟದಾಗಿ ನಿಂದಿಸಿರುವುದು ನೋಡಿದರೆ, ಇದು ಉದ್ದೇಶಪೂರ್ವಕ ಕೃತ್ಯ ಎಂಬ ಅನುಮಾನ ಬರುತ್ತದೆ. ಕೆ.ಎಲ್ ಅಶೋಕ್‌ರವರು ಜಿಲ್ಲೆಯಲ್ಲಿ ಹಲವು ಹೋರಾಟಗಳನ್ನು ಮುನ್ನೆಡೆಸಿದವರಾಗಿದ್ದಾರೆ. ಅಂತವರ ಮೇಲಿನ ಈ ಅವಮಾನವನ್ನು ತೀವ್ರ ಖಂಡಿಸುತ್ತೇವೆ. ಎಸ್‌ಪಿಯವರು ಕೂಡಲೇ ಕ್ರಮ ತೆಗೆದುಕೊಳ್ಳದಿದ್ದರೆ ಪ್ರತಿಭಟನೆ ಅನಿವಾರ್ಯ” ಎಂದರು.


ಇದನ್ನೂ ಓದಿ: ಭೀಮಾ ಕೋರೆಗಾಂವ್: ಪ್ರೊ.ಕೆ.ಸತ್ಯನಾರಾಯಣ ಅವರಿಗೆ ಸಮನ್ಸ್ ಹೊರಡಿಸಿದ NIA

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆರೋಪಿ ಪ್ರಜ್ವಲ್ ರೇವಣ್ಣಗೆ ಸಿದ್ದರಾಮಯ್ಯ ಕ್ರಿಮಿನಲ್ ಹಣೆಪಟ್ಟಿ ಕಟ್ಟಿದ್ದಾರೆ: ಕುಮಾರಸ್ವಾಮಿ

0
'ಇನ್ನೂ ಆರೋಪಿಯಾಗಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಕ್ರಿಮಿನಲ್ ಎಂಬ ಹಣೆಪಟ್ಟಿ ಕಟ್ಟಿದ್ದಾರೆ' ಎಂದು ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಲೈಂಗಿಕ ಹಗರಣದ...