Homeಚಳವಳಿ’ಬಿಜೆಪಿಯದ್ದು ಕೊಳಕು ರಾಜಕೀಯ’-ಹೋರಾಟಗಾರ ಸ್ಟ್ಯಾನ್ ಸ್ವಾಮಿ ಬಂಧನಕ್ಕೆ ದೇಶದಾದ್ಯಂತ ಆಕ್ರೋಶ

’ಬಿಜೆಪಿಯದ್ದು ಕೊಳಕು ರಾಜಕೀಯ’-ಹೋರಾಟಗಾರ ಸ್ಟ್ಯಾನ್ ಸ್ವಾಮಿ ಬಂಧನಕ್ಕೆ ದೇಶದಾದ್ಯಂತ ಆಕ್ರೋಶ

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ 83 ವರ್ಷದ ಸ್ಟ್ಯಾನ್ ಸ್ವಾಮಿಯನ್ನು NIA ಬಂಧಿಸಿದೆ.

- Advertisement -
- Advertisement -

ಐದು ದಶಕದಿಂದ ಬುಡಕಟ್ಟು ಹಕ್ಕುಗಳಿಗಾಗಿ ಹೋರಾಡುತ್ತಿರುವ ಫಾದರ್‌ ಸ್ಟ್ಯಾನ್ ಸ್ವಾಮಿಯ ಬಂಧನಕ್ಕೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು ಸಮಾಜಿಕ ಹೋರಾಟಗಾರರು, ಸಾಹಿತಿಗಳು ಸೇರಿದಂತೆ ಹಲವಾರು ಗಣ್ಯರು ಬಂಧನದ ವಿರುದ್ದ ಹೇಳಿಕೆ ನೀಡಿದ್ದಾರೆ.

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ 83 ವರ್ಷದ ಸ್ಟ್ಯಾನ್ ಸ್ವಾಮಿಯನ್ನು NIA ಬಂಧಿಸಿದೆ. ಬುಡಕಟ್ಟು ಜನರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವ ಸ್ಟ್ಯಾನ್ ಸ್ವಾಮಿಯ ಮೇಲೆ ಭಯೋತ್ಪಾದನೆ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಕಠಿಣ ವಿಭಾಗಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ.

ಇದನ್ನೂ ಓದಿ: ಭೀಮಾ ಕೋರೆಗಾಂವ್: 83 ವರ್ಷದ ಹಿರಿಯ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಬಂಧಿಸಿದ NIA

ಸ್ಟ್ಯಾನ್ ಅವರನ್ನು NIA ಯಾವುದೇ ವಾರಂಟ್ ಇಲ್ಲದೆ ಬಂಧಿಸಲಾಗಿದೆ ಎಂದು ಅವರ ಆಪ್ತ ಸಿರಾಜ್ ದತ್ತಾ ಆರೋಪಿಸಿದ್ದಾಗಿ ಬಿಬಿಸಿ ವರದಿ ಮಾಡಿದೆ. ಸ್ಟಾನ್ ಸ್ವಾಮಿ ಅಕ್ಟೋಬರ್ 6 ರಂದು ವೀಡಿಯೊವೊಂದನ್ನು ಬಿಡುಗಡೆ ಮಾಡಿ, NAI ಜುಲೈನಲ್ಲಿ 15 ಗಂಟೆ ತನ್ನನ್ನು ವಿಚಾರಣೆ ನಡೆಸಿದ್ದು, ಹೆಚ್ಚಿನ ವಿಚಾರಣೆಗೆ ಮುಂಬೈಗೆ ಬರಲು ಹೇಳಿದ್ದಾರೆ ಎಂದು ಹೇಳಿದ್ದರು.

ಇವರ ಬಂಧನಕ್ಕೆ ದೇಶದಾದ್ಯಂತ ವಿರೋಧ ಎದ್ದಿದ್ದು ಬಿಜೆಪಿ ತಮ್ಮ ವಿರುದ್ದದ ಎಲ್ಲಾ ಧ್ವನಿಗಳನ್ನು ಹತ್ತಿಕ್ಕುವ ಕೊಳಕು ರಾಜಕೀಯ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತಿಹಾಸಕಾರ ರಾಮಚಂದ್ರ ಗುಹ, “ಹೋರಾಟಗಾರ್ತಿ ಸುಧಾ ಭಾರದ್ವಾಜ್ ಅವರಂತೆಯೇ, ಸ್ಟ್ಯಾನ್ ಸ್ವಾಮಿ ಕೂಡಾ ಆದಿವಾಸಿಗಳ ಹಕ್ಕುಗಳಿಗಾಗಿ ಜೀವಮಾನವಿಡೀ ಹೋರಾಡಿದ್ದಾರೆ. ಅದಕ್ಕಾಗಿಯೇ ಮೋದಿ ಆಡಳಿತವು ಅವರನ್ನು ನಿಗ್ರಹಿಸಲು ಹಾಗೂ ಅವರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತದೆ; ಯಾಕೆಂದರೆ ಈ ಆಡಳಿತವು ಆದಿವಾಸಿಗಳ ಜೀವನ ಮತ್ತು ಜೀವನೋಪಾಯಗಳಿಗಿಂತ ಗಣಿಗಾರಿಕಾ ಕಂಪನಿಗಳ ಲಾಭಗಳಿಗೆ ಆದ್ಯತೆ ನೀಡುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಭೀಮಾ ಕೋರೆಗಾಂವ್; ಪ್ರಾಧ್ಯಾಪಕರ ಮೇಲಿನ NIA ಕಿರುಕುಳಕ್ಕೆ ವಿದ್ಯಾರ್ಥಿಗಳ ಖಂಡನೆ

ಸ್ವೀಡನ್ ಉಪ್ಸಲಾ ವಿಶ್ವವಿದ್ಯಾಲಯ ಪ್ರೊಫೆಸರ್‌ ಅಶೋಕ್, “ಮೋದಿಯ ಪೊಲೀಸರು 83 ವರ್ಷ ಹಿರಿಯ ಪಾದ್ರಿ ಸ್ಟ್ಯಾನ್ ಸ್ವಾಮಿಯನ್ನು ಬಂಧಿಸಿದ್ದಾರೆ. ಅವರು ಮಾಡಿರುವ ಏಕೈಕ ತಪ್ಪೆಂದರೆ ಅವರು ತನ್ನ ಜೀವನದುದ್ದಕ್ಕೂ ಬುಡಕಟ್ಟು ಜನಾಂಗದವರಿಗಾಗಿ ಕೆಲಸ ಮಾಡಿದ್ದು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್‌ ಸೊರೆನ್ ಬಂಧನವನ್ನು ಖಂಡಿಸಿದ್ದು, ತಮ್ಮ ವಿರುದ್ದದ ಎಲ್ಲಾ ಧ್ವನಿಯನ್ನು ಹತ್ತಿಕ್ಕುತ್ತಾ ಬಿಜೆಪಿ ಕೊಳಕು ರಾಜಕೀಯ ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಸ್ವರಾಜ್ ಅಭಿಯಾನದ ಯೋಗೇಂದ್ರ ಯಾದವ್, “ತನ್ನ ಜೀವನವನ್ನೆಲ್ಲಾ ಬಡವರ ಸೇವೆಗಾಗಿ ಕಳೆದ 83 ವರ್ಷದ ಪಾದ್ರಿಯ ಮೇಲಿನ ದಾಳಿ ಆಘಾತಕಾರಿ ಮತ್ತು ಖಂಡನೀಯ” ಎಂದು ಹೇಳಿದ್ದಾರೆ.

ಸಾಹಿತಿ ಸಂಜಯ್ ರಾಯ್, “84 ವರ್ಷ ವಯಸ್ಸಿನಲ್ಲಿ ಸ್ಟ್ಯಾನ್‌ಸ್ವಾಮಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯುವುದು ಕಾನೂನಿನ ಹೊರತಾಗಿ ಕೆಲಸ ಮಾಡುವ ಸರ್ಕಾರಗಳಿಗೆ ಮತ್ತೊಂದು ಉದಾಹರಣೆಯಾಗಿದೆ!” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಭೀಮಾ ಕೋರೆಗಾಂವ್- ಕೇಂದ್ರದ ಹಸ್ತಕ್ಷೇಪ ದುರುದ್ದೇಶಪೂರಿತ

 

ಇದನ್ನೂ ಓದಿ: ಭೀಮಾ ಕೋರೆಗಾಂವ್ ಪ್ರಕರಣ: ಸಾಕ್ಷ್ಯ ಸಂಗ್ರಹಿಸಲು ಹೆಣಗುತ್ತಿರುವ NIA!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read